109 ದಿನಗಳ ಇರಾನ್-ಅಮೆರಿಕಾ ಸಂಘರ್ಷ ಅಂತ್ಯ
14 ಅಂಶಗಳ ಅಡಿ ಉಭಯ ರಾಷ್ಟ್ರಗಳ ಶಾಂತಿ ಒಪ್ಪಂದ
ಹಾರ್ಮುಜ್ ರೀ ಓಪನ್- ಡೊನಾಲ್ಡ್ ಟ್ರಂಪ್ ಘೋಷಣೆ (Finally US Iran peace deal approved)
Washington: ಅಂತೂ 109 ದಿನಗಳ ಕಾಲ ಮುಂದುವರಿದಿದ್ದ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹಾಗೂ ಸಂಘರ್ಷಕ್ಕೆ ಕೊನೆಗೂ ಅಂತ್ಯ ಕಂಡಿದೆ. (Finally US Iran peace deal approved)
ಉಭಯ ರಾಷ್ಟ್ರಗಳು ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಿದ್ದು, ಜೂನ್ 19ರಂದು ಸ್ವಿಟ್ಜರ್‌ಲ್ಯಾಂಡ್‌ನ ಜಿನೇವಾದಲ್ಲಿ (Geneva) ಅಧಿಕೃತವಾಗಿ ಸಹಿ ಹಾಕಲಿವೆ.
ಈ ಮಹತ್ವದ ಬೆಳವಣಿಗೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಸಾಮಾಜಿಕ ಜಾಲತಾಣದ ಮೂಲಕ ಘೋಷಿಸಿದ್ದು, ವಿಶ್ವದ ಅತ್ಯಂತ ಪ್ರಮುಖ ಸಮುದ್ರ ಮಾರ್ಗಗಳಲ್ಲಿ ಒಂದಾದ ಹಾರ್ಮುಜ್ ಜಲಸಂಧಿ ಮತ್ತೆ ಎಲ್ಲ ರಾಷ್ಟ್ರಗಳಿಗೂ ಮುಕ್ತವಾಗಲಿದೆ ಎಂದು ತಿಳಿಸಿದ್ದಾರೆ.
ಈ ಒಪ್ಪಂದವು ಮಧ್ಯಪ್ರಾಚ್ಯ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ತರಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.

ಶಾಂತಿ ಒಪ್ಪಂದದ ಭಾಗವಾಗಿ, ಇರಾನ್ ಬಂದರುಗಳ ಮೇಲೆ ಅಮೆರಿಕ ಹೇರಿದ್ದ ನೌಕಾ ನಿರ್ಬಂಧಗಳನ್ನು ಹಂತ ಹಂತವಾಗಿ ತೆರವುಗೊಳಿಸಲಾಗುವುದು.
ಜೊತೆಗೆ, ಹಾರ್ಮುಜ್ ಜಲಸಂಧಿಯಲ್ಲಿ ಯಾವುದೇ ರೀತಿಯ ಟೋಲ್ ಅಥವಾ ಹೆಚ್ಚುವರಿ ನಿರ್ಬಂಧಗಳನ್ನು ವಿಧಿಸದಂತೆ ಒಪ್ಪಂದದಲ್ಲಿ ಸ್ಪಷ್ಟಪಡಿಸಲಾಗಿದೆ.
ಜಾಗತಿಕ ತೈಲ ಸಾಗಣೆಯ ಬಹುಪಾಲು ಈ ಜಲಸಂಧಿಯ ಮೂಲಕ ನಡೆಯುವುದರಿಂದ, ಇದರ ಪುನರಾರಂಭವು ವಿಶ್ವ ಆರ್ಥಿಕತೆಗೆ ಮಹತ್ವದ ಉತ್ತೇಜನ ನೀಡುವ ನಿರೀಕ್ಷೆಯಿದೆ.
ವಿಶ್ವದ ಹಡಗುಗಳೇ, ನಿಮ್ಮ ಎಂಜಿನ್‌ಗಳನ್ನು ಆರಂಭಿಸಿ; ತೈಲದ ಹರಿವು ಮತ್ತೆ ಆರಂಭವಾಗಲಿ” ಎಂಬ ಸಂದೇಶದ ಮೂಲಕ ಟ್ರಂಪ್ ಹೊಸ ಆರಂಭದ ಸಂಕೇತ ನೀಡಿದ್ದಾರೆ.
ಈ ಒಪ್ಪಂದದಲ್ಲಿ ಹಲವು ಪ್ರಮುಖ ಅಂಶಗಳನ್ನು ಸೇರಿಸಲಾಗಿದೆ. ಮುಂದಿನ 60 ದಿನಗಳ ಅವಧಿಯಲ್ಲಿ ಇರಾನ್‌ನ ಪರಮಾಣು ಪುಷ್ಟೀಕರಣ ಚಟುವಟಿಕೆಗಳು
ಮತ್ತು ಹೆಚ್ಚು ಪುಷ್ಟೀಕರಿಸಿದ ಯುರೇನಿಯಂ ವಿಲೇವಾರಿ ಕುರಿತು ವಿಶೇಷ ಮಾತುಕತೆ ನಡೆಸಲು ಉಭಯ ರಾಷ್ಟ್ರಗಳು ಒಪ್ಪಿಕೊಂಡಿವೆ.
ಜೊತೆಗೆ, ಅಮೆರಿಕ ತನ್ನ ನಿಯಂತ್ರಣದಲ್ಲಿಟ್ಟಿದ್ದ ಸುಮಾರು 24 ಬಿಲಿಯನ್ ಡಾಲರ್ ಮೌಲ್ಯದ ಇರಾನ್ ಆಸ್ತಿಗಳನ್ನು ಬಿಡುಗಡೆ ಮಾಡಲು ಸಮ್ಮತಿಸಿದೆ.
ಇರಾನ್ ಯಾವುದೇ ಅಣ್ವಸ್ತ್ರ ಅಭಿವೃದ್ಧಿ ಮಾಡದಿರುವ ಭರವಸೆ ನೀಡಿದ್ದು, ಪ್ರದೇಶದಲ್ಲಿದ್ದ ಅಮೆರಿಕದ ಕೆಲವು ಸೇನಾ ನಿಯೋಜನೆಗಳನ್ನು ಹಿಂತೆಗೆದುಕೊಳ್ಳುವ ನಿರ್ಧಾರವೂ ಕೈಗೊಳ್ಳಲಾಗಿದೆ.
ಇನ್ನೊಂದೆಡೆ, ಈ ಒಪ್ಪಂದವನ್ನು ಇರಾನ್ ಕೂಡ ಐತಿಹಾಸಿಕ ಗೆಲುವು ಎಂದು ಬಣ್ಣಿಸಿದೆ. ಇರಾನ್ ಉಪ ವಿದೇಶಾಂಗ ಸಚಿವ ಕಜೆಮ್ ಘರಿಬಬಾದಿ ಮಾತನಾಡಿ,
ಅಮೆರಿಕದ ವಿರುದ್ಧದ ಸಂಘರ್ಷದಲ್ಲಿ ತಮ್ಮ ದೇಶವು ರಾಜತಾಂತ್ರಿಕ ವಿಜಯ ಸಾಧಿಸಿದೆ ಎಂದು ಹೇಳಿದ್ದಾರೆ.
ದೇಶದ ಸಾರ್ವಭೌಮತ್ವ ಮತ್ತು ಭದ್ರತೆಯನ್ನು ಕಾಪಾಡಿಕೊಂಡು ಶಾಂತಿಯ ಮಾರ್ಗವನ್ನು ಆರಿಸಿಕೊಂಡಿರುವುದು ಮಹತ್ವದ ಸಾಧನೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಲೆಬನಾನ್ (Lebanon) ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ನಡೆಯುತ್ತಿದ್ದ ಉದ್ವಿಗ್ನತೆ ತಕ್ಷಣವೇ ಕಡಿಮೆಯಾಗುವ ನಿರೀಕ್ಷೆಯೂ ವ್ಯಕ್ತವಾಗಿದೆ.
ಫೆಬ್ರವರಿ ಅಂತ್ಯದಲ್ಲಿ ಆರಂಭವಾದ ಈ ಸಂಘರ್ಷವು ಅನೇಕ ರಾಜಕೀಯ ಮತ್ತು ಸೈನಿಕ ಬೆಳವಣಿಗೆಗಳಿಗೆ ಕಾರಣವಾಗಿತ್ತು. (Finally US Iran peace deal approved)
ಪಾಕಿಸ್ತಾನ, ಕತಾರ್ ಸೇರಿದಂತೆ ಹಲವು ರಾಷ್ಟ್ರಗಳ ಮಧ್ಯಸ್ಥಿಕೆಯಿಂದ ಮಾತುಕತೆಗಳು ನಡೆದ ಬಳಿಕ ಅಂತಿಮ ಒಪ್ಪಂದ ಸಾಧ್ಯವಾಗಿದೆ.
ಈ ಬೆಳವಣಿಗೆಯು ಕೇವಲ ಅಮೆರಿಕ ಮತ್ತು ಇರಾನ್‌ಗೆ ಮಾತ್ರ ಸೀಮಿತವಾಗದೇ, ಜಾಗತಿಕ ತೈಲ ಮಾರುಕಟ್ಟೆ, ಅಂತರರಾಷ್ಟ್ರೀಯ ವ್ಯಾಪಾರ ಹಾಗೂ
ಮಧ್ಯಪ್ರಾಚ್ಯದ ಭದ್ರತಾ ಪರಿಸ್ಥಿತಿಗಳ ಮೇಲೆಯೂ ಸಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ.
ಹಲವು ತಿಂಗಳ ಅನಿಶ್ಚಿತತೆಗೆ ತೆರೆ ಬಿದ್ದಿರುವುದರಿಂದ, ವಿಶ್ವ ಸಮುದಾಯವು ಈ ಒಪ್ಪಂದವನ್ನು ಮಹತ್ವದ ರಾಜತಾಂತ್ರಿಕ ಸಾಧನೆಯಾಗಿ ಪರಿಗಣಿಸುತ್ತಿದೆ.
ಇದನ್ನು ಓದಿ:https://vijayatimes.com/aircraft-crashes-at-assam/