If the school bus drivers do this mistake, FIR and the vehicle will be confiscated, beware!
Bengaluru: ಕಳೆದ ಕೆಲ ದಿನಗಳಿಂದ ಬೆಂಗಳೂರು ಮಹಾನಗರದಲ್ಲಿ ಅಪಘಾತಗಳ ಸಂಖ್ಯೆ ಏರಿಕೆಯಾಗಿರುವ ಕಾರಣ ಬೆಂಗಳೂರು ನಗರ ಟ್ರಾಫಿಕ್ ಪೊಲೀಸರು (Traffic Police) ನಗರದ ವಾಹನ ಚಾಲಕರು, ಬಸ್ ಚಾಲಕರು ಹಾಗೂ ಶಾಲಾ ಮಕ್ಕಳ ಬಸ್ ಚಾಲಕರು ಸೇರಿದಂತೆ ಬೆಂಗಳೂರಿನ ಎಲ್ಲ ವಾಹನ ಸವಾರರಿಗೆ ವಾರ್ನಿಂಗ್ವೊಂದನ್ನು ಕೊಟ್ಟಿದ್ದಾರೆ. ಈ ನಿಯಮ ಉಲ್ಲಂಘನೆಯಾದರೆ ಎಫ್ಐಆರ್ (FIR) ಹಾಗೂ ವಾಹನ ಜಪ್ತಿ ಸಹ ಮಾಡಲಾಗುತ್ತಿದೆ.
ಅದೇ ಡ್ರಿಂಕ್ ಅಂಡ್ ಡ್ರೈವ್ (Drink and drive)ಗೆ ಸಂಬಂಧಿಸಿದಂತೆ ಬೆಂಗಳೂರು ಟ್ರಾಫಿಕ್ ಪೊಲೀಸರು ಫೀಲ್ಡ್ಗೆ ಇಳಿದಿದ್ದು, ಸೋಮವಾರ ದಿಢೀರ್ ಹಾಗೂ ವಿಶೇಷ ಕಾರ್ಯಾಚರಣೆಯನ್ನು ನಡೆಸಿದ್ದಾರೆ. ಅದರಲ್ಲೂ ಬೆಂಗಳೂರು ಟ್ರಾಫಿಕ್ ಪೊಲೀಸರು ನಗರದಲ್ಲಿನ ಬಸ್ ಚಾಲಕರ ಮೇಲೆ ಹದ್ದಿನ ಕಣ್ಣು ಇಟ್ಟಿದ್ದಾರೆ.
ಇತ್ತೀಚಿನ ದಿಗಳಲ್ಲಿ ಕುಡಿದು ಶಾಲಾ ಮಕ್ಕಳ ಬಸ್ ಚಲಾಯಿಸುವ ಡ್ರೈವರ್ ಗಳ ಸಂಖ್ಯೆ ಹೆಚ್ಚಾಗಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಕಳೆದ ಬಾರಿಯೂ ಟ್ರಾಫಿಕ್ ಪೊಲೀಸರು (Traffic Police) ನಡೆಸಿದ ದಿಢೀರ್ ಕಾರ್ಯಾಚರಣೆಯಲ್ಲಿ ಹಲವು ಶಾಲಾ ಬಸ್ ಚಾಲಕರು ಕುಡಿದು ವಾಹನ ಚಲಾಯಿಸುತ್ತಿದ್ದದ್ದು, ಕಂಡು ಬಂದಿತ್ತು.
ಇದೀಗ ಸೋಮವಾರ ಬೆಳಿಗ್ಗೆಯೇ ಕುಡಿದು ವಾಹನ ಚಲಾಯಿಸುತ್ತಿದ್ದವರ ಪತ್ತೆ ಮಾಡುವುದಕ್ಕಾಗಿ ಫೀಲ್ಡ್ಗೆ ಟ್ರಾಫಿಕ್ ಪೊಲೀಸರು ಇಳಿದಿದ್ದಾರೆ. ಇದರೊಂದಿಗೆ ಶಾಲಾ ವಾಹನದಲ್ಲಿ (School Van) ನಿಗದಿತ ಸಂಖ್ಯೆಗಿಂತ ಹೆಚ್ಚು ಮಕ್ಕಳನ್ನು ಕೂರಿಸಿಕೊಂಡು ಹೋಗುವ ಶಾಲಾ ಬಸ್ ಚಾಲಕರಿಗೂ ಬಿಸಿ ಮುಟ್ಟಿಸಿದ್ದಾರೆ. ಟ್ರಾಫಿಕ್ ಪೊಲೀಸ್ ಸೋಮವಾರ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಕೆಲ ಬಸ್ ಡ್ರೈವರ್ಗಳು ಮದ್ಯ ಸೇವಿಸಿ ಚಲಾಯಿಸುತ್ತಿದ್ದು ಅವರನ್ನು ಬಂಧಿಸಿ ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಸೋಮವಾರ ಒಂದೇ ದಿನ ಬೆಂಗಳೂರಿನಲ್ಲಿ 466 ಚಾಲಕರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇದರಲ್ಲಿ ಮದ್ಯ ಸೇವಿಸಿ ವಾಹನ ಚಲಾಯಿಸಿದ 21 ಜನ ಚಾಲಕರು ಹಾಗೂ ಶಾಲಾ ವಾಹನಗಳಲ್ಲಿ ನಿಗದಿಗಿಂತ ಹೆಚ್ಚು ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ 445 ಜನ ಚಾಲಕರ ಮೇಲೆ ಎಫ್ಐಆರ್ ದಾಖಲಿಸಿರುವುದಾಗಿ ಬೆಂಗಳೂರು ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ.