ಚಿಕ್ಕಬಳ್ಳಾಪುರ(Chikkaballapur) ಕಳೆದ 8 ವರ್ಷಗಳಿಂದ ವಾಟರ್ ಸಪ್ಲೈ(Water Supply) ಮಾಡಿಕೊಂಡು ಜೀವನ ನಡೆಸುತ್ತಿದ್ದ, ನಂತರ ಅವನ ಜೀವನಕ್ಕೊಂದು ದಾರಿಸಿಕ್ಕಂತೆ ಬೆಳೆಯುತ್ತಾ ಬಂದಾ, ಬ್ಯುಸಿನೆಸ್ ಕೂಡ ಬೆಳೆಯುತ್ತಾ ಬಂತು, ವಾಟರ್ ಸಪ್ಲೈಗೆ ಬೇಡಿಕೆಯೂ ಹೆಚ್ಚಾಗುತ್ತಿದ್ದಂತೆ ಬಾಟಲ್ಗಳ ಅವಶ್ಯಕತೆ ಹೆಚ್ಚಾಯ್ತು, ಹೊರ ರಾಜ್ಯಗಳಿಂದ ಮೆಟೀರಿಯಲ್ ರಪ್ತು ಮಾಡಿಕೊಳ್ಳುತ್ತಿದ್ದ, ಒಂದು ದಿನ ಅವನ ವಾಟ್ಸ್ ಆಪ್ಗೆ ಒಂದು ಮೇಸೇಜ್ ಬಂತು ನಿಮಗೆ ಬೇಕಾದ ಮೆಟೀರಿಯಲ್ ನಮ್ಮ ಬಳಿ ರಿಯಾಯಿತಿ ದರದಲ್ಲಿ ನೀಡುತ್ತೇನೆ ಎಂದು ಹೇಳಿ 3.33 ಲಕ್ಷ ಪಂಗನಾಮ ಹಾಕಿದ್ದಾನೆ! ಏನ್ ಅದು ಕಥೆ ಅಂತಿರಾ ಈ ಸ್ಟೋರಿ ನೋಡಿ…

ಹೌದು, ಹೀಗೆ ಕೈಯಲ್ಲಿ ಮೊಬೈಲ್ ಹಿಡಿದು ನೊಂದು ಕುಳಿತ್ತಿರುವ ವ್ಯಕ್ತಿ ಒಂದೆಡೆಯಾದರೆ, ಮತ್ತೊಂದೆಡೆ ತನಗೆ ಬಂದಿರುವ ನಕಲಿ ಪೋಟೋಗಳನ್ನು ತೋರಿಸಿ ದುಃಖ ಪಡುತ್ತಿರುವುದು. ಇಷ್ಟಕ್ಕೂ ಏನಾಯಿತು ಅಂದ್ರೆ ಚಿಕ್ಕಬಳ್ಳಾಪುರದ ಪ್ರಶಾಂತ ನಗರದಲ್ಲಿ ವಾಸವಾಗಿರುವ ಗೋವಿಂದರಾಜು ಎಂಬುವವರು 8 ವರ್ಷಗಳಿಂದ ಗಂಗೋತ್ರಿ ಎಂಟರ್ಪ್ರೈಸ್ ಎಂಬ ಬಿಸ್ಲರಿ ವಾಟರ್ ಸಪ್ಲೈ(Bislery Water Supply) ಮಾಡಿಕೊಂಡು ಜೀವನ ನಡೆಸುತ್ತಿದ್ದ, ಕಾಲಕ್ರಮೇಣ ಬಿಸಿನೆಸ್ ಕೂಡ ಹೆಚ್ಚಾಯ್ತು, ಹೆಚ್ಚಾದ ಕೂಡಲೆ ಮೆಟೀರಿಯಲ್ ಗಳ ಅವಶ್ಯಕತೆ ಹೆಚ್ಚಾಯ್ತು, ಹೊರ ರಾಜ್ಯಗಳಿಂದ ಮೆಟೀರಿಯಲ್ ತರೆಸುತ್ತಿದ್ದ ಗೋವಿಂದರಾಜುಗೆ ಒಂದು ದಿನ ಅವರ ಮೊಬೈಲ್ ವಾಟ್ಸ್ ಆಪ್ಗೆ ಮೆಸೇಜ್ ಬಂತು.
ಅದರಲ್ಲಿ ನಿಮಗೆ ಬೇಕಾದ ಮೆಟೀರಿಯಲ್ ಇದೆ ಎಂದು ಗೌರಿಬಿದನೂರು ಮೂಲದ ವ್ಯಕ್ತಿಯೊರ್ವ ಗೋವಿಂದರಾಜುಗೆ ಕಳುಹಿಸಿದ್ದ, ನಂತರ ಅವರ ಬಳಿ ಮಾತನಾಡಿ ಡೀಲ್ ಕುದುರಿಸಿಕೊಂಡು ಒಂದು ತಿಂಗಳೊಳಗೆ ಮೆಟೀರಿಯಲ್ ಕಳುಹಿಸುವುದಾಗಿ ಹೇಳಿದ್ದಾನೆ. ಅವನನ್ನು ನಂಬಿದ ಗೋವಿಂದರಾಜು 3 ಲಕ್ಷದ 33 ಸಾವಿರ ಹಣವನ್ನು ಅವನ ಅಕೌಂಟ್ಗೆ ವರ್ಗಾವಣೆ ಮಾಡಿದ್ದಾನೆ. ನಂತರ ಒಂದು ತಿಂಗಳಾಯಿತು, ಎರಡು ತಿಂಗಾಳಾಯಿತು ಯಾವುದೇ ಉತ್ತರ ನೀಡದೆ ಇದ್ದಲ್ಲಿ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಇನ್ನೂ ಪೋಲಿಸ್ ಪ್ರಕರಣ ದಾಖಲು ಮಾಡಿಕೊಂಡ ನಂತರ ಬ್ಯಾಂಕ್ಗೆ ಹೋಗಿ ಅವರ ಅಕೌಂಟ್ ಡಿಟೈಲ್ಸ್ ತೆಗೆದುಕೊಂಡು ಅವರ ಅಕೌಂಟ್ ನಲ್ಲಿದ್ದ 1.80 ಲಕ್ಷ ವನ್ನು ಸಿಸ್ ಮಾಡಿಕೊಂಡು ಬಂದಿದ್ದು, ಆದ್ರೆ ಅವನ ಬಳಿ ಇನ್ನೊಂದು ಬ್ಯಾಂಕ್ ಅಕೌಂಟ್ ಇದ್ದು ಅದರಲ್ಲಿ ಹಣದ ವ್ಯವಹಾರ ಮಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ. ಬ್ಯುಸಿನೆಸ್ ನಂಬಿ ಅವರಿಗೆ ಹಣ ವರ್ಗಾವಣೆ ಮಾಡಿದ್ದು, ಇದುವರೆಗೂ ಅವನ್ನು ಒಮ್ಮೆಯೂ ಬೇಟಿಯಾಗದೆ ಅವರನ್ನು ನಂಬಿದೆ ಆದ್ರೆ ಇಂತಹ ಕೆಲಸ ಮಾಡುತ್ತಾನೆ ಎಂದು ನಾನು ತಿಳಿದಿರಲಿಲ್ಲ ಎಂದು ತನ್ನ ಅಳಲನ್ನು ತೋಡಿಕೊಂಡ.

ಒಟ್ಟಾರೆ ವಾಟ್ಸ್ ಆಪ್ ಮೂಲಕ ಬಂದ ಮೇಸೇಜ್ ನೋಡಿ, ಯಾರನ್ನೂ ನಂಬಿ ಗೋವಿಂದರಾಜು 3.33 ಲಕ್ಷ ರೂ. ಕಳೆದುಕೊಂಡಿದ್ದಂತು ಸತ್ಯ. ಅದ್ರೆ ನೀಮಗೂ ಇಂತಹ ಮೇಸೇಜ್, ಕಾಲ್ ಬರಬಹುದು ಜಾಗೃತರಾಗಿ ಸ್ಥಳೀಯ ಪೋಲಿಸ್ ಠಾಣೆಗೆ ಮಾಹಿತಿ ನೀಡಿ.
- ಸೈಯದ್ ಅಸ್ಲಂ ಪಾಷಾ, ಚಿಂತಾಮಣಿ