Visit Channel

1912 ರಲ್ಲಿ ಮುಳುಗಡೆಯಾಗಿದ್ದ ಟೈಟಾನಿಕ್ ಪತ್ತೆಯಾಗಿದ್ದು ಬರೋಬ್ಬರಿ 73 ವರ್ಷಗಳ ನಂತರ : ಮುಳುಗಿ ಇಂದಿಗೆ 110 ವರ್ಷ!

RMS

ಟೈಟಾನಿಕ್ ಹಡಗಿನ(RMS Titanic) ದುರಂತದ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. 1912 ರಲ್ಲಿ ಟೈಟಾನಿಕ್ ಹಡಗಿನ ದುರಂತ ನಡೆಯಿತು, ಮುಳುಗಿದ ಹಡಗು ಎಲ್ಲಿ ಹೋಯಿತು ಎಂದು ಪತ್ತೆ ಹಚ್ಚೋಕೆ ಹಲವಾರು ವರ್ಷಗಳೇ ಬೇಕಾಯಿತು.

ಈ ದುರಂತದ ಹಿಂದಿನ ರಹಸ್ಯವನ್ನು ಪತ್ತೆಹಚ್ಚಲು ಹಲವಾರು ಪ್ರಯತ್ನಗಳು ನಡೆದವು. ಆದರೆ ಈ ಪ್ರಯತ್ನಗಳಿಂದ ಟೈಟಾನಿಕ್ ಹಡಗಿನ ದುರಂತಕ್ಕೆ ಕಾರಣಗಳು ಹಾಗೂ ಮುಳುಗಿ ಹೋದ ಟೈಟಾನಿಕ್ ಹಡಗು ಎಲ್ಲಿದೆ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಲೇ ಇಲ್ಲ.

Facts about RMS Titanic

ಆದರೂ ಮುಂದುವರಿದ ಸತತ ಪ್ರಯತ್ನದ ಸಲುವಾಗಿ 73 ವರ್ಷಗಳ ನಂತರ 1985 ರಲ್ಲಿ ಅಮೇರಿಕಾದ(America) ನೌಕಾಪಡೆ ಅಧಿಕಾರಿ ರಾಬರ್ಟ್ ಬಲಾರ್ಡ್ ಅವರು ಅಟ್ಲಾಂಟಿಕ್ ಮಹಾಸಾಗರದ(Athlantic Ocean) ಗರ್ಭದಲ್ಲಿ ಹುದುಗಿದ್ದ ವಿಶ್ವದ ದೈತ್ಯ ಹಡಗನ್ನು ಪತ್ತೆ ಹಚ್ಚಿದರು. ಟೈಟಾನಿಕ್( RMS Titanic)ಹಡಗಿನ ಅವಶೇಷಗಳು ನ್ಯೂ ಫೌಂಡ್ ಲ್ಯಾಂಡ್ ಬಳಿ ಸಿಕ್ಕಿದವು, ಎರಡು ಭಾಗವಾಗಿ ತುಂಡಾಗಿದ್ದ ಈ ಹಡಗು 12,500 ಅಡಿ ಆಳದಲ್ಲಿ ಎಂದರೆ ಸಮುದ್ರದಿಂದ ಸುಮಾರು 4 ಕಿಲೋಮೀಟರ್ ಕೆಳಗೆ ಪತ್ತೆಯಾಗಿತ್ತು.

ಮುಳುಗುವುದೇ ಇಲ್ಲ ಎಂದು ನಂಬಲಾಗಿದ್ದ ಇಷ್ಟೊಂದು ಬಲಶಾಲಿಯಾದ ಟೈಟಾನಿಕ್ ಹಡಗು(RMS Titanic) ತನ್ನ ಮೊದಲೇ ಪ್ರಯಾಣದಲ್ಲೇ ದುರಂತಕ್ಕೀಡಾಗಿ ಎರಡು ಭಾಗವಾಗಿದ್ದು ಹೇಗೆ ಎಂಬುದರ ಬಗ್ಗೆ ಹಲವಾರು ವಾದಗಳು ಹೀಗಿವೆ. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಪ್ರಕಾರ ದೈತ್ಯ ಮಂಜುಗಡ್ಡೆಗೆ ಡಿಕ್ಕಿ ಹೊಡೆದು ಹಡಗು ಎರಡು ತುಂಡಾಗಿದೆ ಎನ್ನಲಾಗುತ್ತದೆ. ಆದರೆ “ಟೈಟಾನಿಕ್ ದಿ ನ್ಯೂ ಎವಿಡೆನ್ಸ್” ಡಾಕ್ಯುಮೆಂಟರಿ ಪ್ರಕಾರ ಹಡಗಿನಲ್ಲಿ ಸಂಭವಿಸಿದ ಬೆಂಕಿ ಅನಾಹುತದಿಂದ ಟೈಟಾನಿಕ್ ಎರಡು ಭಾಗವಾಯಿತು ಎನ್ನಲಾಗುತ್ತದೆ. ಇನ್ನು, 1985 ರಲ್ಲಿ ಟೈಟಾನಿಕ್ ಹಡಗು ಸಿಕ್ಕಾಗ ಅದರಲ್ಲಿದ್ದ ಅಮೂಲ್ಯ ವಸ್ತುಗಳನ್ನು ಹೊರ ತೆಗೆಯಲಾಗುತ್ತದೆ.

RMS
https://vijayatimes.com/ysr-tweet-against-draupadi-murmu/

ಆದರೆ ಇಲ್ಲಿಯವರೆಗೆ ಟೈಟಾನಿಕ್ ಹಡಗನ್ನು(RMS Titanic)ಸಮುದ್ರದ ಆಳದಿಂದ ಹೊರ ತೆಗೆಯಲು ಸಾಧ್ಯವಾಗಿಲ್ಲ. ಟೈಟಾನಿಕ್ ನ್ನು ಹೊರತೆಗೆಯಲು ಬಹಳ ಪ್ರಯತ್ನಗಳು ನಡೆದಿವೆ, ಟೈಟಾನಿಕ್ ಹಡಗು ತುಂಬಾ ವರ್ಷಗಳ ಕಾಲ ಸಮುದ್ರದಾಳದಲ್ಲಿ ಇದ್ದಿದ್ದರಿಂದ ಅದರ ಮೇಲೆ ಪಾಚಿ ಬೆಳೆದಿದೆ, ತುಕ್ಕು ಹಿಡಿದಿದೆ. ಒಂದು ವೇಳೆ ಕೇಬಲ್ ನಿಂದ ಅಥವಾ ಬೇರೆ ತಂತ್ರಜ್ಞಾನಗಳನ್ನು ಬಳಸಿ ಮೇಲೆ ಎತ್ತಬಹುದು ಎಂದರೆ ಅದು ಕೂಡ ಅಷ್ಟು ಸುಲಭವಾದ ಕೆಲಸವಲ್ಲ. ಸಬ್ ಮರಿನ್ ಗಳಿಂದ ಹಾಗೂ ಅಯಸ್ಕಾಂತಗಳಿಂದ ಮೇಲೆತ್ತಬಹುದು ಎನ್ನುವ ಸಲಹೆಗಳು ಕೇಳಿಬಂದವು. 

ಆದರೆ ಕಾರ್ಯಾಚರಣೆಗೆ ಹಲವಾರು ಅಡ್ಡಿಗಳು ಇದ್ದವು. ಮೊದಲನೆಯದಾಗಿ, ಟೈಟಾನಿಕ್(RMS Titanic) ಹಡಗಿನ ತೂಕ ಬರೋಬ್ಬರಿ 1,43,000 ಟನ್, ಜೊತೆಗೆ ಈ ಹಡಗು ನೀರಿನ ಆಳದಲ್ಲಿ ಇರುವುದರಿಂದ ಅದರ ಮೇಲೆ ನೀರಿನ ಒತ್ತಡ ಬಹಳ ಹೆಚ್ಚಾಗಿರುತ್ತದೆ. ಹಾಗಾಗಿ ಇದು ಅಸಾಧ್ಯ ಕೆಲಸವಾಗಿತ್ತು. ಜೊತೆಗೆ ಇನ್ನಷ್ಟು ವಿಭಿನ್ನ ಪ್ರಯತ್ನಗಳು ನಡೆದರೂ ಹಡಗನ್ನು ಹೊರತೆಗೆಯುವುದು ಅಸಾಧ್ಯವಾಗಿತ್ತು. 2001 ರಲ್ಲಿ ಯುನೆಸ್ಕೋ ಟೈಟಾನಿಕ್ ಹಡಗನ್ನು ನೀರಿನ ಆಳದಲ್ಲಿರುವ ಪಾರಂಪರಿಕ ತಾಣ ಎಂದು ಘೋಷಿಸಿದೆ.

RMS
ಒಂದು ವೇಳೆ ಟೈಟಾನಿಕ್(RMS Titanic) ಹಡಗನ್ನು ಹೊರತೆಗೆದು ಸಂಶೋಧನೆ ಮಾಡಿದಲ್ಲಿ ದುರಂತದ ಹಿಂದಿನ ಹಲವಾರು ಪ್ರಶ್ನೆಗಳಿಗೆ ಉತ್ತರ ದೊರಕುವ ಸಾಧ್ಯತೆಯಿದೆ. ಆದರೆ ಹೆಚ್ಚಿನ ಸಂಶೋಧಕರ ಪ್ರಕಾರ, ಅಷ್ಟೆಲ್ಲಾ ಖರ್ಚು ಮಾಡಿ ಟೈಟಾನಿಕ್ ಹಡಗನ್ನು ಮೇಲೆತ್ತುವ ಬದಲು ಅದೇ ಹಣವನ್ನು ಬಳಸಿ ಟೈಟಾನಿಕ್ ಗಿಂತಲೂ ಹೆಚ್ಚಿನ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಹಡಗನ್ನು ಮಾಡಬಹುದು ಎನ್ನುವುದು ಸಂಶೋಧಕರ ಅಭಿಪ್ರಾಯ.
  • ಪವಿತ್ರ ಸಚಿನ್

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.