Bengaluru : ಅಭಿಮಾನಿಗಳ ದೇವರು, ಆರಾಧ್ಯ ದೈವ, ನಗುವಿನ ಮುತ್ತು ನಮ್ಮ ಅಪ್ಪು… ಪ್ರತಿ ಮನುಕುಲಕ್ಕು, ಪ್ರತಿ ಮನೆಯ ಮಗುವಿನ (Fan Letter to Power Star) ಮನಸಿಗು ಹತ್ತಿರವಾದ ಏಕೈಕ ದೇವರಂತ ಮನುಷ್ಯ ಅಪ್ಪು ಸರ್.

ಮಾರ್ಚ 17 ರಂದು ಅಪ್ಪು ಜನ್ಮ ದಿನ, ಈ ದಿನ ಅಭಿಮಾನಿಗಳ ಪಾಲಿಗೆ ದಸರಾ ಹಬ್ಬದ ರೀತಿ ಸಂಭ್ರಮಾಚರಣೆ..
ಸಿನಿಮಾ ಗೆದ್ದು ಹೀರೊ ಅನ್ನಿಸಿಕೊಂಡಕ್ಕಿಂತ ಹೆಚ್ಚಾಗಿ ಚಾಚಿದ ಕೈಗಳಿಗೆ ಸಹಾಯ ಹಸ್ತ ನೀಡಿ ಸೈ ಅನಿಸಿಕೊಂಡಿದ್ದೆ ಹೆಚ್ಚು.
ಸಿನಿಮಾ ಅಂದ್ರೆ ಮೊದಲು ನೆನಪಿಗೆ ಬರೋದೆ ಅಣ್ಣವ್ರು.
https://www.facebook.com/Vijayatimeskannada/videos/1575287249571694/
ಬಾಲ್ಯದಲ್ಲಿ ತಂದೆಯೊಂದಿಗೆ ನಟನೆ ಪ್ರಾರಂಭಿಸಿ ಚಿಕ್ಕ ವಯಸ್ಸಿನಲ್ಲೆ ಕುಣಿದು ಕುಪ್ಪಳಿಸಿ, ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅಪ್ಪು, ಇಂದು 29 ಕನ್ನಡ ಚಲನಚಿತ್ರಗಳಲ್ಲಿ ನಾಯಕ ನಟನಾಗಿ ನಟನೆ ಮಾಡಿದ್ದಾರೆ.
ವಸಂತ ಗೀತೆ, ಭಾಗ್ಯವಂತ, ಚಲಿಸುವ ಮೋಡಗಳು, ಎರಡು ನಕ್ಷತ್ರ, ಬೆಟ್ಟದ ಹೂವು,
ಭಕ್ತ ಪ್ರಹ್ಲಾದ ಹೀಗೆ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿ ಇಂದು ಮನೆ ಮನೆಯ ದೇವರಾಗಿ ನಮ್ಮೆಲ್ಲರ ಮನದಲ್ಲಿ ನೆಲೆಸಿರುವವರು ಅಪ್ಪು.

ಅಪ್ಪು ನಮ್ಮೆಲ್ಲರಿಂದ ದೈಹಿಕವಾಗಿ (Fan Letter to Power Star) ದೂರವಾಗಿದ್ದರು ಕೂಡ ಅಭಿಮಾನಿಗಳ ಪಾಲಿಗೆ ಅವರನ್ನು ದೇವರ ಸ್ಥಾನದಲ್ಲಿರಿಸಿ ನಿತ್ಯ ಪೂಜಿಸುತ್ತಾರೆ.
ಕರ್ನಾಟಕ ರತ್ನ ಎಂದೆ ಹೆಸರು ವಾಸಿಯಾಗಿರುವ ನಮ್ಮ-ನಿಮ್ಮೆಲ್ಲರ ಅಪ್ಪು ಮಾಡಿರುವ ಸಾಮಾಜಿಕ ಕಾರ್ಯಗಳನ್ನು ಇಂದು ಜನಸಾಮಾನ್ಯರೆಲ್ಲ ಪುನೀತ್ ಅವರ ಮಾರ್ಗದಲ್ಲೆ ನಡೆಯುತ್ತಿದ್ದಾರೆ.
ಚಿತ್ರರಂಗದಿಂದಾಚೆಗೂ ಅಪ್ಪು ಅವರ ಬೇರೆ ಬೇರೆ ಸಾಮಾಜಿಕ ಕಾರ್ಯದಿಂದ ಅವರ ಇಚ್ಚಾಶಕ್ತಿಯಿಂದ ಹಾಗೂ ಅವರ ಸ್ವಚ್ಛ ಮನಸಿನ ಗುಣ ಹೀಗೆ ಹಲವಾರು ಕಾರಣದಿಂದಾಗಿ ಎಲ್ಲರಿಗೂ ಹತ್ತಿರವಾಗಿರುವ ನಮ್ಮ ಅಪ್ಪು,
ಅಪ್ಪು ನೆನಪು ಹಸಿರಾಗಿರುವಂತೆ ಅಭಿಮಾನಿಗಳು ಅವರ ನಡಿಗೆಯಲ್ಲೆ ನಡೆಯುವ ಭರವಸೆಯ ಜೊತೆಯಲ್ಲಿ ಒಂದಷ್ಟು ಜನ,

ಅಪ್ಪು ಎಂಬ ಹೆಸರಿನಲ್ಲಿ ಇನ್ನೊಂದಷ್ಟು ಜನ ಕ್ಯಾಂಟೀನ್ ಶುರು ಮಾಡಿರುವುದಲ್ಲದೆ,
ಇದೀಗ ಅನೇಕ ಜನರು ಅಪ್ಪು ಎಂದು ಮನೆಗಳಿಗು ಹೆಸರಿಡುವುದು ವಿಶೇಷವಾಗಿ ಕಂಡುಬರುತ್ತಿದೆ.
ಅಪ್ಪು ಅಭಿಮಾನಿಗಳು ವಿಶೇಷ ರೀತಿಯಲ್ಲಿ ಪುನೀತ್ ಹೆಸರು ನಮ್ಮ ನೆಲದಲ್ಲಿ ಚಿರವಾಗಿಡುತ್ತಿದ್ದಾರೆ.
ಇದಕ್ಕೆಲ್ಲ ಕಾರಣ ಅಪ್ಪುವಿನ ಆ ಮುಗ್ಧ ಮನಸ್ಸೇ ಕಾರಣ.
ಇದನ್ನೂ ಓದಿ : https://vijayatimes.com/kerala-court-on-plagiarism-row/
ಈ ಮೂಲಕ ಅಪ್ಪು ಮೇಲಿನ ಅಭಿಮಾನವನ್ನು ಜನ ದೇವರಿಗೆ ತಲುಪಿಸಿದ್ದಾರೆ. ಈ ಮುಖಾಂತರವಾದರೂ ಅಭಿಮಾನಿಗಳ ಕೂಗು.
ಭಗವಂತನಿಗೆ ಕೇಳಿಸಿ ಮತ್ತೆ ಮರಳಿ ಅಪ್ಪು ಅವರನ್ನು ಭೂಮಿಗೆ ಕಳಿಸಲಿ ಎಂಬುದೇ ನನ್ನಂತ ಕೋಟ್ಯಾಂತರ ಅಭಿಮಾನಿಗಳ ಆಶಯ, ಅಪ್ಪು ಎಂದೆಂದಿಗೂ ಅಮರ….