ಭಾರತದ ವಿರುದ್ಧ ತಮ್ಮ ಷಡ್ಯಂತ್ರವನ್ನು ರೂಪಿಸಿ ಅದನ್ನು ನೇರವಾಗಿ ಹೋರಾಡಲಾಗದೆ, ಎಲ್ಲೋ ಅವಿತು ಮಾಡುವಂತ ಕೆಲಸ ಪಾಕಿಸ್ತಾನದ್ದು.! ಈ ರೀತಿಯ ಪ್ರಕರಣಗಳು ಭಾರತಕ್ಕೆ ಹೊಸದೇನಲ್ಲ. ಈ ಹಿಂದೆಯೂ ಎಷ್ಟೋ ನಕಲಿ ಪ್ರಕರಣಗಳು, ಪ್ರಯತ್ನಗಳು ಭಾರತದ ಮೇಲೆ ನಡೆದಿವೆ. ಈಗ ಇದೇ ರೀತಿಯಲ್ಲಿ ಪಾಕಿಸ್ತಾನದ 35ಕ್ಕೂ ಹೆಚ್ಚು ಯೂಟ್ಯೂಬ್ ಚಾನೆಲ್‍ಗಳು ಭಾರತದ ವಿರುದ್ದ ನಕಲಿ ಸುದ್ದಿಗಳ್ನು ಪ್ರಸಾರ ಮಾಡುವ ಮೂಲಕ ಪ್ರಚೋದನಕಾರಿ ವಿಷಯಗಳನ್ನು ರವಾನಿಸುತ್ತಿದ್ದನ್ನು ಪತ್ತೆಯಚ್ಚಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು, ಗುಪ್ತಚರ ಇಲಾಖೆಯ ಮುಖೇನ ಮಾಹಿತಿಯನ್ನು ಆಧಾರಿಸಿ ಶಿಸ್ತು ಕ್ರಮವನ್ನು ಜರುಗಿಸಿದೆ.
ಪಾಕಿಸ್ತಾನದ 35 ಯೂಟ್ಯೂಬ್ ಚಾನೆಲ್, ಟ್ವಿಟರ್ನ ಎರಡು ಖಾತೆಗಳು, ಇನ್‍ಸ್ಟಾಗ್ರಾಂನ ಎರಡು ಖಾತೆ, ಎರಡು ವೆಬ್ ಸೈಟ್ ಮತ್ತು ಫೇಸ್ ಬುಕ್ ಖಾತೆ ಬ್ಲಾಕ್ ಮಾಡಲಾಗಿದೆ ಎಂದು ಜಂಟಿ ಕಾರ್ಯದರ್ಶಿ ವಿಕ್ರಮ್ ಸಹಾಯ್ ಮಾಹಿತಿ ನೀಡಿದ್ದಾರೆ. ಈ ಯುಟ್ಯೂಬ್ ಚಾನೆಲ್‌ಗಳು ಯಾವ ರೀತಿಯ ಸುದ್ದಿ ಪ್ರಸಾರ ಮಾಡಿದ್ದಾರೆ ಎಂಬುದನ್ನು ತಿಳಿಯುವುದಾದರೆ,
ಒಂದು ತಿಂಗಳ ಹಿಂದೆ ತಮಿಳುನಾಡಿನಲ್ಲಿ ಭಾರತದ ಸಶಸ್ತ್ರ ಪಡೆಯ ಮುಖ್ಯಸ್ಥರಾಗಿದ್ದ ಜನರಲ್ ಬಿಪಿನ್ ರಾವತ್ ಅವರ ನಿಧನದ ಸುದ್ದಿಯೊಂದಿಗೆ ದೇಶ ವಿರೋಧಿ ಸುದ್ದಿಗಳನ್ನು ಪ್ರಮುಖವಾಗಿ ಪ್ರಸಾರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಗುಪ್ತಚರ ಇಲಾಖೆಯ ಮಾಹಿತಿಯ ಅನುಸಾರ ಕೇಂದ್ರ ಸರ್ಕಾರ ಶಿಸ್ತು ಕ್ರಮವನ್ನು ತೆಗೆದುಕೊಂಡಿದೆ.
ಜನರಲ್ ಬಿಪಿನ್ ರಾವತ್ ಅವರ ಸಾವಿಗೆ ಕೇಂದ್ರ ಸರ್ಕಾರವೇ ಕಾರಣ, ರಾವತ್ ಅವರ ಪುತ್ರಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳುತ್ತಿದ್ದಾರೆ, ಉತ್ತರ ಕೊರಿಯಾ ಸೇನೆಯು ಕಾಶ್ಮೀರಕ್ಕೆ ಹೆಚ್ಚೆಯಿಡುತ್ತಿದೆ. ಭಾರತೀಯ ಸೇನೆ, ಜಮ್ಮು-ಕಾಶ್ಮೀರ ಸೇರಿದಂತೆ ಹಲವು ಸುಳ್ಳು ಸುದ್ದಿಗಳು, ಪ್ರಚೋದನಕಾರಿ ವಾಕ್ಯಗಳನ್ನು ತಮ್ಮ ವೀಡಿಯೊಗಳಲ್ಲಿ ಪ್ರಸಾರ ಮಾಡಿದ್ದಾರೆ. ಈ ಕಾರಣಕ್ಕಾಗಿಯೇ ಕೇಂದ್ರ ಸರ್ಕಾರ ಕೂಡಲೇ ಬ್ಯಾನ್ ಮಾಡುವ ಮೂಲಕ ಆಯಾ ಖಾತೆಗಳನ್ನು ಪ್ರತ್ಯೇಕವಾಗಿ ಗುರುತಿಸಿದೆ ಮತ್ತು ವಿಶೇಷವಾಗಿ ನಿಗಾ ವಹಿಸಲಾಗಿದೆ ಎಂದು ತಿಳಿಸಿದೆ.