- ಎಚ್ಚರ! ಹೆಚ್ಚಾಗುತ್ತಿದೆ ವಾಟ್ಸ್ಆ್ಯಪ್ (Fake RTO challan in WhatsApp) ಚಲನ್ ಸ್ಕ್ಯಾಮ್
- ಆಪ್ ಡೌನ್‌ಲೋಡ್ ಮಾಡಿದ್ರೆ ಬ್ಯಾಂಕ್ ಖಾತೆ, ವಾಟ್ಸ್ಆ್ಯಪ್ ನಿಯಂತ್ರಣ ಮತ್ತು ವೈಯಕ್ತಿಕ ಡೇಟಾ ಸಂಪೂರ್ಣ ಅಪಾಯ
- ವಂಚಕರ ಬಲೆಗೆ ಬಿದ್ದು ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡ ಜನರು
Bengaluru: ಇತ್ತೀಚೆಗೆ ವಾಟ್ಸ್ಆ್ಯಪ್ ಬಳಕೆದಾರರನ್ನು ಗುರಿಯಾಗಿಸಿಕೊಂಡು ಒಂದು ಹೊಸ ರೀತಿಯ ಸೈಬರ್ (Cyber) ವಂಚನೆ ದೇಶದ ಹಲವು ಭಾಗಗಳಲ್ಲಿ ವೇಗವಾಗಿ ಹರಡುತ್ತಿದೆ. (Fake RTO challan in WhatsApp)
‘RTO Challan’ ಅಥವಾ ‘Traffic Fine Pending’ ಎಂಬ ಹೆಸರಿನಲ್ಲಿ ಜನರಿಗೆ ಸಂದೇಶ ಕಳುಹಿಸಿ, ವಾಹನಕ್ಕೆ ದಂಡ ಬಾಕಿಯಿದೆ ಎಂದು ನಂಬಿಸಿ ಭಾರೀ ಆರ್ಥಿಕ ನಷ್ಟ ಮಾಡಿಸುತ್ತಿರುವ ಘಟನೆಗಳು ಹೆಚ್ಚುತ್ತಿವೆ.

ಇದು ಸಾಮಾನ್ಯ ಫೇಕ್ ಲಿಂಕ್ (Fake Link) ಅಲ್ಲ ಬದಲಾಗಿ ಫೋನ್‌ಗೆ ನೇರವಾಗಿ ನುಗ್ಗಿ ಹ್ಯಾಕರ್‌ಗಳಿಗೆ ನಿಯಂತ್ರಣ ಕೊಡಬಲ್ಲ ಅಪಾಯಕಾರಿ APK ಫೈಲ್ ಹೊಂದಿರುವ ಸ್ಕ್ಯಾಮ್ ಆಗಿರುತ್ತದೆ. (Fake RTO challan in WhatsApp)
ಇನ್ನು ಸೈಬರ್ ತಜ್ಞರು ಹೇಳುವ ಪ್ರಕಾರ, ಮೊದಲು OTP ಕಳವು ಅಥವಾ ನಕಲಿ ಬ್ಯಾಂಕ್ ಲಿಂಕ್‌ಗಳ ಮೂಲಕ ಜನರನ್ನು ಮೋಸಗೊಳಿಸುತ್ತಿದ್ದ ಸೈಬರ್ ಅಪರಾಧಿಗಳು ಈಗ ಮತ್ತಷ್ಟು ಸ್ಮಾರ್ಟ್ ವಿಧಾನಕ್ಕೆ ತಿರುಗಿದ್ದಾರೆ. ಬಳಕೆದಾರರಿಗೆ ನಿಮ್ಮ ವಾಹನಕ್ಕೆ RTO e-Challan ಬಂದಿದೆ, ತಕ್ಷಣ ಪಾವತಿಸಿ” ಎಂಬ ಹೆಸರಿನಲ್ಲಿ ವಾಟ್ಸ್ಆ್ಯಪ್‌ನಲ್ಲಿ ಸಂದೇಶ ಬರುತ್ತದೆ.
ಈ ಸಂದೇಶದಲ್ಲಿ ಸರ್ಕಾರಿ ಚಿಹ್ನೆಯಂತಿರುವ ನಕಲಿ RTO ಲೋಗೋ, ವಾಹನ ನಂಬರಿನಂತೆಯೇ ತೋರಿಸುವ ಡೇಟಾ ಮತ್ತು ‘Download App’ ಲಿಂಕ್ ಇರುತ್ತದೆ.
ಜನರು ಇದನ್ನು ನೈಜ ಸರ್ಕಾರಿ ನೋಟಿಸ್ (Notice) ಎಂದು ನಂಬಿ ಆ ಲಿಂಕ್ ಕ್ಲಿಕ್ ಮಾಡಿದರೆ RTO E-Challan.apk ಅಥವಾ Mparivahan.apk ಎಂಬ ಫೈಲ್ ಮೊಬೈಲ್‌ಗೆ ಡೌನ್‌ಲೋಡ್ ಆಗುತ್ತದೆ.
ಅದನ್ನು ಇನ್‌ಸ್ಟಾಲ್ ಮಾಡಿದ ಕ್ಷಣದಲ್ಲಿ ವಿಷಕಾರಿ ಮಾಲ್‌ವೇರ್ (Malware) ಫೋನ್‌ಗೆ ನುಗ್ಗಿ ಹ್ಯಾಕರ್‌ಗಳಿಗೆ ಫೋನ್‌ನ್ನು ದೂರದಿಂದಲೇ ನಿಯಂತ್ರಿಸುವ ಅವಕಾಶ ದೊರಕುತ್ತದೆ.
ಇದರಿಂದ ಗ್ಯಾಲರಿ, ಸಂಪರ್ಕಗಳು, ಮೆಸೇಜ್‌ಗಳು, OTP ಮತ್ತು ಬ್ಯಾಂಕ್ ಪಾಸ್‌ವರ್ಡ್‌ಗಳಂತಹ (Password) ಸೂಕ್ಷ್ಮ ಮಾಹಿತಿ ಸಂಪೂರ್ಣ ಅಪಾಯಕ್ಕೆ ಒಳಗಾಗುತ್ತದೆ.
ಸರಳವಾಗಿ ಹೇಳುವುದಾದರೆ ಈ ಎಪಿಕೆ ಫೇಲ್ ಓಪನ್ ಮಾಡಿದ್ರೆ ಮಾಲ್‌ವೇರ್ ಫೋನ್‌ಗೆ ನುಗ್ಗಿದ ಬಳಿಕ ಹಣಕಾಸು ನಷ್ಟದ ಅಪಾಯ ತುಂಬಾ ಹೆಚ್ಚಾಗುತ್ತದೆ.
ಬ್ಯಾಂಕ್ ಖಾತೆಯಿಂದ ಹಣ ಕಳವು ಆಗುವಷ್ಟೇ ಅಲ್ಲ, UPI ಹಾಗೂ ನೆಟ್‌ಬ್ಯಾಂಕಿಂಗ್‌ನ್ನು (Netbanking) ಹ್ಯಾಕ್ ಮಾಡುವ ಸಾಧ್ಯತೆಯೂ ಇರುತ್ತದೆ.
ಇದಲ್ಲದೆ, ವಾಟ್ಸ್ಆ್ಯಪ್‌ನ್ನು ಸಂಪೂರ್ಣವಾಗಿ ಕಬಳಿಸಿ, ನಿಮ್ಮ ಸಂಪರ್ಕದಲ್ಲಿರುವವರಿಗೆ ಇದೇ ರೀತಿಯ ಸ್ಕ್ಯಾಮ್ ಸಂದೇಶಗಳನ್ನು ಕಳುಹಿಸಲು ಯತ್ನಿಸುತ್ತದೆ.
ಕೆಲವೊಮ್ಮೆ ಹ್ಯಾಕರ್‌ಗಳ ಸ್ಪ್ಯಾಮ್ ಚಟುವಟಿಕೆ ಮುಂದುವರಿದರೆ, ವಾಟ್ಸ್ಆ್ಯಪ್ ನಿಮ್ಮ ಸಂಖ್ಯೆಯನ್ನು ಶಂಕಿತ ಎಂದು ಗುರುತಿಸಿ ಖಾತೆಯನ್ನು ಬ್ಯಾನ್ ಮಾಡುವ ಪರಿಸ್ಥಿತಿಯೂ ಉಂಟಾಗಿದೆ.
ಈ ಎಲ್ಲ ಕಾರಣಗಳಿಂದಾಗಿ ಫೋನ್ ಮತ್ತು ವೈಯಕ್ತಿಕ ಡೇಟಾ ಮೇಲಿನ ನಿಯಂತ್ರಣ ಸಂಪೂರ್ಣವಾಗಿ ಕಳೆದುಹೋಗುವ ಅಪಾಯ ತುಂಬಾ ಹೆಚ್ಚಾಗಿದೆ.
ಈ ಸೈಬರ್ ವಂಚನೆ ಕೇವಲ ದೇಶವಷ್ಟೇ ಅಲ್ಲ, ಕರ್ನಾಟಕದಲ್ಲಿಯೂ ವೇಗವಾಗಿ ವ್ಯಾಪಿಸುತ್ತಿದೆ.
ಬೆಳಗಾವಿಯಲ್ಲಿ “ಚಲನ್ ಪಾವತಿಸಿ” ಎಂದು ಸಂದೇಶ ಬಂದ ಬಳಿಕ ಆಪ್ ಇನ್‌ಸ್ಟಾಲ್ ಮಾಡಿದ ವಾಹನ ಚಾಲಕರೊಬ್ಬರು ₹40,000 ಕಳೆದುಕೊಂಡ ಪ್ರಕರಣ ದಾಖಲಾಗಿದೆ.
ಶಿವಮೊಗ್ಗದಲ್ಲಿಯೂ ಇದೇ ರೀತಿಯ ಘಟನೆ ನಡೆಯಿದ್ದು, ಸಂಚಾರ ದಂಡ ಬಾಕಿ ಇದೆ ಎಂದು ನಂಬಿ ಡೌನ್‌ಲೋಡ್ (Download) ಮಾಡಿದ ಅಪ್ಲಿಕೇಶನ್ (Application) ಮೂಲಕ ಇಬ್ಬರು ಬ್ಯಾಂಕ್ ಖಾತೆಗಳಿಂದ ಒಟ್ಟು ₹1.5 ಲಕ್ಷ ಮಿಂಚಿನಂತೆಯೇ ಕದಿಯಲಾಗಿದೆ.
ಇದಲ್ಲದೆ, ರಾಜ್ಯದ ಇತರ ಜಿಲ್ಲೆಗಳಲ್ಲೂ ಟ್ರಾಫಿಕ್ ಪೊಲೀಸರ ಹೆಸರಿನಲ್ಲಿ ನಕಲಿ ‘ಇ-ಚಲನ್’ ಸಂದೇಶ ಕಳುಹಿಸಿ ಪಾವತಿ ಲಿಂಕ್ ಮೂಲಕ ಜನರನ್ನು ಮೋಸಗೊಳಿಸುವ ಹಲವಾರು ಪ್ರಕರಣಗಳು ವರದಿಯಾಗಿವೆ.
ಇದನ್ನು ಓದಿ : ಕರ್ನಾಟಕ ಸರ್ಕಾರದ ಮಹಿಳಾ ಸಬಲೀಕರಣದ ಹೊಸ ಹೆಜ್ಜೆ: ತಿಂಗಳಿಗೆ ಒಂದು ದಿನ ‘ಮುಟ್ಟಿನ ರಜೆ’ ನೀಡಲು ಚಿಂತನೆ