Facebook Scam: ಸಾಮಾಜಿಕ ಜಾಲತಾಣ ಮುಂದುವರೆದಷ್ಟೇ ಅದರಿಂದ ಅನುಕೂಲ ಹಾಗೂ ಅನಾನುಕೂಲಗಳು ಕಟ್ಟಿಟ್ಟಬುತ್ತಿ. ಮೋಸ ಮಾಡುವವರು ಇವುಗಳ ಮೂಲಕ ಕಳ್ಳ ಮಾರ್ಗವನ್ನು ಕಂಡುಹಿಡಿದುಕೊಂಡು ಅಮಾಯಕರಿಗೆ ಮೋಸ ಮಾಡಲು ಹೊಂಚು ಹಾಕುತ್ತಿರುವುದಷ್ಟೇ ಅಲ್ಲದೆ, ವೈದ್ಯರ ವೇಷ ಧರಿಸಿ ಹಣ ದೋಚುತ್ತಿದ್ದ ಭಯಾನಕ ಗ್ಯಾಂಗ್ನ ಮೂಲವನ್ನು ಪತ್ತೆ ಹಚ್ಚಿದೆ ವಿಜಯಟೈಮ್ಸ್ (Vijayatimes) ತಂಡ. ಅದು ಹೇಗೆ? ಅನ್ನುವ ಮಾಹಿತಿ ಇಲ್ಲಿದೆ.
ನಿಮಗೆ ಈ ಖತರ್ನಾಕ್ ಗ್ಯಾಂಗ್ ಬಗ್ಗೆ ಹೇಳಬೇಕು ಅಂದ್ರೆ, ಈ ವಂಚನಾ ಜಾಲ ಜನರಿಗೆ ವಂಚಿಸಲು ಹೊಂಚು ಹಾಕುತ್ತಿದೆ. ಅದು ಈಗ ಆನ್ಲೈನ್ (Online) ನಲ್ಲಿ ಹೊಸ ರೂಪದಲ್ಲಿ ಕಾಣಿಸಿಕೊಂಡು ಜನರಿಗೆ ಮೋಸ ಮಾಡಿ ದರೋಡೆ ಮಾಡುತ್ತಿದೆ. ಈ ಹೊಸ ಆನ್ಲೈನ್ ಗ್ಯಾಂಗ್ ಡಾಕ್ಟರ್ ಗಳ ವೇಷ ಧರಿಸಿ ಮೋಸದ ಜಾಲ ಬೀಸುತ್ತೆ. ಇವರ ಮೋಸದ ಜಾಲಕ್ಕೆ 24 ರಿಂದ 50 ವರ್ಷ ವಯಸ್ಸಿನ ವಿಚ್ಛೇದಿತರೇ ಟಾರ್ಗೆಟ್. ಆ ಗ್ಯಾಂಗ್ ಹೇಗೆ ಅವರ ಜನರನ್ನ ಟಾರ್ಗೆಟ್ ಮಾಡುತ್ತಿದೆ ಗೊತ್ತಾ?
Facebook Scammer List Kannada Live Channel
ಫೇಸ್ಬುಕ್ನಲ್ಲಿ (Facebook) ತುಂಬ ಆಕ್ಟಿವ್ ಆಗಿರುವ ಈ ಖತರ್ನಾಕ್ ಗ್ಯಾಂಗ್ ಅಕೌಂಟನ್ನು ಪತ್ತೆ ಹಚ್ಚುತ್ತೆ. ಬಳಿಕ ಫೇಸ್ಬುಕ್ ಖಾತೆಗೆ ಫ್ರೆಂಡ್ ರಿಕ್ವೆಸ್ಟ್ (Friend Request) ಕಳುಹಿಸುತ್ತೆ. ನಂತರ ಗ್ಯಾಂಗ್ ಸದಸ್ಯರು ನಿಮಗೆ ಮೆಸೇಜ್ ಮಾಡಲು ಸ್ಟಾರ್ಟ್ ಮಾಡ್ತಾರೆ. ಆ ಬಳಿಕ ನಾನು ವಿದೇಶಿ ವೈದ್ಯ, ಇಲ್ಲಿ ವರ್ಕ್ ಮಾಡ್ತಿದ್ದೀನಿ ಅಂತ ಪರಿಚಯ ಮಾಡಿಕೊಳ್ಳುತ್ತಾರೆ. ನಿಧಾನಕ್ಕೆ ತಮ್ಮ ಪರಿಚಯವನ್ನು ಸ್ನೇಹಕ್ಕೆ ತಿರುಗಿಸ್ತಾರೆ. ಬಳಿಕ ನಾನು ನಿಮಗೆ ವಿದೇಶದಿಂದ ಗಿಫ್ಟ್ (Gift) ಕಳಿಸ್ತೀನಿ ಅಂತ ಹೇಳುವುದಷ್ಟೇ ಅಲ್ಲದೆ, ವಿದೇಶಿ, ನಗದು ರೋಲ್ಸ್ ರೊಯ್ಸ್ ವಾಚ್ ಹೀಗೆ ದುಬಾರಿ ಬೆಲೆಯ ವಸ್ತುಗಳನ್ನು ಕಳುಹಿಸುತ್ತೇನೆ ಅಂತ ಹೇಳಿ ಅದರ ಫೋಟೋ ಹಾಗೂ ವಿಡಿಯೋ ಕಳುಹಿಸುತ್ತಾರೆ.
ಆದರೆ ನಿಜವಾದ ವಿಷಯವೇನೆಂದರೆ, ಗಿಫ್ಟ್ ಕಳಿಸಿದವನು ಡಾಕ್ಟರೂ ಅಲ್ಲ, ಕಾಲ್ ಮಾಡಿ ದುಡ್ಡು ಕೇಳುವವನು ಡೆಲಿವರಿ ಏಜೆಂಟನೂ ಅಲ್ಲ. ಇವೆರಲ್ಲ ಒಂದೇ ಗ್ಯಾಂಗ್ , ಈ ಗ್ಯಾಂಗ್ ಕರ್ನಾಟಕದಲ್ಲಿ ರಾಜ ರೋಷವಾಗಿ ತಲೆ ಎತ್ತಿ ಆಪರೇಟ್ ಮಾಡ್ತಿದೆ. ಇವರಿಗೆ ಧೈರ್ಯ ಏನೆಂದರೆ ಇವರ ಟಾರ್ಗೆಟ್ (Target) ಮುಖ್ಯವಾಗಿ ಮದುವೆಯಾದ ವಿಚ್ಛೇದಿತರು, ಅದ್ರಲ್ಲೂ ಮುಖ್ಯವಾಗಿ ಹೆಣ್ಣು ಮಕ್ಕಳು. ಹಾಗಾಗಿ ಮೋಸ ಹೋದವರು ಪೊಲೀಸ್ ಕಂಪ್ಲೇಂಟ್ ಕೊಡುವುದಕ್ಕೆ ಹಿಂದೇಟು ಹಾಕ್ತಾರೆ ಅನ್ನೋದು.
ಈ ಗ್ಯಾಂಗ್ ನ ಮೋಸದ ಬಗ್ಗೆ ವಿಜಯಟೈಮ್ಸ್ಗೆ ಹತ್ತು ಹಲವು ಕರೆಗಳು ಬಂದವು. ಅಲ್ಲದೆ ಈ ಗ್ಯಾಂಗ್ನಿಂದಾಗಿ ಕರ್ನಾಟಕದ ಅನೇಕರು ಮೋಸ ಹೋಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡ್ರೂ , ಪೊಲೀಸರು ಈ ಗ್ಯಾಂಗನ್ನು ಪತ್ತೆ ಹಚ್ಚಲು ಕಿಂಚಿತ್ತೂ ಆಸಕ್ತಿ ತೋರುತ್ತಿಲ್ಲ. ಅದಕ್ಕಾಗಿ ವಿಜಯಟೈಮ್ಸ್ ಈ ಗ್ಯಾಂಗ್ ನ ಬೆನ್ನು ಹತ್ತಿ ಹೊರಟಿತು. ಸತತ ಮೂರು ತಿಂಗಳ ಕಾಲ ಈ ಗ್ಯಾಂಗ್ನ ಕರೆಗಳನ್ನು ಫಾಲೋ ಮಾಡಿದ ಬಳಿಕ ನಮಗೆ ಒಂದು ಸತ್ಯ ಗೊತ್ತಾಯಿತು. ಈ ತಂಡ ವಿದೇಶದಲ್ಲೇ ಕೂತು ಕಾರ್ಯಾಚರಣೆ ಮಾಡುತ್ತಿದೆ ಅನ್ನೋದು. ಆದ್ರೆ ಇವರ ಒಂದು ತಂಡ ಮಾತ್ರ ನಮ್ಮ ದೇಶದಲ್ಲಿಯೇ ಇದೆ. ಇವರ ಹಣಕಾಸು ವಹಿವಾಟು ಎಲ್ಲ ನಮ್ಮ ದೇಶದ ಹಲವು ರಾಜ್ಯಗಳ ಬ್ಯಾಂಕ್ ಖಾತೆಗಳಿಂದ ನಡೆಯುತ್ತಿದೆ. ಅದ್ರಲ್ಲಿ ಒಂದು ಕರ್ನಾಟಕದ ಬ್ಯಾಂಕ್ (Karnataka Bank) ಖಾತೆಯೂ ಇದೆ.
ಸತ್ಯಶೋಧನೆಯ ವೇಳೆ ಒಂದು ಸತ್ಯಾಂಶ ಬೆಳಕಿಗೆ ಬಂತು. ಅದು ಏನೆಂದರೆ, ಈ ಮಾಫಿಯಾ ತಂಡವನ್ನು ರೆಡ್ ಹ್ಯಾಂಡ್ ಆಗಿ ಹಿಡಿಯುವುದು ಕಷ್ಟ ಅಂತ. ಅದಕ್ಕಾಗಿ ವಿಜಯಟೈಮ್ಸ್ ತಂಡ ಸ್ಕ್ಯಾಮ್ಮೆರ್ಸ್ ಗಳಿಗೆ ಎಂದು IP ಟ್ರ್ಯಾಪ್ ಸೆಟ್ ಮಾಡಿತು . ಈ ಟ್ರ್ಯಾಪ್ ನಲ್ಲಿ ಒಂದು ಲಿಂಕ್ ಸೆಂಡ್ ಮಾಡಿ ಅದನ್ನು ಒತ್ತಿದರೆ ಸಾಕು ಸ್ಕ್ಯಾಮ್ಮೆರ್ಸ್ ಲೊಕೇಶನ್ ತಿಳಿಯಬಹುದ್ದಿತ್ತು , ಆದರೆ ಈ ಪ್ಲಾನಿನಲ್ಲಿ ಅವರು ಸಿಕ್ಕಿಹಾಕಿಕೊಳ್ಳದೆ ಬಚಾವಾದರು.
ಆದರೆ ನಾವು ಈ ಕಾರ್ಯಚರೆಣೆಯನ್ನು ಕೈ ಬಿಡದೆ ಸ್ಕ್ಯಾಮ್ಮೆರ್ಸ್ಗಳ ಬೆನ್ನ ಹಿಂದೆಯೇ ಬಿದ್ದಿದೆವು. ಒಂದು ದಿನ ಇವರಿಗೆ ನಾವೇ ಒಂದು ಫೇಸ್ಬುಕ್ ಖಾತೆಯನ್ನು ತಗೆದು ಅದೇ ವ್ಯಕ್ತಿಗೆ ಮೆಸೇಜ್ ಮಾಡಲು ತೊಡಗಿದ್ದೆವು , ಇವನೊಂದಿಗೆ ಮಾತಾಡುತ್ತಾ ಇವನಿಗೆ ಒಂದು ಟ್ರ್ಯಾಪ್ ಸೆಟ್ ಮಾಡಿ ಕಾದಿದ್ದೆವು ಈ ಸಲ ಅದೃಷ್ಟ ನಮ್ಮ ಕಡೆ ಇತ್ತು. ಅವನ IP ವಿಳಾಸ ನಮಗೆ ಸಿಕ್ಕಿಯೇ ಬಿಡ್ತು.
ಈ ಆನ್ಲೈನ್ ಕಳ್ಳರ IP ಅಡ್ರೆಸ್ ದೊರಕಿದ ಮೇಲೆ , ನಾವು ಅವರ IP ಅಡ್ರೆಸ್ಸ್ ಮುಖಾಂತರ ಅವರ ಲೈವ್ ಲೊಕೇಶನ್ ಹುಡುಕಲು ಪ್ರಾರಂಭಿಸಿದ್ವಿ. ಆ ನಮಗೆ ಕಾದಿತ್ತು ಬಿಗ್ ಶಾಕ್ ! ಅದೇನಂದರೆ ಈ ಆನ್ಲೈನ್ ಕಳ್ಳರ ಲೊಕೇಶನ್ ನೈಜೀರಿಯಾದ lmo ಎಂಬ ಹೆಸರಿನ ರಾಜ್ಯದ ರಾಜಧಾನಿ ನಗರ ಒವ್ವೆರಿಯಾಗಿತ್ತು. ಇನ್ನು ಇದರ ಬಗ್ಗೆ ಹೆಚ್ಚಿನ ಸಂಶೋಧನೆ ಮಾಡಿದಾಗ ನಮಗೆ ಇನ್ನಷ್ಟು ಅಚ್ಚರಿಯ ಅಂಶಗಳು ಗೊತ್ತಾದವು. ಅದೇನು ಗೊತ್ತಾ? ಈ ಆನ್ಲೈನ್ ವಂಚನೆ ಈ ನಗರದಲ್ಲಿ ಹಲವು ವರ್ಷಗಳಿಂದ ನಡೆಯುತ್ತಿದೆ. ಕಳೆದ ವರ್ಷ ಏಪ್ರಿಲ್ ತಿಂಗಳಿನಲ್ಲಿ EFCC ಅಂದ್ರೆ ( Economic and Financial Crimes Commission ) 33 ಜನರನ್ನ ಆನ್ಲೈನ್ ವಂಚನೆಗಾಗಿ ಬಂಧಿಸಿದೆ.
ನಮ್ಮ ಸಾಮಾಜಿಕ ಜಾಲತಾಣದ ಖಾತೆಗಳಿಗೆ TWO FACTOR AUTHENTICATION ಅನ್ನು ಉಪಯೋಗಿಸಿ. ಅನಾಮಿಕ ವ್ಯಕ್ತಿಗಳಿಂದ ಯಾವುದೇ ವಿಷಯಗಳನ್ನು ಸ್ವೀಕರಿಸದೆ ಇದ್ದರೆ ಒಳ್ಳೇದು. ಇನ್ನು ನೀವು ಮೋಸದ ಜಾಲದೊಳಗೆ ಸಿಲುಕಿದ್ದರೆ, ಭಯಪಡ ಬೇಡಿ, ನೀವು ಈ ಮೊಬೈಲ್ ಸಂಖ್ಯೆ ಗೆ ಕರೆ ಮಾಡಿ ದೂರು ದಾಖಲಿಸಿ (080-22942475 )
ಪ್ರಶಾಂತ್