ವರ್ಷವಿಡೀ ರೈತರ (Farmers) ಕುಟುಂಬಕ್ಕೆ ಉದ್ಯೋಗ (Job) ಸೃಷ್ಟಿಸಿ ಸ್ವಾವಲಂಬಿ ಜೀವನೋಪಾಯ ಪಡೆಯುವುದೇ “ಸಮಗ್ರ ಕೃಷಿ ಪದ್ಧತಿ”ಯ ಮುಖ್ಯ ಉದ್ದೇಶವಾಗಿದೆ.
ಕೃಷಿ ಬೆಳೆಗಳ ಜೊತೆಗೆ ಇತರೆ ಜೀವನೋಪಾಯ ಕೃಷಿ ಅವಲಂಬಿತ ಉಪಕಸಬುಗಳ ಮೂಲಕ ಆದಾಯ ಗಳಿಸುವುದನ್ನೇ ಸಮಗ್ರ ಕೃಷಿ ಎನ್ನಲಾಗುತ್ತದೆ. ಇದರಿಂದ ರೈತರು ವರ್ಷವಿಡೀ ಆದಾಯ ಗಳಿಸಬಹುದು. ಅದರ ವಿವರ ಇಲ್ಲಿದೆ ನೋಡಿ.

ಸಮಗ್ರ ಕೃಷಿ ಪದ್ದತಿಯ ವಿಧಾನಗಳು :
- ಬೆಳೆ ಆಧಾರಿತ ಸಮಗ್ರ ಕೃಷಿ ಪದ್ಧತಿ
- ಜಾನುವಾರು ಆಧಾರಿತ ಸಮಗ್ರ ಕೃಷಿ ಪದ್ಧತಿ
- ಮರ ಆಧಾರಿತ ಸಮಗ್ರ ಕೃಷಿ ಪದ್ಧತಿ
- ತೋಟಗಾರಿಕೆ ಆಧಾರಿತ ಸಮಗ್ರ ಕೃಷಿ ಪದ್ಧತಿ
- ರೇಷ್ಮೆ ಕೃಷಿ ಆಧಾರಿತ ಸಮಗ್ರ ಕೃಷಿ ಪದ್ಧತಿ
- ಮೀನುಗಾರಿಕೆ ಆಧಾರಿತ ಸಮಗ್ರ ಕೃಷಿ ಪದ್ಧತಿ
ಒಣ ಪ್ರದೇಶಕ್ಕೆ ಸೂಕ್ತವಾದ ಸಮಗ್ರ ಕೃಷಿ ಪದ್ಧತಿಗಳು :
https://fb.watch/f8nSbY3Ll2/ ಇವರು ಪೊಲೀಸರಾ? ಗೂಂಡಾಗಳ?
- ಬೆಳೆ ಉತ್ಪಾದನೆ + ಹೈನುಗಾರಿಕೆ + ಕುರಿ / ಆಡು ಸಾಕಾಣಿಕೆ + ಕೋಳಿ ಸಾಕಾಣಿಕೆ + ಕೃಷಿ ಅರಣ್ಯ.
- ಬೆಳೆ ಉತ್ಪಾದನೆ + ಹಂದಿ ಸಾಕಾಣಿಕೆ + ಜೈವಿಕ ಅನಿಲ
- ಬೆಳೆ ಉತ್ಪಾದನೆ + ತೋಟಗಾರಿಕೆ ಹಣ್ಣಿನ ಬೆಳೆಗಳು + ಕುರಿ/ಆಡು ಸಾಕಾಣಿಕೆ.
- ಬೆಳೆ ಉತ್ಪಾದನೆ + ಕುರಿ /ಆಡು ಸಾಕಾಣಿಕೆ + ಕೃಷಿ ಅರಣ್ಯ ಪದ್ಧತಿ
ನೀರಾವರಿ ಪ್ರದೇಶಕ್ಕೆ ಸೂಕ್ತವಾದ ಸಮಗ್ರ ಕೃಷಿ ಪದ್ಧತಿಗಳು :
- ಬೆಳೆ ಉತ್ಪಾದನೆ + ರೇಷ್ಮೆ ಕೃಷಿ + ಎರೆಹುಳು ಗೊಬ್ಬರ ತಯಾರಿಕೆ
- ಬೆಳೆ ಉತ್ಪಾದನೆ + ಕೋಳಿ ಸಾಕಾಣಿಕೆ + ಕುರಿ ಸಾಕಾಣಿಕೆ
- ಬೆಳೆ ಉತ್ಪಾದನೆ + ಹೈನುಗಾರಿಕೆ + ಜೈವಿಕ ಅನಿಲ ಉತ್ಪಾದನೆ + ಎರೆಹುಳು ಗೊಬ್ಬರ ತಯಾರಿಕೆ.
- ಬೆಳೆ ಉತ್ಪಾದನೆ + ಹೈನುಗಾರಿಕೆ + ಜೇನು ಸಾಕಾಣಿಕೆ.

ಮಲೆನಾಡು ಪ್ರದೇಶಕ್ಕೆ ಸೂಕ್ತವಾದ ಸಮಗ್ರ ಕೃಷಿ ಪದ್ಧತಿಗಳು :
- ಬೆಳೆ ಉತ್ಪಾದನೆ + ಅಣಬೆ ಬೇಸಾಯ + ಹಂದಿ ಸಾಕಾಣಿಕೆ
- ಬೆಳೆ ಉತ್ಪಾದನೆ + ಮೀನು ಸಾಕಾಣಿಕೆ + ಬಾತುಕೋಳಿ ಸಾಕಾಣಿಕೆ
- ಭತ್ತ + ಮೀನು ಸಾಕಾಣಿಕೆ + ಅಜೋಲ + ಬಾತುಕೋಳಿ ಸಾಕಾಣಿಕೆ
- ಬೆಳೆ ಉತ್ಪಾದನೆ + ಮೀನು ಸಾಕಾಣಿಕೆ + ಕೋಳಿ ಸಾಕಾಣಿಕೆ
- ಬೆಳೆ ಉತ್ಪಾದನೆ + ಹೈನುಗಾರಿಕೆ + ಕೋಳಿಸಾಕಾಣಿಕೆ
- ಬೆಳೆ ಉತ್ಪಾದನೆ + ಮೀನು ಸಾಕಾಣಿಕೆ