- ನಗರದಲ್ಲಿ ನೀರಿನ ಕೊರತೆ ತಪ್ಪಿಸಲು ಕಟ್ಟುನಿಟ್ಟಿನ (fine for wasting cauvery water) ಕ್ರಮ; ಬೈಕ್, ಕಾರು ತೊಳೆಯುವುದಕ್ಕೂ ನಿಗಾ
- ನೀರಿನ ವ್ಯರ್ಥ ಬಳಕೆ ಕಂಡುಬಂದರೆ ತಕ್ಷಣ ದಂಡ; ಅಗತ್ಯ ಪ್ರದೇಶಗಳಿಗೆ ಟ್ಯಾಂಕರ್ ವ್ಯವಸ್ಥೆ
- ಬೇಸಿಗೆಯಲ್ಲಿ ಜಲಕ್ಷಾಮ ತಪ್ಪಿಸಲು ವೀಕ್ಷಕರ ತಂಡ ಹಾಗೂ ಬ್ಲೂಫೋರ್ಸ್ ಕಾರ್ಯಾಚರಣೆ
Bengaluru: ಬೇಸಿಗೆಯಲ್ಲಿ ನೀರಿನ ಕೊರತೆ ತಪ್ಪಿಸಲು ಟ್ಯಾಂಕರ್ (fine for wasting cauvery water) ವ್ಯವಸ್ಥೆ, ಬೋರ್‌ವೆಲ್ (Borewell) ನಿರ್ವಹಣೆ ಮತ್ತು ಕಟ್ಟುನಿಟ್ಟಿನ ನಿಗಾ – ಸಾರ್ವಜನಿಕರಿಗೆ ಜಲಮಂಡಳಿಯ ಎಚ್ಚರಿಕೆ.
ಶಿವರಾತ್ರಿ ಬಳಿಕ ರಾಜ್ಯದಲ್ಲಿ ಬೇಸಿಗೆ ತೀವ್ರವಾಗುವ ಸೂಚನೆಗಳು ಕಾಣಿಸಿಕೊಳ್ಳುತ್ತಿವೆ. ಈಗಾಗಲೇ ನಗರದ ಹಲವೆಡೆ ಉಷ್ಣತೆಯ ಪ್ರಮಾಣ ಹೆಚ್ಚುತ್ತಿದ್ದು, ಮಾರ್ಚ್‌ನಿಂದ ಬಿಸಿಲಿನ ತಾಪಮಾನ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಪ್ರತಿವರ್ಷದಂತೆ ಈ ಸಲವೂ ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗುವ ಆತಂಕ ಎದುರಾಗಿದೆ.

ಆದರೆ ಈ ಬಾರಿ ಬೆಂಗಳೂರಿನ ಜನತೆಗೆ ಕುಡಿಯುವ ನೀರಿನ ಕೊರತೆ ಎದುರಾಗದಂತೆ (fine for wasting cauvery water) ಬೆಂಗಳೂರು ಜಲಮಂಡಳಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಕಾವೇರಿ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗದಂತೆ ಹಾಗೂ ಅಂತರ್ಜಲ ಮಟ್ಟ ಕುಸಿಯದಂತೆ ಸಮಗ್ರ ಯೋಜನೆ ರೂಪಿಸಲಾಗಿದೆ.
ಬೇಸಿಗೆ ವೇಳೆಯಲ್ಲಿ ನೀರಿನ ಬೇಡಿಕೆ ಹೆಚ್ಚುವ ಹಿನ್ನೆಲೆಯಲ್ಲಿ ಜಲಮಂಡಳಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸಮಸ್ಯೆ ಉಂಟಾಗುವ ಪ್ರದೇಶಗಳನ್ನು ಗುರುತಿಸಿದೆ.
ನೀರಿನ ಒತ್ತಡ ಕಡಿಮೆ ಇರುವ ಹಾಗೂ ಬೋರ್‌ವೆಲ್‌ಗಳ ಮೇಲೆ ಅವಲಂಬಿತ ಪ್ರದೇಶಗಳಲ್ಲಿ ಮಿನಿ ಟ್ಯಾಂಕರ್‌ಗಳ (Mini Tanker) ಮೂಲಕ ನೀರು ಪೂರೈಸಲು ಯೋಜನೆ ಸಿದ್ಧಪಡಿಸಲಾಗಿದೆ.
ಯಾವುದೇ ವಾರ್ಡ್‌ನಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾದರೆ ತಕ್ಷಣ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಇದರಿಂದ ಜನರಿಗೆ ಕುಡಿಯುವ ನೀರಿನ ತೊಂದರೆ ಆಗದಂತೆ ನೋಡಿಕೊಳ್ಳುವುದು ಜಲಮಂಡಳಿಯ ಉದ್ದೇಶವಾಗಿದೆ.
ಸದ್ಯ ಕಾವೇರಿ ನದಿಯಿಂದ ಬೆಂಗಳೂರಿಗೆ ಪೂರೈಸಲಾಗುತ್ತಿರುವ ನೀರಿನ ಸ್ಥಿತಿ ಸಮಾಧಾನಕರವಾಗಿದೆ. ಕೆಆರ್‌ಎಸ್ ಅಣೆಕಟ್ಟಿನಲ್ಲಿ ಸುಮಾರು 54 ಟಿಎಂಸಿ ನೀರು ಲಭ್ಯವಿದ್ದು, ಜುಲೈವರೆಗೆ ನಗರಕ್ಕೆ ಅಗತ್ಯವಿರುವ ಸುಮಾರು 14 ಟಿಎಂಸಿ ನೀರು ಪೂರೈಸಲು ಸಾಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದಾಗ್ಯೂ, ನಗರದಲ್ಲಿ ಬೋರ್‌ವೆಲ್ ನೀರಿನ ಮೇಲೂ ಹೆಚ್ಚಿನ ಅವಲಂಬನೆ ಇರುವುದರಿಂದ ಬೇಸಿಗೆಯಲ್ಲಿ ಅಂತರ್ಜಲ ಮಟ್ಟ ಕುಸಿಯುವ ಸಾಧ್ಯತೆ ಇದೆ.
ಕಳೆದ ವರ್ಷದಿಂದ ಜಲಮಂಡಳಿಯೇ ಹಲವು ಬೋರ್‌ವೆಲ್‌ಗಳ ನಿರ್ವಹಣೆ ಹೊತ್ತುಕೊಂಡಿದ್ದು, ಅವುಗಳ ಸಮರ್ಪಕ ಬಳಕೆ ಹಾಗೂ ಸಂರಕ್ಷಣೆಗೆ ಕ್ರಮಗಳನ್ನು ಕೈಗೊಂಡಿದೆ.
ಈ ನಡುವೆ ಕಾವೇರಿ ನೀರನ್ನು ಅನಾವಶ್ಯಕವಾಗಿ ವ್ಯರ್ಥ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಜಲಮಂಡಳಿ ಸಜ್ಜಾಗಿದೆ. ಬೈಕ್, ಕಾರು ತೊಳೆಯುವುದು, ಕಟ್ಟಡ ನಿರ್ಮಾಣ ಕಾರ್ಯಗಳಿಗೆ ಕುಡಿಯುವ ನೀರು ಬಳಸುವುದು ಅಥವಾ ನೀರನ್ನು ಬೇಕಾಬಿಟ್ಟಿಯಾಗಿ ಹರಿಸುವುದು ಕಂಡುಬಂದರೆ ₹5,000 ವರೆಗೆ ದಂಡ ವಿಧಿಸಲಾಗುತ್ತದೆ.
ಈ ನಿಯಮಗಳನ್ನು ಅನುಷ್ಠಾನಗೊಳಿಸಲು ವೀಕ್ಷಕರ ತಂಡ ಮತ್ತು ಬ್ಲೂಫೋರ್ಸ್ (Blueforce) ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ನೀರಿನ ದುರ್ಬಳಕೆ ತಡೆಯುವ ಮೂಲಕ ನಗರದಲ್ಲಿ ಜಲಕ್ಷಾಮ ಪರಿಸ್ಥಿತಿ ಉಂಟಾಗದಂತೆ ನೋಡಿಕೊಳ್ಳುವುದು ಮುಖ್ಯ ಉದ್ದೇಶವಾಗಿದೆ.
ಜನರು ಜೀವಜಲವಾದ ನೀರನ್ನು ಸಂಯಮದಿಂದ ಬಳಸಬೇಕು ಎಂದು ಜಲಮಂಡಳಿ ಅಧಿಕಾರಿಗಳು ಮನವಿ ಮಾಡಿದ್ದಾರೆ. ಬೇಸಿಗೆಯಲ್ಲಿ ನೀರಿನ ಬೇಡಿಕೆ ಹೆಚ್ಚುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಜಾಗೃತರಾಗಿರಬೇಕು. ಅನಗತ್ಯವಾಗಿ ನೀರು ಹರಿಸುವುದನ್ನು ತಪ್ಪಿಸಿ, ಮಿತವಾಗಿ ಬಳಕೆ ಮಾಡಿದರೆ ನಗರದಲ್ಲಿ ನೀರಿನ ಕೊರತೆ ತಗ್ಗಿಸಲು ಸಹಕಾರಿಯಾಗುತ್ತದೆ.
ಸಾರ್ವಜನಿಕರ ಸಹಭಾಗಿತ್ವ ಇದ್ದರೆ ಮಾತ್ರ ಜಲಮಂಡಳಿಯ ಯೋಜನೆಗಳು ಯಶಸ್ವಿಯಾಗಲು ಸಾಧ್ಯ. ನೀರನ್ನು ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯೆಂಬ ಅರಿವು ಮೂಡಿದರೆ ದಂಡದ ಅವಶ್ಯಕತೆಯೇ ಇರುವುದಿಲ್ಲ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.
ಇದನ್ನು ಓದಿ : https://vijayatimes.com/ccb-raid-on-drugs/