ಮೆಂತ್ಯ ಬೀಜಗಳು (Fenugreek seeds) ನಮ್ಮ ಆರೋಗ್ಯಕ್ಕೆ ಉತ್ತಮವಾದ ಜೀವಸತ್ವಗಳು, ಖನಿಜಗಳು ಮತ್ತು ಫೈಬರ್‌ಗಳಿಂದ ತುಂಬಿರುತ್ತವೆ. ಒಂದು ಚಮಚ ಮೆಂತ್ಯ ಬೀಜಗಳಲ್ಲಿ 35 ಕ್ಯಾಲೋರಿಗಳು ಮತ್ತು ಪ್ರೋಟೀನ್‌ಗಳು, ಕಾರ್ಬೋಹೈಡ್ರೇಟ್‌ಗಳು, (Fenugreek is a good home remedy) ಕೊಬ್ಬು, ಮೆಗ್ನೀಸಿಯಮ್ (Magnesium), ಮ್ಯಾಂಗನೀಸ್, ಕಬ್ಬಿಣ, ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಬಿ, ರೈಬೋಫ್ಲಾವಿನ್, ಥಯಾಮಿನ್ (Thiamin), ನಿಯಾಸಿನ್ ಮುಂತಾದ ಹಲವಾರು ಪೋಷಕಾಂಶಗಳಿವೆ.
ತಲೆಹೊಟ್ಟು (Dandruff), ಕೂದಲು ಉದುರುವಿಕೆ ಮತ್ತು ಒಣ ಕೂದಲು ಇತ್ಯಾದಿಗಳಂತಹ ವಿವಿಧ ಕೂದಲಿನ ಸಮಸ್ಯೆಗಳನ್ನು ನಾವೆಲ್ಲರೂ ಎದುರಿಸುತ್ತೇವೆ. ನೀವು ವಿವಿಧ ಶಾಂಪೂಗಳು ಮತ್ತು ಔಷಧಿಗಳನ್ನು ಪ್ರಯತ್ನಿಸಲು ಆಯಾಸಗೊಂಡಿದ್ದರೆ ಕೆಲವು ನೈಸರ್ಗಿಕ ಚಿಕಿತ್ಸೆಗಳನ್ನ (Natural remedies) ನಾವು ಮಾಡಿಕೊಳ್ಳಬೇಕಾಗುತ್ತದೆ.

ಮೆಂತ್ಯ ಬೀಜಗಳು ಪ್ರೋಟೀನ್ ಮತ್ತು ನಿಕೋಟಿನಿಕ್ ಆಮ್ಲವನ್ನು (Nicotinic acid) ಹೊಂದಿರುತ್ತವೆ, ಇದು ನಿಮ್ಮ ಕೂದಲಿನ ಬೇರುಗಳನ್ನು ಬಲಪಡಿಸಲು ಮತ್ತು ಹಾನಿಗೊಳಗಾದ ಕೂದಲು ಕಿರುಚೀಲಗಳನ್ನು ಪುನರ್ನಿರ್ಮಿಸಲು ಸಹಾಯ ಮಾಡುತ್ತದೆ.
ಯಾರಿಗೆ ಸೊಂಟದ ಭಾಗದಲ್ಲಿ ಈಗಾಗಲೇ ಅತಿಯಾದ ಕೊಬ್ಬಿನ ಅಂಶ ಇರುತ್ತದೆ ಅಂತಹವರು ಮೆಂತೆ ಕಾಳು ಗಳನ್ನು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡರೆ ಅವರಿಗೆ ಪ್ರೋಟಿನ್ ಮತ್ತು ಪಾಲಿಫಿನಾಲ್ (Protein and polyphenol) ಸಿಗುತ್ತಾ ಹೋಗುತ್ತದೆ.
ಇದು ನಿರಂತರವಾಗಿ ಸೊಂಟದ ಭಾಗದ ಬೊಜ್ಜಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಜೊತೆಗೆ ದೇಹದಲ್ಲಿ ಟ್ರೈಗ್ಲಿಸರೈಡ್ (Triglyceride) ಪ್ರಮಾಣವನ್ನು ಸಹ ನಿಯಂತ್ರಣ ಮಾಡುತ್ತದೆ. ಮೆಂತ್ಯ ಕಾಳುಗಳು ಇದರಿಂದ ಬೊಜ್ಜು ವಿರೋಧಿ ಎಂದು ಹೇಳಬಹುದು.
ಇದನ್ನು ಓದಿ: ಒಗ್ಗರಣೆಗೆ ಮಾತ್ರವಲ್ಲ; ಉತ್ತಮ ಆರೋಗ್ಯಕ್ಕೆ ಸಾಸಿವೆಯೇ ರಾಮಬಾಣ
ಮೊಳಕೆಯೊಡೆದ ಮೆಂತ್ಯ ಬೀಜಗಳು ಆಂಟಿಆಕ್ಸಿಡೆಂಟ್‌ಗಳಿಂದ (antioxidants) ತುಂಬಿರುತ್ತವೆ, ಇದು ವಯಸ್ಸಾದ ಪ್ರಕ್ರಿಯೆಯನ್ನು ವಿಳಂಬಗೊಳಿಸಲು ಮತ್ತು ನಿಮ್ಮ ಚರ್ಮವನ್ನು ತೇವಗೊಳಿಸಲು ಸಹಾಯ ಮಾಡುತ್ತದೆ. ಮೆಂತೆ ಕಾಳುಗಳು ಆರೋಗ್ಯದ ವಿಚಾರದಲ್ಲಿ ಸಾಕಷ್ಟು ಪ್ರಯೋಜನಕಾರಿ.

ಸ್ವಲ್ಪ ಪ್ರಮಾಣದಲ್ಲಿ ತಿಂದರೂ ಸಹ ಹೊಟ್ಟೆ ತುಂಬಿದ ಅನುಭವ ಕೊಡುತ್ತವೆ. ಈ ಬಗ್ಗೆ ಕೆಲವು ಬೊಜ್ಜಿನಿಂದ ತುಂಬಿದ ಜನರ ಮೇಲೆ ನಡೆದ ಒಂದು ಸಂಶೋಧನೆಯ ಪ್ರಯೋಗ ಮೆಂತ್ಯೆ ಕಾಳುಗಳ ನಾರಿನ ಶಕ್ತಿಯ ವಿಚಾರವನ್ನು ಬಯಲು ಮಾಡಿದೆ.
ಬೆಳಗಿನ ಸಮಯದಲ್ಲಿ ತಿಂಡಿ ತಿನ್ನುವಾಗ ಆಹಾರ ಪದಾರ್ಥಗಳಲ್ಲಿ (Fenugreek is a good home remedy) ಮೆಂತ್ಯ ಕಾಳುಗಳನ್ನು ಬಳಸುವ ಅಭ್ಯಾಸ ಇಟ್ಟುಕೊಂಡರೆ ಕ್ರಮೇಣವಾಗಿ ಹೊಟ್ಟೆ ತುಂಬಿದ ಅನುಭವ ಉಂಟಾಗುತ್ತದೆ. ಇದರಿಂದ ಬೇರೆ ಇಲ್ಲವೇ ಕರಿದ ಆಹಾರ ಪದಾರ್ಥ ಗಳನ್ನು ಸೇವನೆ ಮಾಡಬೇಕು ಎನ್ನುವ ಪ್ರಮೇಯ ಬರುವುದಿಲ್ಲ.