- ಕ್ಯಾಪಿಟಲ್ಸ್ ಕೊಟ್ಟ ಅವಕಾಶವನ್ನ ಬಳಸಿಕೊಂಡು ಕರುಣ್ ನಾಯರ್
- ಕರುಣ್ – ಬುಮ್ರಾ ನಡುವಣ ಜಗಳದ ವಿಡಿಯೋ ವೈರಲ್
- ಇಬ್ಬರ ನಡುವಣ ಜಗಳ ಬಿಡಿಸುವುದನ್ನು ಬಿಟ್ಟು ಖುಷಿಪಡುತ್ತಿರುವ ಹಿಟ್ ಮೆನ್
Delhi: ದೆಹಲಿಯ ಅರುಣ್ ಜೇಟ್ಲಿ (Arun Jaitley) ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2025 ರ 29ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ಗೆಲುವು ಸಾಧಿಸಿದೆ. ಇನ್ನು ಈ ರಣರೋಚಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ಕನ್ನಡಿಗ ಕರುಣ್ ನಾಯರ್ (Kannadiga Karun Nair) ವೇಗದ ಅರ್ಧಶತಕ ಸಿಡಿಸಿದ್ದಾರೆ ಆದರೂ ಮುಂಬೈ ಇಂಡಿಯನ್ಸ್ ವಿರುದ್ಧ ಕೇವಲ 12 ರನ್ಗಳಿಂದ ಡೆಲ್ಲಿ ಸೋಲುಂಡಿತು.
ಈ ಗೆಲುವಿನ ನಡುವೆ ಡೆಲ್ಲಿ ಕ್ಯಾಪಿಟಲ್ಸ್ ಪರ ಮಿಂಚಿದ್ದು ಕರುಣ್ ನಾಯರ್ (Karun Nair) . 40 ಎಸೆತಗಳನ್ನು ಎದುರಿಸಿದ (Fight between the IPL Match) ಕರುಣ್ 5 ಭರ್ಜರಿ ಸಿಕ್ಸ್ ಹಾಗೂ 12 ಫೋರ್ಗಳೊಂದಿಗೆ 89 ರನ್ ಬಾರಿಸಿದ್ದರು. ಇದರ ನಡುವೆ ಕರುಣ್ ನಾಯರ್ ಹಾಗೂ ಜಸ್ಪ್ರೀತ್ ಬುಮ್ರಾ ಕಿತ್ತಾಡಿಕೊಂಡಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ (won the toss) ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ (Mumbai Indians) ಪರ ತಿಲಕ್ ವರ್ಮಾ 59 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 205 ರನ್ ಕಲೆಹಾಕಿತು.

ಅದರಲ್ಲೂ ಜಸ್ಪ್ರೀತ್ ಬುಮ್ರಾ ಅವರ ಒಂದೇ ಓವರ್ನಲ್ಲಿ ಕರುಣ್ ನಾಯರ್ (Karun Nair) 18 ರನ್ಗಳನ್ನು ಚಚ್ಚಿದ್ದರು. ಇತ್ತ ಕರುಣ್ ಬ್ಯಾಟ್ನಿಂದ ಸಿಕ್ಸ್-ಫೋರ್ಗಳನ್ನು ಹೊಡೆಸಿಕೊಂಡ ಬುಮ್ರಾ ವಿಚಲಿತರಾದಂತೆ ಕಂಡು ಬಂದರು.ಇದರ ನಡುವೆ ಕರುಣ್ ನಾಯರ್ ರನ್ ಓಡುವಾಗ ಗೊತ್ತಿಲ್ಲದೆ ಬುಮ್ರಾ ಅವರ ಮೈಗೆ ತಾಗಿದ್ದಾರೆ. ಇದಕ್ಕೆ ಕೋಪಗೊಂಡ ಜಸ್ಪ್ರೀತ್ ಬುಮ್ರಾ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟರ್ (Capitals batter) ಜೊತೆ ಜಗಳಕ್ಕಿಳಿದಿದ್ದಾರೆ. ಆದರೆ ಗೊತ್ತಿಲ್ಲದೆ ಮೈಗೆ ತಾಗಿದ್ದರಿಂದ ಅದಾಗಲೇ ಕರುಣ್ ನಾಯಕ ಕ್ಷಮೆ ಸಹ ಕೇಳಿದ್ದರು.
ಇದಾಗ್ಯೂ ಓವರ್ ಮುಕ್ತಾಯದ ಬಳಿಕ ಮತ್ತೆ ಜಸ್ಪ್ರೀತ್ ಬುಮ್ರಾ ಕರುಣ್ (Bumrah Karun) ಅವರೊಂದಿಗೆ ಜಗಳವನ್ನು ಮುಂದುವರೆಸಿದರು. ಭಾರತೀಯ ಆಟಗಾರರ ನಡುವಣ ಈ ಮಾತಿನ ಚಕಮಕಿ ನಡುವೆ ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ (Former captain Rohit Sharma) ನಗುತ್ತಾ ನಿಂತಿದ್ದು ಅಚ್ಚರಿಗೆ ಕಾರಣವಾಗಿತ್ತು.ಹಿರಿಯ ಆಟಗಾರನಾಗಿರುವ ಹಿಟ್ಮ್ಯಾನ್ ಇಬ್ಬರ ನಡುವಣ ಜಗಳ ಬಿಡಿಸುವುದನ್ನು ಬಿಟ್ಟು ಖುಷಿಪಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇದನ್ನು ಓದಿ : http://ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಎಂದು ಬೃಹತ್ ಹೋರಾಟಕ್ಕೆ ಸಜ್ಜಾದ ಜೆಡಿಎಸ್: ಏಪ್ರಿಲ್ 12 ರಂದು ಪ್ರತಿಭಟನೆ
ಇನ್ನು ಈ ಜಗಳದ ನಡುವೆ ಕರುಣ್ ನಾಯರ್ ತನ್ನ ತಪ್ಪಿಲ್ಲ ಎಂದು ಹಾರ್ದಿಕ್ ಪಾಂಡ್ಯಗೆ (Hardik Pandya) ಮನವರಿಕೆ ಮಾಡಲು ಮುಂದಾದರು. ಈ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟರ್ (Capitals batter) ಅನ್ನು ಪಾಂಡ್ಯ ಸಮಾಧಾನಪಡಿಸಿದ್ದಾರೆ.ಇದೀಗ ಜಸ್ಪ್ರೀತ್ ಬುಮ್ರಾ ಬುಮ್ರಾ ಹಾಗೂ ಕರುಣ್ ನಾಯರ್ (Fight between the IPL Match) ನಡುವಣ ಜಗಳದ ವಿಡಿಯೋ ವೈರಲ್ ಆಗಿದ್ದು, ರೋಹಿತ್ ಶರ್ಮಾ ನಡೆಗೆ ಪರ – ವಿರೋಧ ಚರ್ಚೆಗಳು ಜೋರಾಗಿದೆ.