ಬೆಂಗಳೂರು, ಡಿ. 04: ಸತತ ಮೂರನೇ ಬಾರಿಗೆ ಕೇಂದ್ರೀಯ ಬ್ಯಾಂಕ್ ಪ್ರಮುಖ ದರಗಳಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂಬುದಾಗಿ ನಿರ್ಧರಿಸಿದೆ. ಹಣದುಬ್ಬರದ ಏರಿಕೆಯ ನಡುವೆ, ಬಹುತೇಕ ಆರ್ಥಿಕ ತಜ್ಞರು ನಿರೀಕ್ಷಿಸಿದಂತೆ ಹಣಕಾಸು ನೀತಿಯಲ್ಲಿ ಯಥಾಸ್ಥಿತಿ ಕಂಡು ಬಂದಿದೆ. ಕೇಂದ್ರ ಬ್ಯಾಂಕ್ ನೀತಿಯಲ್ಲಿ ಹೊಂದಾಣಿಕೆಯನು ಕಾಯ್ದುಕೊಂಡಿದೆ.
‘ಆರ್‌ಬಿಐ ಸತತ ಮೂರನೇ ಬಾರಿ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಬೆಂಚ್ ಮಾರ್ಕ್ ಸಾಲ ದರ ಶೇ. 04ರ ಬದಲಾವಣೆಯಾಗಿಲ್ಲ’ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.
ಈ ಘೋಷಣೆಯ ನಂತರ ರೆಪೊ ದರ ಮತ್ತು ರಿವರ್ಸ್ ದರ ಕ್ರಮವಾಗಿ ಶೇ.4 ಮತ್ತು 3. 35ರಷ್ಟಿದ್ದು, ಎಫ್ ಡಿಗಳ ಮೇಲಿನ ಬಡ್ಡಿ ದರಗಳನ್ನು ಬ್ಯಾಂಕುಗಳು ಇನ್ಮುಂದೆ ಕಡಿತಗೊಳಿಸದಿರುವುದರಿಂದ, ನಿಶ್ಚಿತ ಠೇವಣಿ (ಎಫ್‌ಡಿ) ಹೂಡಿಕೆದಾರರಿಗೆ ಶುಭ ಸುದ್ದಿಯಾಗಿದೆ. ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) 2020ರ ಸೆಪ್ಟೆಂಬರ್ ನಿಂದ ಎಫ್‌ಡಿಗಳ ಮೇಲಿನ ಬಡ್ಡಿ ದರವನ್ನು ಕಡಿಮೆ ಮಾಡುವುದಿಲ್ಲ. ಪ್ರಸ್ತುತ ಎಸ್‌ಬಿಐ 7 ದಿನಗಳಿಂದ 10 ವರ್ಷಗಳ ಅವಧಿಯಲ್ಲಿ ಪಕ್ವವಾಗಿರುವ ಎಫ್‌ಡಿಗಳ ಮೇಲೆ ಶೇ. 2. 9ರಿಂದ ಶೇ. 5. 4ರ ಬಡ್ಡಿ ದರವನ್ನು ನೀಡುತ್ತಿದೆ. ಇವು 10 ಸೆಪ್ಟೆಂಬರ್ 2020ರಿಂದ ಜಾರಿಗೆ ಬಂದಿದೆ. ಇ ಎಂ ಐ ದರಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ.