download app

FOLLOW US ON >

Monday, August 8, 2022
Breaking News
ಹಿಟ್ಲರ್ ಕೂಡಾ ಚುನಾವಣೆಗಳನ್ನು ಗೆಲ್ಲುತ್ತಿದ್ದ : ರಾಹುಲ್‌ ಗಾಂಧಿಆಮ್ಲಜನಕ ಕೊರತೆ ; ಮಾರ್ಗಸೂಚಿ ಪಾಲಿಸುವಲ್ಲಿ ಸಿಬ್ಬಂದಿಯ ವಿಫಲವೆಂದ ಬಿ.ಎ ಪಾಟೀಲ್ ವರದಿ : `ದ ಫೈಲ್ಸ್’ಅರ್ಪಿತಾ ಮುಖರ್ಜಿ ಪ್ರಾಣಕ್ಕೆ ಅಪಾಯವಿದೆ ; ಆಹಾರ ಮತ್ತು ನೀರನ್ನು ಪರೀಕ್ಷಿಸಬೇಕು : ನ್ಯಾಯಾಲಯಕ್ಕೆ ಇ.ಡಿ ಮನವಿಕಾಮನ್ ವೆಲ್ತ್ ಗೇಮ್ಸ್ 2022 : ಕೇವಲ 1 ಗಂಟೆ ಅಂತರದಲ್ಲಿ ಹ್ಯಾಟ್ರಿಕ್ ಚಿನ್ನ ಗೆದ್ದ ಕುಸ್ತಿ ವೀರರುಜ್ಯೂಸ್ ಬಾಟಲಿಯನ್ನೇ ಮೈಕ್ ಮಾಡಿಕೊಂಡು ಶಾಲೆಯ ದುಸ್ಥಿತಿಯನ್ನು ವರದಿ ಮಾಡಿದ ಬಾಲಕ ; ವೀಡಿಯೋ ವೈರಲ್ಸಚಿವ ಸುನೀಲ್‌ ಕುಮಾರ್‌ಗೆ ಇಂಥಾ ಗುಲಾಮಿ ಮನಸ್ಥಿತಿ ಬರಬಾರದಿತ್ತು : ಸಿದ್ದರಾಮಯ್ಯಮೋದಿ-ಮಮತಾ ಬ್ಯಾನರ್ಜಿ ಭೇಟಿ : ಪಶ್ಚಿಮ ಬಂಗಾಳಕ್ಕೆ ಹಣ ಬಿಡುಗಡೆಗೆ ಒತ್ತಾಯ!ಸಿಎಂಗೆ ಕೋವಿಡ್ ಪಾಸಿಟಿವ್ ದೃಢ ; ದೆಹಲಿ ಪ್ರವಾಸ ರದ್ದು!ಜಮೀರ್‌ ಅಹಮದ್‌ ಮುಸ್ಲಿಂ ಮಹಿಳೆಯರು ಚುನಾವಣೆಗೆ ಸ್ಪರ್ಧಿಸುವುದನ್ನು ಬಯಸುವುದಿಲ್ಲ : ಬಿಜೆಪಿಜಮ್ಮು- ಕಾಶ್ಮೀರದಲ್ಲಿ ಪತ್ತೆಯಾಗಿದೆ 1,200 ವರ್ಷಗಳ ಹಿಂದಿನ ಮೂರು ತಲೆಯ ವಿಷ್ಣುವಿನ ಪುರಾತನ ವಿಗ್ರಹ!
English English Kannada Kannada

ಕಾಳಿಂಗ ಸರ್ಪಗಳು ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲು ಕಾರಣವೇನು? ಇಲ್ಲಿದೆ ಉತ್ತರ!

ಕಾಳಿಂಗಳ ಸರ್ಪಗಳ(King Cobra) ಮಿಲನ(Mating) ಹಾಗು ಉರಗ ಸಂರಕ್ಷಣೆ
king cobra

ಕಾಳಿಂಗಳ ಸರ್ಪಗಳ(King Cobra) ಮಿಲನ(Mating) ಹಾಗು ಉರಗ ಸಂರಕ್ಷಣೆ : ಕಾಳಿಂಗ ಸರ್ಪಗಳು ಸಾಮಾನ್ಯವಾಗಿ ಫೆಬ್ರವರಿ(Febrauary) ತಿಂಗಳ ಅಂತ್ಯದಿಂದ ಮೇ ತಿಂಗಳವರೆಗೂ ಮಿಲನ ಕ್ರಿಯೆಯಲ್ಲಿ(Mating) ತೊಡಗಿಕೊಳ್ಳುತ್ತವೆ.

ಇದಕ್ಕೂ ಮುಂಚೆ ತನ್ನ ಆಹಾರವನ್ನು ಹುಡುಕಿ ದೇಹವನ್ನು ಮಿಲನಕ್ಕೆ ಅಣಿಗೊಳಿಸುವ ಪ್ರಕ್ರಿಯೆ ಮುಗಿಸಿರುತ್ತವೆ. ಮನುಷ್ಯನಿಗೆ ಋತುಚಕ್ರವಿದ್ದರೆ ಪ್ರಾಣಿಗಳಿಗೆ ಬೆದೆ ಚಕ್ರವಿರುತ್ತದೆ.

snakes

ವಯಸ್ಸಿಗೆ ಬಂದ ಹೆಣ್ಣು ಹಾವು ತಾನು ಸಂತಾನೋತ್ಪತ್ತಿಗೆ ಸಿದ್ದ ಎಂದು ತನ್ನ ಜನನಾಂಗದಿಂದ ಫೆರೋಮೋನು(Pheromone) ಎಂಬ ರಾಸಾಯನಿಕ(Chemical) ಅಂಶವನ್ನು ಹೊರಹಾಕುವುದರ ಮೂಲಕ ವ್ಯಕ್ತಪಡಿಸುತ್ತದೆ. ಈ ರಾಸಾಯನಿಕಕ್ಕೆ ಆಕರ್ಷಿತವಾದ ಗಂಡುಗಳು ಮಿಲನಕ್ಕಾಗಿ ಹೆಣ್ಣಿನ ಹುಡುಕಾಟದಲ್ಲಿ ತೊಡಗುತ್ತವೆ. ಪ್ರಕೃತಿಯಲ್ಲಿ ಒಂದು ನಿರ್ದಿಷ್ಟ ,ಕರಾರುವಕ್ಕಾದ ಕ್ರಿಯೆಗಳು ಜರುಗುತ್ತಿರುತ್ತವೆ. ಒಂದು ಹೆಣ್ಣು ಕೆರೆ ಹಾವು ಬೆದೆಗೆ ಬಂದರೆ ಗಂಡು ಕೆರೆ ಹಾವು ಮಾತ್ರ ಅದನ್ನು ಗುರುತಿಸುತ್ತದೆ. ಹೆಣ್ಣು ನಾಗರಹಾವು ಬೆದೆಗೆ ಬಂದರೆ ಗಂಡು ನಾಗರಹಾವು ಮಾತ್ರ ಅದನ್ನು ಗುರುತಿಸಬಲ್ಲದು.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಪ್ರತಿಯೊಂದು ಜೀವಿಗಳ ಫೆರೋಮೋನಿನ ರಾಸಾಯನಿಕ ಸಂಯೋಜನೆಯಲ್ಲಿ ವ್ಯತ್ಯಾಸವಿದ್ದು ಆಯಾ ಜಾತಿ /ಪ್ರಬೇಧದ ಗಂಡುಗಳಿಗೆ ಆಯಾ ಜಾತಿ/ಪ್ರಬೇಧದ ಹೆಣ್ಣುಗಳ ಫೆರೋಮೋನುಗಳನ್ನು ಗ್ರಹಿಸುವ ಗ್ರಾಹಕಗಳು(Receptors) ಇರುತ್ತವೆ, ಈ ಗ್ರಾಹಕಗಳು Species Specific ಆಗಿರುತ್ತವೆ. ಹಾಗಾಗಿ ಪ್ರಕೃತಿಯಲ್ಲಿ ಮಿಶ್ರತಳಿ ಸಾಧ್ಯತೆ ಇಲ್ಲ, ಲೈಂಗಿಕ ಕ್ರಿಯೆ ಇಲ್ಲಿ ಸಂತಾನೋತ್ಪತ್ತಿಗೆ ಮಾತ್ರ ಸೀಮಿತ.

facts about cobra
ಇನ್ನು ಕಾಳಿಂಗನ ವಿಷಯಕ್ಕೆ ಬರೋಣ, ಹೆಣ್ಣು ಹಾವುಗಳು 4-5 KM ಟೆರಿಟರಿಯಲ್ಲಿ ಬದುಕಿದರೆ, ಗಂಡುಗಳು 7-8 KM ವ್ಯಾಪ್ತಿಯ ಸೀಮೆಯನ್ನು ಹೊಂದಿವೆ. ಆದರೆ ಬೆದೆಯ ಕಾಲದಲ್ಲಿ ಗಂಡು ತನ್ನ ಟೆರಿಟರಿ ದಾಟಿ 10-11 KM ಆಚೆಗೂ ಹೋಗಿ ನಂತರ ತನ್ನ ಮೂಲ ನೆಲೆಗೆ ವಾಪಾಸಾಗಬಲ್ಲವು. ಇನ್ನು ಕಾಳಿಂಗಗಳಲ್ಲಿ ಗಂಡು ಹೆಣ್ಣನ್ನು ಗುರುತಿಸಲು ನಮಗಿರುವ ವಿಧಾನವೆಂದರೆ ಗಾತ್ರ, ಹೆಣ್ಣುಗಳು ಸಾಮಾನ್ಯವಾಗಿ 7-9 ಅಡಿ ಉದ್ದ ಇದ್ದರೆ, ಗಂಡು 12 ಅಡಿಗಳಿಗಿಂತ ಉದ್ದ ಬೆಳೆಯಬಲ್ಲವು. ಬೆದೆಗೆ ಬಂದ ಹೆಣ್ಣು ಹಾವು ತಾನು ಸಂಚರಿಸಿದ ಜಾಗದಲ್ಲಿ ಹೊರ ಹಾಕಿದ ಫೆರೋಮೋನು ಎಂಬ ಅದೃಶ್ಯ ರಸಾಯನಿಕವು ನನ್ನ ಅನುಭವದ ಪ್ರಕಾರ 11 ದಿನಗಳವರೆಗೂ ಕ್ರಿಯಾಶೀಲವಾಗಿರಬಲ್ಲದು.
ಏಕೆಂದರೆ ನಾನು ಮನೆಯ ಬಳಿ ಸೆರೆ ಹಿಡಿದ ಹೆಣ್ಣು ಕಾಳಿಂಗವನ್ನು ಹುಡುಕಿ 11 ದಿನಗಳ ನಂತರ ಬೃಹತ್ ಗಾತ್ರದ ಗಂಡು ಕಾಳಿಂಗ ಪ್ರತ್ಯಕ್ಷವಾಗಿ ಹೆಣ್ಣು ಸಂಚರಿಸಿದ ಜಾಗದಲ್ಲೆಲ್ಲಾ ಒಂದಿಂಚು ಬಿಡದೆ ಹುಡುಕಾಟ ನಡೆಸಿತ್ತು. ಬೆದೆಯ ತಿಂಗಳಲ್ಲಿ ಹೆಣ್ಣು ಅಥವಾ ಗಂಡು ಕಾಳಿಂಗಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಬಾರದು. ಹೆಣ್ಣು ಸಂಚರಿಸಿದ ದಾರಿಯನ್ನು ಹುಡುಕಿ ಬರುವ ಗಂಡುಗಳ ಮಧ್ಯೆ ಹೆಣ್ಣು ಸಿಗುವ ಮೊದಲೇ, ಕೆಲವು ಸಲ ಭೀಕರ ಕದನವಾಗಿ ಗೆದ್ದ ಗಂಡು ಹೆಣ್ಣನ್ನು ಹುಡುಕಲು ಇಲ್ಲವೇ ಮಿಲನ ಹೊಂದಲು ಅವಕಾಶವಿರುತ್ತದೆ. ಆಗ ಗಂಡನ್ನು ಹಿಡಿದರೂ ಅಪಾಯ ಹಾಗು ಹೆಣ್ಣನ್ನು ಸೆರೆ ಹಿಡಿದು ಚೀಲವನ್ನು ತುಂಬಿದರೆ ಹೆಣ್ಣಿನ ಅದೃಶ್ಯ ಕಾಮ ರೇಖೆ ( ಹೆಣ್ಣು ಫೆರೋಮೋನು ಸಿಂಪಡಿಸಿ ಸಾಗಿದ ಹಾದಿ) ತುಂಡಾಗಿ ಗಂಡು ಹೆಣ್ಣನ್ನು ಹುಡುಕಲು ತೊಂದರೆಯಾಗುತ್ತದೆ. 
king cobra

ಇಲ್ಲಿ ಸಂರಕ್ಷಣೆ ಎಂದರೆ ಹಾವನ್ನು ತನ್ನ ಪಾಡಿಗೆ ಹೋಗಲು ಬಿಡುವುದು. ಇನ್ನು ಈ ಬೆದೆಯ ತಿಂಗಳಲ್ಲಿ ಕಾಳಿಂಗಗಳು ಮನೆ ಕಟ್ಟಿಗೆ ರಾಶಿ ದನದ ಕೊಟ್ಟಿಗೆಗಳಲ್ಲಿ ಅಡಗಿ ಕುಳಿತರೆ, ಉರಗ ಸಂರಕ್ಷರನ್ನ ಕರೆಸಿ ಹಾವನ್ನು ಸೆರೆ ಹಿಡಿದು ಸ್ವಲ್ಪ ದೂರದಲ್ಲಿ ಬಿಟ್ಟರೆ ಅಲ್ಲಿರುವ ಗಂಡು ಹೆಣ್ಣುಗಳು ಮಿಲನವಾಗುವ ಸಾಧ್ಯತೆ ಅಧಿಕ. ನಮ್ಮಲ್ಲಿರುವ ಜಾನುವಾರು ಬೆದೆಗೆ ಬಂದರೆ 24 ಗಂಟೆಯೊಳಗೆ ಅದಕ್ಕೆ ಕೃತಕ ಗರ್ಭ ಧಾರಣೆ ಮಾಡಬೇಕು. ಇಲ್ಲವೆ ಹೋರಿ ಬಿಡಬೇಕು ಎಂದು ಪಶು ವೈದ್ಯರು ಹೇಳುತ್ತಾರೆ. ಅಂದರೆ 24 ಗಂಟೆಗಳ ನಂತರ ಬೆದೆ ಚಕ್ರ ನಿಂತು ಹೋಗುತ್ತದೆ ಎಂದು ಅರ್ಥ.

ಮುಂದಿನ ತಿಂಗಳುಗಳಲ್ಲಿ ಜಾನುವಾರು ಮತ್ತೆ ಬೆದೆಗೆ ಬರಬಹುದು, ಆದರೆ ಕಾಳಿಂಗಗಳಿಗೆ ಬೇಸಿಗೆಯ 2- 3 ತಿಂಗಳು ಮಾತ್ರ ಬೆದೆಯ ಕಾಲ ವರ್ಷಪೂರ್ತಿ ಇರುವುದಿಲ್ಲ. ಹೆಣ್ಣು ಕಾಳಿಂಗ ಬೆದೆಗೆ ಬಂದಾಗ ಅದನ್ನು ಸೆರೆ ಹಿಡಿದು ದೂರ ಸಾಗಿಸಿಬಿಟ್ಟರೆ , ಅದಕ್ಕೆ ಗಂಡು ಸಿಗುವುದರೊಳಗೆ ಬೆದೆ ಚಕ್ರದ ಅವಧಿ ಮುಗಿದು ಗಂಡು ಸಿಕ್ಕರೂ ತಿರಸ್ಕರಿಸಬಹುದು, ಇಲ್ಲವೆ ಮಿಲನಕ್ಕೆ ಒಪ್ಪದ ಹೆಣ್ಣು ಗಂಡಿಗೆ ಆಹಾರವಾಗಬಹುದು.
ನಮ್ಮಲ್ಲಿ ಹೆಣೆಯಾಡುವ (ಬೆದೆ, ಮಿಲನ) ಹಾವುಗಳನ್ನು ನೋಡಬಾರದು ಎಂಬ ನಂಬಿಕೆ ಇದೆ. ನಮಗೆ ಇದು ಮೂಢನಂಬಿಕೆ ಅನಿಸಿದರೂ ಹೆಣೆಯಾಡುವ ಹಾವುಗಳನ್ನು ನೋಡಿದರೆ ಅವುಗಳ ಮಿಲನಕ್ಕೆ ನಮ್ಮಿಂದ ತೊಂದರೆ(Disturb ) ಆಗಬಾರದು ಎಂಬುದೇ ಇದರ ಹಿಂದಿನ ಉದ್ದೇಶ.

facts

ಆದಿ ಕಾಲದಿಂದಲೂ ಉರಗಗಳನ್ನು ಉಳಿಸಿ ಎನ್ನುವುದೇ ನಮ್ಮ ಹಿರಿಯರ ಆಶಯ. ಹಾವುಗಳ ಮಿಲನ ಒಂದು ರೀತಿ ಕದ್ದುಮುಚ್ಚಿಯೇ ನಡೆಯುತ್ತದೆ. ಕೇರೆ ಹಾವು, ಕಾಳಿಂಗಗಳ ಹೋರಾಟವನ್ನ (Combat)ಎಲ್ಲರೂ ನೋಡಿರುತ್ತಾರೆ.(ಈ ಹೋರಾಟವನ್ನೇ ಕೆಲವರು ಮಿಲನ ಎಂದು ತಪ್ಪು ತಿಳಿಯುತ್ತಾರೆ)ತೀರಾ ಸಮೀಪಕ್ಕೆ ಹೋದರೂ ನಮ್ಮನ್ನು ನಿರ್ಲಕ್ಷಿಸಿ ಹೋರಾಟ ಮಾಡುತ್ತಿರುತ್ತವೆ. ಆದರೆ ಮಿಲನವಾಗುತ್ತಿರುವ ಹಾವುಗಳು ನಮ್ಮನ್ನು ಕಂಡ ತಕ್ಷಣ ಓಡಿ ಹೋಗುವುದನ್ನ ನೋಡಿದ್ದೇನೆ. ಮಿಲನವಾಗುವಾಗ ಗಂಡು ಕೇರೆ ಹಾವು ಹೆಣ್ಣನ್ನು ಮೃದುವಾಗಿ ಕಚ್ಚುವುದನ್ನು ನೋಡಬಹುದು. ಇದು ಹೆಣ್ಣನ್ನು ಉದ್ರೇಕಿಸುವ ಪ್ರಯತ್ನ ಇರಬೇಕು.


ಹಾವುಗಳು ಎಲ್ಲಿಕಂಡು ಬರುತ್ತವೆ ಎಂದರೆ ಅದಕ್ಕೆ ಉತ್ತರ ,ನಮ್ಮ ಸುತ್ತಮುತ್ತ,ಹಾವುಗಳಿಗೆ ನಮ್ಮ ಸುತ್ತಮುತ್ತ ಬದುಕಲು ಒಂದೊಳ್ಳೆ ಪರಿಸರವಿದೆ ಎಂದ ಮೇಲೆ ಅವುಗಳನ್ನು ಹಿಡಿದು ಸ್ಥಳಾಂತರ ಮಾಡುವ ಬದಲು ಅವುಗಳಿಗೆ ಇಷ್ಟವಾಗುವ ಇಲಿ, ಹೆಗ್ಗಣ, ಕಪ್ಪೆಗಳು ಮನೆ ಒಳಗೆ, ಅಕ್ಕಪಕ್ಕ ಬರದಂತೆ ನೋಡಿಕೊಂಡರೆ ಹಾವುಗಳು ತಾವಾಗಿಯೇ ದೂರವಾಗುತ್ತವೆ. (ಕಾಳಿಂಗಗಳು ಹಾವುಗಳನ್ನು ಮಾತ್ರ ತಿನ್ನುತ್ತವೆ ,ಉಡುಗಳೂ ಆಹಾರ ಪಟ್ಟಿಯಲ್ಲಿವೆ) ಕಾಳಿಂಗಗಳ ಮಿಲನದ ದೃಶ್ಯಗಳು ಕಂಡುಬಂದರೆ ದೂರದಿಂದ ಗಮನಿಸಿ, ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಹಾವುಗಳು 2-3 ದಿನ ಅಲ್ಲಿದ್ದು ನಂತರ ಹೊರಟು ಹೋಗುತ್ತವೆ. ಸೆರೆ ಹಿಡಿದು ಸ್ಥಳಾಂತರ ಮಾಡುವುದು ಬೇಡ ಎಂಬುದೇ ನನ್ನ ಮನವಿ!
  • Source Credits : ನಾಗರಾಜ್ ಬೆಳ್ಳೂರು(ಪರಿಸರ ಪರಿವಾರ)

Share News on

Share on facebook
Facebook
Share on google
Google+
Share on twitter
Twitter
Share on linkedin
LinkedIn
Share on whatsapp
WhatsApp
error: Content is protected !!

Submit Your Article