ಆಂಧ್ರಪ್ರದೇಶ, ಆ. 11: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹತ್ವದ ಯೋಜನೆಯಾದ ಐ ಇನ್ ದಿ ಸ್ಕೈ ಉಪಗ್ರಹ ನಾಳೆ ಶ್ರೀಹರಿ ಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಸಂಸ್ಥೆಯಿಂದ ಉಡಾವಣೆಗೊಳ್ಳಲಿದೆ.
ಆಂಧ್ರಪ್ರದೇಶದ ಶ್ರೀಹರಿ ಕೋಟಾದಿಂದ ನಾಳೆ ಬೆಳಗ್ಗೆ 4.30ಕ್ಕೆ ಜೆಎಸ್ಎಲ್ವಿ ಎಫ್ 10, ಇಓಎಸ್ 03 ಮಿಷನ್ ಐ ಎನ್ ದಿ ಸ್ಕೈ ಉಪಗ್ರಹವನ್ನು ಕಕ್ಷೆಗೆ ಸೇರಿಸಿಲಿದೆ. ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಉಪಗ್ರಹ ಉಡಾವಣೆಯಾಗಲಿದ್ದು ಈ ಉಪಗ್ರಹ ಉಡಾವಣೆಯನ್ನು ಇಡೀ ದೇಶವೆ ಎದುರು ನೋಡುತ್ತಿದೆ ಎಂದು ಇಸ್ರೋ ತಿಳಿಸಿದೆ.
ಈ ಉಪಗ್ರಹವು ನಿರ್ದಿಷ್ಟ ಸ್ಥಳಗಳ ಮೇಲೆ ಕಣ್ಗಾವಲಿಡಲು ಸಹಕಾರಿಯಾಗಲಿದೆ ಜೊತೆಗೆ ನೈಸರ್ಗಿಕ ವಿಕೋಪಗಳ ಮುನ್ಸೂಚನೆ ನೀಡುವ ಕುರಿತು ಕೂಡ ಕೆಲಸ ಮಾಡಲಿದೆ ಮತ್ತು ಕೃಷಿ, ಗಣಿಗಾರಿಕೆ, ಅರಣ್ಯದ ವಿಶೇಷ ಚಿತ್ರಗಳನ್ನು ಕಳಿಸಲು ಕೂಡ ಇದು ಸಹಕಾರಿಯಾಗಲಿದೆ ಎಂದು ಇಸ್ರೋ ತಿಳಿಸಿದೆ.