Noida : ವಾಹನಗಳ ಹಾರ್ನ್ನಿಂದ ಶಬ್ದ ಮಾಲಿನ್ಯ ಹೆಚ್ಚುತ್ತಿರೋದು ಎಲ್ಲರಿಗೂ ಗೊತ್ತಿರೋ ವಿಚಾರ. ಇದರಿಂದ ಸಾಕಷ್ಟು ಕಿವುಡು, ರಕ್ತದೊತ್ತಡ, ಮಾನಸಿಕ ಸಮಸ್ಯೆಗಳಂಥಾ(fine for unnecessary honking) ಆರೋಗ್ಯ ಸಮಸ್ಯೆಗಳೂ ಕಾಡುತ್ತಿವೆ ಇದಕ್ಕೆ ಬ್ರೇಕ್ ಹಾಕಲು ಸರ್ಕಾರಗಳು ನಾನಾ ಯೋಜನೆಗಳನ್ನು ರೂಪಿಸಿವೆ.
ಅನಗತ್ಯ ಹಾರ್ನ್ಗೆ ಬ್ರೇಕ್ ಹಾಕಲೇ ಬೇಕು ಅಂತ ಗಟ್ಟಿ ನಿರ್ಧಾರ ಮಾಡಿರುವ ನೋಯ್ಡಾ(Noida) ಪ್ರಾಧಿಕಾರ, ಅನಗತ್ಯ ಹಾರ್ನ್ ಮಾಡುವ ವಾಹನ ಸವಾರರಿಗೆ ಬೀಳುತ್ತೆ ಭಾರಿ ಮೊತ್ತದ ದಂಡ!
ಅನಗತ್ಯ ಹಾರ್ನ್ ಮಾಡಿ, ಸಿಕ್ಕಿ ಬಿದ್ರೆ ಅಂಥವರಿಗೆ ಬರೋಬ್ಬರಿ 10,000 ರೂ.ವರೆಗೆ ದಂಡ ವಿಧಿಸಲಾಗುವುದು ಎಂದು ನಗರದ ಟ್ರಾಫಿಕ್ ಪೊಲೀಸರು(Traffic Police) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೋಯ್ಡಾ ಪ್ರಾಧಿಕಾರವು ನಗರದ ಕೆಲವು ಪ್ರದೇಶಗಳನ್ನು ನಿಶ್ಯಬ್ಧ ವಲಯವನ್ನಾಗಿ ಮಾಡುವ ಉದ್ದೇಶದಿಂದ ವಾಹನ ಸವಾರರಿಗೆ ಅನಗತ್ಯ ಹಾರ್ನ್ ಮಾಡುವಂತಿಲ್ಲ ಎಂದು ನಿಯಮ ನೀಡಿದ್ದೇವೆ.
ಆದ್ರೆ, ಈ ನಿಯಮ ಉಲ್ಲಂಘನೆ ಮಾಡಿ ಅನಗತ್ಯ ಹಾರ್ನ್ ಮಾಡಿದ್ರೆ ಸ್ಥಳದಲ್ಲಿಯೇ 10,000 ರೂ. ದಂಡ ವಿಧಿಸುತ್ತೇವೆ. ಇದೇ ಸರಿಯಾದ ಮಾರ್ಗ ಎಂದು ಪೊಲೀಸರು ಹೇಳಿದ್ದಾರೆ.
ನೋಯ್ಡಾ ಪ್ರಾಧಿಕಾರದ ಟ್ರಾಫಿಕ್ ಸೆಲ್ 140 ಸ್ಥಳಗಳನ್ನು (fine for unnecessary honking) ಗುರುತಿಸಿದ್ದು, ಅವುಗಳನ್ನು ನಿಶ್ಯಬ್ದ ವಲಯವನ್ನಾಗಿ ಪರಿವರ್ತಿಸಲಾಗುವುದು.
ಇದನ್ನೂ ಓದಿ: https://vijayatimes.com/avatar2-earned-2-million/
ವಾಹನ ಚಾಲಕರು ತಮ್ಮ ವಾಹನ ಚಲಾಯಿಸುವಾಗ ಅನಗತ್ಯವಾಗಿ ಹಾರ್ನ್ ಮಾಡುವಂತಿಲ್ಲ. ಈ ಬಗ್ಗೆ ಖಚಿತಪಡಿಸಿಕೊಳ್ಳಲು ಮುಂದಿನ ದಿನಗಳಲ್ಲಿ ಚಿಹ್ನೆಗಳನ್ನು ಕೂಡ ಅಳವಡಿಸಲಾಗುವುದು ಎಂದು ಹೇಳಿದ್ದಾರೆ.
ನೋಯ್ಡಾ ಪ್ರಾಧಿಕಾರದ ಅಧಿಕಾರಿಗಳ ಪ್ರಕಾರ, ಮೊದಲ ಬಾರಿಗೆ ಹಾರ್ನ್ ಮಾಡಿದವರಿಗೆ 1,000 ರೂ.ಗಳ ದಂಡ ವಿಧಿಸಲಾಗುವುದು.
ಎರಡನೇ ಬಾರಿ ಹಾರ್ನ್ ಮಾಡಿ ನಿಯಮವನ್ನು ಉಲ್ಲಂಘಿಸಿದರೆ 2,000 ರೂ.ಗಳ ದಂಡವನ್ನು ವಿಧಿಸುತ್ತೇವೆ.

ಆ ದಂಡವನ್ನು ಅವರು ಶೀಘ್ರವೇ ಪಾವತಿಸಬೇಕಾಗುತ್ತದೆ! ವಿಧಿಸಲಾದ ಡೆಸಿಬಲ್(Decible) ಶಬ್ದವನ್ನು ಮೀರಿ, ಭಾರಿ ಶಬ್ದದ ಹಾರ್ನ್ ಗಳನ್ನು ಮಾಡುವ ವಾಹನ ಸವಾರರಿಗೆ 10,000 ರೂ.ಗಳ ದಂಡ ವಿಧಿಸಲಾಗುತ್ತದೆ.
ನೋಯ್ಡಾ ನಗರ ಇದೀಗ ನಿಶ್ಯಬ್ದ ವಲಯ : ಪ್ರಸ್ತುತ, ನೋಯ್ಡಾ ನಗರವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ ಎಂದು ನೋಯ್ಡಾ ಪ್ರಾಧಿಕಾರ ತಿಳಿಸಿದೆ.
ವಸತಿ, ಕೈಗಾರಿಕಾ ಮತ್ತು ವಾಣಿಜ್ಯ, ಮತ್ತು ನಾಲ್ಕನೇ ಭಾಗವು ಮೌನ ವಲಯವಾಗಿರುತ್ತದೆ.
ಅನೇಕ ಆಸ್ಪತ್ರೆಗಳು, ಧಾರ್ಮಿಕ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ನ್ಯಾಯಾಲಯದ ಆವರಣಗಳು ಈ ವಲಯದ ಅಡಿಯಲ್ಲಿ ಬರುತ್ತವೆ.
ಹೆಚ್ಚಿನ ಸಂಖ್ಯೆಯ ವೃದ್ಧರು ವಾಸಿಸುವ ಪ್ರದೇಶಗಳನ್ನು ಸಹ ಈ ವಲಯದಲ್ಲಿ ಒಳಗೊಳ್ಳಬಹುದು. ಈ ಪ್ರಮುಖ ಕಾರಣದಿಂದ ವಾಹನ ಸವಾರರಿಗೆ ಈ ನಿಯಮಾವಳಿಯನ್ನು ನೀಡಿದ್ದೇವೆ.
ನಿಶ್ಯಬ್ದ ವಲಯದಲ್ಲಿ 100 ಮೀಟರ್ ವ್ಯಾಪ್ತಿಯಲ್ಲಿ ಭಾರಿ ಹಾರ್ನ್ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.