Rajasthan : ಭಾರತೀಯ ಮಹಿಳಾ ಬಾಡಿ ಬಿಲ್ಡರ್ ಪ್ರಿಯಾ ಸಿಂಗ್ (Female bodybuilder Priya Singh) ರವರು ಥಾಯ್ಲೆಂಡ್ ನ ಪಟ್ಟಾಯದಲ್ಲಿ ನಡೆದ 39ನೇ ಅಂತಾರಾಷ್ಟ್ರೀಯ ಮಹಿಳಾ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು,ಇಡೀ ಭಾರತೀಯ ಮಹಿಳಾ ಸಮಾಜವೇ ಹೆಮ್ಮೆ ಪಡುವಂತಹ ಸಾಧನೆಯನ್ನು ಮಾಡಿದ್ದಾರೆ.

ಇದೀಗ ಪುರುಷರಷ್ಟೇ ಸಮಾನವಾಗಿ ಎಲ್ಲಾ ಕ್ಷೇತ್ರದಲ್ಲೂ ಮುಂದಿರುವ ಮಹಿಳೆಯರು ”ಹೆಣ್ಮಕ್ಕಳೇ ಸ್ಟ್ರಾಂಗು ಗುರು” ಎಂಬ ಮಾತನ್ನು ಪದೇ ಪದೇ ಸಭೀತು ಮಾಡುತ್ತಿರುವುದು ಹೆಮ್ಮೆಯ ಸಂಗತಿ.
ಪ್ರಿಯಾ ಸಿಂಗ್ (Female bodybuilder Priya Singh) ಇವರು ಮೂಲತಃ ರಾಜಸ್ಥಾನದ ಬಿಕಾನೇರ್ ನವರು. ಪ್ರಿಯಾ ಅವರಿಗೆ ತಮ್ಮ 8ನೇ ವಯಸ್ಸಿನಲ್ಲೇ ಕುಟುಂಬಸ್ಥರು ವಿವಾಹ ಮಾಡಿಕೊಟ್ಟರು.
ಆದರೆ ಮದುವೆಯ ನಂತರ ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ಹೇಳಿಕೊಳ್ಳುವ ರೀತಿಯಲ್ಲಿ ಇರಲ್ಲಿಲ್ಲ. ಅವರು ಕೆಲಸಕ್ಕೆ ಹೋಗಲೇಬೇಕಾದ ಅನಿವಾರ್ಯ ಎದುರಾಯಿತು.
ಆದ್ದರಿಂದ ಕೆಲಸಕ್ಕಾಗಿ ಜಿಮ್ ಸಂಸ್ಥೆಗೆ ಅರ್ಜಿ ಸಲ್ಲಿಸಿದರು. ಅವರ ಚುರುಕುತನ ಹಾಗೂ ಆಸಕ್ತಿಯನ್ನು ಕಂಡು ಜಿಮ್ ನಲ್ಲಿ ಕೆಲಸವನ್ನು ನೀಡಲಾಯಿತು.
ಇದನ್ನೂ ಓದಿ : https://vijayatimes.com/women-murder-in-chattisgarh/
ಜಿಮ್ ತರಬೇತಿಗೆ ಬರುತ್ತಿದ್ದವರನ್ನು ನೋಡಿ ತಾನೂ ಜಿಮ್ಗೆ ಸೇರಬೇಕು ಎಂಬ ಹಂಬಲದೊಂದಿಗೆ ತರಭೇತಿ ಪಡೆಯಲು ಆರಂಭಿಸಿದರು. ಅಲ್ಲಿಂದ ಅವರ ಜೀವನವೇ ಬದಲಾಗಲು ಶುರುವಾಯಿತು.
ಇದೀಗ ರಾಜಸ್ಥಾನದ ಯಶಸ್ವಿ ಬಾಡಿ ಬಿಲ್ಡರ್ ಮಾತ್ರವಲ್ಲದೆ, ಬಾಡಿ ಬಿಲ್ಡರ್ ತರಭೇತುದಾರರು ಕೂಡ ಆಗಿದ್ದಾರೆ.
2018 ಮತ್ತು 2019 ಹಾಗೂ 2020ರಲ್ಲಿ ಮಿಸ್ ರಾಜಸ್ಥಾನ ಪ್ರಶಸ್ತಿಯನ್ನು(Miss Rajasthan Award) ಕೂಡ ಮುಡಿಗೇಡಿರುವ ಇವರು, ಎರಡು ಮಕ್ಕಳ ತಾಯಿಯಾಗಿದ್ದಾರೆ.
ಪ್ರಿಯಾ ಸಿಂಗ್ ಅವರು, ತಮ್ಮ ಕಠಿಣ ಪ್ರಯತ್ನದಿಂದಾಗಿ ತಮ್ಮನ್ನು ಇಡೀ ದೇಶದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಇವರ ಕಥೆ ಕೇಳಿದರೆ ಎಂತಹವರಿಗಾದರೂ ಅವರ ಮೇಲೆ ಅಭಿಮಾನ ಹೆಚ್ಚಾಗಬಹುದು.

ಮತ್ತು ಉತ್ತೇಜನಗೊಳ್ಳಬಹುದು . ಆದರೆ, ಅವರು ದೇಶಕ್ಕಾಗಿ ಚಿನ್ನದ ಪದಕ ತಂದರೂ ಕೂಡ ಅವರನ್ನು ನಿರ್ಲಕ್ಷಿಸಿರುವುದು ಬೇಸರದ ಸಂಗತಿ.
ಕಾರಣ ಏನಂದ್ರೆ, ಅವರು ದಲಿತ ಜಾತಿಗೆ ಸೇರಿದವರು ಹಾಗೂ ಅಸ್ಪಷ್ಯರು ಎಂಬುದು. ಇದು ನಮ್ಮ ದೇಶದ ದುರಂತ ಎಂದರೇ ತಪ್ಪಾಗಲಾರದು.
ಜಾತಿಯ ಕಾರಣಕ್ಕೆ ಪ್ರತಿಭೆಯನ್ನು ಪ್ರೋತ್ಸಾಹಿಸದೆ ಇರುವುದು ನಿಜಕ್ಕೂ ಬೇಸರದ ಸಂಗತಿ.
ಇಂದು ಕ್ರೀಡೆಯಲ್ಲಿ ಮೀಸಲಾತಿ ಬೇಕು ಎಂದು ಕೇಳಿದರೆ, ನಗೆಪಾಟಲು ಮಾಡುವ ಅವಿವೇಕಿಗಳು ಇನ್ನೂ ನಮ್ಮ ದೇಶದಲ್ಲಿ ಕಾಣಬಹುದಾಗಿದೆ.
ಇದನ್ನೂ ಓದಿ : https://vijayatimes.com/covid19-vaccination-3rd-dose/
ಸಾಮಾಜಿಕ ಸಮಾನತೆ ಎಂದರೇನು ಎಂಬುದನ್ನೇ ತಿಳಿಯದ ಅಜ್ಞಾನಿಗಳಿಂದಾಗಿ ಇಂದು ಶತಶತಮಾನಗಳಿಂದ ಜಾತಿ ಆಚರಣೆಯಿಂದ ನೊಂದಿರುವ ಎಸ್ ಸಿ/(SC) ಎಸ್ ಟಿ(ST) ಸಮುದಾಯ ಅವಮಾನಕ್ಕೀಡಾಗುತ್ತಲೇ ಇರುವುದು ಹೊಸ ವಿಷಯವೇನಲ್ಲ.
ಪ್ರಿಯಾ ಸಿಂಗ್ ಅವರಿಗೆ ಕನಿಷ್ಠ ಗೌರವ ಸೂಚಿಸುವ ಕೆಲಸ ಕೂಡ ಆಗಿಲ್ಲ,
ಸಾಮಾಜಿಕ ಜಾಲತಾಣಗಳಲ್ಲಿ (Social media) ಪ್ರಜ್ಞಾವಂತರು ಸಾಕಷ್ಟು ಪೋಸ್ಟ್ ಗಳನ್ನು ಹಾಕಿ ಶುಭಾ ಹಾರೈಸುವ ಜೊತೆಗೆ ಪ್ರಶ್ನಿಸುತ್ತಿದ್ದಾರೆ.
ರಾಷ್ಟ್ರಮಟ್ಟದ ಮಾಧ್ಯಮಗಳು ಪ್ರಿಯಾ ಸಿಂಗ್ ಅವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಇದಕ್ಕೆ ಮುಖ್ಯ ಕಾರಣ ಜಾತಿ ಅಸಮಾನತೆ ಅನ್ನುವ ಆಕ್ರೋಶದ ಮಾತುಗಳು ಕೇಳಿ ಬರುತ್ತಿವೆ.
ಇದನ್ನೂ ಓದಿ : https://vijayatimes.com/bangalore-mysore-expressway-accidents/
ಜಾತಿ ಪೀಡೆಗಳಿಗೆ ತಕ್ಕ ಉತ್ತರ ಶೀಘ್ರವೇ ಸಿಗಲಿದೆ ಎಂಬ ಆಕ್ರೋಶದ ಧ್ವನಿ ಎಲ್ಲೆಡೆ ವ್ಯಕ್ತವಾಗುತ್ತಿದೆ.
ಒಟ್ಟಾರೆಯಾಗಿ ಪ್ರತಿಭಾವಂತರನ್ನು ಜಾತಿ ಹೆಸರಿನಲ್ಲಿ ತಾರತಮ್ಯ ಮಾಡುವ, ಸಂಕುಚಿತ ಮನೋಭಾವನೆ ಉಳ್ಳವರು ಇರುವವರೆಗೂ ನಮ್ಮ ದೇಶ ಮಹೋನ್ನತ ಹಂತ ತಲುಪಲು ಕಷ್ಟವಾಗಬಹುದು.
- ಡಯಾನಾ ಹೆಚ್. ಆರ್