Chikmagalur: ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ವಿರುದ್ಧ ಪೋಸ್ಟರ್ ಅಂಟಿಸಲಾಗಿದ್ದು, (FIR against BJP workers) ಬಿಜೆಪಿಯು ಯತೀಂದ್ರ ವಿಡಿಯೋ ವಿಚಾರವನ್ನ ದೊಡ್ಡ ಅಸ್ತ್ರವನ್ನಾಗಿ
ಮಾಡಿಕೊಂಡಿದೆ. ಇದೀಗ ಕಾಂಗ್ರೆಸ್ ವಿರುದ್ಧ ಪೋಸ್ಟರ್ ಅಂಟಿಸಿದ್ದ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ, ಶಶಿ ಅಲ್ದೂರು ಸೇರಿದಂತೆ ಐವರ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್
ಠಾಣೆಯಲ್ಲಿ ಎಫ್ಐಆರ್ (FIR against BJP workers) ದಾಖಲಿಸಲಾಗಿದೆ.
ಕಾಂಗ್ರೆಸ್ ಗ್ಯಾರಂಟಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, (D K Shivakumar) ಯತೀಂದ್ರ ಮತ್ತು ಕೆಜೆ ಜಾರ್ಜ್ ವಿರುದ್ಧ ವ್ಯಂಗ್ಯ ಪೋಸ್ಟರ್ ಅಂಟಿಸಿದ್ದ ಬಿಜೆಪಿ ಯುವ ಮೋರ್ಚಾ
ಜಿಲ್ಲಾಧ್ಯಕ್ಷ ಸಂತೋಷ, ಶಶಿ ಅಲ್ದೂರು, ಸೇರಿದಂತೆ ಐವರ ವಿರುದ್ಧ ಎಫ್ಐಆರ್ (FIR) ಹಾಕಲಾಗಿದ್ದು, ತಾಲೂಕು ಕಚೇರಿ, ಕೆ.ಇ.ಬಿ ಕಚೇರಿ (KEB Office) ಸೇರಿದಂತೆ ಉಸ್ತುವಾರಿ ಸಚಿವರ
ಕಚೇರಿಯಲ್ಲಿ ಪೋಸ್ಟರ್ ಅಂಟಿಸಿದ್ದರು.
ಬಿಜೆಪಿ, ಜೆಡಿಎಸ್ (BJP JDS) ನಾಯಕರು ಒಮ್ಮೆಲೆ ಸಿಎಂ ಸಿದ್ದರಾಮಯ್ಯ ಹಾಗೂ ಪುತ್ರನ ವಿರುದ್ಧ ಮುಗಿಬಿದ್ದಿದ್ದು, ಮೈಸೂರಿನಲ್ಲಿ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah)
ಮಾತನಾಡಿದ್ದ ವಿಡಿಯೋ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಸದ್ಯ ಇದು ಬೂದಿ ಮುಚ್ಚಿದ ಕೆಂಡದಂತಿರುವಾಗ ಚಿಕ್ಕಮಗಳೂರಿನಲ್ಲಿ ಪೋಸ್ಟರ್ ವಾರ್ ಜೋರಾಗಿದೆ.
ಪೋಸ್ಟರ್ನಲ್ಲಿ ವೈಎಸ್ಟಿ ಸಂಗ್ರಹ ಸಮಿತಿಯ ಸುತ್ತೋಲೆ ಎಂದು ಬರೆದು ಲೇವಡಿ ಮಾಡಿರುವ ಬಿಜೆಪಿ ‘ಹಲೋ ಅಪ್ಪಾ, ಆ್ಯಪ್ ಡೌನ್‌ಲೋಡ್ (Hello Appa, app download) ಮಾಡಿ ಪೇಮೆಂಟ್
ಮಾಡಿ ಅಂತ ಟೀಕಿಸಿದೆ. ಕಾಂಗ್ರೆಸ್ನಿಂದ ಹಗಲು ದರೋಡೆ ಅಂತ ಸಿಕ್ಕ ಸಿಕ್ಕ ಕಡೆಗಳೆಲ್ಲಾ ಅಂಟಿಸಲಾಗಿದೆ. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಪೋಸ್ಟರ್ (Poster) ತೆರವು ಮಾಡಿದ್ದಾರೆ.
ರಾಜ್ಯದಲ್ಲಿ ಜನರು ವಿದ್ಯುತ್ ಕಡಿತ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ಇಂಧನ ಇಲಾಖೆ (Department of Energy) ಸಚಿವರ ವಿರುದ್ಧ ಪೋಸ್ಟರ್ ಅಂಟಿಸಲಾಗಿದ್ದು,
ರಾಜ್ಯವನ್ನು ಕತ್ತಲೆಗೆ ದೂಡಿ ಇಂಧನ ಸಚಿವ ಕೆ.ಜೆ ಜಾಜ್೯ (K J George) ಕಾಣೆಯಾಗಿದ್ದಾರೆ. ಹುಡುಕಿಕೊಟ್ಟವರಿಗೆ ಕನಿಷ್ಠ ಸಿಂಗಲ್ ಫೇಸ್ ವಿದ್ಯುತ್ ಉಚಿತ, ಖಚಿತ, ನಿಶ್ಚಿತ ಎಂದು ಪೋಸ್ಟರ್ನಲ್ಲಿ
ಬರೆಯಲಾಗಿದೆ. ಕರ್ನಾಟಕ ಎಟಿಎಂ (Karnataka ATM) ಎಂದು ಕಾಂಗ್ರೆಸ್ ಹೈಕಮಾಂಡ್ಗೆ ಬಿಜೆಪಿ ಆರೋಪಿಸುತ್ತಲೇ ಇದೆ. ಇದೀಗ ಪೋಸ್ಟರ್ ಮೂಲಕವೂ ಆರೋಪಿಸಿದ್ದು, ಕಾಂಗ್ರೆಸ್ ನಾಯಕಿ
ಸೋನಿಯಾ ಗಾಂಧಿ (Sonia Gandhi) ಮತ್ತು ಕೆಜೆ ಜಾರ್ಜ್ ಸಂಭಾಷಣೆ ನಡೆಸುವ ರೀತಿಯಲ್ಲಿ ಪೋಸ್ಟರ್ ಅಂಟಿಸಲಾಗಿದೆ. ಈ ತಿಂಗಳ ಕಪ್ಪ ಎಲ್ಲಿ ಎಂದು ಸೋನಿಯಾ ಗಾಂಧಿ ಕೇಳುತ್ತಾರೆ.
ಇದಕ್ಕೆ ಕೆಜೆ ಜಾರ್ಜ್, ಈಗ ತಾನೇ ವಿದ್ಯುತ್ ಬಿಲ್ ಜಾಸ್ತಿ ಮಾಡಿದ್ದೀವಿ. ಬರುತ್ತೆ ತಡೀರಿ ಮೇಡಂ ಎಂದು ಹೇಳುವ ರೀತಿ ಬರೆಯಲಾಗಿದೆ.
ಇದನ್ನು ಓದಿ: ಸಮಾನತೆಗಾಗಿ, ಈ GiLeBi ಯ ಜನ್ಮ-ಆಧಾರಿತ ಸವಲತ್ತುಗಳನ್ನು ಕಿತ್ತುಹಾಕಬೇಕು – ನಟ ಚೇತನ್
- ಭವ್ಯಶ್ರೀ ಆರ್.ಜೆ