ಇಂದಿನಿಂದ ಅಂದರೆ ಫೆಬ್ರವರಿ 17, 2025ರಿಂದ ಪಾಸ್ಟ್ಯಾಗ್ ನ (Pastag’s) ಹೊಸ ನಿಯಮಗಳು ಜಾರಿಯಾಗಲಿವೆ. ರಾಷ್ಟ್ರೀಯ ಪಾವತಿ ನಿಗಮ (National Payments Corporation) (NPCI) ಜಾರಿಗೊಳಿಸಿರುವ ಹೊಸ ನಿಯಮದ ಅಡಿಯಲ್ಲಿ, ಕಡಿಮೆ ಬ್ಯಾಲೆನ್ಸ್, ಪಾವತಿ ವಿಳಂಬ (Payment delay) ಅಥವಾ ಫಾಸ್ಟ್ಟ್ಯಾಗ್ ಅನ್ನು ಕಪ್ಪುಪಟ್ಟಿ ಅಥವಾ ಬ್ಲ್ಯಾಕ್ ಲಿಸ್ಟ್ಗೆ (Black list) ಸೇರಿಸಿದರೆ ಹೆಚ್ಚುವರಿ ದಂಡವನ್ನು (Penalty) ವಿಧಿಸಲಾಗುತ್ತದೆ. ಫಾಸ್ಟ್ಟ್ಯಾಗ್ನಲ್ಲಿನ ಸಮಸ್ಯೆಗಳಿಂದಾಗಿ ಟೋಲ್ ಪ್ಲಾಜಾಗಳಲ್ಲಿ (Toll Plaza) ವಾಹನಗಳ ದೀರ್ಘ ಸರತಿ ಸಾಲುಗಳನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ. ಟೋಲ್ ಸಂಗ್ರಹವನ್ನು (Toll collection) ಹೆಚ್ಚು ಪಾರದರ್ಶಕ ಮತ್ತು ಸುಗಮವಾಗಿಸುವುದು ಈ ಹೊಸ ವ್ಯವಸ್ಥೆಯ (New system) ಉದ್ದೇಶವಾಗಿದೆ. ಇದರಿಂದ ಟೋಲ್ ಪ್ಲಾಜಾದಲ್ಲಿ (Toll Plaza) ಸಂಚಾರ ದಟ್ಟಣೆಯನ್ನು (Traffic congestion) ತಡೆಗಟ್ಟಬಹುದು ಮತ್ತು ಪ್ರಯಾಣವನ್ನು ಸುಗಮಗೊಳಿಸಬಹುದು. ಈ ಬದಲಾವಣೆಗಳ ಬಗ್ಗೆ ತಿಳಿದಿಲ್ಲದ ಬಳಕೆದಾರರು ಹೆಚ್ಚುವರಿ ಶುಲ್ಕಗಳನ್ನು (Additional charges) ಪಾವತಿಸಬೇಕಾಗಬಹುದು. ಆದ್ದರಿಂದ, ಎಲ್ಲಾ ವಾಹನ ಮಾಲೀಕರು (Vehicle owner) ತಮ್ಮ ಫಾಸ್ಟ್ಟ್ಯಾಗ್ (Fasttag) ಅನ್ನು ಸರಿಯಾಗಿ ನಿರ್ವಹಿಸುವುದು ಮುಖ್ಯವಾಗಿರುತ್ತದೆ.

ಹೊಸ ರೂಲ್ಸ್ (New Rules) ಹೀಗಿವೆ :
1. ಫಾಸ್ಟ್ಟ್ಯಾಗ್ನಲ್ಲಿ ಹಣ ಇರಬೇಕು, ಇಲ್ಲದಿದ್ದರೆ ಟೋಲ್ ಪ್ರವೇಶಕ್ಕೆ (Toll access) ಒಂದು ಗಂಟೆ ಮೊದಲು ಹಣ ಜಮೆ ಮಾಡಿರಬೇಕು. ಟೋಲ್ ಹತ್ತಿರ ಬಂದ್ಮೇಲೆ ರಿಚಾರ್ಜ್ ಮಾಡಿಸೋಣ ಅಂದ್ರೆ ಇನ್ಮೇಲೆ ಆಗಲ್ಲ.
2. ಟೋಲ್ ದಾಟುವ 60 ನಿಮಿಷ ಮೊದಲು ಹಾಗೂ ದಾಟಿದ 10 ನಿಮಿಷಗಳ ಕಾಲ ಫಾಸ್ಟ್ಟ್ಯಾಗ್ ಆಕ್ಟೀವ್ (Fasttag is active) ಇರಬೇಕು. ಒಂದು ವೇಳೆ ಈ ನಿಯಮ ಪಾಲನೆ ಮಾಡದಿದ್ದರೆ, ಟೋಲ್ ಸಿಸ್ಟಮ್ನಲ್ಲಿ (Toll system) ಎರರ್ ಕೋಡ್ 176 ಎಂದು ತೋರಿಸಲಾಗುತ್ತದೆ. ಈ ವೇಳೆ ಪ್ರಯಾಣಿಕರು ದುಪ್ಪಟ್ಟು ಹಣ (Double the money) ಪಾವತಿ ಮಾಡಬೇಕಾಗುತ್ತದೆ
3. ಕೆವೈಸಿ (KYC) ಮಾಡಿರದ ಕಪ್ಟುಪಟ್ಟಿಗೆ ಸೇರಿಸಲಾಗುತ್ತದೆ. ಅಂತಹ ಟ್ಯಾಗ್ನೊಂದಿಗೆ ಬರುವ ವಾಹನಕ್ಕೆ ದುಪ್ಪಟ್ಟು ಸುಂಕ ವಿಧಿಸಲಾಗುತ್ತದೆ.
4.ಒಂದು ವೇಳೆ ವಾಹನ ಟೋಲ್ ಗೇಟ್ ದಾಟಿದ 15 ನಿಮಿಷಗಳ ನಂತರ ಫಾಸ್ಟ್ಟ್ಯಾಗ್ ಖಾತೆಯಿಂದ (Fasttag account) ಹಣ ಕಡಿತವಾದರೆ ಅದಕ್ಕೆ ವಾಹನ ಸವಾರರು ಹೆಚ್ಚಿನ ಶುಲ್ಕವನ್ನು ವಿಧಿಸಬೇಕಾಗುತ್ತದೆ.
5. ಟೋಲ್ಗೇಟ್ನಲ್ಲಿ ಹಣ ಕಡಿತ ವಿಳಂಬವಾದರೆ ಅದಕ್ಕೆ ಟೋಲ್ ಆಪರೇಟರ್ (Toll Operator) ಅನ್ನೇ ಹೊಣೆಯನ್ನಾಗಿ ಮಾಡಲಾಗುತ್ತದೆ. ತಪ್ಪು ಶುಲ್ಕ (Wrong charge) ಮತ್ತು ಹೆಚ್ಚುವರಿ ಹಣ ಕಡಿತಕ್ಕೆ (For additional deductions) ಸಂಬಂಧಿಸಿ ಬಳಕೆದಾರರು 15 ದಿನಗಳ ಬಳಿಕವಷ್ಟೇ ದೂರು ಸಲ್ಲಿಸಬಹುದು.
ಪ್ರಯಾಣ ಮಾಡೋದಾದ್ರೆ ಇದನ್ನ ಮಿಸ್ ಮಾಡಬೇಡಿ..!
- ಫಾಸ್ಟ್ಟ್ಯಾಗ್ನ ಬ್ಯಾಲೆನ್ಸ್ ಎಷ್ಟಿದೆ ಎಂಬುದನ್ನು ಚೆಕ್ ಮಾಡಿಕೊಳ್ಳುತ್ತಿರಿ
2.ಬ್ಲ್ಯಾಕ್ಲಿಸ್ಟ್ಗೆ ಸೇರುವ ಮುನ್ನವೇ ಅಗತ್ಯವಾದ ಬ್ಯಾಲೆನ್ಸ್ ಇರಲಿ.
3.ಆಗಾಗ ಕೆವೈಸಿ ಅಪ್ಡೇಟ್ ಮಾಡುವುದನ್ನು ಮರೆಯಬೇಡಿ
4.ಅಪ್ಡೇಟ್ ಮಾಡೋದ್ರಿಂದ ಫಾಸ್ಟ್ಟ್ಯಾಗ್ ಬ್ಲ್ಯಾಕ್ಲಿಸ್ಟ್ಗೆ ಸೇರಲ್ಲ
5. ದೀರ್ಘಪ್ರಯಾಣದ ವೇಳೆ ಫಾಸ್ಟ್ಟ್ಯಾಗ್ ಹಣದ ಬಗ್ಗೆ ಜಾಗೃತೆ ಇರಲಿ