• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Sports

FIFA World Cup 2026: ಸ್ಪೇನ್-ಬೆಲ್ಜಿಯಂ ನಡುವೆ ಇಂದು ಮಹಾಸಮರ,ಹೈವೋಲ್ಟೇಜ್‌ ಕದನಕ್ಕೆ ವೇದಿಕೆ ಸಜ್ಜು

Teju Srinivas by Teju Srinivas
in Sports, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
FIFA World Cup 2026: ಸ್ಪೇನ್-ಬೆಲ್ಜಿಯಂ ನಡುವೆ ಇಂದು ಮಹಾಸಮರ,ಹೈವೋಲ್ಟೇಜ್‌ ಕದನಕ್ಕೆ ವೇದಿಕೆ ಸಜ್ಜು
0
SHARES
10
VIEWS
Share on FacebookShare on Twitter

ಫಿಫಾ ವಿಶ್ವಕಪ್ ಕ್ವಾರ್ಟರ್‌ ಫೈನಲ್: ಸ್ಪೇನ್-ಬೆಲ್ಜಿಯಂ (fifa spain belgium match) ನಡುವೆ ಸೆಮಿಫೈನಲ್‌ ಟಿಕೆಟ್‌ಗೆ ಜಿದ್ದಾಜಿದ್ದಿ

ಒಂದೂ ಗೋಲು ಬಿಟ್ಟುಕೊಡದ ಸ್ಪೇನ್‌ ವಿರುದ್ಧ ಭರ್ಜರಿ ಫಾರ್ಮ್‌ನಲ್ಲಿರುವ ಬೆಲ್ಜಿಯಂ ಕಣಕ್ಕಿಳಿಯಲಿದೆ

ಸೆಮಿಫೈನಲ್‌ ಕನಸಿಗಾಗಿ ಬಲಿಷ್ಠ ತಂಡಗಳ ಸೆಣಸಾಟ; ಅಭಿಮಾನಿಗಳಲ್ಲಿ ಭಾರೀ ಕುತೂಹಲ

ಫಿಫಾ ವಿಶ್ವಕಪ್‌ 2026ರ ಕ್ವಾರ್ಟರ್‌ ಫೈನಲ್‌ ಹಂತದಲ್ಲಿ ಫುಟ್‌ಬಾಲ್‌ ಅಭಿಮಾನಿಗಳು (fifa spain belgium match) ಕಾತರದಿಂದ ಎದುರು ನೋಡುತ್ತಿರುವ ಮಹತ್ವದ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ.

ಅಮೆರಿಕದ ಇಂಗಲ್‌ವುಡ್‌ನಲ್ಲಿ ನಡೆಯಲಿರುವ ಈ ಹೈವೋಲ್ಟೇಜ್‌ (High-Voltage) ಮುಖಾಮುಖಿಯಲ್ಲಿ ಸ್ಪೇನ್‌ ಮತ್ತು ಬೆಲ್ಜಿಯಂ (Belgium) ತಂಡಗಳು ಸೆಮಿಫೈನಲ್‌

ಪ್ರವೇಶಿಸುವ ಗುರಿಯೊಂದಿಗೆ ಕಣಕ್ಕಿಳಿಯಲಿವೆ. ಎರಡೂ ತಂಡಗಳು ಈ ಟೂರ್ನಿಯಲ್ಲಿ ಇದುವರೆಗೆ ಸೋಲಿನ ಮುಖ ನೋಡಿಲ್ಲ.

fifa spain belgium match

ವಿಶ್ವಕಪ್‌ನಲ್ಲಿ ಮೂರನೇ ಬಾರಿ ಸೆಮಿಫೈನಲ್‌ಗೆ ಪ್ರವೇಶಿಸುವ ಕನಸನ್ನು ನನಸಾಗಿಸಿಕೊಳ್ಳಲು (fifa spain belgium match) ಉಭಯ ತಂಡಗಳು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಅಭಿಮಾನಿಗಳ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿವೆ.

ಬಲಿಷ್ಠ ಆಟಗಾರರು, ಉತ್ತಮ ತಂಡದ ಸಮನ್ವಯ ಮತ್ತು ಸ್ಥಿರ ಪ್ರದರ್ಶನದ ಹಿನ್ನೆಲೆಯಲ್ಲಿ ಈ ಪಂದ್ಯ ಟೂರ್ನಿಯ ಅತ್ಯಂತ ರೋಚಕ ಕಾದಾಟಗಳಲ್ಲಿ ಒಂದಾಗಲಿದೆ.

ಸ್ಪೇನ್‌ ತಂಡ ಈ ವಿಶ್ವಕಪ್‌ನಲ್ಲಿ ಅತ್ಯಂತ ಶಿಸ್ತುಬದ್ಧ ಮತ್ತು ಸಮತೋಲಿತ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದೆ. 2010ರ ವಿಶ್ವಚಾಂಪಿಯನ್‌ ಆಗಿದ್ದ ಸ್ಪೇನ್‌, ಈ ಬಾರಿಯ ಟೂರ್ನಿಯಲ್ಲಿ ಒಂದೂ ಗೋಲು ಬಿಟ್ಟುಕೊಡದೇ ಅಜೇಯವಾಗಿ ಮುನ್ನಡೆಯುತ್ತಿದೆ.

ಗುಂಪು ಹಂತದಲ್ಲಿ ಎರಡು ಪಂದ್ಯಗಳನ್ನು ಗೆದ್ದು, ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದ ಸ್ಪೇನ್‌ ಒಟ್ಟು ಐದು ಗೋಲುಗಳನ್ನು ದಾಖಲಿಸಿತ್ತು.

ನಂತರದ ನಾಕೌಟ್‌ ಹಂತದಲ್ಲಿ ಆಸ್ಟ್ರಿಯಾ ವಿರುದ್ಧ 3-0 ಹಾಗೂ ಬಲಿಷ್ಠ ಪೋರ್ಚುಗಲ್‌ ವಿರುದ್ಧ 1-0 ಅಂತರದ ಗೆಲುವು ಸಾಧಿಸಿ ಕ್ವಾರ್ಟರ್‌ ಫೈನಲ್‌ಗೆ ಅರ್ಹತೆ ಪಡೆದಿದೆ.

ತಂಡದ ಸ್ಟ್ರೈಕರ್‌ ಮೈಕೆಲ್‌ ಒಯಾರ್ಜಬಲ್‌ ಈಗಾಗಲೇ ನಾಲ್ಕು ಗೋಲುಗಳನ್ನು ಗಳಿಸಿ ಪ್ರಮುಖ ಗೋಲ್‌ ಸ್ಕೋರರ್‌ ಆಗಿ ಹೊರಹೊಮ್ಮಿದ್ದಾರೆ.

ಜೊತೆಗೆ ಗೋಲ್‌ಕೀಪರ್‌ ಉನೈ ಸೈಮನ್‌ ಸತತ ಆರು ಪಂದ್ಯಗಳಲ್ಲಿ ಕ್ಲೀನ್‌ಶೀಟ್‌ (Clean Sheet) ಕಾಯ್ದುಕೊಂಡು 609 ನಿಮಿಷಗಳ ಕಾಲ ಗೋಲು ಬಿಟ್ಟುಕೊಡದೇ ವಿಶ್ವದಾಖಲೆ ನಿರ್ಮಿಸಿರುವುದು ಸ್ಪೇನ್‌ನ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಿದೆ.

ಇನ್ನೊಂದೆಡೆ ಬೆಲ್ಜಿಯಂ ತಂಡವೂ ಉತ್ತಮ ಲಯದಲ್ಲಿದ್ದು, ಟೂರ್ನಿಯುದ್ದಕ್ಕೂ ಸೋಲಿಲ್ಲದ ದಾಖಲೆಯೊಂದಿಗೆ ಕ್ವಾರ್ಟರ್‌ ಫೈನಲ್‌ಗೆ ಕಾಲಿಟ್ಟಿದೆ.

ಗುಂಪು ಹಂತದಲ್ಲಿ ಒಂದು ಗೆಲುವು ಮತ್ತು ಎರಡು ಡ್ರಾಗಳೊಂದಿಗೆ ಮುಂದಿನ ಸುತ್ತಿಗೆ ಅರ್ಹತೆ ಪಡೆದ ಬೆಲ್ಜಿಯಂ, ನಾಕೌಟ್‌ ಹಂತದಲ್ಲಿ ತನ್ನ ನೈಜ ಸಾಮರ್ಥ್ಯವನ್ನು ಪ್ರದರ್ಶಿಸಿದೆ.

ಅಂತಿಮ 32ರ ಸುತ್ತಿನಲ್ಲಿ ಸೆನೆಗಲ್‌ ವಿರುದ್ಧ 3-2 ಗೋಲುಗಳಿಂದ ರೋಚಕ ಜಯ ಸಾಧಿಸಿದ ತಂಡ, ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಆತಿಥೇಯ ಅಮೆರಿಕವನ್ನು 4-1 ಅಂತರದಿಂದ ಮಣಿಸಿ

ತನ್ನ ದಾಳಿಯ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ವೇಗದ ಆಕ್ರಮಣ, ಮಧ್ಯಮೈದಾನದ ಹಿಡಿತ ಮತ್ತು ಅನುಭವಿ ಆಟಗಾರರ ಸಂಯೋಜನೆ ಬೆಲ್ಜಿಯಂಗೆ ಪ್ರಮುಖ ಬಲವಾಗಿದ್ದು,

ಸ್ಪೇನ್‌ನ ಬಲಿಷ್ಠ ರಕ್ಷಣೆಗೆ ಸವಾಲೊಡ್ಡುವ ವಿಶ್ವಾಸದಲ್ಲಿ ತಂಡ ಇದೆ. ಹೀಗಾಗಿ ಎರಡೂ ತಂಡಗಳ ವಿಭಿನ್ನ ಆಟದ ಶೈಲಿಗಳು ಈ ಪಂದ್ಯವನ್ನು ಮತ್ತಷ್ಟು ರೋಚಕವಾಗಿಸಲಿವೆ.

ಈ ವಿಶ್ವಕಪ್‌ನಲ್ಲಿ ಹಲವು ಅಚ್ಚರಿಯ ಬೆಳವಣಿಗೆಗಳೂ ನಡೆದಿವೆ. ಬಲಿಷ್ಠ ತಂಡಗಳು ನಿರೀಕ್ಷೆಗೂ ಮುನ್ನ ಟೂರ್ನಿಯಿಂದ ಹೊರಬಿದ್ದ ಪರಿಣಾಮ ಹಲವು ರಾಷ್ಟ್ರಗಳ ಕೋಚ್‌ಗಳು ತಮ್ಮ ಹುದ್ದೆಗೆ ರಾಜೀನಾಮೆ ಘೋಷಿಸಿದ್ದಾರೆ.

ಪೋರ್ಚುಗಲ್‌, ಜರ್ಮನಿ ಸೇರಿದಂತೆ ಒಟ್ಟು ಹತ್ತು ತಂಡಗಳ ಮುಖ್ಯ ಕೋಚ್‌ಗಳು ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿದಿದ್ದು, ವಿಶ್ವ ಫುಟ್‌ಬಾಲ್‌ನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಇದೇ ವೇಳೆ ಟೂರ್ನಿಯ ಫೈನಲ್‌ ಪಂದ್ಯಕ್ಕೂ ಫಿಫಾ ವಿಶೇಷ ಸಿದ್ಧತೆ ನಡೆಸಿದೆ.

ಜುಲೈ 19ರಂದು ನಡೆಯಲಿರುವ ಫೈನಲ್‌ ಪಂದ್ಯದ ಮಧ್ಯಂತರದಲ್ಲಿ ಕೇವಲ 11 ನಿಮಿಷಗಳ ಅದ್ದೂರಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದ್ದು, ಜಸ್ಟಿನ್‌ ಬೀಬರ್‌,

ಶಕೀರಾ, ಬಿಟಿಎಸ್‌, ಮಡೋನ್ನಾ ಹಾಗೂ ಬುರ್ನಾ ಬಾಯ್‌ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಕಲಾವಿದರು ಪ್ರದರ್ಶನ ನೀಡಲಿದ್ದಾರೆ.

ಕ್ರೀಡೆ ಮತ್ತು ಮನರಂಜನೆಯ ಸಂಯೋಜನೆಯೊಂದಿಗೆ ಈ ವಿಶ್ವಕಪ್‌ ಫೈನಲ್‌ ಜಾಗತಿಕ ಮಟ್ಟದಲ್ಲಿ ವಿಶೇಷ ಆಕರ್ಷಣೆಯಾಗುವ ನಿರೀಕ್ಷೆಯಿದೆ.

ಇದೀಗ ಎಲ್ಲರ ಗಮನ ಸ್ಪೇನ್‌ (Spain) ಮತ್ತು ಬೆಲ್ಜಿಯಂ ನಡುವಿನ ಮಹತ್ವದ ಕ್ವಾರ್ಟರ್‌ ಫೈನಲ್‌ (Quarter-final) ಪಂದ್ಯದತ್ತ ನೆಟ್ಟಿದೆ.

ಸ್ಪೇನ್‌ನ ಭದ್ರ ರಕ್ಷಣಾ ವಿಭಾಗ ಮತ್ತು ಬೆಲ್ಜಿಯಂನ ಆಕ್ರಮಣಕಾರಿ ಆಟದ ನಡುವೆ ನಡೆಯಲಿರುವ ಈ ಪೈಪೋಟಿ ಅಭಿಮಾನಿಗಳಿಗೆ ರೋಚಕ ಅನುಭವ ನೀಡಲಿದೆ.

ಪಂದ್ಯವು ಭಾರತೀಯ ಕಾಲಮಾನ ಪ್ರಕಾರ ರಾತ್ರಿ 12.30 ಗಂಟೆಗೆ ಆರಂಭವಾಗಲಿದ್ದು, ವಿಜೇತ ತಂಡ ಸೆಮಿಫೈನಲ್‌ಗೆ ಭರ್ಜರಿ ಹೆಜ್ಜೆ ಇಡಲಿದೆ. ಎರಡೂ ತಂಡಗಳ ಇತ್ತೀಚಿನ

ಪ್ರದರ್ಶನ, ಆಟಗಾರರ ಆತ್ಮವಿಶ್ವಾಸ ಹಾಗೂ ಗೆಲುವಿನ ಹಂಬಲವನ್ನು ಗಮನಿಸಿದರೆ ಕೊನೆಯ ಕ್ಷಣದವರೆಗೂ ತೀವ್ರ ಹೋರಾಟ ನಡೆಯುವ ಸಾಧ್ಯತೆ ಹೆಚ್ಚಾಗಿದೆ.

ಫುಟ್‌ಬಾಲ್‌ ಪ್ರೇಮಿಗಳು ಕಾತರದಿಂದ ಕಾಯುತ್ತಿರುವ ಈ ಹೈವೋಲ್ಟೇಜ್‌ ಪಂದ್ಯ ವಿಶ್ವಕಪ್‌ನ ಮತ್ತೊಂದು ಮರೆಯಲಾಗದ ಅಧ್ಯಾಯವಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ.

ಇದನ್ನು ಓದಿ : https://vijayatimes.com/prescription-for-medicines-containing-alcohol/
Tags: Belgiumfifaspainworld cup

Related News

ಬೆಂಗಳೂರಿನ ಬಳಿ ನಕಲಿ ಕ್ಯಾನ್ಸರ್ ಔಷಧ ದಂಧೆ ಬಯಲು: 6 ಕೋಟಿ ಮೌಲ್ಯದ ನಕಲಿ ಮೆಡಿಸಿನ್ ಜಪ್ತಿ
ಪ್ರಮುಖ ಸುದ್ದಿ

ಬೆಂಗಳೂರಿನ ಬಳಿ ನಕಲಿ ಕ್ಯಾನ್ಸರ್ ಔಷಧ ದಂಧೆ ಬಯಲು: 6 ಕೋಟಿ ಮೌಲ್ಯದ ನಕಲಿ ಮೆಡಿಸಿನ್ ಜಪ್ತಿ

August 19, 2026
ನಕಲಿ ಪಿಂಚಣಿಗೆ ಕಡಿವಾಣ: 23 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಮೇಲೆ ಸರ್ಕಾರದ ನಿಗಾ
ಪ್ರಮುಖ ಸುದ್ದಿ

ನಕಲಿ ಪಿಂಚಣಿಗೆ ಕಡಿವಾಣ: 23 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಮೇಲೆ ಸರ್ಕಾರದ ನಿಗಾ

August 19, 2026
ಹನೂರು ಶೂಟೌಟ್‌ ಪ್ರಕರಣ: ತಮಿಳುನಾಡಿಗೆ ಡಿಕೆಶಿ ಖಡಕ್‌ ಎಚ್ಚರಿಕೆ
ಪ್ರಮುಖ ಸುದ್ದಿ

ಹನೂರು ಶೂಟೌಟ್‌ ಪ್ರಕರಣ: ತಮಿಳುನಾಡಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

August 18, 2026
ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಜಾರ್ಖಂಡ್ ಸರ್ಕಾರ: ನೇಮಕಾತಿ ಪರೀಕ್ಷೆಗಳು ರದ್ದು
ದೇಶ-ವಿದೇಶ

ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಜಾರ್ಖಂಡ್ ಸರ್ಕಾರ: ನೇಮಕಾತಿ ಪರೀಕ್ಷೆಗಳು ರದ್ದು

August 18, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.