ರಣವೀರ್ ಸಿಂಗ್ ನಗ್ನ ಫೋಟೋ ವೈರಲ್ ; ಎಫ್ಐಆರ್ ದಾಖಲಿಸಿದ ಮುಂಬೈ ಪೊಲೀಸ್

ಬಾಲಿವುಡ್(Bollywood) ನಟ ರಣವೀರ್ ಸಿಂಗ್(Ranveer Singh) ಅವರ ನಗ್ನ ಫೋಟೋಶೂಟ್‌(Photoshoot) ಚಿತ್ರಗಳು ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ(Social Media)ಭಾರಿ ವೈರಲ್(Viral) ಆದ ಹಿನ್ನಲೆ ಮಹಿಳೆಯರ ಭಾವನೆಗಳಿಗೆ ದಕ್ಕೆ ತರುವಂತಿದೆ ಈ ಫೋಟೊಗಳು ಎಂಬ ಆರೋಪದ ಮೇಲೆ ಮುಂಬೈ ಪೊಲೀಸರು(Mumbai Police) ಎಫ್‌ಐಆರ್(FIR) ದಾಖಲಿಸಿದ್ದಾರೆ. ರಣವೀರ್ ಸಿಂಗ್ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 509, 292, ಮತ್ತು 294 ಮತ್ತು ಐಟಿ ಕಾಯ್ದೆಯ ಸೆಕ್ಷನ್ 67 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ರಣವೀರ್ ವಿರುದ್ಧ ಮಂಗಳವಾರ ಚೆಂಬೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪೂರ್ವ ಮುಂಬೈ ಉಪನಗರ ಮೂಲದ ಸರ್ಕಾರೇತರ ಸಂಸ್ಥೆಯ (ಎನ್‌ಜಿಒ) ಪದಾಧಿಕಾರಿಗಳು ಮತ್ತು ಮಹಿಳಾ ವಕೀಲರು ಚೆಂಬೂರ್ ಪೊಲೀಸ್ ಠಾಣೆಯಲ್ಲಿ ದೂರು ಅರ್ಜಿಗಳನ್ನು ಪ್ರತ್ಯೇಕವಾಗಿ ಸಲ್ಲಿಸಿದ್ದಾರೆ. ಎನ್‌ಜಿಒ(NGO) ಪದಾಧಿಕಾರಿಯು, ನಟ ರಣವೀರ್ ಸಿಂಗ್ ತಮ್ಮ ಛಾಯಾಚಿತ್ರಗಳ ಮೂಲಕ ಮಹಿಳೆಯರ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಮತ್ತು ಅವರ ನಮ್ರತೆಗೆ ಅವಮಾನ ಮಾಡಿದ್ದಾರೆ ಎಂದು ಪ್ರಕರಣದಲ್ಲಿ ಉಲ್ಲೇಖಿಸಿದ್ದಾರೆ.

ವಕೀಲರು(Lawyers) ಸಲ್ಲಿಸಿದ ಅರ್ಜಿಯಲ್ಲಿ ಮಹಿಳೆಯರ ವಿನಮ್ರತೆಯನ್ನು ಅತಿರೇಕಗೊಳಿಸುವ ಉದ್ದೇಶದ ಆರೋಪದ ಮೇಲೆ ರಣವೀರ್ ವಿರುದ್ಧ ಪ್ರಕರಣವನ್ನು ಕೋರಲಾಗಿದೆ. ಈಗಾಗಲೇ ಪೇಪರ್ ಮ್ಯಾಗಜೀನ್ ನಿಂದ ರಣವೀರ್ ಸಿಂಗ್ ನಗ್ನ ಫೋಟೋ ತೆಗೆದು ಹಾಕಲಾಗಿದೆ. ನಗ್ನ ಫೋಟೊಗಳನ್ನು ಹಲವು ರೀತಿಯಲ್ಲಿ ಛಾಯಾಗ್ರಹಕ ತೆಗೆದಿದ್ದು, ಕಾಸ್ಮೋಪಾಲಿಟನ್ ಮ್ಯಾಗಜೀನ್‌ಗಾಗಿ ಇದೇ ರೀತಿಯ ನಗ್ನ ಫೋಟೋಶೂಟ್ ಮಾಡಿಸಿದ್ದಾರೆ ಎಂದು ಹೇಳಲಾಗಿದೆ.

ರಣವೀರ್ ಸಿಂಗ್ ಅವರ ಬೋಲ್ಡ್ ಫೋಟೋಶೂಟ್‌ಗಾಗಿ ಅನೇಕರು ಪ್ರಶಂಸೆಗಳನ್ನು ವ್ಯಕ್ತಪಡಿಸಿದರೆ, ಇನ್ನು ಕೆಲವರು ಇಂಥ ಫೋಟೊಗಳ ಅಗತ್ಯವೇನಿತ್ತು? ಇದು ಅಸಭ್ಯವಾಗಿದೆ ಎಂದು ಪ್ರಶ್ನಿಸಿ, ಆಕ್ರೋಶ ಹೊರಹಾಕಿದ್ದಾರೆ. ಇನ್ನು ರಣವೀರ್ ಸಿಂಗ್ ಫೋಟೋ ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟ್ರೋಲ್ ಮಾಡಲಾಗಿದೆ. ಸದ್ಯ ಹಲವರ ಆಕ್ರೋಶಗಳ ಮೇರೆಗೆ ಈಗ ರಣವೀರ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ನಟ ರಣವೀರ್ ಸಂಕಷ್ಟಕ್ಕೆ ಸಿಲುಕಿದ್ದಾರೆ.

Latest News

ರಾಜಕೀಯ

“ಕಾಂಗ್ರೆಸ್ ಬಸ್‍ಗೆ ಎರಡು ಸ್ಟೇರಿಂಗ್” : ಸಚಿವ ಡಾ. ಸುಧಾಕರ್

“ಪ್ರಸ್ತುತ ಕಾಂಗ್ರೆಸ್ ಪಕ್ಷ ಈಗ ಡಂಬಲ್ ಡೋರ್ ಬಸ್‍ನಲ್ಲಿ ಪ್ರಯಾಣಿಸುತ್ತಿದೆ. ಈ ಬಸ್‍ನಲ್ಲಿರುವ ಅವರ ಪಕ್ಷದವರ ಪೈಕಿ ಯಾರನ್ನು ಪ್ರಥಮವಾಗಿ ಕೆಳಗಿಳಿಸುತ್ತಾರೋ ತಿಳಿಯದು.

ದೇಶ-ವಿದೇಶ

ಮನೆ ಮತ್ತು ಕಾರ್ಪೊರೇಟ್ ಕಚೇರಿಗಳ ಮೇಲೆ ಶೇ.18 ರಷ್ಟು ಜಿಎಸ್‌ಟಿ ? ; ಏನಿದು ಗೊಂದಲ ಇಲ್ಲಿದೆ ಮಾಹಿತಿ

ಹೊಸ ನಿಯಮಗಳ ಪ್ರಕಾರ, ಜಿಎಸ್‌ಟಿ ನೋಂದಾಯಿತ ಹಿಡುವಳಿದಾರನು ರಿವರ್ಸ್ ಚಾರ್ಜ್ ಮೆಕ್ಯಾನಿಸಂ (RCM) ಅಡಿಯಲ್ಲಿ ತೆರಿಗೆಯನ್ನು ಪಾವತಿಸಲು ಹೊಣೆಗಾರನಾಗಿರುತ್ತಾನೆ.

ಪ್ರಮುಖ ಸುದ್ದಿ

ತಾಜುದ್ದೀನ್ಜುನೈದೀ ಮತ್ತು  ಶಿವಮೊಗ್ಗ ಸುಬ್ಬಣ್ಣ ನಿಧನಕ್ಕೆ ಗಣ್ಯರ ಸಂತಾಪ

ಪ್ರಖ್ಯಾತ ಗಾಯಕರು, ತಮ್ಮ ಸುಸ್ವರದ ಮೂಲಕ ಕವಿ ಗೀತೆಗಳಿಗೆ ಮೆರುಗು ತಂದುಕೊಟ್ಟಿದ್ದ ಶ್ರೀ ಶಿವಮೊಗ್ಗ ಸುಬ್ಬಣ್ಣ ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವಾಗಿದೆ.