ಬೆಂಗಳೂರು, ಮೇ. 31: ಜಾತಿ/ಸಮುದಾಯಕ್ಕೆ ಸೇರಿದ ಪದಬಳಕೆ ಆರೋಪದ ಮೇರೆಗೆ ನಟಿ ಯುವಿಕಾ ಚೌಧರಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸಾಮಾಜಿಕ ತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಒಂದರಲ್ಲಿ
ನಟಿ ಯುವಿಕಾ ಚೌಧರಿ ಅವರು ಜಾತಿ/ಸಮುದಾಯಕ್ಕೆ ಸೇರಿದ ಪದವನ್ನು ಬಳಸಿ ಅವಮಾನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಯುವಿಕಾ ಚೌಧರಿ ವಿರುದ್ಧ ಹರಿಯಾಣ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ನಟಿ ಯುವಿಕಾ ಚೌಧರಿ ಅವರು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಮಳೆಯಲಿ ಜೊತೆಯಲಿ’ ಚಿತ್ರದಲ್ಲಿ ಅಭಿನಯಿಸಿದ್ದರು.