Punjab : ಅಮೃತಸರದ ಗೋಲ್ಡನ್ ಟೆಂಪಲ್ (Golden Temple of Amritsar) ಪ್ರವೇಶದ್ವಾರದಲ್ಲಿ ಶಿರೋಮಣಿ ಅಕಾಲಿದಳದ ನಾಯಕ ಮತ್ತು ಪಂಜಾಬ್ ಮಾಜಿ ಉಪಮುಖ್ಯಮಂತ್ರಿ ಸುಖಬೀರ್ ಸಿಂಗ್ (Sukhbir Singh) ಬಾದಲ್ ಮೇಲೆ ಗುಂಡಿನ ದಾಳಿ ನಡೆದಿದೆ. ಅದೃಷ್ಟವಶಾತ್ ದಾಳಿಯಲ್ಲಿ ಸುಖಬೀರ್ ಸಿಂಗ್ ಬಾದಲ್ ಅವರಿಗೆ ಯಾವುದೇ ರೀತಿಯ ಹಾನಿಯಾಗಿಲ್ಲ (No damage) .
ವೀಲ್ ಚೇರ್ನಲ್ಲಿ (wheel chair) ನೀಲಿ ಬಣ್ಣದ ಸೇವಾದಾರ್ ಯುನಿಫಾರ್ಮ್ನಲ್ಲಿ ಈಟಿ ಹಿಡಿದ ಸುಖಬೀರ್ ಸಿಂಗ್ ಬಾದಲ್ ತಮ್ಮ ಕರ್ತವ್ಯ ನಿರ್ವಹಿಸುವಾಗ ಗುಂಡಿನ ದಾಳಿಗೆ ಯತ್ನ ನಡೆಸಿರುವ (Attempted shooting) ವಿಡಿಯೋ ಹರಿದಾಡಿದೆ. ಇನ್ನು ಗುಂಡಿನ ದಾಳಿ ನಡೆಸಿದ ಬಬ್ಬರ್ ಖಾಲ್ಸಾ ಇಂಟರ್ ನ್ಯಾಷನಲ್ (BKl) ಸಂಘಟನೆಯ ಮಾಜಿ ಭಯೋತ್ಪಾದಕ ನಾರಾಯಣ್ ಸಿಂಗ್ ಚೋರ್ಹಾ ಎಂದು ಗುರುತಿಸಲಾಗಿದ್ದು, ಗುಂಡಿನ ಸದ್ದು ಕೇಳುತ್ತಿದ್ದಂತೆ ತಕ್ಷಣಕ್ಕೆ ಅಧಿಕಾರಿಗಳು ರಕ್ಷಣಾ ಕ್ರಮಕ್ಕೆ ಆಗಮಿಸಿ, ಗುಂಡಿನ ದಾಳಿ ನಡೆಸಿದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ನರೈನ್ ಸಿಂಗ್ ಚೌರಾ (Narain Singh Chaura) ಎಂಬ ಉ* ಈ ಹಲ್ಲೆ ಯತ್ನ ನಡೆಸಿದ್ದ ಎಂಬುದು ಬೆಳಕಿಗೆ ಬಂದಿದೆ. ಈತ ಅನೇಕ ಪ್ರಕರಣದಲ್ಲಿ ಬೇಕಾದ ಪ್ರಮುಖ ಆರೋಪಿಯಾಗಿದ್ದಾನೆ.
62 ವರ್ಷದ ಸುಖ್ಬೀರ್ ಸಿಂಗ್ ಬಾದಲ್ (Sukhbir Singh Badal) ಪಂಜಾಬ್ ಮಾಜಿ ಉಪಮುಖ್ಯಮಂತ್ರಿಯಾಗಿದ್ದು, ಸಿಖ್ ಧರ್ಮ ಗ್ರಂಥ, ‘ಗುರು ಗ್ರಂಥ ಸಾಹೀಬ್’ವನ್ನು ಅವಮಾನಿಸಿದ್ದ ವಿವಾದಿತ ಸಂತ ರಾಮ್ ರಹೀಂಗೆ ಕ್ಷಮೆ ನೀಡಿದ್ದ ಕಾರಣಕ್ಕೆ ಸಿಖ್ ಧಾರ್ಮಿಕ (Sikhs are religious) ಮಂಡಳಿ ಅಕಾಲ್ ತಖ್ತ್ನಿಂದ ಶಿಕ್ಷೆಗೊಳಗಾಗಿದ್ದರು. ಗೋಲ್ಡನ್ ಟೆಂಪಲ್ ಅವರಣದಲ್ಲಿ ಈ ಶಿಕ್ಷೆಯನ್ನು ಪೂರೈಸುತ್ತಿದ್ದ ವೇಳೆ ಈ ಅವಘಡ ನಡೆದಿದೆ. ದಾಳಿಯ ವೀಡಿಯೋ ಈಗ ಎಲ್ಲೆಡೆ ವೈರಲ್ ಆ