- ಮಧ್ಯಪ್ರಾಚ್ಯದ ಯುದ್ಧ ಪರಿಣಾಮ; ಗೊಬ್ಬರ ಕೊರತೆ ಆತಂಕದ ಹಿನ್ನೆಲೆ ರಾಜ್ಯದ ಮುಂಜಾಗ್ರತಾ ಕ್ರಮ
- ಯೂರಿಯಾ ದುರುಪಯೋಗಕ್ಕೆ ಕಡಿವಾಣ; ರೈತರಿಗೆ ವೈಜ್ಞಾನಿಕ ಕೃಷಿಯ ಬಗ್ಗೆ ಅರಿವು ಮೂಡಿಸಲು ಮುಂದಾದ ಸರ್ಕಾರ
- ಪ್ರತಿ ಎಕರೆಗೆ ಮಿತಿ ನಿಗದಿ; ಅಕ್ರಮ ಮಾರಾಟ ಮತ್ತು ಸಂಗ್ರಹಕ್ಕೆ ಬ್ರೇಕ್ (FID mandatory for purchasing fertilizer)
Bengaluru: ರಾಜ್ಯದಲ್ಲಿ ಇನ್ಮುಂದೆ ರಸಗೊಬ್ಬರ ಖರೀದಿಸಲು ರೈತರು ಫಾರ್ಮರ್ಸ್ ಐಡಿ (FID) ಹೊಂದಿರುವುದು ಕಡ್ಡಾಯವಾಗಲಿದೆ.
ಮಧ್ಯಪ್ರಾಚ್ಯದಲ್ಲಿ (In the Middle East) ನಡೆಯುತ್ತಿರುವ ಯುದ್ಧದಿಂದ ಗೊಬ್ಬರ ತಯಾರಿಕೆಗೆ ಅಗತ್ಯವಾದ ಕಚ್ಚಾ ವಸ್ತುಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಹೆಚ್ಚುತ್ತಿರುವ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ. (FID mandatory for purchasing fertilizer)
ಯೂರಿಯಾ,(Urea) ಡಿಎಪಿ (DAP) ಸೇರಿದಂತೆ ಎಲ್ಲಾ ರೀತಿಯ ರಸಗೊಬ್ಬರಗಳ ಖರೀದಿಗೆ ಈ ನಿಯಮ ಅನ್ವಯವಾಗಲಿದೆ ಎಂದು ಕೃಷಿ ಇಲಾಖೆ ಸ್ಪಷ್ಟಪಡಿಸಿದೆ.

ರೈತರು ವೈಜ್ಞಾನಿಕವಾಗಿ ಗೊಬ್ಬರ ಬಳಕೆ ಮಾಡಬೇಕು ಮತ್ತು ಅತಿಯಾದ ಬಳಕೆಯನ್ನು ನಿಯಂತ್ರಿಸಬೇಕು ಎಂಬ ಉದ್ದೇಶದಿಂದ ಈ ಕ್ರಮವನ್ನು ಜಾರಿಗೆ ತರಲಾಗಿದೆ.
ಕೃಷಿ ಇಲಾಖೆ ಸುಮಾರು 20 ದಿನಗಳ ಹಿಂದೆಯೇ ಈ ಕುರಿತು ಸುತ್ತೋಲೆ ಹೊರಡಿಸಿದ್ದು, ಎಲ್ಲಾ ರೈತರೂ ತಮ್ಮ ಫಾರ್ಮರ್ಸ್ ಐಡಿ ಮಾಡಿಸಿಕೊಳ್ಳುವಂತೆ ಸೂಚಿಸಿದೆ.
ಈ ಐಡಿಯ ಮೂಲಕ ಪ್ರತಿ ರೈತನಿಗೆ ಇರುವ ಜಮೀನು ಎಷ್ಟು, ಯಾವ ಬೆಳೆ ಬೆಳೆಸಲಾಗುತ್ತಿದೆ ಎಂಬ ಮಾಹಿತಿ ಸರ್ಕಾರದ ಡೇಟಾಬೇಸ್‌ನಲ್ಲಿ ಲಭ್ಯವಾಗುತ್ತದೆ.
ಅದನ್ನು ಆಧರಿಸಿ, ಪ್ರತಿ ಎಕರೆಗೆ ಎಷ್ಟು ಗೊಬ್ಬರ ಬೇಕು ಎಂಬುದನ್ನು ಲೆಕ್ಕ ಹಾಕಿ, ಅಷ್ಟೇ ಪ್ರಮಾಣದ ರಸಗೊಬ್ಬರ ವಿತರಣೆ ಮಾಡುವ ಯೋಜನೆ ರೂಪಿಸಲಾಗಿದೆ.
ಇದರಿಂದ ಗೊಬ್ಬರದ ಸಮರ್ಪಕ ಬಳಕೆ ಮತ್ತು ಸಮನಾಗಿ ಹಂಚಿಕೆ ಸಾಧ್ಯವಾಗಲಿದೆ.
ಗೊಬ್ಬರ ತಯಾರಿಕೆಯಲ್ಲಿ ಪ್ರಮುಖ ಪಾತ್ರವಹಿಸುವ ನೈಸರ್ಗಿಕ ಅನಿಲ ಹಾಗೂ ಇತರೆ ಕಚ್ಚಾ ವಸ್ತುಗಳು ಹೆಚ್ಚಾಗಿ ಮಧ್ಯಪ್ರಾಚ್ಯದ ದೇಶಗಳಿಂದ ಬರುತ್ತವೆ.
ವಿಶೇಷವಾಗಿ ಕತಾರ್(Qatar) ಮತ್ತು ಸೌದಿ ಅರೇಬಿಯಾ (Saudi Arabia) ದೇಶಗಳಿಂದ ಸಾಗಣೆ ನಡೆಯುತ್ತದೆ. ಈ ಕಚ್ಚಾ ವಸ್ತುಗಳ ಬಹುಪಾಲು ಹೋರ್ಮುಜ್ ಜಲಸಂಧಿ ಮಾರ್ಗದ ಮೂಲಕ ಭಾರತಕ್ಕೆ ತಲುಪುತ್ತದೆ.
ಆದರೆ ಸದ್ಯದ ಯುದ್ಧ ಪರಿಸ್ಥಿತಿಯಿಂದ ಈ ಮಾರ್ಗದಲ್ಲಿ ಅಡಚಣೆ ಉಂಟಾಗಿರುವುದರಿಂದ ಸರಬರಾಜು ಕಡಿಮೆಯಾಗುವ ಆತಂಕ ಇದೆ.
ಈಗಾಗಲೇ ಅಗತ್ಯ ಮಟ್ಟದ ಗೊಬ್ಬರ ಸಂಗ್ರಹ ಇದ್ದರೂ, ಭವಿಷ್ಯದ ಸಂಕಷ್ಟವನ್ನು ತಪ್ಪಿಸಲು ಸರ್ಕಾರ ಮುಂಜಾಗ್ರತಾ ಕ್ರಮವಾಗಿ ನಿಯಂತ್ರಣಗಳನ್ನು ಜಾರಿಗೆ ತಂದಿದೆ.
ಇನ್ನೊಂದು ಪ್ರಮುಖ ಕಾರಣವೆಂದರೆ ರೈತರು ಯೂರಿಯಾ ಗೊಬ್ಬರವನ್ನು ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಬಳಸುತ್ತಿರುವುದು. ಸಾಮಾನ್ಯವಾಗಿ ಒಂದು ಎಕರೆಗೆ ಒಂದು ಅಥವಾ ಎರಡು ಚೀಲ ಗೊಬ್ಬರ ಸಾಕಾಗುತ್ತದೆ.
ಆದರೆ ಹಲವಾರು ರೈತರು ನಾಲ್ಕು ರಿಂದ ಐದು ಚೀಲಗಳವರೆಗೆ ಬಳಸುತ್ತಿರುವುದು ಕಂಡುಬಂದಿದೆ.
ಇದರಿಂದ ಮಣ್ಣಿನ ಗುಣಮಟ್ಟ ಹಾಳಾಗುವ ಸಾಧ್ಯತೆ ಇದೆ. (FID mandatory for purchasing fertilizer)
ಜೊತೆಗೆ ಕೆಲವರು ಹೆಚ್ಚು ಪ್ರಮಾಣದಲ್ಲಿ ಗೊಬ್ಬರವನ್ನು ಖರೀದಿಸಿ ಕೃತಕ ಅಭಾವ ಸೃಷ್ಟಿಸಿ, ನಂತರ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಘಟನೆಗಳೂ ವರದಿಯಾಗಿವೆ.
ಕೆಲ ಕೈಗಾರಿಕೆಗಳಲ್ಲಿಯೂ ಯೂರಿಯಾದ ಅನಧಿಕೃತ ಬಳಕೆ ಕಂಡುಬಂದಿದೆ.
ಈ ಎಲ್ಲಾ ಅಕ್ರಮಗಳನ್ನು ತಡೆಯಲು ಎಫ್‌ಐಡಿ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ.
ಈ ವರ್ಷ ರಾಜ್ಯಕ್ಕೆ ಒಟ್ಟು ಸುಮಾರು 30 ಲಕ್ಷ ಟನ್ (3 million tons) ವಿವಿಧ ರಸಗೊಬ್ಬರ ಹಂಚಿಕೆ ಮಾಡಲಾಗಿದೆ.
ಇದರಲ್ಲಿ ಸುಮಾರು 35ರಿಂದ 40 ಶೇಕಡಾ ಭಾಗ ಯೂರಿಯಾಗಿದ್ದು, ಅಂದಾಜು 10ರಿಂದ 12 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಲಭ್ಯವಿದೆ.
ಸದ್ಯಕ್ಕೆ 11.4 ಲಕ್ಷ ಟನ್ ಗೊಬ್ಬರ ಸಂಗ್ರಹವಿದ್ದು, ಅದರಲ್ಲಿ 4ರಿಂದ 5 ಲಕ್ಷ ಟನ್ ಯೂರಿಯಾ ಸೇರಿದೆ ಎಂದು ಮೂಲಗಳು ತಿಳಿಸಿವೆ.
ಆದರೂ ಭವಿಷ್ಯದ ಅಗತ್ಯಗಳನ್ನು ಮನಗಂಡು, ಸರ್ಕಾರ ನಿಯಂತ್ರಿತ ವಿತರಣೆಯತ್ತ ಹೆಜ್ಜೆ ಇಟ್ಟಿದೆ.
ಈ ಕ್ರಮದಿಂದ ಗೊಬ್ಬರದ ಸಮರ್ಪಕ ಬಳಕೆ, ಸಮಾನ ವಿತರಣೆ ಮತ್ತು ರೈತರಲ್ಲಿ ವೈಜ್ಞಾನಿಕ ಕೃಷಿ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ನಿರೀಕ್ಷೆಯಿದೆ.
ಇದನ್ನು ಓದಿ:https://vijayatimes.com/indian-army-posts-about-pahalgam-attack/