Hyderabad : ಹೈದ್ರಾಬಾದ್ ಟಿಆರ್‍ಎಸ್ ನಾಯಕ (TRS Leader) ಮಹಿಳೆಯ ಕತ್ತು ಕುಯ್ಯಲು ಯತ್ನಿಸಿದ ಆರೋಪದ ಮೇರೆಗೆ ಆತನ ವಿರುದ್ಧ ಪೊಲೀಸರು ಎಫ್.ಐ.ಆರ್(FIR) ದಾಖಲಿಸಿಕೊಂಡಿದ್ದಾರೆ.
ಟಿಆರ್‍ಎಸ್ ನಾಯಕನ ಹತ್ಯೆಯ ಯತ್ನಕ್ಕೆ ಸಿಲುಕಿದ ನಿಶಾ ಎಂಬ ಮಹಿಳೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂದು ವರದಿ ಹೇಳಿದೆ.

ಈ ಕುರಿತು ಪಂಜಗುಟ್ಟಾ ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ಹರೀಶ್ ಚಂದ್ರ ರೆಡ್ಡಿ ಮಾತನಾಡಿ, ಎಫ್.ಐ.ಆರ್ ದಾಖಲಿಸಿಕೊಂಡು ಐಪಿಸಿ ಸೆಕ್ಷನ್(IPC Section) 448, 324, 354(ಎ) 506 ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ನಿಶಾ ಕುತ್ತಿಗೆಯ ಮೇಲೆ ಬಿದ್ದ ಚಾಕುವಿನ ಗುರುತುಗಳ ನೋವಿನಿಂದ ತೀವ್ರ ನರಳಾಡುತ್ತಿರುವ ವೀಡಿಯೊ ವೈರಲ್(Viral) ಆದ ನಂತರ ಪೊಲೀಸರು ಇದನ್ನು ಆಧಾರವಾಗಿ ಪರಿಗಣಿಸಿ ಕ್ರಮವನ್ನು ಜರುಗಿಸಿದ್ದಾರೆ.
https://vijayatimes.com/thinnest-waist-girl-su-naing/
ಸೋಮವಾರ ಮುಂಜಾನೆ ಟಿಆರ್‍ಎಸ್ ನಾಯಕ ವಿಜಯ್ ಸಿನ್ಹಾ ರೆಡ್ಡಿ ನನ್ನ ಪತ್ನಿಯ ಕತ್ತು ಕುಯ್ಯಲು ಯತ್ನಿಸಿದ್ದ ಎಂದು ಮಹಿಳೆಯ ಪತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆಸ್ಪತ್ರೆಯಲ್ಲಿ ಪೊಲೀಸರೂ ಇದ್ದ ವೇಳೆಯ ನನ್ನ ಪತ್ನಿ ನನಗೆ ಎರಡು-ಮೂರು ಬಾರಿ ಕರೆ ಮಾಡಿದ್ದಾಳೆ.
https://youtu.be/ysine_00WIo : ಸಿಕ್ಕಿ ಬಿದ್ರು ಶಿಕ್ಷಕರು
ದಾಳಿಕೋರರು ಜುಬ್ಲಿ ಹಿಲ್ಸ್ ಶಾಸಕರ ಪಿಎ ವಿಜಯ್ ಸಿನ್ಹಾ ಎಂದು ಆಕೆ ನನಗೆ ಹೇಳಿದಳು ಎಂದು ಮಹಿಳೆಯ ಪತಿ ಹೇಳಿದ್ದಾರೆ.
ಸಿನ್ಹಾ ನನ್ನ ಪತ್ನಿಯ ಸ್ನೇಹಿತ ಮತ್ತು ದಿನಕ್ಕೆ ಅನೇಕ ಬಾರಿ ಆಕೆಗೆ ಕರೆ ಮಾಡಿ ಹಿಂಸೆ ನೀಡುತ್ತಿದ್ದ ಎಂದು ಮಹಿಳೆಯ ಪತಿ ಆರೋಪಿಸಿದ್ದಾರೆ.
ಅವನು ನನ್ನ ಹೆಂಡತಿಯ ಮೊಬೈಲ್ ಸಂಖ್ಯೆಗೆ ಹಲವಾರು ಬಾರಿ ಕರೆ ಮಾಡುತ್ತಿದ್ದನು. ನಾನು ಅವರ ನಡುವಿನ ಕರೆ ದಾಖಲೆಗಳನ್ನು ಕೇಳಿದ್ದೇನೆ ಮತ್ತು ಅವನು ನಗ್ನ ವೀಡಿಯೊ ಕರೆಗಳನ್ನು ಮಾಡುತ್ತಾನೆ.
ಆದರೆ ಮನೆಯ ವಿಳಾಸವನ್ನು ಕಂಡುಹಿಡಿದು ದಾಳಿ ಮಾಡಿರುವುದು ಅನಿರೀಕ್ಷಿತವಾಗಿದೆ!

ಸದ್ಯ ನನ್ನ ಪತ್ನಿ ಗಂಭೀರ ಮತ್ತು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಳೆ. ಅವಳು ಈಗ ಏನು ಹೇಳಬಲ್ಲಳು? ನಮಗೆ ತೀರ ಭಯ ಕಾಡುತ್ತಿದೆ. ಅವನು ಶಾಸಕನೊಂದಿಗೆ ಸ್ನೇಹ ಹೊಂದಿದ್ದಾನೆ ಮತ್ತು ಅವರೊಂದಿಗೆ ರೌಡಿ ಶೀಟರ್‌ಗಳಿದ್ದಾರೆ.
ಮುಂದಿನ ದಿನಗಳಲ್ಲಿ ಅವರು ನಮಗೆ ಯಾವ ರೀತಿ ಬೇಕಾದರೂ ಹಲ್ಲೆಗೆ ಸಂಚು ರೂಪಿಸಬಹುದು, ನಮಗೆ ತೊಂದರೆ ಕೊಡಬಹುದು ಎಂದು ತಮ್ಮ ಅಸಹಾಯಕತೆಯನ್ನು ಹೇಳಿಕೊಂಡಿದ್ದಾರೆ.