ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಫ್ಯಾಫ್ ಡು ಪ್ಲೆಸಿಸ್(Faf Du Plessis) ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡಕ್ಕೆ ಹೋಗಲು ಬಿಡಬಾರದಿತ್ತು ಎಂದು ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ(Ravishastri) ಹೇಳಿದ್ದಾರೆ. ಇದಕ್ಕೆ ಕಾರಣವೇನು ಎಂದರೆ, ಅವರು ಐಪಿಎಲ್ 2022(IPL 2022) ರ ಮೊದಲು ಸಿಎಸ್‌ಕೆ ನಾಯಕತ್ವದಿಂದ ಕೆಳಗಿಳಿದ ಎಂಎಸ್ ಧೋನಿ(MS Dhoni) ಅವರಿಗೆ ಸಾಥ್ ನೀಡಬಹುದಿತ್ತು.
ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 2022 ರಲ್ಲಿ ತಮ್ಮ ಆರಂಭಿಕ ನಾಲ್ಕು ಪಂದ್ಯಗಳನ್ನು ಕಳೆದುಕೊಂಡಿದ್ದಾರೆ. ಇದು ಫ್ರಾಂಚೈಸಿ ಇತಿಹಾಸದಲ್ಲಿ ಮೊದಲ ಬಾರಿಗೆ ಸಂಭವಿಸಿರುವುದು ಅಶ್ಚರ್ಯ ಎಂದೇ ಹೇಳಬಹುದು. ಐಪಿಎಲ್ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟೂರ್ನಿಯಲ್ಲಿ ನಾಲ್ಕು ಬಾರಿ ಟ್ರೋಫಿ ಎತ್ತಿ ಹಿಡಿದಿದೆ, ಆದ್ರೆ ಈ ಸೀಸನ್ ನಲ್ಕಿ ಗೆಲುವು ಕಾಣಲು ಹೆಣಗಾಡುತ್ತಿದೆ. ಎಂ.ಎಸ್ ಧೋನಿ IPL 2022 ರ ಮೊದಲು ನಾಯಕತ್ವದಿಂದ ಕೆಳಗಿಳಿಯು ಮೂಲಕ ನಾಯಕನ ಸ್ಥಾನಕ್ಕೆ ರವೀಂದ್ರ ಜಡೇಜಾ ಅವರನ್ನು ಕೂರಿಸಿದಿರು. ಜಡೇಜಾ ಅವರು ಈ ಸೀಸನ್ ನಲ್ಲಿ ಇನ್ನೂ ತಮ್ಮ ಮೊದಲ ಗೆಲುವನ್ನು ದಾಖಲಿಸಬೇಕಿದೆ.
ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ರೂ 7 ಕೋಟಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫಾಫ್ ಡು ಪ್ಲೆಸಿಸ್ ಅವರನ್ನು ಖರೀದಿಸಿತು. ತಮ್ಮ ಸಂಪೂರ್ಣ ಐಪಿಎಲ್ ವೃತ್ತಿಜೀವನವನ್ನು ಸಿಎಸ್‌ಕೆಯೊಂದಿಗೆ ಕಳೆದಿರುವ ಫ್ಯಾಪ್ ಅವರು ಚೆನ್ನೈನ 2021ರ ಐಪಿಎಲ್ ವಿಜಯೋತ್ಸವದಲ್ಲಿ ಪ್ರಮುಖ ಪಾತ್ರ ವಹಿಸಿದವರು. 59 ಎಸೆತಗಳಲ್ಲಿ 86 ರನ್ ಗಳಿಸಿದರು, ಕೆಕೆಆರ್ ವಿರುದ್ಧದ ಫೈನಲ್‌ನಲ್ಲಿ ಪ್ಲೇಯರ್ ಆಫ್ ದಿ ಮ್ಯಾಚ್ ಗೆದ್ದಿದ್ದರು. ಸಿಎಸ್‌ಕೆ ಫಾಫ್ ಡು ಪ್ಲೆಸಿಸ್‌ನನ್ನು ತಂಡದಿಂದ ಕೈ ಬಿಡಬಾರದಿತ್ತು ಮತ್ತು ರವೀಂದ್ರ ಜಡೇಜಾ ಅವರು ಕ್ರಿಕೆಟ್‌ನತ್ತ ಮತ್ತಷ್ಟು ಗಮನ ಹರಿಸಬೇಕು ಎಂದು ಹೇಳಿದರು.
ಜಡೇಜಾ ಒಬ್ಬ ಪ್ರತಿಭಾವಂತ ಆಟಗಾರ, ಕ್ರಿಕೆಟ್‌ನತ್ತ ಗಮನ ಹರಿಸಬೇಕು ಎಂದು ಹೇಳುತ್ತೇನೆ. ಚೆನ್ನೈ ಫಾಫ್ ಡು ಪ್ಲೆಸಿಸ್ ಅವರನ್ನು ಮರೆತಿದ್ದು ತಪ್ಪಾಗಿದೆ. ಫಾಫ್ ಅವರು ತಂಡಕ್ಕೆ ಉತ್ತಮ ಕೊಡುಗೆ ನೀಡಿದ್ದರು ಮತ್ತು ಮ್ಯಾಚ್ ವಿನ್ನರ್ ಆಗಿದ್ದರು. ಎಂಎಸ್ ಧೋನಿ ಬದಲಿಗೆ ಸಿಎಸ್‌ಕೆ ನಾಯಕನಾಗಿ ಡು ಪ್ಲೆಸಿಸ್ ಅವರನ್ನು ನೇಮಿಸಬೇಕಿತ್ತು ಮತ್ತು ರವೀಂದ್ರ ಜಡೇಜಾ ತಂಡದ ಆಟಗಾರನಾಗಿ, ಯಾವುದೇ ಒತ್ತಡವಿಲ್ಲದೆ ಆಡಬೇಕಿತ್ತು ಎಂದು ರವಿಶಾಸ್ತ್ರಿ ಹೇಳಿದರು.