ಮುಂಗಾರು ಹಂಗಾಮಿನಿಂದ ‘ಕೆ-ಕಿಸಾನ್’ ತಂತ್ರಾಂಶದ (Farmer ID for purchasing urea) ಮೂಲಕವೇ ಗೊಬ್ಬರ ವಿತರಣೆ
ಯೂರಿಯಾ ಗೊಬ್ಬರ ಖರೀದಿಗೆ ಫಾರ್ಮರ್ ಐಡಿ
ರೈತರಿಗೆ ಹೊಸ ನಿಯಮ ಪ್ರಕಟಿಸಿದ ಕೃಷಿ ಇಲಾಖೆ
2026-27 ಮುಂಗಾರು ಹಂಗಾಮಿನಿಂದ ಹೊಸ ನಿಯಮ ಜಾರಿ
ರಾಜ್ಯದ ರೈತರಿಗೆ ಮಹತ್ವದ ಮಾಹಿತಿ ಪ್ರಕಟವಾಗಿದ್ದು, ಇನ್ನು ಮುಂದೆ ಯೂರಿಯಾ (Farmer ID for purchasing urea) ರಸಗೊಬ್ಬರ ಖರೀದಿಸಲು ಫಾರ್ಮರ್ ಐಡಿ (FID) ಸಂಖ್ಯೆ ಕಡ್ಡಾಯವಾಗಲಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.
2026-27ನೇ ಸಾಲಿನ ಮುಂಗಾರು ಹಂಗಾಮಿನಿಂದ ಈ ನಿಯಮ ಜಾರಿಗೆ ಬರಲಿದ್ದು, ರಾಜ್ಯದ ಎಲ್ಲಾ ರೈತರು ಫಾರ್ಮರ್ ಐಡಿ ಹೊಂದಿರುವುದು ಅನಿವಾರ್ಯವಾಗಿದೆ.
ರಸಗೊಬ್ಬರ ವಿತರಣೆಯಲ್ಲಿ ಪಾರದರ್ಶಕತೆ ತರಲು ಹಾಗೂ ಅಕ್ರಮ ಮಾರಾಟ ಮತ್ತು ಕಾಳಸಂತೆ ತಡೆಯಲು ಸರ್ಕಾರ ಈ ಕ್ರಮ ಕೈಗೊಂಡಿದೆ.

ಈ ಹೊಸ ನಿಯಮದಂತೆ, ರೈತರಿಗೆ ಅವರ ಜಮೀನಿನ ವಿಸ್ತೀರ್ಣ ಹಾಗೂ ಬೆಳೆದಿರುವ ಬೆಳೆಗಳಿಗೆ ಅನುಗುಣವಾಗಿ ಅಗತ್ಯವಿರುವಷ್ಟು ಮಾತ್ರ ರಸಗೊಬ್ಬರವನ್ನು ವಿತರಿಸಲಾಗುತ್ತದೆ.
ಈ ಪ್ರಕ್ರಿಯೆ ಸಂಪೂರ್ಣವಾಗಿ ‘ಕೆ-ಕಿಸಾನ್’ (K-Kisan) ತಂತ್ರಾಂಶದ ಮೂಲಕ ನಡೆಯಲಿದೆ. ರೈತರ ಜಮೀನು ವಿವರ, ಬೆಳೆ ಮಾಹಿತಿ (Farmer ID for purchasing urea)
ಹಾಗೂ ಅಗತ್ಯ ಗೊಬ್ಬರ ಪ್ರಮಾಣವನ್ನು ಈ ತಂತ್ರಾಂಶದಲ್ಲಿ ದಾಖಲಿಸಿ, ಅದಕ್ಕೆ ಅನುಗುಣವಾಗಿ ಗೊಬ್ಬರ ವಿತರಣೆ ಮಾಡಲಾಗುತ್ತದೆ.
ಇದರಿಂದ ಗೊಬ್ಬರ ದುರುಪಯೋಗ ಹಾಗೂ ಕೃಷಿಯೇತರ ಬಳಕೆ ಕಡಿಮೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.
ಇದುವರೆಗೆ ಫಾರ್ಮರ್ ಐಡಿ ನೋಂದಣಿ ಮಾಡಿಸದ ರೈತರು ತಕ್ಷಣವೇ ನೋಂದಣಿ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ.
ನೋಂದಣಿ ಮಾಡಲು ಪಹಣಿ ಪತ್ರ, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಬುಕ್ ದಾಖಲಾತಿಗಳೊಂದಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆ ಕಚೇರಿ
ಅಥವಾ ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಫಾರ್ಮರ್ ಐಡಿ ಪಡೆಯಬಹುದು. ಈ ಪ್ರಕ್ರಿಯೆಯನ್ನು ಸರಳಗೊಳಿಸಲು ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ.
ಈಗಾಗಲೇ ಫಾರ್ಮರ್ ಐಡಿ ಹೊಂದಿರುವ ರೈತರು ತಮ್ಮ ಎಲ್ಲಾ ಜಮೀನುಗಳ ಸರ್ವೆ ನಂಬರ್‌ಗಳನ್ನು ಫಾರ್ಮರ್ ಐಡಿಗೆ ಜೋಡಣೆ ಮಾಡಿಸಿಕೊಳ್ಳಬೇಕು ಎಂದು
ಇಲಾಖೆ ತಿಳಿಸಿದೆ. ಸರ್ವೆ ನಂಬರ್ ಜೋಡಣೆ ಮಾಡಿದ ಬಳಿಕ ಮಾತ್ರ ರೈತರಿಗೆ ಸಂಪೂರ್ಣ ಪ್ರಮಾಣದ ರಸಗೊಬ್ಬರ ದೊರೆಯಲಿದೆ.
ಈ ಕ್ರಮದಿಂದ ಒಂದೇ ರೈತರು ಬೇರೆ ಬೇರೆ ಹೆಸರುಗಳಲ್ಲಿ ಗೊಬ್ಬರ ಪಡೆಯುವಂತಹ ಅಕ್ರಮಗಳನ್ನು ತಡೆಯಲು ಸಹಾಯವಾಗಲಿದೆ.
ಇನ್ನು ರಸಗೊಬ್ಬರ ಮಾರಾಟಗಾರರಿಗೆ ಸಹ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಗೊಬ್ಬರ ಮಾರಾಟ ಮಾಡುವಾಗ ರೈತರ ಫಾರ್ಮರ್ ಐಡಿ ಸಂಖ್ಯೆಯನ್ನು
‘ಕೆ-ಕಿಸಾನ್’ ತಂತ್ರಾಂಶದಲ್ಲಿ ದಾಖಲಿಸಿ ಮಾತ್ರ ಗೊಬ್ಬರ ಮಾರಾಟ ಮಾಡಬೇಕು.
ನಿಯಮ ಉಲ್ಲಂಘನೆ ಮಾಡಿ ನೋಂದಣಿ ಇಲ್ಲದೇ ಗೊಬ್ಬರ ಮಾರಾಟ ಮಾಡಿದರೆ, ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಅಥವಾ ಕೃಷಿಯೇತರ ಉದ್ದೇಶಕ್ಕೆ
ಗೊಬ್ಬರ ನೀಡಿದರೆ ಅಂತಹ ಮಾರಾಟಗಾರರ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಕೃಷಿ ಇಲಾಖೆ ಎಚ್ಚರಿಕೆ ನೀಡಿದೆ.
ಈ ಹೊಸ ನಿಯಮದಿಂದ ಗೊಬ್ಬರ ವಿತರಣೆ ವ್ಯವಸ್ಥೆ ಹೆಚ್ಚು ಪಾರದರ್ಶಕವಾಗಲಿದೆ ಮತ್ತು ರೈತರಿಗೆ ನ್ಯಾಯವಾದ ಪ್ರಮಾಣದ ಗೊಬ್ಬರ ದೊರೆಯಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಇದನ್ನು ಓದಿ : https://vijayatimes.com/price-increase-in-foodgrain/