ದೇಶಾದ್ಯಂತ ಕೋವಿಡ್-19(Covid-19) ಪ್ರಕರಣಗಳು ಹೆಚ್ಚುತ್ತಿರುವಂತೆ ತೋರುತ್ತಿದ್ದು, ಏಪ್ರಿಲ್ 16 ಮತ್ತು ಏಪ್ರಿಲ್ 19 ರ ನಡುವೆ 233 ಜಿಲ್ಲೆಗಳು (ಒಟ್ಟು 727 ರಲ್ಲಿ) ಧನಾತ್ಮಕ ದರದಲ್ಲಿ ಏರಿಕೆ ಗರಿಷ್ಠ ಮಟ್ಟದಲ್ಲಿ ದಾಖಲಿಸಿವೆ ಎಂದು ಬಿಸಿನೆಸ್ ಸ್ಟ್ಯಾಂಡರ್ಡ್ ವಿಶ್ಲೇಷಣೆ ಪ್ರಕಟಿಸಿದೆ.

ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಕೋವಿಡ್ (ಎನ್ಸಿಆರ್) ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ, ದೆಹಲಿ(Delhi) ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಬುಧವಾರ ಸಭೆ ನಡೆಸಿತು ಮತ್ತು ಮುಖಗವಸು/ಮಾಸ್ಕ್(Face Mask) ನಿಯಮವನ್ನು ಮರಳಿ ತರಲು ನಿರ್ಧರಿಸಿತು. ಇದು ಶಾಲೆಗಳಿಗೆ ದೈಹಿಕ ತರಗತಿಗಳನ್ನು ಮುಂದುವರಿಸಲು ಅವಕಾಶ ಮಾಡಿಕೊಟ್ಟಿದೆ ಮತ್ತು ಸಾಮಾಜಿಕ ಕೂಟಗಳ ಮೇಲೆ ಯಾವುದೇ ರೀತಿಯಲ್ಲೂ ಇನ್ನೂ ನಿಷೇಧ ಹೇರಿಲ್ಲ. ಏಪ್ರಿಲ್ 11 ಮತ್ತು 18 ರ ನಡುವೆ, ದೆಹಲಿಯು ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಸುಮಾರು ಮೂರು ಪಟ್ಟು ಏರಿಕೆ ಕಂಡಿದ್ದು, ಇದರಿಂದಾಗಿ ದೆಹಲಿ ಸರ್ಕಾರ ಆತಂಕ ವ್ಯಕ್ತಪಡಿಸಿದೆ.
ವಾಸ್ತವವಾಗಿ, ಸೋಮವಾರ, ದೆಹಲಿಯಲ್ಲಿ ಧನಾತ್ಮಕ ದರವು 7.7 ಪ್ರತಿಶತವನ್ನು ಮೀರಿದೆ, ಇದು ಮಂಗಳವಾರ ಶೇಕಡಾ 4.4 ಕ್ಕೆ ಇಳಿದಿದೆ (632 ಹೊಸ ಕೋವಿಡ್ ಪ್ರಕರಣಗಳು). ಆದ್ರೆ ಹೊಸ ಕೋವಿಡ್ ಪ್ರಕರಣಗಳು 1,009ಕ್ಕೆ ಏರಿದ್ದರಿಂದ ಬುಧವಾರ 5.7 ಶೇಕಡವನ್ನು ತಲುಪಿದೆ. ಈ ಅಂಶವನ್ನು ಪ್ರಮುಖವಾಗಿ ಗಮನಿಸಿದ ದೆಹಲಿ ಸರ್ಕಾರ ಕೂಡಲೇ ಮಾಸ್ಕ್ ನಿಯಮವನ್ನು ಜಾರಿಗೆ ತರುವಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಿದ್ದೇವೆ ಎಂದು ಶುಕ್ರವಾರ ಅಧಿಕೃತ ಆದೇಶ ಹೊರಡಿಸಿದೆ.

ನಿಯಮ ಉಲ್ಲಂಘಿಸಿದವರಿಗೆ ಸರ್ಕಾರ 500 ರೂಪಾಯಿ ದಂಡ ವಿಧಿಸಲಿದೆ ಎಂದು ಸೂಚನೆ ನೀಡಿದೆ. ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚುತ್ತಿರುವ ಕರೋನವೈರಸ್ ಪ್ರಕರಣಗಳ ಹಿನ್ನೆಲೆಯಲ್ಲಿ ಈ ಆದೇಶ ಗಂಭೀರವಾಗಿ ಪ್ರಕಟವಾಗಿದೆ.