Bengaluru : ತನ್ನ ಮಗಳಿಗೆ ಆಹಾರ ನೀಡಲು ಹಣವಿಲ್ಲ ಎಂದು 45 ವರ್ಷದ ಟೆಕ್ಕಿಯೊಬ್ಬ ತನ್ನ ಎರಡು ವರ್ಷದ ಮಗಳನ್ನು ಕೊಂದಿದ್ದಾನೆ ಎಂದು ಬೆಂಗಳೂರು ಪೊಲೀಸರು(Bengaluru Police) ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಮಗಳನ್ನು ಕೊಂದ ನಂತರ ಟೆಕ್ಕಿ ನೀರಿನಲ್ಲಿ ಮುಳುಗಿ ಆತ್ಮಹತ್ಯೆಗೆ(Suicide) ಯತ್ನಿಸಿದ್ದಾನೆ. ಆದರೆ ಆರೋಪಿ ಬದುಕುಳಿದಿದ್ದಾನೆ.
ಕೋಲಾರ(Kolar) ತಾಲೂಕಿನ ಕೆಂದಟ್ಟಿ ಗ್ರಾಮದ ಕೆರೆಯಲ್ಲಿ ಶನಿವಾರ ರಾತ್ರಿ ಎರಡು ವರ್ಷದ ಮಗುವಿನ ಶವ ಪತ್ತೆಯಾಗಿದೆ.
ಅಲ್ಲದೆ, ಕೆರೆಯ ದಂಡೆಯಲ್ಲಿ ನೀಲಿ ಬಣ್ಣದ ಕಾರು ಕೂಡ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದರಿಂದ ಅನುಮಾನಗೊಂಡ ಸ್ಥಳೀಯರು ಕೋಲಾರ ಗ್ರಾಮಾಂತರ ಠಾಣೆಗೆ ಮಾಹಿತಿ ನೀಡಿದ್ದಾರೆ. ತನಿಖೆಯ ನಂತರ ಪೊಲೀಸರು ಮಗಳ ಕೊಲೆ ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ : https://vijayatimes.com/dr-vishnuvardhan-memorial/
ಆರೋಪಿಯನ್ನು ಗುಜರಾತ್ ಮೂಲದ ರಾಹುಲ್ ಪರ್ಮಾರ್ ಎಂದು ಗುರುತಿಸಲಾಗಿದ್ದು, ಎರಡು ವರ್ಷಗಳ ಹಿಂದೆ ಪತ್ನಿ ಭವ್ಯಾ ಅವರೊಂದಿಗೆ ಬೆಂಗಳೂರಿಗೆ ಬಂದು ನೆಲೆಸಿದ್ದನು.
ಕಾರಿನಲ್ಲಿ ಮಗಳನ್ನು ಕರೆದುಕೊಂಡು ಬಂದು ತನ್ನ ಬಳಿ ಹಣವಿಲ್ಲ, ಊಟ ಕೊಡಲು ಸಾಧ್ಯವಾಗದೆ ಆಕೆಯನ್ನು ಕೊಂದಿದ್ದೇನೆ ಎಂದು ರಾಹುಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಆರೋಪಿ ಮತ್ತು ಆತನ ಮಗಳು ನವೆಂಬರ್ 15 ರಂದು ನಾಪತ್ತೆಯಾಗಿದ್ದು, ನಂತರ ಮಗುವಿನ ತಾಯಿ ಭವ್ಯಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪೊಲೀಸರ ಪ್ರಕಾರ, ಪರ್ಮಾರ್ ಕಳೆದ 6 ತಿಂಗಳಿನಿಂದ ನಿರುದ್ಯೋಗಿಯಾಗಿದ್ದು, ಆತ ಬಿಟ್ಕಾಯಿನ್ ವ್ಯವಹಾರದಲ್ಲಿ ಆರ್ಥಿಕ ನಷ್ಟವನ್ನು ಅನುಭವಿಸಿದ್ದಾನೆ ಎನ್ನಲಾಗಿದೆ.

ಇನ್ನು ಪರ್ಮಾರ್ ತಮ್ಮ ಮನೆಯಲ್ಲಿ ಚಿನ್ನಾಭರಣ ಕಳ್ಳತನವಾಗಿರುವ ಬಗ್ಗೆ ಬೆಂಗಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದನು. ಠಾಣೆಗೆ ಹೋಗಿ ವಿಚಾರಿಸುತ್ತಿದ್ದನು.
ದೂರಿನನ್ವಯ ಪೊಲೀಸರು ತನಿಖೆ ನಡೆಸಿದಾಗ ರಾಹುಲ್ ಅವರೇ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕದ್ದು ಗಿರವಿ ಇಟ್ಟಿರುವುದು ತಿಳಿದು ಬಂದಿದೆ.
ಇದನ್ನೂ ಓದಿ : https://vijayatimes.com/dr-vishnuvardhan-memorial/
ಪೊಲೀಸರು ಆತನ ವಿರುದ್ದ ನಕಲಿ ಕಳ್ಳತನ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಭಯದಿಂದ ರಾಹುಲ್ ಏನಾದರೂ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಪೊಲೀಸರು ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
- ಮಹೇಶ್.ಪಿ.ಎಚ್