ನವದೆಹಲಿ, ಜೂ. 08: ಆದಾಯ ತೆರಿಗೆ ಇಲಾಖೆ ಹೊಸ ಇ- ಫೈಲಿಂಗ್ ವೆಬ್ಸೈಟ್ನಲ್ಲಿ ದೋಷ ಕಂಡು ಬಂದಿದೆ. ಇದರಿಂದ ತೆರಿಗೆದಾರರು ಸಮಸ್ಯೆ ಅನುಭವಿಸುವಂತೆ ಆಗಿದ್ದು, ಇದನ್ನು ಸರಿಪಡಿಸುವಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇನ್ಫೋಸಿಸ್ ಮತ್ತು ನಂದನ್ ನಿಲೇಕಣಿ ಅವರಿಗೆ ಟ್ಯಾಗ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಈ ಸಮಸ್ಯೆ ಶೀಘ್ರದಲ್ಲಿಯೇ ಬಗೆಹರಿಯಲಿದ್ದು, ತೇರಿಗೆದಾರರನ್ನು ನಮ್ಮ ಸೇವೆ ಗುಣಮಟ್ಟದಲ್ಲಿ ನಿರಾಸೆಗೊಳಿಸುವುದಿಲ್ಲ ಎಂಬ ಭರವಸೆ ಇದೆ ಎಂದು ತಿಳಿಸಿದ್ದಾರೆ.
ಹೊಸದಾಗಿ ಆರಂಭಗೊಂಡಿರುವ ಈ ಪೋರ್ಟ್ಲ್ನಲ್ಲಿ ಸಮಸ್ಯೆ ಕಂಡು ಬಂದ ತಕ್ಷಣ ಸೇವಾದಾರರು ಈ ಕುರಿತು ನಿರ್ಮಲಾ ಸೀತಾರಾಮನ್ ಅವರ ಗಮನ ಸೆಳೆದಿದ್ದಾರೆ. ಈ ಕುರಿತು ಟ್ವೀಟ್ ಮೂಲಕ ತಿಳಿಸಿರುವ ವಿತ್ತ ಸಚಿವರು, ಬಹುನಿರೀಕ್ಷಿತ ಇ ಫೈಲಿಂಗ್ ಪೋರ್ಟಲ್ 2.0 ಅನ್ನು ಕಳೆದ ರಾತ್ರಿ ಅಂದರೆ ಜೂನ್ 7ರ ಸೋಮವಾರ ರಾತ್ರಿ 10-45ಕ್ಕೆ ಪ್ರಾರಂಭಿಸಲಾಗಿದೆ. ಈ ಪೋರ್ಟಲ್ನ ಟೈಮ್ಲೈನ್ನಲ್ಲಿ ತೊಂದರೆಗಳು ಕಂಡು ಬರುತ್ತಿರುವುದನ್ನು ನಾನು ಗಮನಿಸಿದ್ದೇನೆ. ಈ ಸಮಸ್ಯೆಯನ್ನು ಶೀಘ್ರದಲ್ಲಿಯೇ ಐಟಿ ದಿಗ್ಗಜ ಇನ್ಫೋಸಿಸ್ ಸಂಸ್ಥೆ ಮತ್ತು ನಂದನ್ ನಿಲೇಕಣಿ ಅವರು ಸರಿಮಾಡುವ ಭರವಸೆ ಹೊಂದಿದ್ದೇನೆ ಎಂದು ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.
ನೂತನ ತೆರಿಗೆ ಪಾವತಿ ಪೋರ್ಟಲ್ ತೆರಿಗೆದಾರರಿಗೆ ಅನುಕೂಲವಾಗುವಂತೆ ಹಲವು ಹೊಸ ಫೀಚರ್ಗೊಳಿಂದಿಗೆ ನಿನ್ನೆ ಹೊಸ ಇ ಫೈಲಿಂಗ್ ವೆಬ್ ಸೈಲ್ ಪ್ರಾರಂಭ ಮಾಡಲಾಗಿದೆ. ವೆಬ್ಸೈಟ್ ಲಾಂಚ್ ಬಳಿಕ ಮಾತನಾಡಿದ ಅಧಿಕಾರಿಗಳು, ಹೊಸದಾಗಿ ಪ್ರಾರಂಭಗೊಂಡಿರುವ ವೆಬ್ತಾಣ ಜನರ ಬಳಕೆಗೆ ಸರಾಗವಾಗುವ ಮುನ್ನ ಅದು ಸ್ಥಿರತೆ ಪಡೆಯಲು ಕೆಲ ಸಮಯ ಪಡೆಯಲಿದ್ದು, ಬಳಿಕ ಜನರು ಬಳಕೆಗೆ ಮುಂದಾಬಹುದು ಎಂದು ತಿಳಿಸಿದ್ದಾರೆ. ರಾಷ್ಟ್ರೀಯ ಇ ಆಡಳಿತದ ಯೋಜನೆ ಅಡಿ ಈ ಪೋರ್ಟಲ್ ಅಭಿವೃದ್ಧಿ ಪಡಿಸಲಾಗಿದೆ. ತೆರಿಗೆದಾರರು ಮತ್ತು ಇತರ ಮಧ್ಯಸ್ಥಗಾರರಿಗೆ ಆದಾಯ ತೆರಿಗೆ ಸಂಬಂಧಿತ ಸೇವೆಗಳಿಗೆ ಒಂದೇ ವೇದಿಕೆ ಒದಗಿಸುವುದು ಈ ಪೋರ್ಟಲ್ನ ಉದ್ದೇಶವಾಗಿದೆ. ಸೋಮವಾರ ಪ್ರಾರಂಭವಾಗಿರುವ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟಾಕ್ಸ್ (ಸಿಬಿಡಿಟಿ) ಮೂಲಕ ಜನರು ಆನ್ಲೈನ್ ತೆರಿಗೆ ಪಾವತಿ ಮಾಡಲು ಹಾಗೂ ಮೊಬೈಲ್ ನಲ್ಲಿ ಈ ಅಪ್ಲಿಕೇಶನ್ ಬಳಸಲು ಜೂ 18ರವರೆಗೆ ಕಾಯವೇಕು ಎಂದು ಅಧಿಕಾರಿಗಳು ತಿಳಿಸಿದ್ದರು.
ಹೆಚ್ಚಿನ ಬಳಕೆದಾರರ ಆಗಮನದಿಂದ ಸಮಸ್ಯೆ ಈ ಪೋರ್ಟಲ್ ಆರಂಭವಾಗುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಬಳಕೆದಾರರು ಆಗಮಿಸಿದ ಕಾರಣ ಈ ತಾಂತ್ರಿಕ ಸಮಸ್ಯೆ ಉಂಟಾಗಿದೆ. ಏಕ ಕಾಲದಲ್ಲಿ ಹೆಚ್ಚಿನ ಜನರು ಈ ತಾಣಕ್ಕೆ ಭೇಟಿ ನೀಡಿದ ಪರಿಣಾಮ ಪೋರ್ಟಲ್ನಲ್ಲಿ ಲೋಡ್ ಮಾಡಲು ಹೆಚ್ಚಿನ ಸಮಯ ಪಡೆಯುತ್ತಿದೆ ಎಂದು ಕೆಲವರು ತಿಳಿಸಿದ್ದಾರೆ. ಶೀಘ್ರ ಮರುಪಾವತಿ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಶೀಘ್ರ ಪ್ರಕ್ರಿಯೆಗಾಗಿ ಈ ಮರುಪಾವತಿ ಹೊಸ ಪೋರ್ಟ್ಲ್ ಅನ್ನು ಸಿದ್ದಪಡಿಸಲಾಗಿದೆ. ಈ ಮೂಲಕ ತೆರಿಗೆದಾರರರು ಮತ್ತು ಕೇಂದ್ರ ಮಂಡಳಿ ಎಲ್ಲಾ ಕಾರ್ಯಚಟುವಟಿಕೆಗಳು ಕುರಿತು ಒಂದೇ ಡ್ಯಾಶ್ ಬೋರ್ಡ್ನಲ್ಲಿ ಮಾಹಿತಿ ಪಡೆಯಬಹುದಾಗಿದೆ ಇನ್ಫೋಸಿಸ್ ಸಂಸ್ಥೆ 2017ರಲ್ಲಿ ಕೂಡ ಸರ್ಕಾರ ಜಿಎಸ್ಟಿ ತೆರಿಗೆದಾರರು ಮತ್ತು ರಿಟನ್ ಫೈಲಿಂಗ್ಗಾಗಿ ಈ ಜಿಎಸ್ಟಿಎನ್ ಪೋರ್ಟಲ್ ಅನ್ನು ಅಭಿವೃದ್ಧಿ ಪಡಿಸಿತು. ಈ ಸಂದರ್ಭದಲ್ಲಿ ಸಮಸ್ಯೆ ಕಂಡು ಬಂದು ತೊಂದರೆಯಾಗಿತ್ತು.