- ಲೈಕ್ ಮತ್ತು ಫಾಲೋವರ್ಸ್ ಗಾಗಿ ಅಪಾಯಕಾರಿ (fir against posting dangerous content)ಕಂಟೆಂಟ್ ಪೋಸ್ಟ್ ಮಾಡಿದವರ ಮೇಲೆ ಕೇಸ್
- ಅಶ್ಲೀಲ ಕಂಟೆಂಟ್ ಹಂಚಿಕೆ ಆರೋಪ; ಬೆಂಗಳೂರಿನಲ್ಲಿ 28 ಅಕೌಂಟ್‌ಗಳ ವಿರುದ್ಧ ಎಫ್‌ಐಆರ್
- ಸೋಶಿಯಲ್ ಮೀಡಿಯಾ ಬಳಕೆದಾರರಿಗೆ ಬೆಂಗಳೂರು ಸೈಬರ್ ಪೊಲೀಸರ ಖಡಕ್ ಸಂದೇಶ
Bengaluru: ಇಂದಿನ ಡಿಜಿಟಲ್ ಯುಗದಲ್ಲಿ ಸೋಶಿಯಲ್ ಮೀಡಿಯಾ (Social Media) ಎಂಬುದು ಕೇವಲ ಮನರಂಜನೆಯ (fir against posting dangerous content) ವೇದಿಕೆಯಷ್ಟೇ ಅಲ್ಲ, ಬದುಕಿನ ಅವಿಭಾಜ್ಯ ಅಂಗವಾಗಿಬಿಟ್ಟಿದೆ.
ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರೂ ದಿನನಿತ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ.
ಊಟಕ್ಕಿಂತ ಮೊದಲು ಮೊಬೈಲ್, ಕೆಲಸಕ್ಕಿಂತ ಮೊದಲು ನೆಟ್‌ವರ್ಕ್ ಬೇಕು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ಆದರೆ ಇದೇ ಸೋಶಿಯಲ್ ಮೀಡಿಯಾ ಕೆಲವರಿಗೆ ಹೆಸರು, ಲೈಕ್, ಫಾಲೋವರ್ಸ್ ಗಳಿಗಾಗಿ ಅಪಾಯಕಾರಿ ಪ್ರಯೋಗಗಳಿಗೆ ದಾರಿ ಮಾಡಿಕೊಡುತ್ತಿದೆ.
ಜನಪ್ರಿಯತೆ ಪಡೆಯುವ ಹುಚ್ಚಿನಲ್ಲಿ ಕೆಲವರು ಮಿತಿಮೀರಿದ ಕಂಟೆಂಟ್‌ಗಳನ್ನು (Contents) ಪೋಸ್ಟ್ ಮಾಡುತ್ತಿದ್ದು, ಇದು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.

ಇತ್ತೀಚಿನ ದಿನಗಳಲ್ಲಿ “ಪೂರ್ತಿ ವಿಡಿಯೋ ಬೇಕಾದ್ರೆ ಫಾಲೋ ಮಾಡಿ”, “ಲೈಕ್ ಮಾಡಿದ್ರೆ ಮುಂದಿನ ಭಾಗ” ಎಂಬ ಶೀರ್ಷಿಕೆಗಳೊಂದಿಗೆ ಅಶ್ಲೀಲ ಅಥವಾ ಅಸಹ್ಯಕರ ವಿಡಿಯೋ ತುಣುಕುಗಳನ್ನು ಹಂಚಿಕೊಳ್ಳುವ ಪ್ರವೃತ್ತಿ ಹೆಚ್ಚಾಗಿದೆ.
ಇದರಿಂದ ಅನೇಕ ಬಳಕೆದಾರರಿಗೆ ಮಾನಸಿಕ ಅಸಹನೆ ಉಂಟಾಗುತ್ತಿದೆ. ಸಾರ್ವಜನಿಕ ವೇದಿಕೆಯಲ್ಲಿ (fir against posting dangerous content) ಪ್ರದರ್ಶಿಸಬಾರದ ವಿಷಯಗಳನ್ನು ಲೈಕ್‌ಗಾಗಿ ಹಂಚಿಕೊಳ್ಳುವುದು ಕಾನೂನು ಉಲ್ಲಂಘನೆಯಾಗುತ್ತದೆ ಎಂಬ ಅರಿವು ಹಲವರಿಗೆ ಇಲ್ಲದಂತಾಗಿದೆ.
ಇದೇ ಕಾರಣಕ್ಕೆ ಬೆಂಗಳೂರಿನ ಒಬ್ಬ ಜವಾಬ್ದಾರಿಯುತ ನಾಗರಿಕರು ಈ ವಿಚಾರವನ್ನು ಸೈಬರ್ ಕ್ರೈಂ (Cyber Crime) ಪೊಲೀಸರ ಗಮನಕ್ಕೆ ತಂದಿದ್ದು, ಪ್ರಕರಣ ಗಂಭೀರ ತಿರುವು ಪಡೆದುಕೊಂಡಿದೆ.
ದೂರು ಸ್ವೀಕರಿಸಿದ ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ತಕ್ಷಣವೇ ತನಿಖೆಗೆ ಮುಂದಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಅಸಭ್ಯ ಹಾಗೂ ಪ್ರಚೋದನಕಾರಿ ಪೋಸ್ಟ್‌ಗಳನ್ನು ಹಾಕುತ್ತಿದ್ದ ಒಟ್ಟು 28 ಖಾತೆಗಳ ವಿರುದ್ಧ ಎಫ್‌ಐಆರ್ (FIR) ದಾಖಲಿಸಿದ್ದಾರೆ.
ಕೇವಲ ಪ್ರಕರಣ ದಾಖಲಿಸುವುದಕ್ಕೆ ಸೀಮಿತವಾಗದೆ, ಸಂಬಂಧಿಸಿದ ಪೋಸ್ಟ್‌ಗಳು, ವಿಡಿಯೋಗಳು ಮತ್ತು ಚಿತ್ರಗಳನ್ನು ಡಿಜಿಟಲ್ ಸಾಕ್ಷಿಯಾಗಿ ಸಂಗ್ರಹಿಸಲಾಗಿದೆ.
ಈ ಅಕೌಂಟ್‌ಗಳನ್ನು (Account) ನಿರ್ವಹಿಸುತ್ತಿದ್ದ ವ್ಯಕ್ತಿಗಳನ್ನು ಪತ್ತೆಹಚ್ಚುವ ಪ್ರಕ್ರಿಯೆ ಜೋರಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ಕ್ರಮಗಳು ಕೈಗೊಳ್ಳುವ ಸಾಧ್ಯತೆ ಇದೆ.
ಸಮಾಜದಲ್ಲಿ ಜಾಗೃತಿ ಮೂಡಿಸಬೇಕಾದ, ಮಾಹಿತಿ ಹಂಚಿಕೊಳ್ಳಬೇಕಾದ ಸೋಶಿಯಲ್ ಮೀಡಿಯಾ ಇಂದು ಕೆಲವರಿಂದ ಸಮಾಜಕ್ಕೆ ಅಪಾಯಕಾರಿಯಾಗಿ ಮಾರ್ಪಡುತ್ತಿದೆ.
ಅಶ್ಲೀಲತೆ, ನಕಲಿ ಗಿಮಿಕ್‌ಗಳು , ಅಪಾಯಕಾರಿ ಚಾಲೆಂಜ್‌ಗಳು ಎಲ್ಲವೂ ಕೇವಲ ಲೈಕ್ ಮತ್ತು ಶೇರಿಗಾಗಿ ಎಂಬ ಮನಸ್ಥಿತಿ ಯುವಜನತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.
ಪೊಲೀಸರು ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದಾರೆ: ಲೈಕ್, ಕಾಮೆಂಟ್, ಫಾಲೋವರ್ಸ್ ಗಾಗಿ ಕಾನೂನು ಮೀರಿ ವರ್ತಿಸಿದರೆ, ಅದು ಅಪರಾಧ.
ಆನ್‌ಲೈನ್ (Online) ಎನ್ನುವುದು ಕಾನೂನಿನಿಂದ ಹೊರಗಿನ ಜಗತ್ತು ಅಲ್ಲ.ಈ ಘಟನೆ ಎಲ್ಲಾ ಸೋಶಿಯಲ್ ಮೀಡಿಯಾ ಬಳಕೆದಾರರಿಗೆ ಎಚ್ಚರಿಕೆಯ ಗಂಟೆಯಾಗಿದೆ.
ಕ್ಷಣಿಕ ಜನಪ್ರಿಯತೆಗಾಗಿ ಕಾನೂನು ಉಲ್ಲಂಘಿಸುವುದು ಭವಿಷ್ಯದಲ್ಲಿ ದೊಡ್ಡ ಸಂಕಷ್ಟಕ್ಕೆ ಕಾರಣವಾಗಬಹುದು. ಪ್ರತಿಯೊಬ್ಬರೂ ತಮ್ಮ ಪೋಸ್ಟ್‌ಗಳ ಬಗ್ಗೆ ಜವಾಬ್ದಾರಿಯಾಗಿರಬೇಕು.
ಸಾಮಾಜಿಕ ಮಾಧ್ಯಮವನ್ನು ಸಕಾರಾತ್ಮಕ, ಸೃಜನಶೀಲ ಹಾಗೂ ಸಮಾಜೋಪಯೋಗಿ ಉದ್ದೇಶಗಳಿಗೆ ಬಳಸಿದರೆ ಮಾತ್ರ ಅದು ನಿಜವಾದ ಪ್ರಗತಿಯ ಸಾಧನವಾಗುತ್ತದೆ.
ಇಲ್ಲದಿದ್ದರೆ, ಇಂದು 28 ಅಕೌಂಟ್‌ಗಳ ಮೇಲೆ ನಡೆದಂತೆ, ನಾಳೆ ಯಾರ ಮೇಲಾದರೂ ಕೇಸ್ ಬೀಳಬಹುದು ಎಂಬುದನ್ನು ಮರೆಯಬಾರದು.
ಇದನ್ನು ಓದಿ : https://vijayatimes.com/h-1b-visa-renewal-difficulties/