ಅನ್ನಭಾಗ್ಯ ಯೋಜನೆ ಆರಂಭದಲ್ಲಿಯೇ ಹಳ್ಳ ಹಿಡಿಯುವ ಎಲ್ಲಾ ಸೂಚನೆಗಳು ಕಾಣುತ್ತಿವೆ. ಏಕೆಂದರೆ ಒಂದು ತಿಂಗಳು ನಡೆದ ಡಿಬಿಟಿ (failure of Annabhagya Yojana – JDS) ಶಾಸ್ತ್ರ 2ನೇ
ತಿಂಗಳಿಗೆ ಕೈಕೊಟ್ಟಿದೆ.

ಮೂರನೇ ತಿಂಗಳ ಕಥೆ ಏನೋ ಗೊತ್ತಿಲ್ಲ. 29 ಲಕ್ಷ ಕುಟುಂಬಗಳು ಮೊಬೈಲ್ (Mobile) ಸಂದೇಶಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿವೆ ಎಂದು ಜೆಡಿಎಸ್ ರಾಜ್ಯ ಸರ್ಕಾರದ (State government)
ವಿರುದ್ದ ತೀವ್ರ ವಾಗ್ದಾಳಿ ನಡೆಸಿದೆ.ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್, ಸಮರ್ಪಕ ಪೂರ್ವಸಿದ್ಧತೆಯ ಕೊರತೆ, ತಾಂತ್ರಿಕ (Technical) ಸಮಸ್ಯೆ ಸೇರಿ ಹಲವು ನೆಪಗಳನ್ನು ಸರಕಾರವೇ ಸೃಷ್ಟಿ
ಮಾಡಿಕೊಂಡು ಅನ್ನಭಾಗ್ಯದ ಹಣ ನೀಡಲು ಮೀನಾಮೇಷ ಎಣಿಸುತ್ತಿದೆ. ನುಡಿದಂತೆ ನಡೆಯದ ಸರಕಾರ, ಹೆಜ್ಜೆಹೆಜ್ಜೆಗೂ ಎಡವಿ ಬೀಳುತ್ತಿದೆ. ಅನ್ನದ ವಿಷಯದಲ್ಲಿ ಸರಕಾರ ಕಾರಣ ಹೇಳುವಂತಿಲ್ಲ.
ಲಿವರ್ ಅನ್ನು ಶುದ್ದೀಕರಿಸಲು ಸರಳ ಆಯುರ್ವೇದಿಕ್ ಮನೆಮದ್ದುಗಳಿವೆ ತಿಳಿದು ಕೊಳ್ಳಿ
ತಾಂತ್ರಿಕ ದೋಷಗಳಿದ್ದರೆ ಸಮರೋಪಾದಿಯಲ್ಲಿ ಸರಿ ಮಾಡಿಕೊಳ್ಳಬೇಕು. ತಡಮಾಡದೆ ಜನರಿಗೆ ಹಣ ನೀಡಬೇಕು. ದಿನಕ್ಕೊಂದು ನೆಪ ಹೇಳಿದರೆ ಅದು ಸರಕಾರಕ್ಕೂ ಲಾಯಕ್ಕಲ್ಲ. ಅನ್ನಭಾಗ್ಯವು

ಹತಭಾಗ್ಯ ಆಗದಿರಲಿ ಎಂದು ಟೀಕಿಸಿದೆ.ಇನ್ನೊಂದು ಟ್ವೀಟ್ನಲ್ಲಿ, ಒಂದು ಕಡೆ ಶೂನ್ಯ ಬಿಲ್ ಎಂದು ಹೇಳುವ ರಾಜ್ಯ ಕಾಂಗ್ರೆಸ್ ಸರಕಾರ (Congress Government), ಜನತೆಯ ಮೇಲೆ ಅಘೋಷಿತ
ಲೋಡ್ ಶೆಡ್ಡಿಂಗ್ (Load Shedding) ಹೇರಿದೆ. ಈಗಾಗಲೇ ಬರಗಾಲದಿಂದ ತತ್ತರಿಸಿರುವ ರೈತರು ವಿದ್ಯುತ್ ಬರದಿಂದಲೂ ಹೈರಾಣವಾಗಿದ್ದಾರೆ. ಇದು ಸರಿಯಲ್ಲ. ಬೇಸಿಗೆ ಬರುವುದಕ್ಕೆ ಮುನ್ನವೇ
ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚುತ್ತಿದೆ. ಬೆಳೆಗಳಿಗೆ ನೀರು ಹಾಯಿಸಲಾಗದೆ ರೈತರು (failure of Annabhagya Yojana – JDS) ಕಂಗಾಲಾಗಿದ್ದಾರೆ.
ಕೃಷಿ ಪಂಪುಸೆಟ್ಟುಗಳಿಗೆ ನಿತ್ಯ7 ಗಂಟೆ ವಿದ್ಯುತ್ ಪೂರೈಕೆ ಮಾಡಬೇಕಿದ್ದ ಸರಕಾರ, ಕೊನೆಪಕ್ಷ 3ಗಂಟೆ ಕಾಲವಾದರೂ ಪೂರೈಕೆ ಮಾಡುತ್ತಿಲ್ಲ. ಕೃಷಿಗೆ ಕಡೇ ಪ್ರಾಧಾನ್ಯತೆ ನೀಡುತ್ತಿರುವ ದ್ಯೋತಕವಾ ಇದು.
ವಿದ್ಯುತ್ತಿನ ಖೋತಾ ಆಗುತ್ತಿದ್ದರೂ ಬಿಲ್ ಮಾತ್ರ ಸುಡುತ್ತಿದೆ. ಹೀಗಾಗಿ ರೈತರು ಕೃಷಿ (Agriculture) ಮೇಲೆ ನಿರಾಸಕ್ತರಾಗುವ ಅಪಾಯ ಎದುರಾಗಿದೆ. ಈಗಾಗಲೇ ಆಹಾರ ಪದಾರ್ಥಗಳ ಬೆಲೆ
ವಿಪರೀತ ಎನ್ನುವಷ್ಟಿದೆ. ವಿದ್ಯುತ್ ಕೊರತೆ ಅದಕ್ಕೆ ಮತ್ತಷ್ಟು ಇಂಬು ನೀಡುತ್ತಿದೆ ಎಂದು ವಾಗ್ದಾಳಿ ನಡೆಸಿದೆ.