Visit Channel

ಮರಕುಟುಕ ಹಕ್ಕಿಯಿಂದ ಮರಗಳು ಹಾಳಾಗುತ್ತವೆ ಎಂಬ ತಪ್ಪು ಕಲ್ಪನೆಗೆ ಇಲ್ಲಿದೆ ಸ್ಪಷ್ಟ ಉತ್ತರ!

bird

ಮರಕುಟುಕ ಹಕ್ಕಿ (woodpecker) ಮರವನ್ನು ಕುಟುಕುವುದನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತಾರೆ. ಬಹಳಷ್ಟು ಜನ ಅಯ್ಯೋ ಅದು ಮರಕ್ಕೆ ಹಾನಿ ಮಾಡುತ್ತಿದೆಯಲ್ಲ! ಅಯ್ಯೋ ಪಾಪ ಗೂಡು ನಿರ್ಮಿಸಿಕೊಳ್ಳಲು ಎಷ್ಟೊಂದು ಕಷ್ಟಪಟ್ಟು ಮರವನ್ನು ಕೊರೆಯುತ್ತಿದೆ ಎಂದು ಮರುಗುತ್ತಾರೆ. ಆದರೆ ವಾಸ್ತವವಾಗಿ ಮರಕುಟುಕ ಹಕ್ಕಿ‌ ಮರವನ್ನು ತನ್ನ ಕೊಕ್ಕಿನಿಂದ ಕುಕ್ಕುವುದು, ಆ ಮರದ ಕಾಂಡದಲ್ಲಿನ ಹುಳ-ಹುಪ್ಪಟ್ಟೆಗಳನ್ನು ಹೊರತೆಗೆದು ತಿನ್ನುವುದಕ್ಕಾಗಿ ಎಂಬುದು ತುಂಬ ಜನಕ್ಕೆ ತಿಳಿದಿಲ್ಲ. ಈ ಮರಕುಟುಕ ಹಕ್ಕಿ ತನ್ನ ಅಂತರ್ ಪ್ರಚೋದನೆ ಮೂಲಕ ಮರದ ಕಾಂಡದೊಳಗಿನ ಹುಳಗಳನ್ನು ಪತ್ತೆಹಚ್ಚಿ, ಆ ಗಟ್ಟಿಯಾದ ಮರದ ಕಾಂಡವನ್ನು ಅದಕ್ಕಿಂತಲೂ ಗಟ್ಟಿಯಾದ ತನ್ನ ಕೊಕ್ಕಿನಿಂದ ಕುಟುಕುವ ಮುಖೇನ ಮರ ಕೊರೆದು ಅದರಲ್ಲಿನ ಹುಳುಗಳನ್ನು ತಿನ್ನುತ್ತದೆ ಜೊತೆಗೆ ಮುಂದೆ ಮರ ರೋಗಪೀಡಿತವಾಗಿ‌, ನಾಶವಾಗುವುದು ತಪ್ಪುತ್ತದೆ.

wood

ಅಲ್ಲದೆ ಈ ಮರಕುಟುಕಗಳು ಕೊರೆಯುವ ಪೊಟರೆಯೊಳಗೆ ಗಿಳಿಗಳು ಸೇರಿ ಅನೇಕ ಬೇರೆ ಹಕ್ಕಿಗಳೂ ಕೂಡ ವಾಸಿಸಲು ಸಾಧ್ಯವಾಗುತ್ತದೆ. ಮರವನ್ನು ಕುಟುಕುವುದರಿಂದ ಹಕ್ಕಿಗೆ ಒಳ್ಳೆಯ ಮೇವಾಯಿತು, ಮರಕ್ಕೆ ಕೀಟಗಳಿಂದ ಮುಕ್ತಿ ದೊರೆಯಿತು, ಗಿಳಿಗಳಿಗೆ ಒಳ್ಳೆಯ ಗೂಡಾಯಿತು. ಇದೇ ನೋಡಿ ಒಂದನ್ನೊಂದು ಅವಲಂಬಿಸಿ ನಡೆಸುವ ಸಹಜೀವನ. ಕಾಡಾಗಲಿ, ನಾಡಾಗಲಿ ಸಹಜೀವನ ಅನಿವಾರ್ಯ ಎಂಬುದು ನಾವೆಲ್ಲಾ ಅರಿಯಬೇಕಾದ ಸಂಗತಿ. ಕಾಡಿನ ಸಹಜೀವನಕ್ಕೆ ಜೀವವೈವಿಧ್ಯತೆ ಅನಿವಾರ್ಯ. ಯಾಕೆಂದರೆ ನಮ್ಮಲ್ಲಿ ಮರಗೆಲಸದವ ಸಿಗಲಿಲ್ಲವೆಂದರೆ ಆ ಕೆಲಸವನ್ನು ಮತ್ತೊಬ್ಬ ಕಲಿತು ಮಾಡಬಹುದು. ಗಾರೆ ಕೆಲಸದವ ಸಿಗಲಿಲ್ಲವೆಂದರೆ ಅದನ್ನು ಮತ್ತೊಬ್ಬ ಕಲಿಯಬಹುದು. ಒಬ್ಬ ಅಧಿಕಾರಿ ಸಿಗಲಿಲ್ಲವೆಂದರೆ ಆ ಜಾಗಕ್ಕೆ ಮತ್ತೊಬ್ಬ ಅಧಿಕಾರಿಯನ್ನು ಕರೆಸಬಹುದು. ಆದರೆ ಪ್ರಕೃತಿಯಲ್ಲಿ ಕೆಲವೊಂದಿಷ್ಟು ಕೆಲಸವನ್ನು, ಕೆಲವೊಂದಿಷ್ಟು ಜೀವಿಗಳೇ ಮಾಡಬೇಕು.

bird

ಮರಕುಟುಕ ಹಕ್ಕಿಯ ಕುಟುಕುವ ಕೆಲಸವನ್ನು ಮರಕುಟುಕ ಹಕ್ಕಿಯೇ ಮಾಡಬೇಕು. ಕಾಡುಪ್ರಾಣಿಗಳಲ್ಲಿನ ಉಣ್ಣೆಗಳನ್ನು ಉಣ್ಣಿಗೊರವ (ಮೈನಾ) ಹಕ್ಕಿಯೇ ಹೆಕ್ಕಿ ತಿಂದು ಆ ಪ್ರಾಣಿಗಳ ಆರೋಗ್ಯ ಕಾಪಾಡಬೇಕು. ಕಾಡಿನ ಕಾಟಿ, ಕಡವೆಯಂತ ಪ್ರಾಣಿಗಳನ್ನು ಹುಲಿಯಂತ ಪ್ರಾಣಿ ಮಾತ್ರ ಬೇಟೆಯಾಡಿ ಸಸ್ಯಹಾರಿ ಪ್ರಾಣಿಗಳನ್ನು ಸಮತೋಲನದಲ್ಲಿಟ್ಟು ಕಾಡಿನ ಆರೋಗ್ಯ ಕಾಪಾಡಬೇಕು. ಜೇನುಗಳು ಪರಾಗಸ್ಪರ್ಶ ಮಾಡಬೇಕು, ವಿವಿಧ ಪಕ್ಷಿಗಳು, ಕೋತಿ, ಅಳಿಲಿನಂತ ಮರವಾಸಿ ಪ್ರಾಣಿಗಳು ಬೀಜಪ್ರಸಾರ ಮಾಡಬೇಕು, ಗೆದ್ದಲು ಹುಳುವಿನಂತ ಸೂಕ್ಷ್ಮ ಜೀವಿಗಳು ಜೈವಿಕ ವಿಘಟನೆ ಮಾಡಬೇಕು. ಇದಕ್ಕಾಗಿಯೇ ಹೇಳುವುದು ಪರಿಸರ ವ್ಯವಸ್ಥೆಯಲ್ಲಿ ಜೀವವೈವಿಧ್ಯತೆ ಅತೀ ಮುಖ್ಯ. ಪ್ರಕೃತಿಯಲ್ಲಿ ಗೆದ್ದಲಿನಿಂದ ಹುಲಿಯವರೆಗೆ ಪ್ರತಿ ಪ್ರಾಣಿಯ ಇರುವಿಕೆ ಮುಖ್ಯ ಎಂಬುದನ್ನು ತಿಳಿದುಕೊಳ್ಳಬೇಕು

ಮಾಹಿತಿ ಸಂಗ್ರಹ : ಸಂಜಯ್ ಹೊಯ್ಸಳ

Latest News

Lorry driver
ಪ್ರಮುಖ ಸುದ್ದಿ

ಕುಡಿದು ಲಾರಿ ಚಾಲಕನ ಮೇಲೆ ಹಲ್ಲೆ ಮಾಡಿದ ಪೊಲೀಸರು ; ಕೇಸ್ ದಾಖಲಿಸಿಕೊಳ್ಳದೆ ಕಾನೂನು ಉಲ್ಲಂಘನೆ!

ಕುಡಿದ ಆಮಲಿನಲ್ಲಿದ್ದ ಮೂವರು ಪೊಲೀಸರು, “ನೀನು ಯಾವ ಸೀಮೆ ಡ್ರೈವರ್ ___*****” ಎಂದು ಅವಾಚ್ಯ ಪದಗಳಿಂದ ನಿಂದಿಸಿದ್ದಲ್ಲದೇ, ಚಾಲಕನ ಕೈ, ಕಾಲು ಸೇರಿದಂತೆ ಗುಪ್ತಾಂಗದ ಜಾಗಕ್ಕೆ ಒದ್ದು, ಮಾರಾಣಾಂತಿಕ ಹಲ್ಲೆ ನಡೆಸಿದ್ದಾರೆ.

Pakistan
ದೇಶ-ವಿದೇಶ

ಪಾಕಿಸ್ತಾನ : ಗರ್ಭಿಣಿ ಮಹಿಳೆ ಮೇಲೆ ಭದ್ರತಾ ಸಿಬ್ಬಂದಿ ಹಲ್ಲೆ ; ಭಾರೀ ಆಕ್ರೋಶ

ನೋಮನ್ ಗ್ರ್ಯಾಂಡ್ ಸಿಟಿ ಅಪಾರ್ಟ್ಮೆಂಟ್ ಕಟ್ಟಡದ ಹೊರಗೆ ಭದ್ರತಾ ಸಿಬ್ಬಂದಿ ಗರ್ಭಿಣಿ ಮಹಿಳೆಯನ್ನು ಥಳಿಸಿದ್ದಾರೆ ಎಂದು ಪಾಕ್ ಮೂಲದ ಜಿಯೋ ನ್ಯೂಸ್ ವರದಿ ಮಾಡಿದೆ.

Culprits
ಪ್ರಮುಖ ಸುದ್ದಿ

ಹಾಲಿನ ವ್ಯಾಪಾರದ ಸೋಗಿನಲ್ಲಿ ಖೋಟಾ ನೋಟು ದಂಧೆ ; ಬಿಜೆಪಿ ಮುಖಂಡ ಸೇರಿ ಮೂವರ ಬಂಧನ

ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದು, ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.