Finland : ಇತ್ತೀಚಿಗೆ ಫಿನ್ಲ್ಯಾಂಡ್ ನ(Finland Education System) ಶಿಕ್ಷಣ ವ್ಯವಸ್ಥೆಯ ಬಗ್ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು,
ಈಗಾಗಲೇ ಫಿನ್ನಿಷ್ ಮಾಧರಿಯ ಶಿಕ್ಷಣ ನೀಡುವಂತಹ ಶಾಲೆಗಳು ಭಾರತೀಯ ನಗರಗಳಾದ್ಯಂತ ತಲೆಯೆತ್ತುತ್ತಿವೆ.
ಈ ಶಿಕ್ಷಣ ವ್ಯವಸ್ಥೆಯಲ್ಲಿ, ಪಠ್ಯಪುಸ್ತಕ ಆಧಾರಿತ, ಪರೀಕ್ಷಾ ಆಧಾರಿತ ಶಿಕ್ಷಣದ ಬದಲಿಗೆ ಚಟುವಟಿಕೆ ಆಧಾರಿತ ಕಲಿಕೆ, ಪ್ರಕೃತಿಯ ಜೊತೆಗಿನ ಸಂವಹನ ಮತ್ತು ಜೀವನ ಕೌಶಲ್ಯಗಳಿಗೆ ಒತ್ತು ನೀಡಲಾಗುತ್ತಿದೆ.
ಕಳೆದ ವರ್ಷವಷ್ಟೇ, ಪುಣೆ ನಗರದ ಅಕಾಡೆಮಿ ಸ್ಕೂಲ್ ಫಿನ್ನಿಷ್ ಪಠ್ಯಕ್ರಮವನ್ನು ಅಳವಡಿಸಿಕೊಂಡಿದ್ದು, ಇದರ ಕುರಿತು ಮಾಹಿತಿ ಇಲ್ಲಿದೆ.
ಈಗಿನ ಶಾಲಾ ಶಿಕ್ಷಣದ ವೈಖರಿಯು ಭಾರತೀಯ ಶಿಕ್ಷಣದಲ್ಲಿ(Finland Education System) ದೀರ್ಘಕಾಲದಿಂದಲೂ ಪ್ರಾಬಲ್ಯ ಹೊಂದಿದ್ದ ಸಿದ್ಧಾಂತದ ವಿಧಾನಕ್ಕೆ ವಿರಾಮ ಹಾಕಿದೆ.
ಸರ್ಕಾರಿ ಏಜೆನ್ಸಿಗಳು ಪಠ್ಯಕ್ರಮವನ್ನು ರೂಪಿಸುವ ಕಾರಣ, ಶಿಕ್ಷಕರು ಮತ್ತು ಶಾಲೆಗಳು ನಾವೀನ್ಯತೆಗೆ ಒಗ್ಗಿಕೊಳ್ಳುವ ಗುಣವನ್ನು ಹೊಂದಿರುವುದಿಲ್ಲ.
ಇದನ್ನೂ ಓದಿ : https://vijayatimes.com/bommai-on-border-dispute/
ಹೀಗಾಗಿ, ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳುವುದರ ಬದಲು ನೆನಪಿಟ್ಟುಕೊಳ್ಳುವುದರ ಮೇಲೆ ಹೆಚ್ಚು ಕೇಂದ್ರೀಕರಿಸುತ್ತಾರೆ. ಇನ್ನೊಂದೆಡೆ,
ಇದು ಫಿನ್‌ಲ್ಯಾಂಡ್‌ನಲ್ಲಿ ಈಗಾಗಲೇ ಜಾಗತಿಕವಾಗಿ ಮೆಚ್ಚುಗೆ ಪಡೆದ ಶಾಲಾ ವ್ಯವಸ್ಥೆಯನ್ನು ಅನುಕರಿಸುವ ಒಂದು ಪ್ರಯತ್ನವಾಗಿದ್ದು, ಇದೀಗ ಭಾರತದಲ್ಲಿಯೂ ಗಮನಸೆಳೆಯುತ್ತಿದೆ.
ಇದನ್ನೂ ಓದಿ : https://vijayatimes.com/kantara-effect/
ಇಷ್ಟೇ ಅಲ್ಲದೇ, ಫಿನ್‍ಲ್ಯಾಂಡ್ ದೇಶವೂ ಸಹ ತನ್ನ ಶಿಕ್ಷಣ ಮಾದರಿಯನ್ನು ಜಗತ್ತಿನಾದ್ಯಂತ ಪಸರಿಸಲು ಸಜ್ಜಾಗಿದ್ದು, 2015 ರಲ್ಲಿ ಫಿನ್‍ಲ್ಯಾಂಡ್ ಸರ್ಕಾರವು ದೇಶದ ಶಿಕ್ಷಣ ಮಾದರಿಯನ್ನು ರಫ್ತು ಮಾಡುವ ಗುರಿಯೊಂದಿಗೆ ‘ಶಿಕ್ಷಣ ಫಿನ್‌ಲ್ಯಾಂಡ್’ ಎಂಬ ವೇದಿಕೆಯನ್ನು ರಚಿಸಿತು.
ಇದು OECD ಯ ಇಂಟರ್‌ನ್ಯಾಶನಲ್ ಸ್ಟೂಡೆಂಟ್ ಅಸೆಸ್‌ಮೆಂಟ್(PISA) ಪರೀಕ್ಷೆಗಳಲ್ಲಿ ಎಂದಿನಂತೆ ಅಗ್ರಸ್ಥಾನದಲ್ಲಿದ್ದು, ಶೇಖಡಾ 90 ರಷ್ಟು ಹೈಸ್ಕೂಲ್ ಪದವಿ ದರವನ್ನು ಹೊಂದಿದೆ. ಜಾಗತಿಕ ಮಾರುಕಟ್ಟೆಗಳನ್ನು ಗುರುತಿಸುವುದು, ಪಾಲುದಾರ ಶಿಕ್ಷಣ ಸಂಸ್ಥೆಯನ್ನು ಹುಡುಕುವುದು ಮತ್ತು ನಿರ್ದಿಷ್ಟ ದೇಶಗಳಿಗೆ ಶಿಕ್ಷಣಶಾಸ್ತ್ರವನ್ನು ಅಗತ್ಯಕ್ಕೆ ತಕ್ಕಂತೆ ಮಾರ್ಪಾಡು ಮಾಡುವ ಫಿನ್ನಿಷ್ ಕಂಪನಿಗಳೊಂದಿಗೆ ಇದು ಕಾರ್ಯನಿರ್ವಹಿಸುತ್ತದೆ.
https://youtu.be/cGcAHe7IqIA ಕೆ.ಆರ್ ರಸ್ತೆಯಲ್ಲಿ ಚೆಂದದ ಬಿದಿರು ಮಾರುವ ಬಡ ಕುಟುಂಬಗಳು.
ಕೇವಲ ಖಾಸಗಿಯಷ್ಟೇ ಅಲ್ಲದೇ, ಸಾರ್ವಜನಿಕ ಶಾಲೆಗಳೂ ಫಿನ್‌ಲ್ಯಾಂಡ್‌ನಿಂದ ಪಾಠಗಳನ್ನು ಅಳವಡಿಸಿಕೊಳ್ಳಲು ಪ್ರಾರಂಭಿಸುತ್ತಿವೆ. ಕೇರಳದ ಶಿಕ್ಷಣ ಸಚಿವರು ಈಗಾಗಲೇ, “ಭಾರತವು ಅತ್ಯುತ್ತಮ ಸರ್ಕಾರಿ ಶಾಲೆಗಳ ನೆಲೆಯಾಗಿದೆ, ಶೀಘ್ರವೇ ರಾಜ್ಯವು ಶಿಕ್ಷಕರ ತರಬೇತಿ, ಪಠ್ಯಕ್ರಮ ಸುಧಾರಣೆ ಹಾಗೂ ತರಗತಿಯ ತಂತ್ರಜ್ಞಾನದಲ್ಲಿ ಫಿನ್‌ಲ್ಯಾಂಡ್‌ನೊಂದಿಗೆ ಪಾಲುದಾರಿಕೆಯನ್ನು ಹೊಂದಲಿದೆ” ಎಂದು ಘೋಷಿಸಿದ್ದರು.