Lucknow : ಡೆಂಗ್ಯೂ ರೋಗಿಯ (Dengue Patient) ಕುಟುಂಬಗಳಿಗೆ ರಕ್ತದ ಪ್ಲೇಟ್‌ಲೆಟ್‌ಗಳ (Fake Blood Platelet) ಬದಲು ಮೊಸಂಬಿ ಹಣ್ಣಿನ ರಸವನ್ನು ತುಂಬಿ ಮಾರಾಟ ಮಾಡಿದ್ದ ಆರೋಪದ ಮೇಲೆ 10 ಮಂದಿಯನ್ನು ಯುಪಿಯ ಪ್ರಯಾಗ್‌ರಾಜ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಕಳೆದ 2 ದಿನಗಳ ಹಿಂದೆಯಷ್ಟೇ ಡೆಂಗ್ಯೂ ರೋಗಿಯೊಬ್ಬರಿಗೆ ರಕ್ತದ ಪ್ಲೇಟ್ಲೇಟ್ ಬದಲು ಮೋಸಂಬಿ ಹಣ್ಣಿನ ರಸವನ್ನು ಪ್ಲೇಟ್‌ಲೆಟಾಗಿ ಡ್ರಿಪ್ (Fake Blood Platelet) ಹಾಕಿದ್ದಾರೆ.
ಈ ಕಾರಣದಿಂದ ರೋಗಿ ಸಾವನ್ನಪ್ಪಿದ್ದಾರೆ. ಈ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಶೋಧ ನಡೆಸಿ ಇಂದು 10 ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ಯಾಕೆಟ್‌ಗಳಲ್ಲಿ ನಿಜವಾಗಿಯೂ ರಸವಿದೆಯೇ ಎಂಬುದು ಇನ್ನೂ ಸಾಬೀತಾಗಿಲ್ಲ ಎಂದು ಮತ್ತೊಮ್ಮೆ ಪ್ರಶ್ನಿಸಲಾಗುತ್ತಿದೆ ಎಂದು ವರದಿ ಹೇಳುತ್ತಿದೆ.
ರಸವಿರುವ ಪ್ಯಾಕೆಟ್ ಅನ್ನು ರೋಗಿಯ ಸಂಬಂಧಿಕರು ವೀಡಿಯೋ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಮಾಡಿ ಆರೋಪಿಸಿದ್ದರು.
ಇದನ್ನೂ ಓದಿ : https://vijayatimes.com/jaggesh-emotional-note/
ಈ ಒಂದು ವೀಡಿಯೋ ಭಾರಿ ವೈರಲ್ ಆಗಿ, ಪೊಲೀಸರ ಹಂತ ತಲುಪಿತು. ಈ ಒಂದು ವೀಡಿಯೋ ಬಗ್ಗೆ ಪೊಲೀಸರು ಹೆಚ್ಚು ತನಿಖೆಯನ್ನು ನಡೆಸುತ್ತಿದ್ದಾರೆ.
ಸದ್ಯ ಬಂಧಿತರಾಗಿರುವ 10 ಆರೋಪಿಗಳು, ಬ್ಲಡ್ ಬ್ಯಾಂಕ್‌ಗಳಿಂದ ಪ್ಲಾಸ್ಮಾವನ್ನು ತೆಗೆದುಕೊಂಡು ಅವುಗಳನ್ನು ಪ್ಲೇಟ್‌ಲೆಟ್‌ಗಳಾಗಿ ಮರು ಪ್ಯಾಕೇಜಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ.
ಎರಡೂ ರಕ್ತದ ಅಂಶಗಳಾಗಿವೆ, ಆದರೆ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಡೆಂಗ್ಯೂ ಖಾಯಿಲೆ ಪ್ರಕರಣಗಳಲ್ಲಿ ಪ್ಲೇಟ್‌ಲೆಟ್‌ಗಳಿಗೆ ಹೆಚ್ಚಿನ ಬೇಡಿಕೆಯಿರುವುದು ಸರ್ವೆ ಸಮಾನ್ಯ!
ಪ್ರಯಾಗ್‌ರಾಜ್‌ನಲ್ಲಿ ಜ್ಯೂಸ್ ಅನ್ನು ಪ್ಲೇಟ್‌ಲೆಟ್‌ಗಳಾಗಿ ರೂಪದಲ್ಲಿ ನೀಡಿರುವ ಬಗ್ಗೆ ಪೊಲೀಸರು ಆರೋಪಿಗಳನ್ನು ಪ್ರಶ್ನಿಸಿದ್ದಾರೆ.

ಆದ್ರೆ, ಆರೋಪಿಗಳು ರಕ್ತದ ಪ್ಲಾಸ್ಮಾವನ್ನು ಪ್ಲೇಟ್‌ಲೆಟ್‌ಗಳಾಗಿ ಪರಿವರ್ತಿಸಿ ಕೊಡುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಶೈಲೇಶ್ ಪಾಂಡೆ ಹೇಳಿಕೆ ಕೊಟ್ಟಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ ಸಾಕಷ್ಟು ಪ್ರಮಾಣದಲ್ಲಿ ಹರಡುತ್ತಿರುವ ಹಿನ್ನಲೆ, ಪ್ಲೇಟ್‌ಲೆಟ್‌ಗಳ ಬೇಡಿಕೆಯನ್ನು ಕೂಡ ಮತ್ತಷ್ಟು ಹೆಚ್ಚಿಸಿದೆ.
ಆರೋಪಿಗಳು ಇದನ್ನು ಲಾಭವನ್ನಾಗಿ ಪರಿಗಣಿಸಿದ್ದು, ಹೆಚ್ಚಾಗಿ ಬಡವರನ್ನು ಗುರಿಯಾಗಿಸಿಕೊಂಡು ವಂಚಿಸಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.