Bengaluru : ನಿರೀಕ್ಷೆಯಂತೆ ರಾಜ್ಯದಲ್ಲಿ ಕಾಂಗ್ರೆಸ್ (Congress) ಅಧಿಕಾರದ ಚುಕ್ಕಾಣಿ ಹಿಡಿದಿದೆ. ಬಹಳ ಕುತೂಹಲ ಕೆರಳಿಸಿರುವ ಚುನಾವಣಾ ಫಲಿತಾಂಶಲ್ಲಿ ಕಾಂಗ್ರೆಸ್ ಈಗಾಗಲೇ ಸ್ಪಷ್ಟ ಬಹುಮತ ಪಡೆದಿದೆ. ಭರ್ಜರಿ ಗೆಲುವಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನ ಕೆಪಿಸಿಸಿ (KPCC) ಕಚೇರಿ ಎದುರು ಸಂಭ್ರಮಾಚರಣೆ ಮಾಡಿದ್ದಾರೆ. ಕೆಪಿಸಿಸಿ ಕಚೇರಿ (Final Assembly elections result) ಎದುರು ಜಮಾಯಿಸಿದ ಕಾರ್ಯಕರ್ತರು ಕುಣಿದು ಕಪ್ಪಳಿಸಿಸುತ್ತಿದ್ದಾರೆ.

ಕಾಂಗ್ರೆಸ್ 136 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಸ್ಪಷ್ಟ ಬಹುಮತ ಪಡೆದಿದೆ. ಅತಂತ್ರವೋ, ಸ್ಥಿರವೋ ಎಂಬ ಗೊಂದಲದಲ್ಲಿದ್ದ ಮತದಾರರಿಗೆ ಈಗ ಸ್ವಷ್ಟ ಚಿತ್ರಣ ಸಿಕ್ಕಿದೆ.
ಹೀಗಾಗಿ ಈ ಬಾರಿ ಕರ್ನಾಟಕದಲ್ಲಿ (Karnataka) ಕಾಂಗ್ರೆಸ್ ಏಕಾಂಗಿಯಾಗಿ ಯಾರ ಬೆಂಬಲವೂ ಇಲ್ಲದೆ ಅಧಿಕಾರ ಹಿಡಿದಿದೆ.
ಕಾರ್ಯಕರ್ತರ ಸಂಭ್ರಮಾಚರಣೆ :
ಸ್ಪಷ್ಟ ಬಹುಮತದತ್ತ ಕಾಂಗ್ರೆಸ್ ದಾಪುಗಾಲು ಹಾಕುತ್ತಿದ್ದಂತೆ ಕಾರ್ಯಕರ್ತರು ರಾಜ್ಯಾದ್ಯಂತ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.
ಕಾಂಗ್ರೆಸ್ ಗೆಲುವಿಗೆ ಶ್ರಮಿಸಿರುವ ನಾಯಕರೆಲ್ಲರೂ ಸಂಭ್ರಮದಿಂದ ಕುಣಿದಾಡಿದರು. ಇನ್ನು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿಯೂ ಕೂಡ ಕಾಂಗ್ರೆಸ್ ಕಾರ್ಯಕರ್ತರು (Final Assembly elections result) ಈಗಾಗಲೇ ಸಂಭ್ರಮಾಚರಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ : https://vijayatimes.com/vidhansabha-constituency-result-update/
ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಅವರು ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಎಐಸಿಸಿ ಅಧ್ಯಕ್ಷರಾದ ಬಳಿಕ ಮಲ್ಲಿಕಾರ್ಜುನ ಖರ್ಗೆ ಮೂರನೇ ಗೆಲುವು ದಾಖಲಿಸಿದ್ದಾರೆ. ಹಿಮಾಚಲ್ ಪ್ರದೇಶ (Himachal Pradesh), ಛತ್ತೀಸ್ಗಢ ಸಾಲಿನಲ್ಲಿ ಇದೀಗ ಕರ್ನಾಟಕ ಕೂಡ ಸೇರ್ಪಡೆಯಾಗಿದೆ.
ಎಐಸಿಸಿ ಅಧ್ಯಕ್ಷರಾದ ಬಳಿಕ ಕಾಂಗ್ರೆಸ್ಗೆ ಗೆಲುವಿನ ರುಚಿ ತಂದುಕೊಟ್ಟಿದ್ದಾರೆ.
ಜೋಡಿ ನಾಯಕರ ಕಮಾಲ್
ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (KPCC President DK Shivakumar) ಅವರ ಶ್ರಮ ಸಾರ್ಥಕ ಫಲ ನೀಡಿತು.
ಈ ಇಬ್ಬರೂ ರಾಜ್ಯಾದ್ಯಂತ ಪ್ರವಾಸ ಮಾಡಿ ಜನರನ್ನು ಕಾಂಗ್ರೆಸ್ನತ್ತ ಒಲವು ತೋರಿಸುವಂತೆ ಮಾಡಿದರು. ಬಿಜೆಪಿ ಸರ್ಕಾರ ಮಾಡಿರುವ ಭ್ರಷ್ಟಾಚಾರ,

ಹಾಗೂ ಬೆಲೆ ಏರಿಕೆಯ ಬಿಸಿಯನ್ನು ಅತ್ಯಂತ ಪ್ರಭಾವಶಾಲಿಯಾಗಿ ಜನರಿಗೆ ಮುಟ್ಟಿಸುವಲ್ಲಿ ಯಶಸ್ಸನ್ನು ಕಂಡ್ರು. ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್,
ಇಬ್ಬರೂ ತಮ್ಮೊಳಗಿನ ಮನಸ್ತಾಪಗಳನ್ನು ಬದಿಗೊತ್ತಿ ಪಕ್ಷವನ್ನು ಅಧಿಕಾರಕ್ಕೆ ತರಲೇ ಬೇಕು ಅಂತ ಪಣತೊಟ್ಟು ಚುನಾವಣಾ ಕಣಕ್ಕಿಳಿದರು. ಅವರಿಬ್ಬರ ಶ್ರಮ ಫಲ ನೀಡಿತು. ಇವತ್ತು ರಾಜ್ಯದಲ್ಲಿ ಕಾಂಗ್ರೆಸ್ (State Congress) ಬಹುಮತದೊಂದಿಗೆ ಸರ್ಕಾರ ಮಾಡುವ ಶಕ್ತಿಯನ್ನು ಪಡೆದುಕೊಂಡಿತು
- ರಶ್ಮಿತಾ ಅನೀಶ್