- ಬೆಂಗಳೂರಲ್ಲಿ ಅ. 24, ಬೇರೆ ಜಿಲ್ಲೆಗಳಲ್ಲಿ 12 ವರೆಗೆ ಸಮೀಕ್ಷೆ ಮುಂದುವರೆಸಲು ಸೂಚನೆ
- ರಾಜ್ಯಾದ್ಯಂತ ಶಾಲಾ ಅವಧಿಯನ್ನು ಬದಲಾಯಿಸಿದ ಶಿಕ್ಷಣ ಇಲಾಖೆ
- ಬೆಳಗ್ಗೆ ಪಾಠ ಮಾಡಿ, ಮಧ್ಯಾಹ್ನ ಗಣತಿಗೆ ಹೋಗಲು ಶಿಕ್ಷಕರಿಗೆ ಸೂಚನೆ
Bengaluru: ಕರ್ನಾಟಕದಲ್ಲಿ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಜಾತಿ ಗಣತಿ (Caste Census) ಕಾರ್ಯ ಮುಗಿಯದೇ ಇರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಸಮೀಕ್ಷೆ ಅವಧಿಯನ್ನು ವಿಸ್ತರಿಸಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಶಾಲೆಗಳ ಸಮಯದಲ್ಲೂ ಬದಲಾವಣೆ ತರಲಾಗಿದೆ. (Extension of census survey deadline)
ಸರ್ಕಾರದ ಆದೇಶ ಪ್ರಕಾರ, ರಾಜ್ಯದ ಬಹುತೇಕ ಭಾಗಗಳಲ್ಲಿ ಅಕ್ಟೋಬರ್ (October) 12ರವರೆಗೆ ಸಮೀಕ್ಷೆ ಮುಂದುವರಿಯಲಿದ್ದು, ಬೆಂಗಳೂರಿನಲ್ಲಿ ಮಾತ್ರ ಈ ಅವಧಿ ಅಕ್ಟೋಬರ್ 24ರವರೆಗೆ ವಿಸ್ತರಿಸಲಾಗಿದೆ.

ಸೆಪ್ಟೆಂಬರ್ (September) 22ರಂದು ರಾಜ್ಯದಾದ್ಯಂತ ಜಾತಿ ಗಣತಿ ಸಮೀಕ್ಷೆ ಪ್ರಾರಂಭವಾಗಿತ್ತು.
ಆರಂಭದಿಂದಲೇ ಶಿಕ್ಷಕರು ಗಣತೀದಾರರಾಗಿ ಭಾಗವಹಿಸುತ್ತಿರುವುದರಿಂದ, ಶಾಲಾ ವೇಳಾಪಟ್ಟಿಯು ಗಣನೀಯವಾಗಿ ಬದಲಾಗಿತ್ತು.
ಮೂಲತಃ ಅಕ್ಟೋಬರ್ 7ರೊಳಗೆ ಗಣತಿ ಪೂರ್ಣಗೊಳ್ಳಬೇಕಿತ್ತು. ಆದರೆ ಹಲವಾರು ಜಿಲ್ಲೆಗಳಲ್ಲಿ ಸಮೀಕ್ಷೆ ಕಾರ್ಯ ಮುಗಿಯದ ಹಿನ್ನೆಲೆ ಸರ್ಕಾರವು ಹೊಸ ಗಡುವು ಘೋಷಿಸಿದೆ.
ಇನ್ನು ಈ ಕುರಿತಾಗಿ ಮಾತನಾಡಿರುವ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತ ಸೂರಲ್ಕರ್ ವಿಕಾಶ್ ಕಿಶೋರ್ ಅವರು “ರಾಜ್ಯದ ಹಲವು ಪ್ರದೇಶಗಳಲ್ಲಿ ಸಮೀಕ್ಷೆ ಇನ್ನೂ ಪೂರ್ಣಗೊಂಡಿಲ್ಲ.
ಶಿಕ್ಷಕರು ಸಮೀಕ್ಷಾ ಕಾರ್ಯದಲ್ಲಿ ತೊಡಗಿರುವುದರಿಂದ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಳಿಕ ರಜೆ ನೀಡಲಾಗಿದೆ,” ಎಂದು ತಿಳಿಸಿದ್ದಾರೆ.
ಅಕ್ಟೋಬರ್ 8ರಿಂದ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಬೆಳಗಿನ ವೇಳೆಯಲ್ಲಿ ಬದಲಾವಣೆ ತರಲಾಗಿದೆ. (Extension of census survey deadline)
ಇದೀಗ ಶಾಲೆಗಳು ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಿ ಮಧ್ಯಾಹ್ನ 1 ಗಂಟೆಗೆ ಮುಗಿಯಲಿವೆ. ಮಧ್ಯಾಹ್ನದ ಬಳಿಕ ವಿದ್ಯಾರ್ಥಿಗಳಿಗೆ ರಜೆ ನೀಡಲಾಗುತ್ತದೆ.
ಈ ಅವಧಿಯಲ್ಲಿ ಶಿಕ್ಷಕರು ತಮ್ಮ ಸಮೀಕ್ಷಾ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕಾಗಿದೆ.ಹೀಗಾಗಿ ರಾಜ್ಯದಾದ್ಯಂತ ಅಕ್ಟೋಬರ್ 12ರವರೆಗೆ ಮಧ್ಯಾಹ್ನದ ಬಳಿಕ ತರಗತಿಗಳು ಇರುವುದಿಲ್ಲ.
ಆದರೆ ಬೆಂಗಳೂರಿನಲ್ಲಿ ಈ ಬದಲಾವಣೆ ಅಕ್ಟೋಬರ್ 24ರವರೆಗೆ ಮುಂದುವರಿಯಲಿದೆ. ಗಣತಿಯನ್ನು ರಜಾದಿನಗಳಲ್ಲಿಯೂ ನಡೆಸುವಂತೆ ಸರ್ಕಾರ ಆದೇಶಿಸಿದೆ.
ಈ ಬಾರಿ ಜಾತಿ ಗಣತಿ ಕಾರ್ಯದಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸಿದ್ದಾರೆ.
ಪ್ರತಿ ಶಾಲಾ ಶಿಕ್ಷಕರಿಗೆ ನಿಗದಿತ ಪ್ರದೇಶವನ್ನು ನೀಡಲಾಗಿದ್ದು, ಅವರು ಮನೆಮನೆಗೆ ತೆರಳಿ ಸಮೀಕ್ಷಾ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.
ವಿದ್ಯಾರ್ಥಿಗಳ ಶಿಕ್ಷಣದ ಜೊತೆಗೆ ಈ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.ಸರ್ಕಾರವು ಶಿಕ್ಷಕರಿಗೆ ವಿಶೇಷ ಮಾರ್ಗಸೂಚಿ ನೀಡಿದ್ದು, ಮಧ್ಯಾಹ್ನದ ಬಳಿಕದ ಸಮಯವನ್ನು ಸಂಪೂರ್ಣವಾಗಿ ಗಣತಿ ಕಾರ್ಯಕ್ಕೆ ಮೀಸಲಿಡಬೇಕೆಂದು ಸೂಚಿಸಿದೆ.
ಶಾಲೆಗಳ ವಾರಾಂತ್ಯ ರಜೆ ದಿನಗಳಲ್ಲಿಯೂ ಗಣತಿ ಮುಂದುವರಿಯಲಿದೆ.
ಇನ್ನು ಇದರಿಂದಾಗಿ ಶಾಲಾ ಸಮಯ ಬದಲಾವಣೆಯಿಂದ ವಿದ್ಯಾರ್ಥಿಗಳು ಬೆಳಿಗ್ಗೆಯೇ ಶಾಲೆಗೆ ತೆರಳಬೇಕಾದ ಪರಿಸ್ಥಿತಿ ಉಂಟಾಗಿದೆ. ಪೋಷಕರು ಮಕ್ಕಳ ವೇಳಾಪಟ್ಟಿಯಲ್ಲಿ ಬದಲಾವಣೆ ತರಬೇಕಾಗಿದೆ.
ಮಧ್ಯಾಹ್ನದ ಬಳಿಕ ವಿದ್ಯಾರ್ಥಿಗಳಿಗೆ ವಿಶ್ರಾಂತಿ ಸಮಯ ದೊರೆಯುತ್ತಿದ್ದರೂ, ಶಿಕ್ಷಕರಿಗೆ ದಿನದ ದ್ವಿತೀಯಾರ್ಧದಲ್ಲಿ ಹೆಚ್ಚುವರಿ ಕೆಲಸದ ಒತ್ತಡ ಹೆಚ್ಚಾಗಿದೆ.