ದೆಹಲಿ : ದೇಶದಲ್ಲಿ ಸದ್ಯ ಭಾರೀ ಚರ್ಚೆಗೆ ಕಾರಣವಾಗಿರುವ ಶ್ರದ್ದಾ ಹತ್ಯೆಯ ಹಿಂದಿನ ಕೆಲ ರೋಚಕ ಸಂಗತಿಗಳನ್ನು ಪೊಲೀಸರು ಭೇದಿಸಿದ್ದಾರೆ.
ಆರೋಪಿ ಅಫ್ತಾಬ್ ಶ್ರದ್ದಾಳನ್ನು ಹತ್ಯೆ ಮಾಡಲು ರೂಪಿಸಿದ್ದ ಪ್ಲ್ಯಾನ್ಕುರಿತ ಅನೇಕ ಸಂಗತಿಗಳನ್ನು ಪೊಲೀಸರು ಕಂಡು ಹಿಡಿದಿದ್ದಾರೆ.
ಅಫ್ತಾಬ್ ಅಮೀನ್ ಪೂನಾವಾಲಾ ತನ್ನೊಂದಿಗೆ ಲಿವ್-ಇನ್ ಸಂಬಂಧ ಹೊಂದಿದ್ದ ಶ್ರದ್ಧಾ ವಾಕರ್ ಅವರನ್ನು ಹತ್ಯೆ ಮಾಡಿದ್ದಾನೆ. ನಂತರ ಹತ್ಯೆಯನ್ನು ಮರೆಮಾಚಲು ಆಕೆಯ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈತನೇ ಸಕ್ರಿಯನಾಗಿದ್ದಾನೆ..
ಶ್ರದ್ಧಾ ಅವರ ಸಾಮಾಜಿಕ ಮಾಧ್ಯಮವನ್ನು ಬಳಸುವುದು ಅಪರಾಧವನ್ನು ಮುಚ್ಚಿಹಾಕಲು ಆಫ್ತಾಬ್ ಬಳಸಿದ ಮಾರ್ಗಗಳಲ್ಲಿ ಒಂದಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪೋಲೀಸರ ಪ್ರಕಾರ, 28 ವರ್ಷದ ಶ್ರದ್ಧಾಳನ್ನು ಕತ್ತು ಹಿಸುಕಿ ಕೊಂದು, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ, 300 ಲೀಟರ್ ರೆಫ್ರಿಜರೇಟ್ನಲ್ಲಿ ಇರಿಸಿ ನಂತರ ದೆಹಲಿಯ ಮೆಹ್ರೌಲಿ ಕಾಡಿನಲ್ಲಿ ಒಂದೊಂದಾಗಿ ಬಿಸಾಕಿದ್ದಾನೆ. ನಂತರ ಅಪಾರ್ಟ್ನಲ್ಲಿ ದುರ್ನಾತವನ್ನು ಹೊಗಲಾಡಿಸಲು ಅಫ್ತಾಬ್ ಅಗರಬತ್ತಿಗಳನ್ನು ಬೆಳಗಿಸುತ್ತಿದ್ದನು.
https://vijayatimes.com/modi-demands-peace-in-ukraine/
ಈತ ಅಮೆರಿಕದ ಕ್ರೈಂ ಶೋ ‘ಡೆಕ್ಸ್ಟರ್’ ನಿಂದ ಸ್ಫೂರ್ತಿ ಪಡೆದಿದ್ದನು ಎಂದು ಪೊಲೀಸರು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.
ಇನ್ನು ಶ್ರದ್ಧಾಳನ್ನು ಹತ್ಯೆ ಮಾಡಿದ ನಂತರ ರಕ್ತ ಶುದ್ಧೀಕರಣದ ವಿಧಾನಗಳನ್ನು ಗೂಗಲ್ನಲ್ಲಿ ಓದಿ ತಿಳಿದುಕೊಂಡಿದ್ದನು. ಮೇ 18 ರಂದು ಶ್ರದ್ಧಾ ವಾಕರ್ಳನ್ನು ಕೊಂದ ನಂತರ,
ಅಫ್ತಾಬ್ ಅದೇ ಫ್ಲಾಟ್ನಲ್ಲಿ ವಾಸಿಸುತ್ತಿದ್ದನು ಮತ್ತು ಆನ್ಲೈನ್ ಅಪ್ಲಿಕೇಶನ್ಗಳ ಮೂಲಕ ಆಹಾರವನ್ನು ಆರ್ಡರ್ ಮಾಡಿದ್ದಾನೆ. ನಂತರ ಜೂನ್ 9 ರವರೆಗೆ ಆಕೆಯ ಸ್ನೇಹಿತರೊಂದಿಗೆ ಈತನೇ ಚಾಟ್ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಫ್ತಾಬ್ ಮತ್ತು ಶ್ರದ್ಧಾ ವಾಕರ್ ಆನ್ಲೈನ್ ಡೇಟಿಂಗ್ ಅಪ್ಲಿಕೇಶನ್ನಲ್ಲಿ ಪರಸ್ಪರ ಭೇಟಿಯಾಗಿದ್ದರು. ನಂತರ ಮುಂಬೈನಲ್ಲಿ ಒಂದೇ ಕಾಲ್ ಸೆಂಟರ್ನಲ್ಲಿ ಕೆಲಸ ಮಾಡುತ್ತಾ, ಪ್ರೀತಿಸುತ್ತಿದ್ದರು.
ಆದರೆ ಅವರು ವಿಭಿನ್ನ ನಂಬಿಕೆಗಳಿಗೆ ಸೇರಿದವರಾಗಿದ್ದರಿಂದ ಅವರ ಕುಟುಂಬಗಳು ಇವರಿಬ್ಬರ ಸಂಬಂಧವನ್ನು ವಿರೋಧಿಸಿದ್ದರು. ಹೀಗಾಗಿ ಇಬ್ಬರು ಕುಟುಂಬವನ್ನು ತೊರೆದು ದೆಹಲಿಗೆ ಬಂದು ವಾಸಿಸುತ್ತಿದ್ದರು.
ನಂತರ ಮದುವೆ ವಿಚಾರವಾಗಿ ಇಬ್ಬರ ನಡುವೆ ನಡೆದ ವಾದ ವಿವಾದದ ಹಿನ್ನೆಲೆಯಲ್ಲಿ ಶ್ರದ್ಧಾಳನ್ನು ಅಫ್ತಾಬ್ ಕೊಲೆ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯ ವೇಳೆ ತಿಳಿದುಬಂದಿದೆ.
-ಮಹೇಶ್.ಪಿ.ಎಚ್