ಸ್ಯಾನ್ ಫ್ರಾನ್ಸಿಸ್ಕೋ, ಜೂ. 11: ವರ್ಕ್ ಫ್ರಂ ಹೋಂ ಮಾಡಬಯಸುವ ಉದ್ಯೋಗಿಗಳು ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡುವ ಅವಕಾಶವನ್ನು ಫೇಸ್ಬುಕ್ ತನ್ನ ಉದ್ಯೋಗಿಗಳಿಗೆ ಒದಗಿಸಿದೆ. ಬುಧವಾರ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಫೇಸ್ಬುಕ್, ತಮಗೆ ಬಯಸುವ ದೇಶದಿಂದ ಉದ್ಯೋಗಿಗಳು ಕೆಲಸ ನಿರ್ವಹಿಸುವ ಅವಕಾಶವನ್ನೂ ತನ್ನ ಉದ್ಯೋಗಿಗಳಿಗೆ ನೀಡಿದೆ. ಜೂನ್ 15ರ ನಂತರದಿಂದ ಈ ಆಯ್ಕೆಯನ್ನು ಉದ್ಯೋಗಿಗಳಿಗೆ ನೀಡಲಿದ್ದೇವೆ ಎಂದು ಜಗತ್ತಿನ ದೈತ್ಯ ಸಾಮಾಜಿಕ ಜಾಲತಾಣ ಕಂಪೆನಿ ಘೋಷಿಸಿದೆ.
ನಮಗೆ ಉದ್ಯೋಗಿಗಳು ಎಲ್ಲಿಂದ ಕೆಲಸ ಮಾಡುತ್ತಾರೆ ಎಂಬುದು ಮುಖ್ಯವಲ್ಲ. ಹೇಗೆ ಕೆಲಸ ಮಾಡುತ್ತೇವೆ ಎಂಬುದೊಂದೇ ಮುಖ್ಯ ಎಂದು ಶಾಶ್ವತ ವರ್ಕ್ ಫ್ರಂ ಹೋಂ ಆಯ್ಕೆಯನ್ನು ಘೋಷಿಸಿರುವ ಕಂಪನಿ ತಿಳಿಸಿದ್ದು, ತಾವು ಎಲ್ಲಿಂದ ಕೆಲಸ ನಿರ್ವಹಿಸುತ್ತೇವೆ ಎಂಬುದನ್ನು ನಿರ್ಧರಿಸುವ ಆಯ್ಕೆಯನ್ನು ಉದ್ಯೋಗಿಗಳಿಗೇ ಬಿಟ್ಟುಕೊಟ್ಟಿದೆ.