- ಲಿಯೋನೆಲ್ ಮೆಸ್ಸಿಗೆ ಹೆಚ್ಚಿದೆಯಾ (Fifa world cup 2022 messi) ಒತ್ತಡ?
- ಮೆಸ್ಸಿ ಆರೋಗ್ಯದಲ್ಲಿ ಏರುಪೇರಾಗಿದೆಯಾ?
- ಮೆಸ್ಸಿ ನಿರ್ಧಾರಕ್ಕೆ ಅಭಿಮಾನಗಳು ಒಪ್ತಾರಾ?

ಮೆಸ್ಸಿ (Messi) ಮೆಸ್ಸಿ ,ಮೆಸ್ಸಿ ಇದು ಈಗ ಎಲ್ಲೆಡೆ ಕೇಳಿಬರುತ್ತಿರುವ ಹೆಸರು. ಆ ಫುಟ್ಬಾಲ್ ಮಾಂತ್ರಿಕನ ಮ್ಯಾಜಿಕ್ಕೇ ಅಂಥಹದ್ದು. ಆತ ಕಣಕ್ಕಿಳಿದ ಅಂದ್ರೆ ಕಾಲ್ಚೆಂಡು ಆತನ ತಾಳಕ್ಕೆ ಕುಣಿಯಲಾರಂಭಿಸುತ್ತವೆ.
ಆತನ ಕಾಲ್ಬಳಕಕ್ಕೆ ಎದುರಾಳಿ ಕಕ್ಕಾಬಿಕ್ಕಿಯಾಗುತ್ತಾನೆ. ತನ್ನ ಅದ್ಬುತ ಆಟದ ಮೋಡಿಯಿಂದ ಇಡೀ ವಿಶ್ವದ ಪುಟ್ಬಾಲ್ ಪ್ರೇಮಿಗಳ ಆರಾಧ್ಯ ದೈವ ಎನಿಸಿಕೊಂಡವನೇ ಲಿಯೋನೆಲ್ ಮೆಸ್ಸಿ.
ಈತನ ಆಟ ಆದೆಷ್ಟು ರೋಚಕವಾಗಿದೆಯೋ, ಅಷ್ಟೇ ರೋಮಾಂಚಕಾರಿಯಾಗಿದೆ (Fifa world cup 2022 messi) ಅವರ ಕ್ರೀಡಾ ಬದುಕಿನ ಪಯಣ.
‘’ನೀವು ಏನನ್ನಾದರು ಜಯಿಸಬಹುದು, ಆದರೆ ಅದನ್ನು ನೀವು ಅತೀಯಾಗಿ ಪ್ರೀತಿಸಬೇಕು’’ ಎನ್ನುವುದು ಮೆಸ್ಸಿಯ ಸ್ಫೂರ್ತಿ ಮಾತು. ಹೌದು ಫುಟ್ಬಾಲ್ ಆಟವನ್ನು ಅತಿಯಾಗಿ ಪ್ರೀತಿಸಿ, ಅದರಲ್ಲೇ ಅಮೋಘ ಸಾಧನೆ ಮಾಡಿ ಫುಟ್ಬಾಲ್ ಲೋಕದ ದಂತಕತೆ ಎನಿಸಿಕೊಂಡ ಮೆಸ್ಸಿ ಸಾಧನೆಗೆ ಸರಿ ಸಾಟಿಯೇ ಇಲ್ಲ.
ಇದನ್ನೂ ಓದಿ : https://vijayatimes.com/qatar-world-cup-2022-moments/
ಕತಾರ್ನಲ್ಲಿ ನಡೆಯುತ್ತಿರುವ 2022 ಫಿಫಾ ಫುಟ್ಬಾಲ್ ವಿಶ್ವಕಪ್ನಲ್ಲಿ ಅಜೆಂಟೈನಾ(Argentina) ತಂಡವನ್ನು ಫೈನಲ್ಗೇರಿಸಿದ ಈ ಆಟಗಾರನ ಕ್ರೀಡಾ ಪಯಣ ಸ್ಫೂರ್ತಿದಾಯಕವಾಗಿದೆ.
ಕಾರ್ಮಿಕನ ಮಗ ಫುಟ್ಬಾಲ್ ಮಾಂತ್ರಿಕನಾದ !: ಲಿಯೋನೆಲ್ ಮೆಸ್ಸಿ, ಜೂನ್ 24,1987 ರಂದು ಸಾಂಟಾ ಫೆ ಪ್ರಾಂತ್ಯದ ರೊಸಾರಿಯೊದಲ್ಲಿ ಜನಿಸಿದರು.
ತಂದೆ ಜಾರ್ಜ್ ಉಕ್ಕಿನ ಕಾರ್ಖಾನೆಯಲ್ಲಿ ನೌಕರರಾಗಿದ್ದರು. ತಾಯಿ ಸೆಲಿಯಾ ಕುಸಿಟ್ಟಿನಿ ಅರೆಕಾಲಿಕ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದರು. ಮೆಸ್ಸಿ ಗೆ ತನ್ನ ಬಾಲ್ಯದ ದಿನಗಳಿಂದಲೂ ಪುಟ್ಬಾಲ್ ಎಂದರೆ ಬಹಳ ಆಸಕ್ತಿ. ಫುಟ್ಬಾಲ್ ಚತುರನಾಗಿದ್ದ ಮೆಸ್ಸಿ ತನ್ನ 5 ನೇ ವಯಸ್ಸಿಗೆ ಗ್ರಾಂಡೋಲಿ ಲೋಕಲ್ ಕ್ಲಬ್ ಗೆ ಸೇರ್ಪಡೆಯಾದರು.
ತನ್ನ 8ನೇ ವಯಸ್ಸಿಗೆ ನೇವೆಲ್ಸ್ ಓಲ್ಡ್ ಬಾಯ್ಸ್ ಗೆ 1995 ರಲ್ಲಿ ಫುಟ್ಬಾಲ್(ರಿಸರಿಯೋ ಮೂಲದ ಉನ್ನತ ವಿಭಾಗದ ಪುಟ್ಬಾಲ್ ಕ್ಲಬ್) ತಂಡವನ್ನು ಸೇರಿದರು.
ಮೆಸ್ಸಿಯ ಅಧ್ಭುತ ಕೌಶಲ್ಯಗಳು ಪ್ರತಿಷ್ಠಿತ ಕ್ಲಬ್ಗಳನ್ನು ಗಮನ ಸೆಳೆಯುವಂತೆ ಮಾಡಿತು.ತನ್ನ ಬಾಲ್ಯದ ದಿನಗಳಿಂದಲೇ ಮೆಸ್ಸಿ ಅಸಾಮಾನ್ಯ ಪುಟ್ಬಾಲ್ ಕೌಶಲ್ಯವನ್ನು ರೂಢಿಸಿಕೊಂಡಿದ್ದರು.
ಆದ್ರೆ ಮೆಸ್ಸಿ 11ನೇ ವಯಸ್ಸಿಗೆ ಹಾರ್ಮೋನ್ ಕೊರತೆಯ ಸಮಸ್ಯೆಯಿಂದ ಬಳಲಾರಂಭಿಸಿದರು. ಮೆಸ್ಸಿ ಫುಟ್ಬಾಲ್ ಪಯಣವೇ ಮುಗಿಯಿತು ಅಂತ ಭಾವಿಸಲಾಗಿತ್ತು.

ಆದ್ರೆ ಮೆಸ್ಸಿಯ ಛಲ ಆತನ ಅಪ್ಪಟ ಕ್ರೀಡಾ ಪ್ರೇಮ ಆತನನ್ನು ಆ ಸಮಸ್ಯೆಯನ್ನು ಮೆಟ್ಟಿ ನಿಲ್ಲುವಂತೆ ಮಾಡಿತು. ಅಂದು ಆ ರೋಗ ಗೆದ್ದ ಬಾಲಕ ಇಂದು ವಿಶ್ವವನ್ನೇ ಗೆಲ್ಲುವತ್ತ ದಾಪುಗಾಲು ಹಾಕಿದ್ದಾನೆ.
ಕಿರಿಯ ವಯಸ್ಸಿನಲ್ಲೇ ವಿಶ್ವದಾಖಲೆಗಳ ಸರದಾರ: ಮೆಸ್ಸಿಯನ್ನು ಅಭಿಮಾನಿಗಳು ಆತನನ್ನು ವಿಶ್ವದ 8ನೇ ಅದ್ಭುತ ಅಂತಲೇ ಕರೆಯುತ್ತಾರೆ.
ಪ್ರಸ್ತುತ ಕತಾರ್ನಲ್ಲಿ (Qatar) ನಡೆಯುತ್ತಿರುವ ವಿಶ್ವಕಪ್ 2022ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ 2ನೇ ಆಟಗಾರ ಮೆಸ್ಸಿ. ಮೆಸ್ಸಿ ಮಾಡಿದ್ದೆಲ್ಲಾ ವಿಶ್ವದಾಖಲೆಗಳಾಗುತ್ತಿವೆ.
ಈತನ ಸಾಧನಾ ಪರ್ವ ತಿಳಿಯುವುದೇ ಒಂದು ಹಬ್ಬ. 5 ಫುಟ್ಬಾಲ್ ವಿಶ್ವಕಪ್ನ 25 ಪಂದ್ಯಗಳಲ್ಲಿ ಆಡಿ ದಾಖಲೆ ನಿರ್ಮಿಸಿ ಫುಟ್ಬಾಲ್ ದೈವ.
4 ಬಾರಿ ಗೋಲ್ಡನ್ ಬೂಟ್ಗಳನ್ನು ಗೆದ್ದ ಫುಟ್ಬಾಲ್ ಅಪರೂಪದ ಆಟಗಾರ. ಅತೀ ಚಿಕ್ಕ ವಯಸ್ಸಿಗೆ ಫುಟ್ಬಾಲ್ ಅಂಗಣಕ್ಕೆ ಪಾದಾರ್ಪಣೆ ಮಾಡಿದ ಕ್ರೀಡಾಪಟು. ಅತೀ ಹೆಚ್ಚು ಪಂದ್ಯಗಳಲ್ಲಿ ಆಡಿ, ಅತೀ ಹೆಚ್ಚು ಗೋಲು ಗಳಿಸಿದ ಫುಟ್ಬಾಲ್ ತಾರೆ. ಏಳು ಬಾರಿ ವಿಶ್ವದ ಶ್ರೇಷ್ಠ ಪುಟ್ಬಾಲ್ ಆಟಗಾರ ಪ್ರಶಸ್ತಿ ಸ್ವೀಕರಿಸಿದ ಮೇರು ಆಟಗಾರ.
ಇದನ್ನೂ ನೋಡಿ : https://fb.watch/htluWyZbgo/ ಮೆಸ್ಸಿ ಅಂದ್ರೆ ಮ್ಯಾಜಿಕ್. Messi Magic.
ಆರು ಬಾರಿ ಯುರೋಪಿಯನ್ ಗೋಲ್ಡನ್ ಶೂ ಬಾಚಿದ ತಂತ್ರಗಾರ. 20ನೇ ವಯಸ್ಸಿಗೆ, ಮೆಸ್ಸಿ ಸ್ಪ್ಯಾನಿಷ್ ಮಾಧ್ಯಮದಿಂದ “ಮೆಸ್ಸಿಹ್”(messiah) ಬಿರುದು ಪಡೆದ ಕ್ರೀಡಾಪಟು.
ಮೆಸ್ಸಿ ತಮ್ಮ ಕ್ರೀಡಾ ಜೀವನದಲ್ಲಿ 700ಕ್ಕೂ ಹೆಚ್ಚು ಗೋಲುಗಳನ್ನು ಬಾರಿಸಿದ್ದಾರೆ. ಅರ್ಜೆಂಟೈನಾಗೆ 2008ರಲ್ಲಿ ಒಲಿಂಪಿಕ್ ಚಿನ್ನದ ಪದಕ ತಂದು ಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ ಮೆಸ್ಸಿ ಈಗ ವಿಶ್ವಕಪ್ನ್ನೇ ತನ್ನ ರಾಷ್ಟ್ರದ ಮುಡಿಗೇರಿಸಲು ತಯಾರಾಗುತ್ತಿದ್ದಾರೆ.
ಮೆಸ್ಸಿ ಕ್ರೀಡಾ ಪಯಣ ರೋಚಕ, ರೋಮಾಂಚಕ: ಮೆಸ್ಸಿ ತನ್ನ ವೃತ್ತಿಪರ ಪುಟ್ಬಾಲ್ (Football) ಜೀವನವನ್ನು 2000ನೇ ಇಸವಿಯಲ್ಲಿ ಪ್ರಾರಂಭಿಸಿದರು.ಅವರು ಜೂನಿಯರ್ ಸಿಸ್ಟಮ್ ಶ್ರೇಯಾ0ಕಗಳಲ್ಲಿ ಆಡುತ್ತಿದ್ದಾಗ, ಶೀಘ್ರದಲ್ಲಿ ವಿಭಿನ್ನ ತಂಡಗಳಿಗೆ ಆಡುವ ಆಟಗಾರರಾಗಿ ಗುರುತಿಸಿಕೊಂಡಿದ್ದರು. ಅಕ್ಟೋಬರ್ 16 ,2004 ರಲ್ಲಿ RCD ಎಸ್ಪಾನೊಲೋ ವಿರುದ್ಧ ತಮ್ಮ ಲೀಗ್ ಗೆ ಪಾದಾರ್ಪಣೆ ಮಾಡಿದರು.
2005 ರ ಮೇ 1 ರಲ್ಲಿ ಆಲ್ಬಸೆಟೆ ವಿರುದ್ಧ ಗೆಲುವು ಸಾಧಿಸುವ ಮೂಲಕ ಬಾರ್ಸಿಲೋನಾ ಪರ ಜಯ ಸಾಧಿಸಿದ ಪುಟ್ಬಾಲ್ ಆಟಗಾರರಲ್ಲಿ ಕಿರಿಯ ಆಟಗಾರ ಎನಿಸಿಕೊಂಡರು.
ತನ್ನ ಚಾಣಾಕ್ಷ ಆಟಗಳಿಂದ ಪುಟ್ಬಾಲ್ ನಲ್ಲಿ ಗಟ್ಟಿಯಾಗಿ ನೆಲೆಯೂರಿದ ಮೆಸ್ಸಿ ಪುಟ್ಬಾಲ್ ಲೋಕದಲ್ಲಿ ದಂತಕತೆಯಾಗಿ ಉಳಿದುಕೊಂಡರು.

ಮೆಸ್ಸಿ ಎಂಬ ಸಾಧಕನ ಸಾಧನೆ ಸಂದ ಪುರಸ್ಕಾರಗಳು: ಫಿಫಾ ಬಲೂನ್ ಡಿ’ಒರ್/ಬಲೂನ್ ಡಿ’ಒರ್: 2009, 2010, 2011, 2012, 2015. ಯುರೋಪಿಯನ್ ಗೋಲ್ಡನ್ ಶೂ (Golden Shoe): 2009–10, 2011–12, 2012–13, 2016–17, 2017–18, 2018–19. ಫಿಫಾ ವರ್ಡ್ ಪ್ಲೇಯರ್ ಆಫ್ ದ ಇಯರ್-2009.
FIFA ವಿಶ್ವಕಪ್ ಗೋಲ್ಡನ್ ಬಾಲ್: 2014. ಕೋಪಾ ಅಮೇರಿಕಾ ಗೋಲ್ಡನ್ ಬಾಲ್: 2015. UEFA ಪುರುಷರ ಪ್ಲೇಯರ್ ಆಫ್ ದ
ಇಯರ್ ಅವಾರ್ಡ್ : 2011, 2015. UEFA ಕ್ಲಬ್ ಫುಟ್ಬಾಲ್ ಆಫ್ ದ ಇಯರ್: 2009. UEFA ಕ್ಲಬ್ ಫಾರ್ವರ್ಡ್ ಆಫ್ ದ
ಇಯರ್: 2009, 2019. ಲಾ ಲಿಗಾ ಅತ್ಯುತ್ತಮ ಆಟಗಾರ: 2008–09, 2009–10, 2010–11, 2011–12, 2012–13, 2014–15, 2017–18, 2018–19. ಲಾ ಲಿಗಾ ಬೆಸ್ಟ್ ಫಾರ್ವರ್ಡ್: 2008–09, 2009–10, 2010–11, 2011–12, 2012–13, 2014–15, 2015–16.
FIFA ಕ್ಲಬ್ ವಿಶ್ವಕಪ್ ಗೋಲ್ಡನ್ ಬಾಲ್ (Golden Ball): 2009, 2011. ಪಿಚಿಚಿ ಟ್ರೋಫಿ: 2009–10, 2011–12, 2012–13, 2016–17, 2017–18, 2018–19.
ವಿಶ್ವಕಪ್ ಸಿಲ್ವರ್ ಬಾಲ್: 2015. FIFA ಕ್ಲಬ್ ವರ್ಲ್ಡ್ ಕಪ್ ಫೈನಲ್ ಅತ್ಯಂತ ಮೌಲ್ಯಯುತ ಆಟಗಾರ: 2009, 2011. FIFA ವಿಶ್ವ ಯುವ ಚಾಂಪಿಯನ್ಶಿಪ್ ಗೋಲ್ಡನ್ ಬಾಲ್: 2005. ವಿಶ್ವ ಯುವ ಚಾಂಪಿಯನ್ಶಿಪ್ ಗೋಲ್ಡನ್ ಶೂ: 2005.
ಒಲಿಂಪಿಯಾ ಡಿ ಪ್ಲಾಟಾ(Olympia de Plata) (ವರ್ಷದ ಅರ್ಜೆಂಟೀನಾದ ಫುಟ್ಬಾಲ್ ಆಟಗಾರ): 2005, 2007, 2008, 2009, 2010, 2011, 2012, 2013, 2015, 2016, 2017. ಕೋಪಾ ಅಮೇರಿಕಾ ಅತ್ಯುತ್ತಮ ಯುವ ಆಟಗಾರ: 2007. FIFPro ಯಂಗ್ ವರ್ಲ್ಡ್ ಪ್ಲೇಯರ್ ಆಫ್ ದಿ ಇಯರ್: 2006, 2007, 2008.
ಇದನ್ನೂ ಓದಿ : https://vijayatimes.com/shasibhushan-hegde-join-bjp/
ಗೋಲ್ಡನ್ ಬಾಯ್ (ವರ್ಷದ ಯುವ ಯುರೋಪಿಯನ್ ಫುಟ್ಬಾಲ್ ಆಟಗಾರ): 2005. ಫಿಫಾ ಫೀಫಾ ಪ್ರೊ ವರ್ಲ್ಡ್ XI: 2007, 2008, 2009, 2010, 2011, 2012, 2013, 2014, 2015, 2016, 2017, 2018.
ವರ್ಷದ UEFA ತಂಡ: 2008, 2009, 2010, 2011, 2012, 2014, 2015, 2016, 2017, 2018. UEFA ವರ್ಷದ ಅಲ್ಟಿಮೇಟ್ ತಂಡ. ಲಾ ಲಿಗಾ ಟೀಂ ಆಫ್ ದ ಇಯರ್: 2014–15, 2015–16. FIFA ವಲ್ಡ್ ಕಪ್ ಡ್ರೀಮ್ ಟೀಂ: 2014. ಕೋಪಾ ಅಮೇರಿಕಾ ಡ್ರೀಮ್ ಟೀಮ್: 2007, 2011, 2015, 2016. ಸಾರ್ವಕಾಲಿಕ AFA ತಂಡ (2015 ರಲ್ಲಿ ಪ್ರಕಟಿಸಲಾಗಿದೆ)
ಗುಡ್ ಬೈ ಹೇಳುತ್ತಾರಾ ಮೆಸ್ಸಿ? : ಕತಾರ್ ಫೀಫಾ 2022(Qatar FIFA 2022) ತನ್ನ ಕೊನೆಯ ವಿಶ್ವಕಪ್ ಫುಟ್ಬಾಲ್ ಆಟ ಅಂತ ಹೇಳಿ ಮೆಸ್ಸಿ ಫುಟ್ಬಾಲ್ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಮೆಸ್ಸಿ ಮಾತನ್ನು ಅಭಿಮಾನಿಗಳು ಇನ್ನೂ ಒಪ್ಪಿಕೊಳ್ಳಲು ಸಿದ್ಧರಿಲ್ಲ. ಆದ್ರೆ ಮೆಸ್ಸೊ ವಿಶ್ವಕಪ್ನ ನಂತ್ರ ಅಂತಾರಾಷ್ಟ್ರೀಯ ಆಟಕ್ಕೇ ನಿವೃತ್ತಿ ಘೋಷಿಸ್ತಾರಾ ಅಥವಾ ಮುಂದಿನ ವಿಶ್ವಕಪ್ ಆಡಲ್ಲ ಅಂತ ಮಾತ್ರ ಹೇಳಿದ್ದಾ ಅನ್ನೋದಕ್ಕೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ.
ಇದನ್ನೂ ಓದಿ : https://vijayatimes.com/deadly-tea-effect/
ಆದ್ರೆ ಮೆಸ್ಸಿ ಅವರನ್ನು ಆರೋಗ್ಯ ಸಮಸ್ಯೆ ಕಾಡುತ್ತಿದ್ದ. ನಿರಂತರ ಪಂದ್ಯಾಟಗಳು ಹಾಗೂ ಒತ್ತಡದಿಂದ ಸುಸ್ತಾಗಿದ್ದಾರೆ. ಆದ್ರೆ ಸದ್ಯ ಅರ್ಜೆಂಟೈನಾಗೆ ವಿಶ್ವಕಪ್ ಗೆಲ್ಲುವತ್ತ ಚಿತ್ತ ಇಟ್ಟಿರುವ ಮೆಸ್ಸಿ ತಮ್ಮ ಮುಂದಿನ ನಿರ್ಧಾರವನ್ನು ಶೀಘ್ರದಲ್ಲೇ ತಿಳಿಸಲಿದ್ದಾರೆ.
ಅವರ ನಿರ್ಧಾರ ಅಭಿಮಾನಿಗಳನ್ನು ನಿರಾಸೆಗೊಳಿಸದಿರಲಿ ಅನ್ನೋದೇ ಎಲ್ಲರ ಪ್ರಾರ್ಥನೆ.
ಡಯಾನ ಹೆಚ್.ಆರ್
Dayana H.R