- ಹೈಕೋರ್ಟ್ ಛೀಮಾರಿಗೂ ಬಗ್ಗದ ಬಿಬಿಎಂಪಿ!
- ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತುಗಳನ್ನು ಅಳವಡಿಸುವವರ ವಿರುದ್ಧ ಎಫ್‌ಐಆರ್
- ತೆರವುಗೊಳಿಸಲು ವ್ಯಯವಾಗುವ ವೆಚ್ಚವನ್ನು ವಸೂಲಿ ಮಾಡುವುದರ ಜೊತೆಗೆ ದುಪ್ಪಟ್ಟು ದಂಡ ವಿಧಿಸುವ ಎಚ್ಚರಿಕೆ
Bengaluru: ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿ (FIR and fine on illegal flexes) ಅಕ್ರಮ ಜಾಹೀರಾತು (Illegal advertising) ಫಲಕಗಳು, ಫ್ಲೆಕ್ಸ್ ಮತ್ತು ಹೋರ್ಡಿಂಗ್‌ಗಳ (Flex and hoardings) ಹಾವಳಿ ಮಿತಿಮೀರಿದೆ. ಬಿಬಿಎಂಪಿ (BBMP) ಮತ್ತು ಪೊಲೀಸ್ ಇಲಾಖೆಗಳು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿವೆ. ಪ್ರಭಾವಿ ವ್ಯಕ್ತಿಗಳು ಮತ್ತು ರಾಜಕಾರಣಿಗಳಿಂದ ಈ ಅಕ್ರಮ ಜಾಹೀರಾತುಗಳು (Advertisements) ಹೆಚ್ಚಾಗಿ ಕಂಡುಬರುತ್ತಿವೆ. ಆದರೆ ನಿಯಂತ್ರಿಸಬೇಕಾದ ಬಿಬಿಎಂಪಿ ಮತ್ತು ಪೊಲೀಸ್ (BBMP & Police department) ಇಲಾಖೆಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಂತೆ ಕಾಣುತ್ತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದರು.
ಫ್ಲೆಕ್ಸ್, ಬ್ಯಾನರ್ (Flex, banner) ಹಾಗೂ ಹೋಲ್ಡಿಂಗ್ ವಿಚಾರದಲ್ಲಿ ಬಿಬಿಎಂಪಿಗೆ ಈಗಾಗಲೇ ಹಲವು ಬಾರಿ ಹೈಕೋರ್ಟ್ (High Court) ಛೀಮಾರಿ ಹಾಕಿದರೂ ಬಿಬಿಎಂಪಿಯ ಅಧಿಕಾರಿ ಸಿಬ್ಬಂದಿ ಎಚ್ಚೆತ್ತುಕೊಂಡಿಲ್ಲ. ಮುಖ್ಯಮಂತ್ರಿಯ ಸರ್ಕಾರದ ಅಧಿಕೃತ ನಿವಾಸದ ಇರುವ ರಸ್ತೆಯ ಸೇರಿದಂತೆ ನಗರದ ಕೇಂದ್ರ ಭಾಗದ ಬಡಾವಣೆಗಳಲ್ಲಿ ಫ್ಲೆಕ್ಸ್ ಮತ್ತು ಹೋಲ್ಡಿಂಗ್‌ಗಳು ರಾಜಾಜಿಸುತ್ತಿವೆ. ಆದರೂ ಬಿಬಿಎಂಪಿಯ ಅಧಿಕಾರಿ (BBMP officer) ಸಿಬ್ಬಂದಿ ಕ್ರಮ ಕೈಕೊಳ್ಳುತ್ತಿಲ್ಲ.ಸದ್ಯ ನಗರದಲ್ಲಿ ಫ್ಲೆಕ್ಸ್ ಬ್ಯಾನರ್ (Flex banner) ಅಳವಡಿಕೆ ಮಾಡಿದವರ್‍ಯಾರೂ ಜನ ಸಾಮಾನ್ಯರಲ್ಲ.
ಎಲ್ಲರೂ ಪ್ರಭಾವಿಗಳಾಗಿದ್ದಾರೆ ಎಂಬುದೇ ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಸಂಗತಿಯಾಗಿದೆ. ಫ್ಲೆಕ್ಸ್, ಬ್ಯಾನರ್ (Flex, banner) ಅಳವಡಿಕೆ ಮಾಡುವುದರಲ್ಲಿ ರಾಜಕಾರಣಗಳು ಪಕ್ಷಾತೀತವಾಗಿದ್ದಾರೆ, ಕಾಂಗ್ರೆಸ್, ಬಿಜೆಪಿ (Congress BJP) ಹಾಗೂ ಜೆಡಿಎಸ್ ಎಲ್ಲರೂ ಹುಟ್ಟುಹಬ್ಬ, ಜಾತ್ರೆ, ಹಬ್ಬ (Fair, festival) ಬಂದರೆ ಸಾಕು ಶುಭಾಷಯ ಕೋರುವ ನೆಪದಲ್ಲಿ ಫ್ಲೆಕ್ಸ್, ಬ್ಯಾನರ್ ಹಾಕುವುದಕ್ಕೆ ಮುಂದಾಗುತ್ತಾರೆ.ಧಾರ್ಮಿಕ ಸಭೆ (Religious meeting) ಸಮಾರಂಭಗಳಿಗೆ ಮಾತ್ರ ಮೂರು ದಿನ ಮಾತ್ರ ಫ್ಲೆಕ್ಸ್, ಬ್ಯಾನರ್ ಅಳವಡಿಕೆಗೆ ಬಿಬಿಎಂಪಿಯ ಅಧಿಕಾರಿಗಳು ಅವಕಾಶ ನೀಡುತ್ತಿದ್ದಾರೆ.
ಹುಟ್ಟುಹಬ್ಬ (Birthday) ಸೇರಿದಂತೆ ಯಾವುದೇ ವೈಯಕ್ತಿಯ ಸಮಾರಂಭಗಳಿಗೆ ಫ್ಲೆಕ್ಸ್, ಬ್ಯಾನರ್ ಅಳವಡಿಕೆ ಮಾಡುವುದಕ್ಕೆ ಬಿಬಿಎಂಪಿಯಿಂದ ಅನುಮತಿ ನೀಡುತ್ತಿಲ್ಲ. ಆದರೂ ಅನಧಿಕೃವಾಗಿ ತಿಂಗಳಾನುಗಟ್ಟಲೆ ಫ್ಲೆಕ್ಸ್ ಅವಳಡಿಕೆ ಮಾಡಲಾಗುತ್ತಿದೆ ಅದರಿಂದ ಜನರಿಗೂ ಅನಾನುಕೂಲತೆ ಉಂಟಾಗಿತ್ತು.

ನಗರದಲ್ಲಿ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ ಅಳವಡಿಕೆ ಮಾಡುವವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ (Criminal case) ದಾಖಲಿಸುವಂತೆ ಆದೇಶ ನೀಡಲಾಗಿದೆ. ನಗರದಲ್ಲಿ ಸದ್ಯ ರಾಜಾಜಿಸುತ್ತಿರುವ ಫ್ಲೆಕ್ಸ್, ಬ್ಯಾನರ್ ನೋಡಿದರೆ ಬಿಬಿಎಂಪಿಯ ಆದೇಶ (BBMP order) ಕೇವಲ ಜನ ಸಾಮಾನ್ಯರಿಗೆ ಮಾತ್ರ ಅನ್ವಯ ಅನಿಸುತ್ತಿದೆ.ರಸ್ತೆಯ ಅಕ್ಕ-ಪಕ್ಕದಲ್ಲಿ ದೊಡ್ಡ ದೊಡ್ಡ ಕಟೌಟ್, ಫ್ಲೆಕ್ಸ್, ಬ್ಯಾನರ್ (Large cutout, flex, banner) ಅಳವಡಿಕೆ ಮಾಡಿರುವುದರಿಂದ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ.
ಪೂರ್ವ ಮುಂಗಾರಿನ ಗಾಳಿ- ಮಳೆ (Monsoon wind- rain) ಜೋರಾಗಿ ಬೀಸುತ್ತಿರುವುದರಿಂದ ಯಾವಾಗ ಬೇಕಾದರೂ ಇವುಗಳು ರಸ್ತೆಯಲ್ಲಿ ಸಂಚರಿಸುವ ವಾಹನಗಳ ಮೇಲೆ ಬೀಳಬಹುದಾಗಿದೆ. ನಾಗರಬಾವಿಯ ವೃತ್ತದಲ್ಲಿ ಶಾಸಕ ಕೃಷ್ಣ (MLA Krishna) ಅವರ ಬೆಂಬಲಿಗರು ಹಾಕಿದ್ದ ಕಟೌಟ್ ಬಿದ್ದು ತೀವ್ರ ತೊಂದರೆ ಉಂಟಾಗಿದ್ದನ್ನು ಗಮನಿಸಬಹುದಾಗಿದೆ.ಈದೀಗ ತೆರವುಗೊಳಿಸುವುದಕ್ಕೆ ಬಿಬಿಎಂಪಿ ಮತ್ತು ಪೊಲೀಸ್ ಅಧಿಕಾರಿಗಳು (BBMP and police officers) ಮುಂದಾಗಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತುಗಳನ್ನು (Unauthorized advertisements) ಅಳವಡಿಸುವವರ ವಿರುದ್ಧ ಎಫ್‌ಐಆರ್ ದಾಖಲಿಸುವ ಜೊತೆಗೆ ತೆರವುಗೊಳಿಸುವ ವೇಳೆ ವ್ಯಯವಾಗುವ ವೆಚ್ಚವನ್ನು ವಸೂಲಿ ಮಾಡಲಾಗುವುದು ಮತ್ತು ದುಪ್ಪಟ್ಟು ದಂಡ ವಿಧಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಎಚ್ಚರಿಸಿದ್ದಾರೆ.ಬಿಬಿಎಂಪಿ ವ್ಯಾಪ್ತಿಯ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ (officers’ meeting) ಮಾತನಾಡಿದ ಅವರು, ನಗರದಲ್ಲಿ ಅನಧಿಕೃತ ಜಾಹೀರಾತುಗಳನ್ನು ಅಳವಡಿಸುವ ವಿಚಾರವಾಗಿ ಹೈಕೋರ್ಟ್, ಉಪಮುಖ್ಯಮಂತ್ರಿ (High Court, Deputy Chief Minister) ಅವರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದರು.
ಇದನ್ನೂ ಓದಿ: http://ತವರು ಅಂಗಳದಲ್ಲಿ ಆರ್ ಸಿಬಿಗೆ ಹ್ಯಾಟ್ರಿಕ್ ಸೋಲು: ಪಂಜಾಬ್ ಕಿಂಗ್ಸ್ ಗೆ ಐದು ವಿಕೆಟ್ಗಳ ಭರ್ಜರಿ ಗೆಲುವು
ಆದರೂ ಇತ್ತೀಚಿನ ದಿನಗಳಲ್ಲಿ ಉಲ್ಲಂಘನೆಗಳು ಹೆಚ್ಚಾಗಿವೆ. ಅದನ್ನು ಅಧಿಕಾರಿಗಳು ನಿಯಂತ್ರಿಸಬೇಕು ಎಂದು ತಿಳಿಸಿದ್ದಾರೆ.ನಗರದಲ್ಲಿ ಅನಧಿಕೃತ ಜಾಹೀರಾತು ಅಳವಡಿಸುವವರ ಮೇಲೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವ (Taking appropriate action) ನಿಟ್ಟಿನಲ್ಲಿ ಹೊಸದಾಗಿ ಸುತ್ತೋಲೆ ಹೊರಡಿಸಲಾಗುತ್ತಿದೆ. ವಾರ್ಡ್ ವ್ಯಾಪ್ತಿಯಲ್ಲಿ (Within the ward) ಬರುವ ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಹಾಯಕ ಎಂಜಿನಿಯರ್ ಹಾಗೂ ಕಿರಿಯ ಎಂಜಿನಿಯರ್‌ಗೆ ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸುವ ಅಧಿಕಾರವನ್ನು (FIR and fine on illegal flexes) ನೀಡಿ ಎಫ್.ಐ.ಆರ್ ದಾಖಲಿಸಿ, ತೆರವುಗೊಳಿಸಲು ವ್ಯಯವಾಗುವ ವೆಚ್ಚವನ್ನು ವಸೂಲಿ (Recover costs) ಮಾಡುವುದರ ಜೊತೆಗೆ ದುಪ್ಪಟ್ಟು ದಂಡ ವಿಧಿಸುವ (Penalty) ಜವಾಬ್ದಾರಿಯನ್ನು ನೀಡಲಾಗುವುದು ಎಂದು ಹೇಳಿದ್ದಾರೆ.