vijaya times advertisements
Visit Channel

ಬುದ್ದಿವಂತರು ಜಗಳವನ್ನು ಹೇಗೆ ತಪ್ಪಿಸುತ್ತಾರೆ ಗೊತ್ತೇ? ; ಈ ಅಚ್ಚರಿ ಮಾಹಿತಿ ಓದಿ

Couple

ಯಾವುದೇ ಸಂಬಂಧವಾಗಲಿ ಜಗಳ, ವಾಗ್ವಾದ ಇದ್ದೇ ಇರುತ್ತದೆ, ಜಗಳವೇ ಆಗದಂತೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಒಮ್ಮೆಯೂ ಜಗಳವಾಗದೆ ಇರುವಂತಹ ಸಂಬಂಧ ಎಲ್ಲಿಯೂ ಕಾಣಸಿಗುವುದಿಲ್ಲ. ಜಗಳವಿದ್ದಲ್ಲಿ ಪ್ರೀತಿ ಜಾಸ್ತಿ ಎನ್ನುವ ಮಾತನ್ನು ಅನೇಕ ಬಾರಿ ಕೇಳಿಯೇ ಇರುತ್ತೇವೆ.

Love

ಆದರೆ ಕೆಲವೊಮ್ಮೆ ಈ ವಾಗ್ವಾದವು ತುಂಬಾ ಕೆಟ್ಟ ಸ್ಥಿತಿಗೆ ತಲುಪುವ ಸಾಧ್ಯತೆಯಿರುತ್ತದೆ, ಇಂತಹ ಸಂದರ್ಭದಲ್ಲಿ ಭಾಷೆಯ ಬಳಕೆ ಕೂಡ ಕೆಟ್ಟದಾಗಿರಬಹುದು. ಇದರಿಂದ ಮುಂದೆ ಸಂಬಂಧವು ಕೆಡಬಹುದು ಅಥವಾ ಮುರಿದುಬೀಳುವ ಸಾಧ್ಯತೆಯೂ ಇರುತ್ತದೆ. ಕೆಲವೊಮ್ಮೆಯಂತೂ ಜಗಳ ತಾರಕಕ್ಕೇರಿ ನೆರೆ ಮನೆಯವರಿಗೆಲ್ಲಾ ವಾಗ್ವಾದವು ಕೇಳಿ, ನಿಮಗೆ ಮುಜುಗರವಾಗುವ ಸಂದರ್ಭಗಳೂ ಎದುರಾಗುತ್ತವೆ.

ಹಾಗಾಗಿ ಇಂತಹ ವಾಗ್ವಾದವನ್ನು ತಡೆಯುವುದು ಬಹಳ ಒಳ್ಳೆಯದು, ಕೆಟ್ಟ ವಾಗ್ವಾದವನ್ನು ತಡೆಯುವುದು ಹೇಗೆ ಮತ್ತು ಅದನ್ನು ಸರಿಯಾಗಿ ರೀತಿಯಲ್ಲಿ ಹೇಗೆ ನಿಭಾಯಿಸಬಹುದು ಎನ್ನುವುದಕ್ಕಾಗಿ ಕೆಲವು ಉಪಾಯಗಳು ಇಲ್ಲಿವೆ ನೋಡಿ. ಪ್ರತಿಯೊಂದು ಮನೆಯಲ್ಲೂ ಜಗಳವು ಇದ್ದೇ ಇರುತ್ತದೆ ಎನ್ನುವುದನ್ನು ಮೊದಲು ನೀವು ಅರ್ಥ ಮಾಡಿಕೊಳ್ಳಿ. ನಿಮ್ಮ ವಾಗ್ವಾದವು ಸಂಬಂಧಕ್ಕೆ ಭೀತಿಯೊಡ್ಡುವಂತೆ ಮಾಡಬೇಡಿ. ನೀವು ಹೀಗೆ ಮಾಡಿದರೆ ಅದರಿಂದ ಮುಂದೆ ಸಂಬಂಧದಲ್ಲಿ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗಬಹುದು.

Facts


ಇನ್ನು, ವಾಗ್ವಾದವೆಂದರೆ ಕಿರುಚಾಡುವುದಲ್ಲ. ಹೆಚ್ಚಾಗಿ ಬಹಳ ಜನರು ಜಗಳ ಮಾಡುವ ವೇಳೆ ತುಂಬಾ ಕಿರುಚಾಡುತ್ತಾರೆ. ಸಂಬಂಧದಲ್ಲಿ ಕೂಡ ಇದು ಹೆಚ್ಚಿನ ಸಮಯದಲ್ಲಿ ನಡೆಯುತ್ತದೆ, ಆದರೆ ಯಾವುದೇ ಸಮಸ್ಯೆಯಾದರೂ ಅದನ್ನು ಬಹಳ ಸಹನೆಯಿಂದ ಬಗೆಹರಿಸಲು ಪ್ರಯತ್ನಿಸಬೇಕು. ತಜ್ಞರು ಕೂಡ ಸಹನೆಯಿಂದ ಎಲ್ಲವನ್ನು ಬಗೆಹರಿಸಬೇಕು ಎನ್ನುವ ಸಲಹೆ ನೀಡುತ್ತಾರೆ.
ಇನ್ನು, ಕೋಪ ಎನ್ನುವುದು ಕೂಡ ಒಂದು ಭಾವನೆ, ಆದರೆ ಇದನ್ನು ಕೆಲವರು ವಿಧ್ವಂಸಕಾರಿಯಾಗಿ ಬಳಕೆ ಮಾಡುವರು.

ಮೊದಲಿಗೆ ನೀವು ಕೋಪವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ, ಆಗ ಮಾತ್ರ ಕೋಪದಿಂದ ಸಂಬಂಧವು ಮುರಿಯುವುದನ್ನು ತಪ್ಪಿಸಬಹುದು. ಸಂಗಾತಿಗಳಿಬ್ಬರು ತಮ್ಮ ಭಾವನೆಗಳನ್ನು ಸ್ಪಷ್ಟವಾಗಿ ತಿಳಿದುಕೊಂಡರೆ, ಆಗ ಹೆಚ್ಚಿನ ಜಗಳ ಮತ್ತು ವಾಗ್ವಾದವು ನಡೆಯುವುದೇ ಇಲ್ಲ. ನಿಮ್ಮ ಭಾವನೆಗಳೇನು, ಇದು ಕೆಟ್ಟದೇ ಅಥವಾ ಒಳ್ಳೆಯದೇ, ಸಂತೋಷ ಅಥವಾ ಬೇಸರದ್ದು, ಏನೇ ಆದರೂ ಅದನ್ನು ನಿಮ್ಮ ಸಂಗಾತಿಯ ಜೊತೆಗೆ ಸರಿಯಾಗಿ ಹಂಚಿಕೊಳ್ಳಿ. ನೀವು ಭಾವನೆಗಳನ್ನು ಹಂಚಿಕೊಳ್ಳುವ ಮೊದಲೇ ಕೋಪಿತರಾದರೆ, ಆಗ ಸಮಸ್ಯೆಯು ಕಾಡುವುದು ಖಚಿತ.

Quarrel


ಅದೇ ರೀತಿ, ಜಗಳ ತಪ್ಪಿಸಲು ಮೌನ ತಾಳುವುದು ಬುದ್ದಿವಂತರ ಲಕ್ಷಣ. ಇವರು ಎಲ್ಲವನ್ನೂ ಗಮನಿಸಿದರೂ ಏನನ್ನೂ ಹೇಳುವುದಿಲ್ಲ. ಏಕೆಂದರೆ, ಎಷ್ಟೋ ಬಾರಿ ಒಬ್ಬರು ಸುಮ್ಮನಿದ್ರೆ ಮಾತಿಗೆ ಮಾತು ಬೆಳೆಯೋದಿಲ್ಲ. ಇದರಿಂದ ಜಗಳವೂ ನಿಲ್ಲುತ್ತದೆ. ಎರಡು ಕೈಗಳು ಸೇರಿದರೆ ಮಾತ್ರ ಚಪ್ಪಾಳೆ ಎನ್ನುವಂತೆ, ಇಬ್ಬರೂ ಮಾತಿಗೆ ಮಾತು ಸೇರಿಸಿದರೆ ಮಾತ್ರ ಜಗಳ ಹೆಚ್ಚುತ್ತದೆ. ಆದ ಕಾರಣ, ನಿಮ್ಮ ಸಂಗಾತಿಯ ಕೋಪ ತಣಿಸಲು ಅವರ ಮಾತಿಗೆ ಪ್ರತ್ಯುತ್ತರ ನೀಡಲು ಹೋಗಬೇಡಿ. ಇದರಿಂದ ಅವರು ಕೂಡ ಸುಮ್ಮನಾಗಿ ಜಗಳ ಕೊನೆಗೊಳ್ಳುತ್ತದೆ.

  • ಪವಿತ್ರ

Latest News

PFI
ಪ್ರಮುಖ ಸುದ್ದಿ

PFI ಸೇರಿ ಅದರ 8 ಸಹವರ್ತಿ ಸಂಸ್ಥೆಗಳ ಮೇಲೆ ನಿಷೇಧ ಹೇರಿದ ಕೇಂದ್ರ ಗೃಹ ಸಚಿವಾಲಯ!

“ಕೇಂದ್ರ ಸರ್ಕಾರ, ಐದು ವರ್ಷಗಳ ಅವಧಿಗೆ ಪಿಎಫ್‌ಐ ಅನ್ನು ನಿಷೇಧಿಸಿರುವುದು ದೃಢ ಮತ್ತು ಸಮಯೋಚಿತ ಕ್ರಮ. ಆದರೆ ಈ ಹಿಂದೆ ಕಾಂಗ್ರೆಸ್, ಎಸ್ಪಿ.

Cricket
ಕ್ರೀಡೆ

ಇಂದು ಭಾರತ- ದ.ಆಫ್ರಿಕಾ ನಡುವೆ ಮೊದಲ T-20 ಪಂದ್ಯ ; ವೇಳೆ, ನೇರಪ್ರಸಾರ, ತಂಡಗಳ ಮಾಹಿತಿ ಇಲ್ಲಿದೆ ನೋಡಿ

ಈ ಸರಣಿಯು ವಿಶ್ವಕಪ್​ನ ಪೂರ್ವ ಸಿದ್ಧತಾ ಪಂದ್ಯವೆಂದು ಪರಿಗಣಿಸಲಾಗಿದೆ. ಈ ಸರಣಿಗೂ ರೋಹಿತ್ ಶರ್ಮಾ(Rohit Sharma) ನೇತೃತ್ವದಲ್ಲಿ ಭಾರತ ತಂಡ ಕಣಕ್ಕಿಳಿಯಲಿದೆ.

ಪ್ರಮುಖ ಸುದ್ದಿ

220 ಕ್ಕೂ ಅಧಿಕ ಪಿಎಫ್ಐ ಕಾರ್ಯಕರ್ತರ  ಮೇಲೆ  ಪಿಎಆರ್‌ ಕಾಯ್ದೆ ಅಸ್ತ್ರ ; ಏನಿದು ಪಿಎಆರ್?

(PAR Act on PFI workers) ಸ್ಥಿರ ಹಾಗೂ ಚರಾಸ್ತಿ ಮೌಲ್ಯವೆಷ್ಟು ಎಂಬುದನ್ನು ನಮೂದಿಸಿ, ತಾಲೂಕು ದಂಡಾಧಿಕಾರಿಗಳು, ಬಂಧಿತ ವ್ಯಕ್ತಿಯಿಂದ ಮುಚ್ಚಳಿಕೆ ಪಡೆಯುತ್ತಾರೆ.