ಫಿಲ್ಮ್‌ಫೇರ್ ಮ್ಯಾಗಜಿನ್‌ನಲ್ಲಿ ಕನ್ನಡ (Filmfare ignores sandalwood industry) ನಟರಿಗೆ ಅವಕಾಶ ಇಲ್ಲ
ಕನ್ನಡ ಚಿತ್ರರಂಗಕ್ಕೆ ಸಮಾನ ಗೌರವ ಬೇಕೆಂದು ಅಭಿಮಾನಿಗಳ ಒತ್ತಾಯ
ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಚಿತ್ರರಂಗಕ್ಕೆ ಅನ್ಯಾಯವಾಗಿದೆ ಎಂದು ಟೀಕೆ
ದಕ್ಷಿಣ ಭಾರತೀಯ ಸಿನಿರಂಗದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಫಿಲ್ಮ್‌ಫೇರ್ (Filmfare ignores sandalwood industry) ಮತ್ತೆ ಕನ್ನಡ ಚಿತ್ರರಂಗವನ್ನು ಕಡೆಗಣಿಸಿದೆ ಎಂಬ ಆರೋಪ ಕೇಳಿಬಂದಿದೆ.
ಫಿಲ್ಮ್‌ಫೇರ್ ಮ್ಯಾಗಜಿನ್‌ನ ಇತ್ತೀಚಿನ ಮುಖಪುಟ ಹಾಗೂ ಫೋಟೋಶೂಟ್‌ನಲ್ಲಿ ಕನ್ನಡದ ಯಾವುದೇ ನಟರು ಕಾಣಿಸದಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಮಾಡಿರುವ ಕನ್ನಡ ನಟರು ಇದ್ದರೂ ಅವರನ್ನು ಕಡೆಗಣಿಸಿರುವುದು ಸರಿಯೇ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿದೆ.

ಈ ಘಟನೆ ಕನ್ನಡ ಚಿತ್ರರಂಗದ ಅಭಿಮಾನಿಗಳಲ್ಲಿ ಅಸಮಾಧಾನ ಮೂಡಿಸಿದೆ. ಈ ಮೊದಲು ಸಹ ಕನ್ನಡ ಚಿತ್ರರಂಗವನ್ನು ಕಡೆಗಣಿಸಿದ ಘಟನೆಗಳು ನಡೆದಿವೆ ಎಂದು ಹಲವರು ನೆನಪಿಸಿಕೊಂಡಿದ್ದಾರೆ.
ಸೈಮಾ ಅವಾರ್ಡ್ಸ್ ಕಾರ್ಯಕ್ರಮದಲ್ಲೂ ಕನ್ನಡ ನಟರಿಗೆ ಸೂಕ್ತ ಗೌರವ ಸಿಗಲಿಲ್ಲ ಎಂಬ ಟೀಕೆ ವ್ಯಕ್ತವಾಗಿತ್ತು. ಈಗ ಮತ್ತೊಮ್ಮೆ ಫಿಲ್ಮ್‌ಫೇರ್ (Flimfare) ಮ್ಯಾಗಜಿನ್‌ನಲ್ಲಿ
ಕನ್ನಡ ನಟರು ಕಾಣಿಸದಿರುವುದು ಕನ್ನಡಿಗರ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ಫಿಲ್ಮ್‌ಫೇರ್ ಅವಾರ್ಡ್ ಕಾರ್ಯಕ್ರಮವು 1954ರಲ್ಲಿ ಆರಂಭವಾಯಿತು. ಆರಂಭದಲ್ಲಿ (Filmfare ignores sandalwood industry) ಹಿಂದಿ ಚಿತ್ರರಂಗದ ಕಲಾವಿದರು
ಮತ್ತು ತಂತ್ರಜ್ಞರನ್ನು ಗೌರವಿಸುವ ಉದ್ದೇಶದಿಂದ ಈ ಪ್ರಶಸ್ತಿ ನೀಡಲಾಗುತ್ತಿತ್ತು. ನಂತರ 1964ರಲ್ಲಿ ಫಿಲ್ಮ್‌ಫೇರ್ ಸೌತ್ ಅವಾರ್ಡ್ ಕಾರ್ಯಕ್ರಮ ಆರಂಭವಾಯಿತು.
ದಕ್ಷಿಣ ಭಾರತದ ನಾಲ್ಕು ಭಾಷೆಗಳ ಚಿತ್ರರಂಗಕ್ಕೂ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಆದರೂ ಮ್ಯಾಗಜಿನ್ (Magazine) ಮುಖಪುಟದಲ್ಲಿ ಕನ್ನಡ ಕಲಾವಿದರಿಗೆ ಅವಕಾಶ ನೀಡದಿರುವುದು ಟೀಕೆಗೆ ಗುರಿಯಾಗಿದೆ.
ಇತ್ತೀಚೆಗೆ ಬಿಡುಗಡೆಗೊಂಡ ಫಿಲ್ಮ್‌ಫೇರ್ ಮ್ಯಾಗಜಿನ್ ಮುಖಪುಟದಲ್ಲಿ ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರರಂಗದ ನಟರು ಮತ್ತು ನಟಿಯರು ಮಾತ್ರ ಕಾಣಿಸಿಕೊಂಡಿದ್ದಾರೆ. ಆದರೆ ಕನ್ನಡ ಚಿತ್ರರಂಗದ ಯಾವುದೇ ಕಲಾವಿದರು ಮುಖಪುಟದಲ್ಲಿ ಇರಲಿಲ್ಲ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಪಡೆದ ಯಶ್, ಕಿಚ್ಚ ಸುದೀಪ್, ಕಾಂತಾರ ಚಿತ್ರದ ಮೂಲಕ ಹೆಸರು ಮಾಡಿದ ರಿಷಬ್ ಶೆಟ್ಟಿ (Rishab Shetty) , ಹಿರಿಯ ನಟ ಶಿವರಾಜ್ ಕುಮಾರ್ ಹಾಗೂ ಜನಪ್ರಿಯ ನಟಿ ರುಕ್ಮಿಣಿ ವಸಂತ್ ಇವರಲ್ಲಿ ಯಾರಾದರೂ ಒಬ್ಬರಿಗೆ ಅವಕಾಶ ನೀಡಬಹುದಿತ್ತು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಈ ಹಿನ್ನೆಲೆಯಲ್ಲಿ ಫಿಲ್ಮ್‌ಫೇರ್ ಸಂಸ್ಥೆ ತಮ್ಮ ತಪ್ಪನ್ನು ತಿದ್ದಿಕೊಂಡು ಕನ್ನಡ ಚಿತ್ರರಂಗದ ಅಭಿಮಾನಿಗಳ ಬಳಿ ಕ್ಷಮೆ ಕೇಳಬೇಕು ಎಂಬ ಆಗ್ರಹವೂ ಕೇಳಿಬರುತ್ತಿದೆ.
ಕನ್ನಡ ಚಿತ್ರರಂಗವು ಇಂದು ದೇಶ ಮತ್ತು ವಿದೇಶ ಮಟ್ಟದಲ್ಲಿ ಹೆಸರು ಮಾಡುತ್ತಿರುವ ಸಂದರ್ಭದಲ್ಲಿ ಇಂತಹ ಕಡೆಗಣನೆ ಸರಿಯಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲಾ ಭಾಷೆಗಳ ಚಿತ್ರರಂಗಕ್ಕೂ ಸಮಾನ ಗೌರವ ನೀಡಬೇಕು ಎಂಬುದು ಕನ್ನಡಿಗರ ಒತ್ತಾಯವಾಗಿದೆ.
ಇದನ್ನು ಓದಿ : https://vijayatimes.com/huge-fall-in-small-cap-stocks/