ಬೆಂಗಳೂರು, ಜ. 21: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಚಿತ್ರದ ಇದೀಗ “ವಿಕ್ರಾಂತ್ ರೋಣ”ನಾಗಿ ಬದಲಾಗಿದೆ.
ಅನೂಪ್ ಭಂಡಾರಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಚಿತ್ರ,
ಚಿತ್ರೀಕರಣ ಶುರುವಾದ ದಿನದಿಂದಲೂ ಸಾಕಷ್ಟು ಕುತೂಹಲ ಕೆರಳಿಸಿತ್ತು. ಆದರೆ ಫ್ಯಾಂಟಮ್ ಚಿತ್ರದ ಕುರಿತು ಮಹತ್ವದ ವಿಷಯವೊಂದನ್ನು ಅನಾವರಣಗೊಳಿಸುವುದಾಗಿ ತಿಳಿಸಿದ್ದ ನಿರ್ದೇಶಕ ಅನೂಪ್, ಇದೀಗ ಚಿತ್ರದ ಟೈಟಲ್ ಬದಲಾವಣೆ ಮಾಡಿರುವ ವಿಷಯ ಬಹಿರಂಗಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಫ್ಯಾಂಟಮ್ ಚಿತ್ರ, “ವಿಕ್ರಾಂತ್ ರೋಣ” ಎಂದು ಬದಲಾಗಿದೆ.
ಅಲ್ಲದೇ, ಜ.31ರಂದು ಪ್ರಪಂಚದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫ(ದುಬೈ) ಮೇಲೆ ಕಿಚ್ಚನ ಕಟೌಟ್ ಹಾಗೂ “ವಿಕ್ರಾಂತ್ ರೋಣ” ಚಿತ್ರದ ಟೈಟಲ್ ಲೋಗೋ ಲಾಂಚ್ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.