Expensive Things: ವಿಶ್ವದಲ್ಲಿರುವ ಕೆಲವೊಂದು ವಸ್ತುಗಳನ್ನು ಕೊಂಡುಕೊಳ್ಳಲು ಸಾಧ್ಯವಿದ್ದರೂ ಮತ್ತೊಂದಷ್ಟು ವಸ್ತುಗಳನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ಮಾರಾಟ ಮಾಡಲು ಸಾಧ್ಯವಿಲ್ಲ. ಅಂತಹ ದುಬಾರಿ ವಸ್ತುಗಳ ಬೆಲೆ ಎಷ್ಟಿರಬಹುದು? ಇದನ್ನು #Expensive Things ಯಾರು ಕೊಂಡ್ಕೋತ್ತಾರೆ? ಇಂಥಾ ಸೋಜಿಗದ ಪ್ರಶ್ನೆಯನ್ನು ಮೂಡಿಸುವ ಪ್ರಪಂಚದ ಅತ್ಯಂತ ದುಬಾರಿ ವಸ್ತುಗಳು ಯಾವುವು ಅಂತ ತಿಳಿದುಕೊಳ್ಳುವ ಕುತೂಹಲ ಇದೆಯಾ? ಹಾಗಾದ್ರೆ ಇದರ ಪಟ್ಟಿ ಇಲ್ಲಿದೆ ನೋಡಿ.
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ:
ಇದು ವಿಶ್ವದ ಅತ್ಯಂತ ದುಬಾರಿ ವಸ್ತು ಅಂದ್ರೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (International Space Station). ಇದರ ಬೆಲೆ 50 ಶತಕೋಟಿ ಡಾಲರ್ ಅಂದರೆ 12 ಲಕ್ಷ ಕೋಟಿ ರೂಪಾಯಿ. 12 ವರ್ಷಗಳ ಕಠಿಣ ಪರಿಶ್ರಮದಿಂದ ವಿಶ್ವದ ಹಲವು ಉನ್ನತ ತಜ್ಞರು ಇದನ್ನು ಸಿದ್ಧಪಡಿಸಿದ್ದಾರೆ.
ಹಿಸ್ಟರಿ ಸುಪ್ರೀಂ ಯಾಚ್:
ವಿಶ್ವದ ಎರಡನೇ ಅತ್ಯಂತ ದುಬಾರಿ ವಸ್ತು ಇದಾಗಿದ್ದು, ಇದರ ಹೆಸರು ಹಿಸ್ಟರಿ ಸುಪ್ರೀಂ ಯಾಚ್ (History Supreme Yacht:). ಈ ವಿಹಾರ ನೌಕೆಯ ಬೆಲೆ ಸುಮಾರು 40 ಸಾವಿರ ಕೋಟಿ ರೂಪಾಯಿ. ಈ ವಿಹಾರ ನೌಕೆಯು ಮಲೇಷಿಯಾದ ಉದ್ಯಮಿ ರಾಬರ್ಟ್ ಕುಕ್ (Robert Cook) ಅವರ ಒಡೆತನದಲ್ಲಿದೆ. ಈ ವಿಹಾರ ನೌಕೆಯನ್ನು 1 ಲಕ್ಷ ಕಿಲೋಗ್ರಾಂಗಳಷ್ಟು ಘನ ಚಿನ್ನ ಮತ್ತು ಪ್ಲಾಟಿನಂನಿಂದ ತಯಾರಿಸಲಾಗಿದೆ. ಅಚ್ಚರಿಯ ಸಂಗತಿ ಅಂದರೆ ಈ ವಿಹಾರ ನೌಕೆಯ ಮಲಗುವ ಕೋಣೆಗೆ ಉಲ್ಕಾಶಿಲೆ ಬಂಡೆಗಳನ್ನು ಬಳಸಲಾಗಿದೆ ಮತ್ತು ಅದರೊಳಗೆ ನೀಡಲಾದ ವೈನ್ ಗ್ಲಾಸ್ (Wine Glass) 18 ಕ್ಯಾರೆಟ್ ವಜ್ರದಿಂದ ಮಾಡಲ್ಪಟ್ಟಿದೆ.
ಹಬಲ್ ದೂರದರ್ಶಕ:
ಮೂರನೇ ಅತ್ಯಂತ ದುಬಾರಿ ವಸ್ತು ದೂರದರ್ಶಕ. ಇದರ ಹೆಸರು ಹಬಲ್ ದೂರದರ್ಶಕ (Hubble Telescope) ವಿಶೇಷವೆಂದರೆ ಈ ದೂರದರ್ಶಕದ ಮೂಲಕ ಬಾಹ್ಯಾಕಾಶದಲ್ಲಿರುವ ಪ್ರತಿಯೊಂದು ನಕ್ಷತ್ರವನ್ನು ನೋಡಬಹುದು. 1990ರಲ್ಲಿ ತಯಾರಿಸಲಾದ ಈ ದೂರದರ್ಶಕದ ಬೆಲೆ ಜಾಗತಿಕ ಮಾರುಕಟ್ಟೆಯಲ್ಲಿ 16.5 ಸಾವಿರ ಕೋಟಿ ಎಂದು ಹೇಳಲಾಗುತ್ತದೆ.
ಏರ್ ಫೋರ್ಸ್ ಒನ್:
ವಿಶ್ವದ ನಾಲ್ಕನೇ ಅತ್ಯಂತ ದುಬಾರಿ ವಸ್ತುವೆಂದರೆ ಅಮೇರಿಕನ್ ಅಧ್ಯಕ್ಷರ ಏರ್ ಫೋರ್ಸ್ ಒನ್ (Air Force One) ಖಾಸಗಿ ಜೆಟ್. ಇದು ಮೂರು ಅಂತಸ್ತಿನದ್ದಾಗಿದೆ. ಇದರ ವಿಶೇಷ ಏನಪ್ಪಾ ಅಂದ್ರೆ ಈ ವಿಮಾನವು ಒಂದು ಸಾವಿರ ಕಿಲೋಮೀಟರ್ ವೇಗದಲ್ಲಿ ಹಾರಬಲ್ಲದು. ಇದರ ಬೆಲೆ ಸುಮಾರು 5,346 ಕೋಟಿ ಎಂದು ಹೇಳಲಾಗಿದೆ.
ಭಾರತದ ಕೊಹಿನೂರ್ ವಜ್ರ:
ಅತ್ಯಂತ ದುಬಾರಿ ವಸ್ತುಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ ಭಾರತದ ಕೊಹಿನೂರ್ ವಜ್ರ (India’s Kohinoor Diamond) ಪ್ರಸ್ತುತ ಇದು ಇಂಗ್ಲೆಂಡ್ನ ರಾಣಿ ಎಲಿಜಬೆತ್ (Eliಅವರ ಕಿರೀಟದಲ್ಲಿದೆ. ಈ 109 ಕ್ಯಾರೆಟ್ ವಜ್ರದ ಬೆಲೆ ಜಾಗತಿಕ ಮಾರುಕಟ್ಟೆಯಲ್ಲಿ ಸರಿಸುಮಾರು 4,787 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಭವ್ಯಶ್ರೀ ಆರ್ ಜೆ