- ಮಧುಮೇಹಿಗಳಿಗೆ ತೀರಾ ಉಪಯೋಗಿ ಅತ್ತಿ ಹಣ್ಣು
- ಡಯಟ್ ಮಾಡೋರಿಗೂ ಬೆಸ್ಟ್
- ಬಿಸಿಲಿನ ಬೇಗೆಗೆ ಅತ್ತಿ ಹಣ್ಣು ಪರಿಣಾಮಕಾರಿ
ನಮ್ಮ ಸುತ್ತಮುತ್ತಲು ಸಿಗುವ ಅದೆಷ್ಟೋ ಹಣ್ಣು, ತರಕಾರಿಗಳು ನಮ್ಮ ಆರೋಗ್ಯವನ್ನು ಉತ್ತಮಗೊಳಿಸುವಲ್ಲಿ ಸಹಾಯಕವಾಗಿವೆ. ಅಂತಹ ಹಣ್ಣುಗಳಲ್ಲಿ ಅತ್ತಿ ಹಣ್ಣು (Fig fruit) ಕೂಡ ಒಂದು. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಎತ್ತರದ ಅತ್ತಿ ಮರವನ್ನು ಕಾಣುತ್ತೇವೆ. ಇದರಲ್ಲಿ (Figs keep the body cool) ಬಿಡುವ ಹಣ್ಣುಗಳು ಹಕ್ಕಿ, ಪಕ್ಷಿಗಳಿಗೆ ಮೃಷ್ಟಾನ್ನ ಭೋಜನದಂತೆ.
ಇನ್ನು ಇದನ್ನು ಔದುಂಬರ ವೃಕ್ಷ (Audumbara tree) ಎಂದೇ ಈ ಅತ್ತಿ ಮರಕ್ಕೆ ಕರೆಯುತ್ತಾರೆ. ಇದರ ವೈಜ್ಞಾನಿಕ ಹೆಸರು ಫೈಕಸ್ ರೆಸೆಮೊಸಾ (Ficus Racemosa) ಎಂದಾಗಿದೆ. ಈ ಮರದ ತೊಗಟೆಯು ಹಳದಿ ಬಣ್ಣದಿಂದ ಕೂಡಿದ್ದು, ಅಂಟಾದ ಹಾಲನ್ನು ಸ್ರವಿಸುತ್ತದೆ. ಈ ಮರದಲ್ಲಿ ಗುಂಡಾದ ಹಸಿರು ಕಾಯಿ ಬೆಳೆಯುತ್ತದೆ. ಹಣ್ಣಾದ ಮೇಲೆ ಕೆಂಪು ಬಣ್ಣಕ್ಕೆ ತಿರುಗಿ ಪಕ್ಷಿಗಳ ಕಣ್ಣುಕುಕ್ಕುತ್ತವೆ.ಗೊಂಚಲಿನ ರೀತಿಯಲ್ಲಿ ಬಿಡುವ ಹಣ್ಣುಗಳಲ್ಲಿ (Fruits) ಅನೇಕ ಆರೋಗ್ಯ ಪ್ರಯೋಜನಗಳಿವೆ.

ಅಧಿಕ ರಕ್ತದೊತ್ತಡವನ್ನು (High blood pressure) ನಿಯಂತ್ರಿಸುವಲ್ಲಿ ಇದರಲ್ಲಿನ ಪೊಟ್ಯಾಸಿಯಮ್ (Potassium) ಪ್ರಮುಖ ಪಾತ್ರ ವಹಿಸುತ್ತದೆ. ನೀವು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ ಅತ್ತಿ ಹಣ್ಣನ್ನು ಅವಶ್ಯಕವಾಗಿ ನಿಮ್ಮ ಆಹಾರದ ಭಾಗವಾಗಿ ಮಾಡಿಕೊಳ್ಳಿ. ಇದು ರಕ್ತದೊತ್ತಡವನ್ನು ಸಾಮಾನ್ಯವಾಗಿರಿಸುತ್ತದೆ.
ಪೊಟ್ಯಾಸಿಯಮ್ ಸಾಕಷ್ಟು ಪ್ರಮಾಣದಲ್ಲಿ ಲಭ್ಯ ಇರುವಂತೆ ಮಾಡುತ್ತದೆ. ಇನ್ನು ಮಲಬದ್ಧತೆಯಿಂದ (Constipation) ಬಳಲುತ್ತಿರುವವರಿಗೆ ಅತ್ತಿ ಹಣ್ಣು ಪರಿಣಾಮಕಾರಿ ಆಹಾರವಾಗಿದೆ. ಇದು ಹೆಚ್ಚಿನ ಪ್ರಮಾಣದ ಫೈಬರ್ (Fiber) ಹೊಂದಿದ್ದು, ಕರುಳಿನ ಚಲನೆಗೆ ಸಹಾಯ ಮಾಡುತ್ತದೆ. ಇದು ಮಲಬದ್ಧತೆಯಿಂದ ಪರಿಹಾರ ಒದಗಿಸಲು ಸಹಾಯ ಮಾಡುತ್ತದೆ.
ಮಧುಮೇಹ ರೋಗಿಗಳ (Diabetic patients) ಆಹಾರದಲ್ಲಿ ಅತ್ತಿ ಹಣ್ಣುಗಳನ್ನು ತಪ್ಪದೇ ನಿತ್ಯವು ಹಿತ – ಮಿತವಾಗಿ ಸೇರಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ತಿಂದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣ ಮಾಡುತ್ತದೆ. ಇದರಲ್ಲಿ ಕಂಡು ಬರುವ ಅಬ್ಸಿಸಿಕ್ ಆಮ್ಲ (Abscisic acid), ಮ್ಯಾಲಿಕ್ ಆಮ್ಲ ಮತ್ತು ಕ್ಲೋರೊಜೆನಿಕ್ (Chlorogenic) ಆಮ್ಲದಂತಹ ಸಂಯುಕ್ತಗಳು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಿ ದೇಹವನ್ನು ಸುಸ್ಥಿತಿಯಲ್ಲಿಡಲು ಅನುಕೂಲ ಮಾಡಿಕೊಡುತ್ತವೆ.
ಇದನ್ನೂ ಓದಿ: ತೂಕ ಇಳಿಕೆಯಷ್ಟೇ ಅಲ್ಲ , ಹಲವು ರೋಗಗಳಿಗೆ ಜೀರಿಗೆ ದಿವ್ಯೌಷಧ!
ಇನ್ನು ಅತ್ತಿಹಣ್ಣಿನಲ್ಲಿ ವಿಟಮಿನ್ ಸಿ (Vitamin C), ವಿಟಮಿನ್ ಇ ಮತ್ತು ವಿಟಮಿನ್ ಎ ಸಮೃದ್ಧವಾಗಿದೆ. ಇದು ಚರ್ಮಕ್ಕೆ ಮುಖ್ಯವಾಗಿದೆ. ಅತ್ತಿ ಹಣ್ಣುಗಳನ್ನು ತಿನ್ನುವುದರಿಂದ ನಿಮ್ಮ ಚರ್ಮವನ್ನು ಪೋಷಿಸುತ್ತದೆ, ಅಷ್ಟೇ ಅಲ್ಲ ದೇಹವನ್ನು ಕೂಡ ತಂಪಾಗಿ ಇರಿಸುತ್ತದೆ.
ಆದ್ದರಿಂದ ನೀವು ನಿಮ್ಮ ಆಹಾರದಲ್ಲಿ ಅತ್ತಿ ಹಣ್ಣುಗಳನ್ನು ಸೇರಿಸಿಕೊಂಡರೆ ಒಳ್ಳೆಯದು ನೋಡಲು ಅಂಜೂರದಂತೆ (Like a fig) ಕಂಡರೂ ಇದು ಅಂಜೂರಕ್ಕಿಂತಲೂ ಹೆಚ್ಚು ಉಪಯೋಗವಿರುವ ಹಣ್ಣಿದು. ಅತಿ ಬೇಗನೆ ಈ ಹಣ್ಣಿಗಳಲ್ಲಿ ಹುಳಗಳು ಕಂಡು ಬರುವ ಕಾರಣದಿಂದ (Figs keep the body cool) ಪರೀಕ್ಷಿಸಿ ತಿನ್ನುವುದು ಒಳಿತು.