ಶುಕ್ರವಾರ ಬೆಳಗ್ಗೆ 11:30ರ ಸುಮಾರಿಗೆ ನಾರಾದ ಬೀದಿಯಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದಾಗ ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ(Ex-Japan PM Shinzo Abe shot in chest) ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲು ಯತ್ನಿಸಲಾಗಿದೆ.
ಮಾಜಿ ಜಪಾನ್ ಪ್ರಧಾನಿ ಪ್ರಚಾರದ ವೇಳೆ ಹಿಂದಿನಿಂದ ಹೃದಯ ಭಾಗಕ್ಕೆ ಶಾಟ್‌ಗನ್‌ನಿಂದ ಹಲ್ಲೆ ನಡೆಸಿರುವುದು ತಿಳಿದುಬಂದಿದೆ(Ex-Japan PM Shinzo Abe shot in chest).
ಜಪಾನ್‌ನ ಮಾಜಿ ಪ್ರಧಾನಿ ಭಾಷಣ ಕೇಳಲು ನೆರೆದಿದ್ದ ಸಾರ್ವಜನಿಕರಲ್ಲಿ ಅನುಮಾನಸ್ಪದ ವ್ಯಕ್ತಿಯೊಬ್ಬ ಗನ್ ಹಿಡಿದು ಗುಂಡು ಹಾರಿಸಿ ಕೋಲಾಹಲ ಸೃಷ್ಟಿಸಿದ್ದಾರೆ ಎಂದು ಶಂಕೆ ವ್ಯಕ್ತವಾಗಿದೆ.

ಕುಸಿದು ಬಿದ್ದ ನಂತರ ತೀವ್ರ ರಕ್ತಸ್ರಾವದಿಂದ ನರಳಾಡುತ್ತಿದ್ದ ಅಬೆ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. 41 ವರ್ಷದ ಶಂಕಿತ ಟೆಟ್ಸುಯಾ ಯಮಗಾಮಿಯನ್ನು ಶಿಂಜೊ ಅವರಿಗೆ ಗುಂಡು ಹಾರಿಸಿದ ಕೆಲವೇ ಕ್ಷಣಗಳಲ್ಲಿ ಬಂಧಿಸಲಾಗಿದೆ. https://vijayatimes.com/state-bjp-tweets-against-siddaramaiah/
ಜಪಾನಿನ ಮಾಜಿ ಪ್ರಧಾನಿ ಶಿಂಜೊ ಅಬೆ ಶುಕ್ರವಾರ ಪಶ್ಚಿಮ ಜಪಾನ್‌ನ ನಾರಾದಲ್ಲಿ ಪ್ರಚಾರ ಮಾಡುವಾಗ ಗುಂಡು ಹಾರಿಸಿದ್ದಾರೆ ಎಂದು ಸಾರ್ವಜನಿಕ ಪ್ರಸಾರಕ ಎನ್‌ಎಚ್‌ಕೆ ಈ ಕುರಿತು ವರದಿ ಮಾಡಿದೆ. ಸದ್ಯ ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದೆ.
WATCH: Bystanders rush to help former Japanese Prime Minister Shinzo Abe after he is shotpic.twitter.com/vgk7fn323p
— BNO News (@BNONews) July 8, 2022
67ರ ಹರೆಯದ ಅಬೆ ಬೆಳಗ್ಗೆ 11:30ರ ಸುಮಾರಿಗೆ ನಾರಾದ ಬೀದಿಯಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದಾಗ ಹಿಂದಿನಿಂದ ಅಪರಿಚಿತ ವ್ಯಕ್ತಿಯೊಬ್ಬ ಶಾಟ್‌ಗನ್‌ನಿಂದ ಏಕಾಏಕಿ ಗುಂಡು ಹಾರಿಸಿ ದಾಳಿ ನಡೆಸಿದ್ದಾನೆ ಎಂದು ಜಪಾನ್ ಟೈಮ್ಸ್ ವರದಿ ಮಾಡಿದೆ.
ಬೂದು ಬಣ್ಣದ ಟಿ-ಶರ್ಟ್ ಧರಿಸಿದ್ದ 41 ವರ್ಷದ ಶಂಕಿತ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿಗಳು ಘಟನಾ ಸ್ಥಳದಲ್ಲಿ ಹತ್ತಿಕ್ಕಿ, ಕಸ್ಟಡಿಗೆ ಎಳೆತಂದಿದ್ದಾರೆ.