Beijing: ಈ ಹಿಂದೆ ಚೀನಾ ಹಬ್ಬಿಸಿದ್ದ Covid-19 ಹಾನಿಯಿಂದ ಜಗತ್ತು ಇನ್ನೂ ಸರಿಯಾಗಿ ಚೇತರಿಸಿಕೊಂಡಿಲ್ಲ. ಅನೇಕ ದೇಶಗಳು ಹೊರ ಬರಲಾಗದೇ ಈಗಲೂ ಪರದಾಡುತ್ತಿವೆ. ಇದೀಗ ಅದೇ ವೈರಸ್ಗಳ ತವರೂರು ಚೀನಾದಲ್ಲಿ ಮತ್ತೊಂದು ಅಪಾಯಕಾರಿ ವೈರಸ್ (Virus) ಪತ್ತೆಯಾಗಿದೆ. ಅದೂ ಸಹ ಕೊರೊನಾದಂತೆ (Corona) ಬಾವಲಿಗಳಿಂದಲೇ ಹುಟ್ಟಿಕೊಂಡಿದ್ದು, ಮನುಷ್ಯರ ಮೇಲೂ ದಾಳಿ (Attack on humans) ಮಾಡಲಿದೆ ಅಂತಾ ಸಂಶೋಧಕರು (Researchers) ಎಚ್ಚರಿಸಿದ್ದಾರೆ.
ಕೋವಿಡ್ ಬಳಿಕ ಮತ್ತೊಂದು ಮಹಾಮಾರಿ ಆತಂಕ ಶುರುವಾಗಿದ್ದು, ಕೋವಿಡ್ ವೈರಸ್ (Covid virus) ಪತ್ತೆಯಾಗಿದ್ದ ಅದೇ ಚೀನಾದಲ್ಲಿ (China) ಇದೀಗ ಬಾವಲಿ ಮೂಲಕ ಮನಷ್ಯರಿಗೆ ಹರಡುವ HKU5-CoV-2 ಎಂಬ ವೈರಾಣು ಪತ್ತೆಯಾಗಿದೆ.ಹೌದು COVID-19 ಸಾಂಕ್ರಾಮಿಕ ರೋಗಕ್ಕೆ (Infectious disease) ಕಾರಣವಾದ ವೈರಸ್ನಂತೆಯೇ, ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಅಪಾಯವನ್ನು ಹೊಂದಿರುವ ಹೊಸ ಕೊರೊನಾವೈರಸ್ ಚೀನಾದಲ್ಲಿ ಪತ್ತೆಯಾಗಿದೆ.ಈ ಬಗ್ಗೆ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (SCMP) ವರದಿ ಮಾಡಿದ್ದು, HKU5-CoV-2 ಎಂಬ ಹೊಸ ವೈರಸ್ ಅನ್ನು ಬ್ಯಾಟ್ವುಮನ್ (Batwoman) ಎಂದು ಕರೆಯಲ್ಪಡುವ ಪ್ರಸಿದ್ಧ ವಿಜ್ಞಾನಿ ಶಿ ಝೆಂಗ್ಲಿ (The famous scientist Shi Zhengli) ನೇತೃತ್ವದ ವೈರಾಲಜಿಸ್ಟ್ಗಳ (Virologists) ತಂಡವು ಕಂಡುಹಿಡಿದಿದೆ.

ಈ ಹೊಸ ವೈರಸ್ SARS CoV-2 ಗೆ ಹೋಲುತ್ತದೆ ಎಂದು ಚೀನಾದ ಸಂಶೋಧಕರು (Chinese researchers) ಕಂಡುಕೊಂಡಿದ್ದು, ಇದು ಕೂಡ ಕೋವಿಡ್ ಸಾಂಕ್ರಾಮಿಕ ರೋಗಕ್ಕೆ (Covid pandemic) ಕಾರಣವಾದ ವೈರಸ್ (Virus) ಎನ್ನಲಾಗಿದೆ. ಇದು ಕೋವಿಡ್ ಮಾಡಿದಂತೆಯೇ ACE2 ಎಂಬ ಮಾನವ ಜೀವಕೋಶಗಳಿಗೆ ನುಸುಳಬಹುದು ವರದಿಯಲ್ಲಿ ಉಲ್ಲೇಖಿಸಿದೆ.ಮಿನ್ನೇಸೋಟ ವಿಶ್ವವಿದ್ಯಾಲಯದಲ್ಲಿ (University of Minnesota) ಸಾಂಕ್ರಾಮಿಕ ರೋಗ ತಜ್ಞ ಡಾ. ಮೈಕೆಲ್ ಓಸ್ಟರ್ಹೋಮ್ (Infectious Disease Specialist Dr. Michael Osterholm) , ಚೀನಿ ಸಂಶೋಧಕರ (Chinese researchers) ವರದಿಯು ಹೊಸ ವೈರಸ್ (A new virus) ಬಗ್ಗೆ ಉತ್ಪ್ರೇಕ್ಷೆಯನ್ನು ಹೊರಹಾಕಿದೆ. ಅದಾಗ್ಯೂ ಕೋವಿಡ್–19 ನಂತರ ಜನರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿದೆ. ಹೀಗಾಗಿ ಹೊಸ ವೈರಸ್ ಯಾವುದೇ ಹಾನಿ ಮಾಡದು ಎಂದಿದ್ದಾರೆ. ಇನ್ನು HKU5-CoV-2 ಸದ್ಯ ಯಾವುದೇ ಅಪಾಯವನ್ನು ತೋರುತ್ತಿಲ್ಲ. ಭವಿಷ್ಯದ ಸಾಂಕ್ರಾಮಿಕ ರೋಗಗಳ ತಡೆಗಾಗಿ ಸಂಶೋಧನಾಯಲದಯಲ್ಲಿ ಕಣ್ಗಾವಲು ಇಟ್ಟಿದ್ದು, ಈ ಕುರಿತು ಸಂಶೋಧನೆ ಸಾಗಿದೆ ಎಂದಿದ್ದಾರೆ.