Bengaluru: ಭೂ ಕಬಳಿಕೆ ಹಾಗೂ ಜಾತಿ ನಿಂದನೆ ಆರೋಪದಡಿ ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವರಾಗಿರುವ ಡಿ ಸುಧಾಕರ್ (FIR against D Sudhakar) ವಿರುದ್ಧ ಎಫ್‌ಐಆರ್
ದಾಖಲಾಗಿದ್ದು, ಬೆಂಗಳೂರಿನ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಚಿವರ ವಿರುದ್ಧವೇ ಎಫ್ಐಆರ್ (FIR) ದಾಖಲಾಗಿರೋದು ಸಿದ್ದರಾಮಯ್ಯ ಸರ್ಕಾರಕ್ಕೆ ಮುಜುಗರ
ಭಾರೀ ಉಂಟಾಗಿದೆ. ವಿಪಕ್ಷಗಳು ಇದೇ ಅಸ್ತ್ರವನ್ನು ಸರ್ಕಾರದ ವಿರುದ್ಧ ಪ್ರಯೋಗಿಸುವ ಸಾಧ್ಯತೆ ಇದೆ ಮತ್ತು ಬಿಜೆಪಿ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್ ಈಗಾಗಲೇ ಸಚಿವರ ವಜಾಕ್ಕೆ ಆಗ್ರಹಿಸಿದ್ದಾರೆ.

ಸಚಿವ ಡಿ ಸುಧಾಕರ್ ಯಲಹಂಕ ಗ್ರಾಮದ ಸರ್ವೇ ನಂಬರ್ 108/1ರ ಜಮೀನು ಕಬಳಿಸಿದ್ದಾರೆ. ಅಲ್ಲದೆ ನ್ಯಾಯಾಲಯದಲ್ಲಿ ಈ ಜಮೀನಿನ ವಿವಾದದ ಬಗ್ಗೆ ವಿಚಾರಣೆ ನಡೆಯುತ್ತಿರುವಾಗಲೇ ಸಚಿವರು
ಗುಂಪು ಕಟ್ಟಿಕೊಂಡು ಬಂದು ದೌರ್ಜನ್ಯ ಎಸಗಿದ್ದಾರೆ ಎಂದು ಸುಬ್ಬಮ್ಮ ಹಾಗೂ ಆಶಾ ಎಂಬುವರು ದೂರು ನೀಡಿದ್ದಾರೆ. ಈ ದೂರನ್ನು ಆಧರಿಸಿ ಸಚಿವ ಸುಧಾಕರ್ ಅವರ ವಿರುದ್ಧ ಶ್ರೀನಿವಾಸ್
ಮತ್ತು ಭಾಗ್ಯಮ್ಮ ಹಾಗೂ ಇತರ 35 ಮಂದಿ ದಲಿತರ ಮೇಲೆ ದೌರ್ಜನ್ಯ, ವಂಚನೆ, ಹಲ್ಲೆ ಹಾಗೂ ಜಾತಿ (FIR against D Sudhakar) ನಿಂದನೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.
ಸಚಿವ ಡಿ ಸುಧಾಕರ್ ಅವರು ಈ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದಾರೆ ಎಂದು ಯಲಹಂಕ ಪೊಲೀಸರು ತಿಳಿಸಿದ್ದು, ಸೆವೆನ್ ಹಿಲ್ಸ್ ಡೆವಲಪರ್ಸ್‌ಮತ್ತು ಟ್ರೇಡರ್ಸ್ (Seven Hills Develpoers and
Traders)ಕಂಪನಿಯ ಪಾಲುದಾರರಾಗಿರುವ ಸಚಿವ ಸುಧಾಕರ್ ಅವರು ಮೋಸದಿಂದ ಯಲಹಂಕ ಗ್ರಾಮದ ಸರ್ವೇ ನಂಬರ್ 108/1ರ ಜಮೀನು ಕಬಳಿಸಿದ್ದಾರೆ. ಜೊತೆಗೆ ನ್ಯಾಯಾಲಯದಲ್ಲಿ
ಈ ಜಮೀನಿನ ವಿವಾದದ ಬಗ್ಗೆ ವಿಚಾರಣೆ ನಡೆಯುತ್ತಿರುವಾಗಲೇ ಸಚಿವರು ಗುಂಪು ಕಟ್ಟಿಕೊಂಡು ಬಂದು ದೌರ್ಜನ್ಯ ಎಸಗಿರುವುದಲ್ಲದೆ ಮನೆಯಲ್ಲಿದ್ದ ತಮ್ಮ ಮಗಳ ಮೇಲೆ ಹಲ್ಲೆ ನಡೆಸಿದ್ದಾರೆ.
ಅಲ್ಲದೆ, ಕುಟುಂಬದ ಮಹಿಳೆಯರನ್ನು ಹೊರಗೆ ಎಳೆದೊಯ್ದು ಮನೆಯನ್ನು ಜೆಸಿಬಿ ಮೂಲಕ ಕೆಡವಿಸಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿರುವುದಲ್ಲದೆ ಸುಬ್ಬಮ್ಮ ಅವರ
ಮಗಳು ಆಶಾ ಮೇಲೂ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ, ಸಚಿವರ ನಡೆಯನ್ನು ಪ್ರಶ್ನೆ ಮಾಡಿದಾಗ ಜಾತಿ ನಿಂದನೆ ಮಾಡಿ ದೌರ್ಜನ್ಯ ಎಸಗಿದ್ದಾರೆ ಎಂದು ದೂರು ನೀಡಲಾಗಿದೆ.

ಸಚಿವ ಸುಧಾಕರ್ ಅವರ ಪುತ್ರ ಸುಹಾಸ್ ಅವರು ಸೆವೆನ್ ಹಿಲ್ಸ್ ಡೆವಲಪರ್ಸ್ ಮತ್ತು ಟ್ರೇಡರ್ಸ್ ಆಸ್ತಿಗೆ 11 ಮಂದಿ ಅತಿಕ್ರಮ ಪ್ರವೇಶ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿರುವ
ಒಂದು ದಿನದ ಬಳಿಕ ಈ ಘಟನೆ ನಡೆದಿದೆ.
ಸಚಿವರ ವಜಾಕ್ಕೆ ಒತ್ತಾಯ: ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basavaraj Patil Yatnal) ಅವರು ಈ ಕುರಿತು ಟ್ವೀಟ್ ಮಾಡಿದ್ದು, ಭೂಗಳ್ಳತನದ ಆರೋಪವನ್ನು
ಎದುರಿಸುತ್ತಿರುವ ಪ್ರಭಾವಿ ಸಚಿವರನ್ನು ಸಂಪುಟದಿಂದ ಕೈಬಿಟ್ಟು ಮಾನ್ಯ ಮುಖ್ಯಮಂತ್ರಿಗಳು ಮೇಲ್ಪಂಕ್ತಿ ಹಾಕಿಕೊಡಲಿ ಹಾಗೂ ತಮ್ಮ ಪ್ರಭಾವ ಬಳಸಿ ಪ್ರಕರಣವನ್ನು ತಿರುಚುವ ಮೊದಲು ಅವರನ್ನುಸಂಪುಟದಿಂದ
ಕೈ ಬಿಡಿಸಲಿ ಮತ್ತು ನಿಷ್ಠೆ, ಪ್ರಾಮಾಣಿಕತೆ ಇವೆಲ್ಲ ಭಾಷಣಕ್ಕೆ ಸೀಮಿತವಾಗದೆ ಮುಖ್ಯಮಂತ್ರಿಗಳು ತಮ್ಮ ಕರ್ತವ್ಯ ಪ್ರಜ್ಞೆ ಮೆರೆದು ಕಳಂಕಿತರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನು ಓದಿ: ಆರೋಗ್ಯ ಮಾಹಿತಿ: ಅರಿಶಿನ ಹಾಗೂ ತುಪ್ಪ ಸೇವಿಸೋದು ಆರೋಗ್ಯಕ್ಕೆ ಒಳ್ಳೆಯದು
- ಭವ್ಯಶ್ರೀ ಆರ್.ಜೆ