• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮಾಹಿತಿ

ಕೃಷಿ ಮಾಹಿತಿ : ಮೆಣಸಿನಕಾಯಿ ಬೆಳೆಯಬೇಕೆ? ಹಾಗಾದ್ರೆ ತಪ್ಪದೇ ಈ ಮಾಹಿತಿ ತಿಳಿಯಿರಿ

Mohan Shetty by Mohan Shetty
in ಮಾಹಿತಿ
Krishi
0
SHARES
0
VIEWS
Share on FacebookShare on Twitter

ಪ್ರಮುಖ ವಾಣಿಜ್ಯ ಬೆಳೆಗಳಲ್ಲೊಂದಾದ(Commercial Crop) ಮೆಣಸಿನಕಾಯಿ(Chilly) ಒಂದು ಪ್ರಮುಖ ಬೆಳೆಯಾಗಿ ಪ್ರಸಿದ್ಧಿ ಹೊಂದಿದೆ.

ಪ್ರಸ್ತುತ ಮೆಣಸಿನಕಾಯಿ ಉತ್ಪಾದನೆಯಿಂದ ಸಾಕಷ್ಟು ಲಾಭ ಲಭಿಸುತ್ತಿರುವುದು ಗಮನಾರ್ಹ.

ಸುಮಾರು 700 ವರ್ಷಗಳ ಹಿಂದೆ ರೆಡ್ ಇಂಡಿಯನ್ನರು ಮೆಣಸಿನಕಾಯಿಯನ್ನು ಬಳಸುತ್ತಿದ್ದರು. ‘ಚಿಲ್ಲಿ’ ಎಂಬ ಶಬ್ದವು ಮೆಕ್ಸಿಕೋ ದೇಶದ ‘ನೌಹಾಟ್ಲಿ’ ಎಂಬ ಭಾಷೆಯಿಂದ ಬಂದಿದೆಯೆಂದು ಹೇಳಲಾಗಿದೆ.

Farming Information about chilly crop

ಕೊಲಂಬಸ್(Columbus) 1492 ರಲ್ಲಿ ಮೆಣಸಿನಕಾಯಿಯನ್ನು ಜಗತ್ತಿಗೆ ಪರಿಚಯಿಸಿದರು. ದಕ್ಷಿಣ ಮತ್ತು ಮಧ್ಯ ಅಮೆರಿಕ,ಮೆಕ್ಸಿಕೋ, ಪೆರು, ಬೊಲಿವಿಯಾ ಮುಂತಾದ ದೇಶಗಳು ಮೆಣಸಿನಕಾಯಿಯ ತವರು ಮನೆ ಎನಿಸಿಕೊಂಡಿವೆ.

Next

ಈ ಲೇಖನದಲ್ಲಿ ಮೆಣಸಿನ ಕಾಯಿ ಬೆಳೆಯಲ್ಲಿ ಸುಧಾರಿತ ಕ್ರಮಗಳು, ಅದರ ತಳಿಗಳು ಹಾಗೂ ರೋಗಗಳ ಬಗ್ಗೆ ತಿಳಿದುಕೊಳ್ಳೋಣ. ರಾಜ್ಯದಲ್ಲಿ ಮೆಣಸಿನ ಕಾಯಿ ಪ್ರಮುಖ ವಾಣಿಜ್ಯ ಸಾಂಬಾರ ಬೆಳೆಗಳಲ್ಲಿ ಒಂದಾಗಿದೆ. ಇದನ್ನು ನೀರಾವರಿ ಮತ್ತು ಮಳೆಯಾಶ್ರಿತ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ.

https://fb.watch/e8QjnPJBBg/u003c/strongu003eu003cbru003e
ರಾಜ್ಯದಲ್ಲಿ ಮುಖ್ಯವಾಗಿ ಈ ಬೆಳೆಯನ್ನು ಬೆಳಗಾವಿ, ಧಾರವಾಡ, ಗುಲ್ಬರ್ಗ, ಶಿವಮೊಗ್ಗ, ಕೋಲಾರ, ಮೈಸೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ. ನೀರು ಚೆನ್ನಾಗಿ ಬಸಿದು ಹೋಗುವ ಫಲವತ್ತಾದ ಗೋಡುಮಣ್ಣು ಮೆಣಸಿನ ಬೆಳೆಗೆ ಸೂಕ್ತ.
https://vijayatimes.com/bjp-slams-congress-siddaramaiah/

ಆದರೂ ಮರಳು ಮಿಶ್ರಿತ ಕಪ್ಪು ಮತ್ತು ಕೆಂಪು ಗೋಡು ಮಣ್ಣಿನಲ್ಲಿಯೂ ಉತ್ತಮವಾಗಿ ಬೆಳೆಯುತ್ತದೆ. ಮೆಣಸಿನಕಾಯಿ ಉಷ್ಣ ಮತ್ತು ಸಮಶೀತೋಷ್ಣ ವಲಯದ ಬೆಳೆಯಾಗಿದೆ. ಸಮುದ್ರ ಮಟ್ಟದಿಂದ ಸುಮಾರು 1500 ಮೀ. ಎತ್ತರದ ಪ್ರದೇಶಗಳಲ್ಲಿಯೂ ಚೆನ್ನಾಗಿ ಬೆಳೆಯುತ್ತದೆ.

Farming Information

ನೀರಾವರಿ ಹಾಗೂ ಮಳೆಯಾಶ್ರಿತ ಪ್ರದೇಶಗಳಲ್ಲಿ ಈ ಬೆಳೆಯನ್ನು ಲಾಭದಾಯಕವಾಗಿ ಬೆಳೆಯಬಹುದು. ಈ ಬೆಳೆಗೆ ವಾರ್ಷಕವಾಗಿ 600 ರಿಂದ 1200 ಮೀ. ಮಳೆಯ ಅವಶ್ಯಕತೆಯಿದೆ.

ಬಿತ್ತನೆಯ ಕಾಲವನ್ನು 3 ಗುಂಪುಗಳನ್ನಾಗಿ ವಿಂಗಡಿಸಬಹುದು. ಮೇ-ಜೂನ್ ನಲ್ಲಿ ಮಳೆಯಾಶ್ರಿತವಾಗಿ ಬೆಳೆಯಬಹುದು. ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ನೀರಾವರಿ ಮೂಲಕ ಬೆಳೆಯಬಹುದಾಗಿದೆ.


ಜನವರಿ-ಫೆಬ್ರವರಿ ಕಾಲದಲ್ಲಿ ನೀರಾವರಿ ಮೂಲಕವೇ ಉತ್ತಮ ಬೆಳೆ ಬೆಳೆಯಬಹುದಾಗಿದೆ. ಮೆಣಸಿನ ಬೆಳೆಯ ತಳಿಗಳಾದ ಬ್ಯಾಡಗಿ, ಸಂಕೇಶ್ವರ, ಚಿಂಚೋಳಿ, ಮೈಸೂರು,
ಗೌರೀಬಿದನೂರು ಪ್ರಮುಖವಾಗಿವೆ.

ಇದನ್ನೂ ಓದಿ : https://vijayatimes.com/dks-against-bjp-government/u003c/strongu003eu003cbru003e

ಮೆಣಸಿನ ಸುಧಾರಿತ ತಳಿಗಳು ಎನ್.ಪಿ. 46 ಎ, ಪೂಸಾ-ಜ್ವಾಲಾ, ಜಿ-3, ಜಿ-4
ಡಿ ಹೆಚ್ 7-6-7 ಆಗಿದೆ. ಒಂದು ಹೆಕ್ಟೇರಿಗೆ ಮೆಣಸಿನಕಾಯಿ ಬೆಳೆ ಬೆಳೆಯಲು ಬೇಕಾಗುವ ಸಾಮಾಗ್ರಿಗಳು. ಬಿತ್ತನೆ ಬೀಜ 1250 ಗ್ರಾಂ,
ಕೊಟ್ಟಿಗೆ ಗೊಬ್ಬರ 25-30 ಟನ್, ರಸಗೊಬ್ಬರ ಸಾರಜನಕ ರಂಜಕ ಪೊಟ್ಯಾಷ್ ನೀರಾವರಿಯಲ್ಲಿ 150 : 75: 75 ಕೆ.ಜಿ ಖುಷ್ಕಿಯಲ್ಲಿ 100: 50 50 ಮೆಣಸಿನ ಬೆಳೆ ಬೆಳೆಯಲು ಸಸಿ ಮಡಿ ಮಾಡಬೇಕಾದ ಪ್ರದೇಶವನ್ನು ಆಳವಾಗಿ 2-3 ಬಾರಿ ಉಳುಮೆ ಮಾಡಬೇಕು. ಹೆಂಟೆಗಳನ್ನು ಒಡೆದು, ಭೂಮಿಯನ್ನು ಸಮತಟ್ಟಾಗಿ ಮಾಡಬೇಕು.

ಸಸಿಗಳನ್ನು ಸಿದ್ದ ಪಡಿಸಲು 750 ಸೇಂ.ಮೀ. ಉದ್ದ ಹಾಗೂ 120 ಸೇಂ. ಮೀ ಎತ್ತರದ ಸಸಿಮಡಿಗಳನ್ನು ಸಿದ್ದಪಡಿಸಿಕೊಳ್ಳಬೇಕು.

Chilly - Farming Information about chilly crop

30 ಕೆ.ಜಿ ಚೆನ್ನಾಗಿ ಕಳಿತ ಕೊಟ್ಟಿಗೆ ಗೊಬ್ಬರ, 1/2 ಕೆ.ಜಿ. ಸಂಯುಕ್ತ ಗೊಬ್ಬರವನ್ನು ಪ್ರತೀ ಮಡಿಗೂ ಹಾಕಿ ಚೆನ್ನಾಗಿ ಮಣ್ಣಿನಲ್ಲಿ ಬೆರೆಸಬೇಕು. ಬೇಸಿಗೆಯಲ್ಲಿ ಮೊಳಕೆ ಬರುವವರೆಗೂ ನೆರಳನ್ನು ಒದಗಿಸಬೇಕು. ಪ್ರತಿನಿತ್ಯ ಸಾಯಂಕಾಲ ನೀರು ಹಾಯಿಸಬೇಕು.

ಬಿತ್ತನೆ ಮಾಡಿದ ಬೀಜಗಳು ಒಂದು ವಾರದಲ್ಲಿ ಮೊಳಕೆಯೊಡೆದು 4-6 ವಾರಗಳಲ್ಲಿ ನಾಟಿಗೆ ಸಿದ್ದವಾಗುತ್ತದೆ. ಭೂಮಿಯನ್ನು ಆಳವಾಗಿ 2-3 ಬಾರಿ ಉಳುಮೆ ಮಾಡಬೇಕು. ಹೆಕ್ಟೇರಿಗೆ ಬೇಕಾದ ಕೊಟ್ಟಿಗೆ ಗೊಬ್ಬರವನ್ನು ಮಣ್ಣಿನಲ್ಲಿ ಚೆನ್ನಾಗಿ ಬೆರೆಸಬೇಕು. ನಂತರ 75 ಸೆಂ.ಮೀ. ಅಂತರದ ಬದುಗಳನ್ನು ಮಾಡಿ,

ಇದನ್ನೂ ಓದಿ : https://vijayatimes.com/yamagami-tells-the-reason-for-kill/u003c/strongu003eu003cbru003e

ಇದಕ್ಕೆ ಶಿಫಾರಸಿನ ಸಾರಜನಕ, ರಂಜಕ, ಪೊಟ್ಯಾಷ್ ಮಿಶ್ರಣ ಮಾಡಿ, ತೆಳುವಾಗಿ ನೀರು ಹಾಯಿಸಬೇಕು. ಮೆಣಸಿನ ಸಸಿಮಡಿ ಸಿದ್ದಪಡಿಸುವುದಕ್ಕಾಗಿ ಸೂಕ್ತ ಕ್ರಮಗಳನ್ನು ಅನುಸರಿಸಿ. ಕಪ್ಪು ಭೂಮಿಯಲ್ಲಿ 90×90 ಸೇಂ.ಮೀ. ಕೆಂಪು ಭೂಮಿಯಲ್ಲಿ 60×60 ಸೆಂ. ಮೀ. ಅಂತರ.

ಈ ಪ್ರಕಾರ ಗುರುತು ಮಾಡಿದ ಭಾಗದಲ್ಲಿ ಕೊಟ್ಟಿಗೆಗೊಬ್ಬರ, ಅರ್ಧ ಭಾಗ ಸಾರಜನಕ, ರಂಜಕ, ಪೊಟ್ಯಾಷ್ ಗೊಬ್ಬರಗಳನ್ನು ಹಾಕಿ ಚೆನ್ನಾಗಿ ಮಣ್ಣಿನಲ್ಲಿ ಬೆರೆಸಬೇಕು. ಪ್ರತಿ ಗುಣಿಗೂ 2 ಸಸಿಗಳಂತೆ ನಾಟಿ ಮಾಡಬೇಕು. ನೆಟ್ಟ 2-3 ವಾರಗಳ ನಂತರ ಉಳಿದ ಸಾರಜನಕ, ರಂಜಕ, ಪೊಟ್ಯಾಷ್ ಗಳನ್ನು ಮೇಲು ಗೊಬ್ಬರವಾಗಿ ಹಾಕಬೇಕು.

Green - Farming Information about chilly crop

ನೀರಾವರಿ ಅಂತರ ಬೇಸಾಯ ಮಣ್ಣು ಹಾಗೂ ಗುಣಕ್ಕನುಸಾರವಾಗಿ 8-10 ದಿನಗಳಿಗೊಮ್ಮೆ ನೀರು ಹಾಯಿಸಿ ಮೇಲು ಗೊಬ್ಬರ ಹಾಕಬೇಕು. ನಂತರ ಮಣ್ಣು ಹಾಕಿ, ಭೂಮಿಯನ್ನು ಕಳೆಗಳಿಂದ ಮುಕ್ತಗೊಳಿಸಬೇಕು.

ಮೆಣಸಿನ ಬೆಳೆಯ ಕೊಯ್ಲು ಮತ್ತು ಇಳುವರಿ ನಾಟಿ ಮಾಡಿದ 45-50 ದಿನಗಳ ನಂತರ ಹಸಿ ಮೆಣಸಿನಕಾಯಿ ಬಿಡಲು ಪ್ರಾರಂಭಿಸುತ್ತದೆ. 85-95 ನಂತರ ಹಣ್ಣಾದ ಕಾಯಿಗಳನ್ನು ಕೊಯ್ಲು ಮಾಡಬಹುದು. ಮೆಣಸಿನ ಬೆಳೆಯನ್ನು ಇಳುವರಿ ಪ್ರತಿ ಹೆಕ್ಟೇರಿಗೆ ಖುಷ್ಕಿ(ಕ್ವಿ.) ನೀರಾವರಿ ಹಸಿಮೆಣಸು 75 – 100 200-೨೫೦ ಒಣಮೆಣಸು 7 – 10 20 – 25 ಬೆಳೆಯನ್ನು ಪಡೆಯಬಹುದಾಗಿದೆ.
  • ಕುಮಾರ್ ಬೆಂಗಳೂರು
Tags: ChillyCropfarminginformationKrishi

Related News

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ತಡವಾದರೂ ಉತ್ತಮ ಮಳೆಯಾಗಲಿದೆ : ಹವಾಮಾನ ಇಲಾಖೆ ತಜ್ಞರ ಸ್ಪಷ್ಟನೆ
ಪ್ರಮುಖ ಸುದ್ದಿ

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ತಡವಾದರೂ ಉತ್ತಮ ಮಳೆಯಾಗಲಿದೆ : ಹವಾಮಾನ ಇಲಾಖೆ ತಜ್ಞರ ಸ್ಪಷ್ಟನೆ

June 6, 2023
ಪ್ರಮುಖ ಸುದ್ದಿ

200 ಯೂನಿಟ್ ಉಚಿತ ವಿದ್ಯುತ್ ಘೋಷಣೆ ಬೆನ್ನಲ್ಲೇ, ವಿದ್ಯುತ್ ದರ ಏರಿಕೆ ; ಇದರ ಹೊರೆ ಯಾರಿಗೆ..?!

June 5, 2023
ಬಾಡಿಗೆ ಮನೆಯಲ್ಲಿ ಇರುವವರಿಗೆ 200 ಯೂನಿಟ್ ವಿದ್ಯುತ್​​ ಫ್ರೀ ಇದೆಯೇ?
ಪ್ರಮುಖ ಸುದ್ದಿ

ಬಾಡಿಗೆ ಮನೆಯಲ್ಲಿ ಇರುವವರಿಗೆ 200 ಯೂನಿಟ್ ವಿದ್ಯುತ್​​ ಫ್ರೀ ಇದೆಯೇ?

June 3, 2023
ಹಾಲಿನ ಪ್ರೋತ್ಸಾಹಧನ 1.50 ರೂ. ಕಡಿತ ! BAMULನಿಂದ ಆದೇಶ
ಪ್ರಮುಖ ಸುದ್ದಿ

ಹಾಲಿನ ಪ್ರೋತ್ಸಾಹಧನ 1.50 ರೂ. ಕಡಿತ ! BAMULನಿಂದ ಆದೇಶ

June 2, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.